ಮದ್ವೆ ಖುಷೀಲಿದ್ದ ವಧುವಿಗೆ ದಂಡ ಕಟ್ಟಲು ಸೂಚಿಸಿದ ಪೊಲೀಸರು, ಅಷ್ಟಕ್ಕೂ ಆಕೆ ಮಾಡಿದ್ದೇನು?
ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಹೀಗಾಗಿ ಜನರು ವೆಡ್ಡಿಂಗ್ ಡೇ ಮೆಮೊರೆಬಲ್ ಆಗಿರಬೇಕೆಂದು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಅದೇ ರೀತಿ ಹಲವರು ಮದ್ವೆ ದಿನ, ಮದ್ವೆ ಡ್ರೆಸ್‌ನಲ್ಲಿ ರೀಲ್ಸ್ ಸಹ ಮಾಡುತ್ತಾರೆ. ಆದ್ರೆ ಹೀಗೆ ಯುಪಿಯಲ್ಲಿ ಮದ್ವೆ ದಿನ ರೀಲ್ಸ್ ಮಾಡಲು ಹೋದ ಯುವತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಮದುವೆಯನ್ನು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಹೊಸ ಹೊಸ ಕಾನ್ಸೆಪ್ಟ್ ಅಳವಡಿಸಿಕೊಳ್ಳುತ್ತಾರೆ. ತಮ್ಮ ಮದುವೆಯ ಸುಂದರ ಗಳಿಗೆಯನ್ನು ಸದಾ ಕಾಲ ನೆನಪಿನಲ್ಲುಳಿಯುವಂತೆ ಮಾಡಲು ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗೆಯೇ ಮದ್ವೆ ಡ್ರೆಸ್‌ನಲ್ಲಿ ರೀಲ್ಸ್ ಮಾಡುವುದು ಇತ್ತೀಚಿಗೆ ಟ್ರೆಂಡ್ ಆಗಿದೆ. ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಾಗಿನಿಂದ ಜನರು ಬ್ಯೂಟಿ, ಹೆಲ್ತ್, ಟೆಕ್ನಾಲಜಿ, ಫ್ಯಾಷನ್ ಹೀಗೆ ನಾನಾ ರೀತಿಯ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ. ಇಂಥಾ ಕೆಲವು ವಿಡಿಯೋಗಳು ಬಹಳ ಬೇಗನೇ ವೈರಲ್ ಆಗಿಬಿಡುತ್ತವೆ.
ಈಗಿನ ದಿನದಲ್ಲಿ ನಾನಾ ಬಗೆಯ ಫೋಟೋಶೂಟ್‌ಗಳು ನಡೆಯುವುದನ್ನು ನಾವು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವರ್ನಿಕಾ ಚೌಧರಿ ಎಂಬಾಕೆ ಮದುವೆ ಉಡುಗೆಯಲ್ಲಿ (Wedding dress) ಎಸ್‌ಯುವಿ ಕಾರಿನ ಬಾನೆಟ್ ಮೇಲೆ ಕೂತು ಫೋಟೋಶೂಟ್ ಮಾಡಿಸಿದ್ದಾಳೆ. ಈಕೆಯ ಈ ಸಾಹಸಕ್ಕೆ ಪೊಲೀಸರು ಕರೆದು 17 ಸಾವಿರ ಫೈನ್ ಹಾಕಿದ್ದಾರೆ. ಇನ್ನೊಂದೆಡೆ ಅಯೋಧ್ಯೆಯಲ್ಲೂ ಮಹಿಳೆ ಇದೇ ರೀತಿ ಸಾಹಸ ಪ್ರದರ್ಶಿಸಿ 18 ಸಾವಿರ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದೆ.
ಕೊಟ್ನಲ್ಲಾ ಚಮಕ್..ಮದ್ವೆ ಮಂಟಪದಲ್ಲೇ ವಧುವಿನ ಅನೈತಿಕ ಸಂಬಂಧ ಬಹಿರಂಗಪಡಿಸಿದ ವರ!
ಚಲಿಸುವ ಎಸ್‌ಯುವಿಯ ಬಾನೆಟ್ ಮೇಲೆ ಕುಳಿತ ವಧು
ಪ್ರಪಂಚದಾದ್ಯಂತ ಜನರು Instagram ರೀಲ್‌ಗಳನ್ನು ಮಾಡುವ ಬಗ್ಗೆ ಹೆಚ್ಚು ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಲು ವಿಭಿನ್ನವಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಜೀವನದ ಪ್ರಮುಖ ದಿನಗಳನ್ನು ವೀಡಿಯೋ, ರೀಲ್ಸ್ ಮಾಡಿ ಟ್ರೆಂಡ್ ಆಗಲು ಯತ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ (Marriage) ದಿನದ ಚಟುವಟಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ವಧು ಫೆರಾ ಸಮಾರಂಭದಲ್ಲಿ ಮಲಗುವುದು, ವಧುವಿನ ನಾಚಿಕೆ, ವರನ ಫ್ರೆಂಡ್ಸ್ ಗಲಾಟೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಆದರೆ ಈ ಬಾರಿ, ಈ ಹುಡುಗಿ ಒಳ್ಳೆಯ ಕಾರಣಕ್ಕಾಗಿ ವೈರಲ್ ಆಗಲಿಲ್ಲ.
ಹೀಗೆಯೇ ನನ್ನ ಮದ್ವೆ, ನನ್ನಿಷ್ಟ ಅಂತ ಮದ್ವೆ ದಿನ ಗ್ರ್ಯಾಂಡ್ ಮದ್ವೆ ದಿರಿಸಿನಲ್ಲಿ ರೀಲ್ಸ್ ಮಾಡ್ತಿದ್ದ ವಧು (Bride) ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾರ್ ಬಾನೆಟ್‌ನಲ್ಲಿ ರೀಲ್ ತಯಾರಿಸಿದ್ದಕ್ಕಾಗಿ ವಧುವಿಗೆ ಯುಪಿ ಪೊಲೀಸರು 16,000 ರೂ.ಗಿಂತ ಹೆಚ್ಚು ದಂಡ (Fine) ವಿಧಿಸಿದ್ದಾರೆ. ಟ್ರಾಫಿಕ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಕೆಗೆ ನಂತರ 16,500 ಒಟ್ಟು ಎರಡು ಚಲನ್‌ಗಳನ್ನು ನೀಡಲಾಯಿತು. ಮಾಧ್ಯಮ ವರದಿಗಳ ಪ್ರಕಾರ, ಅಲ್ಲಾಪುರ ಪ್ರದೇಶದ ವಧು ವರ್ಣಿಕಾ ಕೆಲವು ದಿನಗಳ ಹಿಂದೆ ವಧುವಿನ ಉಡುಪಿನಲ್ಲಿ ಎಸ್ಯುವಿಯ ಬಾನೆಟ್ ಮೇಲೆ ಕುಳಿತು ಕ್ಲಿಪ್ ಅನ್ನು ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಟಪದಿಂದ ಓಡಿ ಹೋದ ವರ, 20 ಕಿ.ಮೀ. ಬೆನ್ನಟ್ಟಿ ವಾಪಾಸ್ ಕರೆ ತಂದ ವಧು!
ವಿಶೇಷ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಚಿತ್ರೀಕರಿಸಲಾದ ವೀಡಿಯೊ ತ್ವರಿತವಾಗಿ ವೈರಲ್ ಆಯಿತು. ಧರ್ನಾ ಸ್ಥಳ' ಪೊಲೀಸ್ ಔಟ್‌ಪೋಸ್ಟ್ ಉಸ್ತುವಾರಿ ಅಮಿತ್ ಸಿಂಗ್ ಅವರ ಗಮನ ಸೆಳೆಯಿತು. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧು ಕಡುಗೆಂಪು ಬಣ್ಣದ ಮದುವೆಯ ಲೆಹೆಂಗಾದಲ್ಲಿ ಧರಿಸಿರುವುದನ್ನು ನೋಡಬಹುದು. ಚಲಿಸುವ ಎಸ್‌ಯುವಿಯ ಬಾನೆಟ್ ಮೇಲೆ ಕುಳಿತಿದ್ದಕ್ಕೆ 15,000 ಚಲನ್ ನೀಡಿದರೆ, ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದ್ದಕ್ಕೆ 1,500 ಮತ್ತೊಂದು ಚಲನ್ ನೀಡಲಾಗಿದೆ. ಮೇ 16 ರಂದು 'ಆಲ್ ಸೇಂಟ್ಸ್ ಕ್ಯಾಥೆಡ್ರಲ್' ಬಳಿ ಕಾರಿನ ಮೇಲಿನ ವೀಡಿಯೊವನ್ನು ಮಾಡಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಅಮಿತ್ ಸಿಂಗ್ ಹೇಳಿದ್ದಾರೆ, ಆದರೆ ಸ್ಕೂಟರ್‌ನಲ್ಲಿನ ದೃಶ್ಯಗಳನ್ನು ಸುಮಾರು ಎರಡು ತಿಂಗಳ ಹಿಂದೆ 'ಚಂದ್ರಶೇಖರ್ ಆಜಾದ್ ಪಾರ್ಕ್' ಬಳಿ ಚಿತ್ರೀಕರಿಸಲಾಗಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಇದು 76.3K ಜನರ ವೀಕ್ಷಣೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಮತ್ತು 4000 ಕ್ಕೂ ಹೆಚ್ಚು ಜನರು ಕ್ಲಿಪ್ ಅನ್ನು ಇಷ್ಟಪಟ್ಟಿದ್ದಾರೆ. ಹಲವಾರು ಕಾಮೆಂಟ್‌ಗಳಿ.