ಪ್ರೇಮಿಗಳ ದಿನಾಚರಣೆಗೆ ಇಂಪ್ರೆಸ್ ಮಾಡಲು ಹೋಗಿ ಈ ಎಡವಟ್ಟು ಮಾಡಬೇಡಿ
ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡಲು ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ವಾಸ್ತು ಪ್ರಕಾರ ನಿಮ್ ಪ್ರೀತಿಪಾತ್ರರಿಗೆ ಕೆಲವು ಗಿಫ್ಟ್‌ಗಳನ್ನ ಯಾವುದೇ ಕಾರಣಕ್ಕೂ ಕೊಡಬಾರದು ಎಂದಿದೆ. ವಾಸ್ತು ಪ್ರಕಾರದ ಗಿಫ್ಟ್ ಯಾವುದು?

ಪ್ರೀತಿ ಹೇಳ್ಕೊಳ್ಳೋಕೆ ಪ್ರೇಮಿಗಳ ದಿನಕ್ಕಿಂತ ಒಳ್ಳೆ ದಿನ ಇನ್ನೊಂದಿಲ್ವಾ? ಪ್ರೇಮಿಗಳ ದಿನಾಚರಣೆ ವಿಶ್ವದಲ್ಲೇ ಅತ್ಯಂತ ಜನಪ್ರಿಯ. ಅತೀ ಹೆಚ್ಚು ಮಂದಿ ಈ ದಿನಾಚರಣೆಯಲ್ಲಿ ಮಿಂದೇಳುತ್ತಾರೆ. ಪ್ರಪೋಸ್ ಮಾಡಿ ಪ್ರೀತಿಯ ಪಯಣ ಆರಂಭಿಸಲು ಹಲವರು ಇದೇ ದಿನ ತೆಗೆದುಕೊಳ್ಳತ್ತಾರೆ. ಇಂಪ್ರೆಸ್ ಮಾಡಲು ಹೋಗಿ ಪಜೀತಿಗೆ ಸಿಲುಕಿ ಹಾಕಿಕೊಳ್ಳಬೇಡಿ. ಪ್ರೇಮ ನಿವೇದನೆಗೆ ಅಥವಾ ಆಲ್ರೆಡಿ ಪ್ರೀತಿಲಿ ಇರೋರು ಒಳ್ಳೆ ಗಿಫ್ಟ್ ಕೊಡ್ಬೇಕು ಅಂತ ಅಂದುಕೊಂಡಿರ್ತಾರೆ. ಆದ್ರೆ.. ವಾಸ್ತು ಪ್ರಕಾರ ಕೆಲವು ಗಿಫ್ಟ್‌ಗಳನ್ನ ವಾಸ್ತು ಪ್ರಕಾರ ಕೊಡಬಾರದು ಎನ್ನುತ್ತಿದೆ ವರದಿ.
1. ಬೆಳ್ಳಿ:
ಪ್ರೇಮ ನೀವಿದೇನೆ ಅಥವಾ ಪ್ರೀತಿಯಲ್ಲಿ ಇರುವವರು ಬೆಳ್ಳಿ ಆಭರಣ ಕೊಡೋದು ಬ್ರೇಕಪ್‌ಗೆ ಕಾರಣ ಆಗುತ್ತೆ ಎಂದು ಕೆಲ ವಾಸ್ತು ವರದಿ ಹೇಳುತ್ತಿದೆ. ಆದರೆ ಚಿನ್ನ, ವಜ್ರ ಕೊಡಬಹುದು. ಇದು ವಾಸ್ತು ಪ್ರಕಾರದ ನಂಬಿಕೆ. ಆದರೆ ಬೆಳ್ಳಿ ವಸ್ತುಗಳು ಬೆಲೆಬಾಳುವವು, ಹೀಗಾಗಿ ಅರ್ಥಪೂರ್ಣ ಗಿಫ್ಟ್ ಕೂಡ ಆಗಬಹುದು. ಆದರೆ ವಾಸ್ತುಪ್ರಕಾರದ ವಿರುದ್ದ ಗಿಪ್ಟ್ ಕೊಟ್ಟು ಸಂಕಷ್ಟಕ್ಕೆ ಸಿಲುಕಬೇಡಿ.
2. ಕರವಸ್ತ್ರ:
ಕರವಸ್ತ್ರವನ್ನು ಬ್ರೇಕಪ್‌ಗೆ ಸಂಬಂಧಿಸಿದ ಮೂಢನಂಬಿಕೆ ಅಂತ ಭಾವಿಸ್ತಾರೆ. ಕರವಸ್ತ್ರ ಗಿಫ್ಟ್ ಕೊಡೋದು ಬ್ರೇಕಪ್‌ಗೆ ಸಂಕೇತ ಅಂತಾರೆ. ಮೂಢನಂಬಿಕೆ ಇದ್ರೂ, ಕರವಸ್ತ್ರಗಳು ಆಸೆ, ಬದ್ಧತೆ ಸೂಚಿಸುತ್ತವೆ. ಗಂಭೀರ ಸಂಬಂಧಕ್ಕೆ ಈ ಗಿಫ್ಟ್ ಅಡ್ಡಿಯಾಗುವ ಸಾಧ್ಯತೆ ಇದೆ.
3. ಚಪ್ಪಲಿಗಳು:
ಚಪ್ಪಲಿಗಳನ್ನ ಗಿಫ್ಟ್ ಕೊಡೋದು ಕೆಟ್ಟದಂತೆ. ಚಪ್ಪಲಿ ಗಿಫ್ಟ್ ಕೊಟ್ರೆ ಪ್ರೇಮಿಗಳು ದೂರ ಆಗ್ತಾರಂತೆ. ಆದ್ರೆ ಇದು ಮೂಢನಂಬಿಕೆ ಅಂತ ಭಾವಿಸೋರು ಕೂಡ ಇದ್ದಾರೆ. ಯಾಕಂದ್ರೆ.. ಜನ ಚಪ್ಪಲಿಗಳನ್ನ ಗಿಫ್ಟ್ ಕೊಡ್ತಾರೆ. ಅವರ ವೈಯಕ್ತಿಕ ಅಭಿಪ್ರಾಯದ ಮೇಲೆ ಅವಲಂಬಿತವಾಗಿರುತ್ತದೆ.
4. ಚೂಪಾದ ವಸ್ತುಗಳು:
ಚಾಕು ಅಥವಾ ಕತ್ತರಿಗಳಂತಹ ಚೂಪಾದ ವಸ್ತುಗಳನ್ನು ಸಾಮಾನ್ಯವಾಗಿ ಕೆಟ್ಟ ಗಿಫ್ಟ್‌ಗಳಾಗಿ ನೋಡ್ತಾರೆ, ಅಪಾಯ ಅಥವಾ ಹಾನಿಗೆ ಸಂಬಂಧಿಸಿದವು. ನಿಮ್ಮ ಸಂಗಾತಿಗೆ ನಿರ್ದಿಷ್ಟ ಅವಶ್ಯಕತೆ ಅಥವಾ ಆಸಕ್ತಿ ಇಲ್ಲದಿದ್ದರೆ ಈ ವಸ್ತುಗಳನ್ನು ತಪ್ಪಿಸುವುದು ಒಳ್ಳೆಯದು.
5. ಸುಗಂಧ ದ್ರವ್ಯ:
ಸುಗಂಧ ದ್ರವ್ಯವನ್ನು ಕೆಲವೊಮ್ಮೆ ದುರದೃಷ್ಟಕರ ಗಿಫ್ಟ್ ಅಂತ ಪರಿಗಣಿಸ್ತಾರೆ ಏಕೆಂದರೆ ಅದು ಮಂಕಾಗುತ್ತಿರುವ ಸಂಬಂಧವನ್ನು ಸೂಚಿಸುತ್ತದೆ. ಪರ್ಫ್ಯೂಮ್‌ಗಳನ್ನು ಗಿಫ್ಟ್ ಆಗಿ ಕೊಡುವುದರಿಂದ ಅವರ ನಡುವೆ ಅಂತರ ಹೆಚ್ಚಾಗುತ್ತದೆ ಅಂತಾರೆ. ಇದನ್ನು ಮೂಢನಂಬಿಕೆ ಅಂತ ಭಾವಿಸಿ ಪರ್ಫ್ಯೂಮ್‌ನ್ನ ಗಿಫ್ಟ್ ಕೊಡೋರು ಕೂಡ ಇದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.