ಪತಿ ಹಾಗೂ ಪತ್ನಿ ನಡುವೆ ಜಗಳವಾಗಿದೆ. ಪತ್ನಿ ತವರು ಮನೆ ಸೇರಿಕೊಂಡಿದ್ದಾಳೆ. ರಾಜಿ ಪಂಚಾಯಿತಿಗೆ ಕೈಗೂಡಲಿಲ್ಲ. ಪತ್ನಿ ವಿರುದ್ದ ಸೇಡು ತೀರಿಸಲು ಪತಿ ಮಾಡಿದ ಐಡಿಯಾಗೆ ಪೊಲೀಸರೇ ದಂಗಾಗಿದ್ದಾರೆ. ಏನಿದು ಪತಿ ಅನುಸರಿಸಿದ ಸಿಗ್ನಲ್ ಜಂಪ್ ತಂತ್ರ?
ಪಾಟ್ನಾ(ಫೆ.08) ಮದುವೆಯಾದ ಕೆಲ ತಿಂಗಳಿನಿಂದಲೇ ಪತಿ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ಮನಸ್ತಾಪ ತಾರಕಕ್ಕೇರಿದೆ. ಹೀಗಾಗಿ ಪತಿ ಮನೆ ತೊರದ ಪತ್ನಿ ತವರು ಮನೆ ಸೇರಿಕೊಂಡಿದ್ದಾಳೆ. ಇದರ ನಡುವೆ ಕುಟುಂಬಸ್ಥರ ರಾಜೀ ಪಂಚಾತಿಗೆ ವಿಫಲಗೊಂಡಿದೆ. ಪ್ರಕರಣ ಡಿವೋರ್ಸ್ ಹಂತಕ್ಕೆ ತಲುಪಿದೆ. ಆದರೆ ಪತ್ನಿ ವಿರುದ್ಧ ಪತಿಯ ಸೇಡು ಹೆಚ್ಚಾಗಿದೆ. ಇದಕ್ಕಾಗಿ ಪತಿ ಸಿಂಗ್ನಲ್ ಜಂಪ್ ತಂತ್ರ ಅನುಸರಿಸಿದ್ದಾನೆ. ಈತನ ತಂತ್ರಕ್ಕೆ ಪತ್ನಿ ಹೈರಾಣಾಗಿದ್ದಾಳೆ. ಈ ಕುರಿತು ಪೊಲೀಸರಲ್ಲಿ ಮನವಿ ಮಾಡಿದಾಗ ಭದ್ರತಾ ಸಿಬ್ಬಂಧಿಗಳೇ ದಂಗಾದ ಘಟನೆ ಬಿಹಾರದ ಮುಝಫರ್‌ಪುರದಲ್ಲಿ ನಡೆದಿದೆ.
ಒಂದು ವರ್ಷಗಳ ಹಿಂದೆ ಮುಝಾಫರ್‌ಪುರ್‌ದಲ್ಲಿ ಅದ್ಧೂರಿ ವಿವಾಹ ನಡೆದಿದೆ. ಗುರು ಹಿರಿಯರು, ಆಪ್ತರು ಸೇರಿದಂತೆ ಅಪಾರ ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಗಳ ಮದುವೆಯನ್ನು ಪೋಷಕರು ಅದ್ಧೂರಿಯಾಗಿ ಮಾಡಿಕೊಟ್ಟಿದ್ದರು. ಮದುವೆಯಾದ ಒಂದೂವರೆ ತಿಂಗಳಿಗೆ ಎಲ್ಲವೂ ಉಲ್ಟಾ ಆಗಿದೆ. ಪತಿ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ಇಬ್ಬರಿಗೂ ಹೊಂದಾಣಿಕ ಆಗುತ್ತಿರಲಿಲ್ಲ. ಪತಿ ಹಾಗೂ ಆತನ ಕುಟುಂಬಸ್ಥರ ಮಾತುಗಳು, ನಡತೆ, ವ್ಯವಹಾರ ಯಾವೂದು ಈಕೆಗೆ ಇಷ್ಟವಾಗುತ್ತಿರಲಿಲ್ಲ. ಒಂದೂವರೆ ತಿಂಗಳಲ್ಲಿ ದೊಡ್ಡ ಜಗಳ ನಡೆದಿದೆ.
ಪ್ರೇಮಿಗಳ ದಿನಾಚರಣೆಗೆ ಇಂಪ್ರೆಸ್ ಮಾಡಲು ಹೋಗಿ ಈ ಎಡವಟ್ಟು ಮಾಡಬೇಡಿ
ಪತಿ ಹಾಗೂ ಪತ್ನಿ ಇಬ್ಬರ ಜಗಳ ತಾರಕಕ್ಕೇರಿದೆ. ಹಲವು ಸುಳ್ಳು ಹೇಳಿ ಮದುವೆ ಮಾಡಿರುವ ಕುರಿತು ಈಕೆ ಆರೋಪಿಸಿದ್ದಳು. ಜಗಳ ತಾರಕಕ್ಕೇರಿ, ಪತಿ ಮನೆ ತೊರೆದ ಈಕೆ ನೇರವಾಗಿ ಪೋಷಕರ ಮನೆಗೆ ತೆರಳಿದ್ದಾಳೆ. ಬಳಿಕ ಪತಿಯ ಫೋನ್, ಕುಟುಂಬಸ್ಥರ ಕರೆ ಸ್ವೀಕರಿಸಲು ನಿರಾಕರಿಸಿದ್ದಾಳೆ. ಇತ್ತ ಪತಿ ಹಲವು ಪ್ರಯತ್ನಗಳು ವಿಫಲಗೊಂಡಿದೆ. ಹೀಗಾಗಿ ಪತಿ ನೇರವಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪತ್ನಿ ಕೂಡ ವಕೀಲರ ಮೂಲಕ ಪತಿಗೆ ನೋಟಿಸ್ ನೀಡಿದ್ದಾಳೆ. ಪರಿಹಾರ, ಮೊಕದ್ದಮೆ ಸೇರಿದಂತೆ ಹಲವು ತಕರಾರು ಎತ್ತಿದ್ದಾಳೆ.
ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಕಾರಣ ಇತ್ಯರ್ಥ ವಿಳಂಬವಾಗುತ್ತಾ ಹೋಗಿದೆ. ಇದು ಪತಿಯನ್ನು ರೊಚ್ಚಿಗೇಳುವಂತೆ ಮಾಡಿದೆ. ಮದುವೆಯಾಗಿ ಒಂದೂವರೆ ತಿಂಗಳಲ್ಲೇ ಮನೆ ಬಿಟ್ಟು ಹೋಗಿದ್ದಾಳೆ. ಇದೀಗ ವಿಚ್ಚೇದನ ಕೂಡ ವಿಳಂವಾಗುತ್ತಿದೆ ಅನ್ನೋ ಸಿಟ್ಟು ಪತಿಯಲ್ಲಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಆಕೆಗೆ ಪಾಠ ಕಲಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಸಿಗ್ನಲ್ ಜಂಪ್ ಸೇರಿದಂತೆ ಟ್ರಾಫಿಕ್ ನಿಯಮ ಉಲ್ಲಂಘನೆ ತಂತ್ರ ಅನುಸರಿಸಿದ್ದಾನೆ. ಕಾರಣ ಪತ್ನಿ ತವರು ಮನೆಗೆ ಹೋಗುವಾಗ ಆಕೆಯ ಸ್ಕೂಟರ್ ಬಿಟ್ಟು ಹೋಗಿದ್ದಳು. ಇದು ಮದುವೆ ವೇಳೆ ಆಕೆಯ ತಂದೆ ಉಡುಗೊರೆಯಾಗಿ ನೀಡಿದ್ದ ಸ್ಕೂಟರ್. ತವರು ಮನೆ ಸೇರಿದ ಬಳಿಕ ಈ ಸ್ಕೂಟರ್ ಗಂಡನ ಮನೆಯಲ್ಲೇ ಉಳಿದಿತ್ತು.
ಪತ್ನಿಗೆ ಪಾಠ ಕಲಿಸಲು ಉದ್ದೇಶಪೂರ್ವಕವಾಗಿ ಸಿಗ್ನಲ್ ಜಂಪ್, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಇದರ ಇ ಚಲನ್ ಪತ್ನಿಯ ಮೊಬೈಲ್‌ಗೆ ನೇರವಾಗಿ ಹೋಗಿದೆ. ಕಳೆದೆರಡು ತಿಂಗಳಿನಿಂದ ಸಿಗ್ನಲ್ ಜಂಪ್ ಸೇರಿದಂತೆ ನಿಯಮ ಉಲ್ಲಂಘನೆಯಿಂದ ಸಾವಿರಾರು ರೂಪಾಯಿ ದಂಡ ಪಾವತಿಸುವಂತೆ ಸೂಚನೆ ಬಂದಿದೆ. ಮೊದಲ ಸೂಚನೆಯನ್ನು ಅನುಸರಿಸಿದ ಪತ್ನಿ ದಂಡ ಪಾವತಿಸಿದ್ದಾಳೆ. ಆದರೆ ಮುಂದಿನ ತಿಂಗಳು ಮತ್ತೆ ಸಾವಿರಾರು ರೂಪಾಯಿ ದಂಡ ಪಾವತಿಸುವಂತೆ ಸೂಚನೆ ಬಂದಿದೆ. ಇದು ಪತ್ನಿಯ ಅನುಮಾನಕ್ಕೆ ಕಾರಣಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಇತ್ತ ಪೊಲೀಸರು ಪ್ರಕರಣ ಪತ್ತೆ ಹಚ್ಚಿದ್ದಾರೆ. ಪತ್ನಿಗೆ ಪಾಠ ಕಲಿಸಲು ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದಾಗಿ ಹೇಳಿದ್ದಾನೆ. ಇದೀಗ ಪತಿ ವಿರುದ್ದ ಉದ್ದೇಶಪೂರ್ವಕವಾಗಿ ಸಿಗ್ನಲ್ ಜಂಪ್ ಮಾಡಿ ಇತರರಿಗೆ ಸಮಸ್ಯೆಯುಂಟು ಮಾಡಿದ್ದು ಹಾಗೂ ಪತ್ನಿ ವಿರುದ್ದ ಸೇಡು ತೀರಿಸಲು ನಿಯಮ ಬಾಹಿರವಾಗಿ ನಡೆದುಕೊಂಡಿದ್ದು ಸೇರಿದಂತೆ ಕೆಲ ಪ್ರಕರಣಗಳು ದಾಖಲಾಗಿದೆ.
ನಿಮ್ಮ ಸಂಗಾತಿ ಮೋಸ ಮಾಡುತ್ತಿದ್ದಾರೆಯೇ? ಹಾಗಿದ್ರೆ ಹೀಗೆ ಪತ್ತೆ ಹಚ್ಚಿ! ಇಲ್ಲಿದೆ ಸಿಂಪಲ್ ಟಿಪ್ಸ್
