ಬುದ್ಧಿಮಾಂದ್ಯತೆಯನ್ನು ಮುಚ್ಚಿಟ್ಟು ವೀರ್ಯದಾನ: 15 ಮಕ್ಕಳಿಗೆ ತಂದೆಯಾದ ಪಾಪಿ

ಬುದ್ಧಿಮಾಂದ್ಯ(ದಿವ್ಯಾಂಗ) ವೀರ್ಯದಾನಿಯೊಬ್ಬ ತನ್ನ ವಿಕಲತೆಯನ್ನು ಮುಚ್ಚಿಟ್ಟು ಮಹಿಳೆಯರಿಗೆ ವೀರ್ಯದಾನ ಮಾಡಿ 15ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. 

UK Sperm Donor had 15 Children hide his Disabilities with Mothers akb

ಮಕ್ಕಳಾಗದವರು ಅಥವಾ ತನ್ನ ಸಂಗಾತಿಯಿಂದ ಮಕ್ಕಳನ್ನು ಪಡೆಯಲಾಗದೇ ಇದ್ದಾಗ ಮಹಿಳೆ ಅಥವಾ ಜೋಡಿ ವೀರ್ಯದಾನ ಪ್ರಕ್ರಿಯೆಯೆ ಮೂಲಕ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಇದು ವಿದೇಶಗಳಲ್ಲಿ ಅತೀಹೆಚ್ಚು ಚಾಲ್ತಿಯಲ್ಲಿದೆ. ಆದರೆ ವೀರ್ಯದಾನ ಮಾಡಲು ಹಲವು ನಿಯಮಗಳಿವೆ. ಅದರಲ್ಲಿ ಮೊದಲನೆಯದ್ದು ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಆದರೆ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬ ತನ್ನ ವಿಕಲತೆಯನ್ನು ಮುಚ್ಚಿಟ್ಟು ವೀರ್ಯದಾನ ಮಾಡಿದ್ದಲ್ಲದೇ 15 ಮಕ್ಕಳಿಗೆ ತಂದೆಯಾಗಿದ್ದಾನೆ. 

ಒಂದು ವೇಳೆ ತಂದೆ ಅಥವಾ ತಾಯಿಯರ ಕೆಲವು ವಿಕಲಾಂಗತೆ ಅಥವಾ ಬುದ್ಧಿಮಾಂದ್ಯತೆ ಅನುವಂಶೀಯವಾಗಿ ಅವರ ಮುಂದಿನ ತಲೆಮಾರಿನವರಿಗೂ ಕಂಡು ಬರುವುದು. ಆದರೆ ಯುನೈಟೆಡ್ ಕಿಂಗ್‌ಡಮ್‌ನ  37 ವರ್ಷದ ಜೇಮ್ಸ್ ಮ್ಯಾಕ್‌ಡೌಗಲ್ ಎಂಬಾತ ತಾನು ಎಕ್ಸ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ ಎಂದು ತಿಳಿದಿದ್ದರೂ ಈತನಿಂದ ವೀರ್ಯದಾನ ಪಡೆಯಲು ಬಯಸಿದ್ದ ಮಹಿಳೆಯರಿಗೆ ತನ್ನ ಈ ವಿಕಲತೆಯನ್ನು ತಿಳಿಸಿರಲಿಲ್ಲ. ಈ ಎಕ್ಸ್ ಸಿಂಡ್ರೋಮ್‌ ಕಾಯಿಲೆಯೂ ಆನುವಂಶಿಕವಾಗಿ ಬರುವ, ಗುಣಪಡಿಸಲಾಗದ ಸ್ಥಿತಿಯಾಗಿದ್ದು ಅದು ಕಡಿಮೆ ಐಕ್ಯೂ ಮತ್ತು ಮಕ್ಕಳ ಬೆಳವಣಿಗೆಯ ವಿಳಂಬಕ್ಕೆ ಕಾರಣವಾಗಬಹುದು.

ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್ ಹೃತಿಕ್‌ ವೀರ್ಯದಾನ ಮಾಡಿ ಅಂದ್ರಾ?

ಈ ಮ್ಯಾಕ್‌ಡೌಗಲ್ ಎಂಬಾತ ತನ್ನ ವೀರ್ಯದಾನ ಮೂಲಕ ಹುಟ್ಟಿದ ನಾಲ್ಕು ಮಕ್ಕಳಿಗೆ ತಾನು ಪೋಷಕನ ಜವಾಬ್ದಾರಿ ಹೊರುವುದು ಹಾಗೂ ಮಕ್ಕಳ ಭವಿಷ್ಯದ ವ್ಯವಸ್ಥೆಯ ಹಕ್ಕಿಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ವೀರ್ಯದಾನದ ವೇಳೆ ತಾನು ತನ್ನ ವೀರ್ಯದಿಂದ ಹುಟ್ಟುವ ಮಕ್ಕಳೊಂದಿಗೆ ಸಂಪರ್ಕವನ್ನು ಬಯಸುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರವೂ ಈತ ಪಿತೃತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಡರ್ಬಿ ಕ್ರೌನ್ ಕೋರ್ಟ್‌ನಲ್ಲಿ ಆಲಿಸಲಾಗಿತ್ತು. ಅಲ್ಲಿ ಆತ ತನ್ನ ಮೂವರು ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದ.

ಹೀಗಾಗಿ ನ್ಯಾಯಾಲಯ ಮುಂದೆ ಖಾಸಗಿಯಾಗಿ ವೀರ್ಯದಾನ ಪಡೆಯುವ ಇತರ ಜನರನ್ನು ರಕ್ಷಿಸುವ ಸಲುವಾಗಿ ಈತನ ಗುರುತನ್ನು ಎಲ್ಲರಿಗೂ ತಿಳಿಸಲು ನ್ಯಾಯಾಧೀಶರು ಅವಕಾಶ ನೀಡಿದರು. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯಗಳಲ್ಲಿನ ಸಾಮಾನ್ಯ ವಿಧಾನವೆಂದರೆ ವೀರ್ಯದಾನ ಮಾಡಿದ ಹಾಗೂ ಅದರಿಂದ ಹುಟ್ಟಿದ ಮಕ್ಕಳ ಗುರುತನ್ನು ಅನಾಮಧೇಯಗೊಳಿಸುವುದಾಗಿದೆ. ಆದರೆ ಈತ ಈಗ ಮಕ್ಕಳ ಹಕ್ಕಿಗಾಗಿ ಕೋರ್ಟ್‌ಮೊರೆ ಹೋದ ಹಿನ್ನೆಲೆಯಲ್ಲಿ ಮುಂದೆ ವೀರ್ಯದಾನ ಪಡೆಯಲು ಬಯಸುವ ಮಹಿಳೆಯರಿಗೆ ಈತನನ್ನು ದಾನಿಯಾಗಿ ಬಳಸುವುದನ್ನು ತಡೆಯುವ ಸಲುವಾಗಿ
ಈತನ ಗುರುತನ್ನು ಸಾರ್ವಜನಿಕಗೊಳಿಸಲು ನ್ಯಾಯಾಧೀಶರು ಹೇಳಿದ್ದಾರೆ.

ರಿಯಲ್ ಲೈಫ್ ನ ವಿಕ್ಕಿ ಡೋನರ್, 30 ವರ್ಷದ ಕೇಲ್ ಗೋರ್ಡಿಗೆ 47 ಮಕ್ಕಳು!
 

ಇನ್ನು ಸ್ವಾರಸ್ಯಕರ ವಿಚಾರವೆಂದರೆ 37 ವರ್ಷ ಈ ವೀರ್ಯ ದಾನಿ, ವೀರ್ಯದಾನಿಗಳನ್ನು ಗಳನ್ನು ಹುಡುಕುವ ಸಲಿಂಗಿ ಮಹಿಳೆಯರಿಗಾಗಿ ಸಾಮಾಜಿಕ ಜಾಲತಾಣದಲ್ಲಿ  ಜಾಹೀರಾತು ಹಾಕಿದ್ದ ಎಂದು  ನ್ಯಾಯಾಧೀಶರಾದ  ಜಸ್ಟಿಸ್ ಲೀವೆನ್ (Justice Lieven) ವರದಿ ಮಾಡಿದ್ದಾರೆ. ಏಕೆಂದರೆ ಈತ ತನ್ನ ವಿಕಲತೆಯಿಂದಾಗಿ ವೈದ್ಯಕೀಯವಾಗಿ ವೀರ್ಯದಾನ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದ. ತನ್ನ ವೈಕಲ್ಯತೆಯನ್ನು ತಿಳಿದಿದ್ದು ಈತ ವೀರ್ಯ ದಾನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮೂಲಭೂತ ಬೇಜವಾಬ್ದಾರಿಯನ್ನು ತೋರಿದ್ದಾನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆತ ಮಕ್ಕಳನ್ನು ಹೊಂದುವ ಮಹಿಳೆಯರ ಬಯಕೆಯ ಪ್ರಯೋಜನವನ್ನು ಪಡೆದ. ಮ್ಯಾಕ್‌ಡೌಗಲ್ ಕಲಿಕೆಯ ತೊಂದರೆಗಳಿಂದ ಬಳಲುವ ಹಾಗೂ ಮತ್ತು ಸ್ವಲೀನತೆಯ ಸಂಕೀರ್ಣ ಸಮಸ್ಯೆಯನ್ನು ಹೊಂದಿದ್ದ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈತನ ಕಿತಾಪತಿ ಇಲ್ಲಿಗೆ ಮುಗಿದಿಲ್ಲ. ವೀರ್ಯದಾನದ ಬಳಿಕ ಮುಂದೆ ಹುಟ್ಟುವ ಮಗುವಿನೊಂದಿಗೆ ಯಾವುದೇ ಸಂಪರ್ಕ ಹೊಂದುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಹಾಕಿದ್ದ ನಂತರವೂ ಆತ ಅಕ್ಟೋಬರ್ 2019 ಮತ್ತು ಮಾರ್ಚ್ 2020 ರ ನಡುವೆ ಈ ಖದೀಮ ಮ್ಯಾಕ್‌ಡೌಗಲ್ ತನ್ನ ಮೊದಲ ಮಗುವನ್ನು ಭೇಟಿಯಾಗಿದ್ದಾನೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. 

ಇದಕ್ಕೆ ಸಂಬಂಧಿಸಿದ ಮೂರು ಪುಟಗಳ ದಾಖಲೆ ಇದ್ದು ಆ ದಾಖಲೆಯಲ್ಲಿ ಆತ ಫ್ರಾಗಿಲ್ ಎಕ್ಸ್ ಸಿಂಡ್ರೋಮ್ ಅನ್ನು ಹೊಂದಿದ್ದಾರೆಂದು ಒಪ್ಪಿಕೊಂಡಿದ್ದಾನೆ. ಆದರೆ ಅದರ ಪರಿಣಾಮ ಏನು? ಅದರಿಂದ ಏನಾಗುವುದು ಎಂಬ ಬಗ್ಗೆ ಆತ ಎಲ್ಲೂ ತಿಳಿಸಿಲ್ಲ. ಅಲ್ಲದೇ ಆತ ತನ್ನ ಈ ಸಮಸ್ಯೆ ಗಂಭೀರವಾದುದಲ್ಲ ಹಾಗೂ ಈ ಬಗ್ಗೆ ತಾಯಂದಿರು ಸಂಶೋಧನೆ ಮಾಡಲು ಹೇಗೆ ಬಯಸಿದರು ಎಂದು ಕೇಳಿದ ಎಂದು ನ್ಯಾಯಾಧೀಶರು ಹೇಳಿದ್ದಾರೆ.  

ಅಲ್ಲದೇ ಈತ ಮುಂದೆ ಭವಿಷ್ಯದಲ್ಲಿ ವೀರ್ಯ ದಾನಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ವಿಶ್ವಾಸವಿಲ್ಲ ಮತ್ತು ಯಾವುದೇ ಮಹಿಳೆಗೆ ಆತನ ತನ್ನ ದುರ್ಬಲ X ಸಿಂಡ್ರೋಮ್‌ನ ನಿಜವಾದ ಪರಿಣಾಮಗಳನ್ನು ಸಂಪೂರ್ಣವಾಗಿ ವಿವರಿಸುತ್ತಾನೆ ಎಂಬ ವಿಶ್ವಾಸವಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಹೀಗಾಗಿ ಮಹಿಳೆಯರು ಇಂಟರ್ನೆಟ್‌ನಲ್ಲಿ ಇವನನ್ನು ಹುಡುಕಿ ಮತ್ತೆ ಅಪಾಯಕ್ಕೆ ಇಡಾಗುತ್ತಾರೆ. ಹಾಗಾಗಿ ಈತನ ಗುರುತನ್ನು ಸಾವರ್ಜನಿಕಗೊಳಿಸುವುದು ಒಳಿತು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲದೇ ಈತ ಇದುವರೆಗೆ ವೀರ್ಯದಾನದ ಮೂಲಕ  15 ಮಕ್ಕಳ ತಂದೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios