ರಿಯಲ್ ಲೈಫ್ ನ ವಿಕ್ಕಿ ಡೋನರ್, 30 ವರ್ಷದ ಕೇಲ್ ಗೋರ್ಡಿಗೆ 47 ಮಕ್ಕಳು!
ಈತ ಹೇಳುವ ಪ್ರಕಾರ ಈವರೆಗೂ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ವೀರ್ಯವನ್ನು ದಾನ ಮಾಡುವಂತೆ ಕೇಳಿದ್ದಾರಂತೆ. ಇನ್ಸ್ ಟಾಗ್ರಾಮ್ ನಲ್ಲಿ ಪ್ರತಿನಿತ್ಯ ಇಂಥವೇ ಸಾಕಷ್ಟು ಮೆಸೇಜ್ ಗಳು ತಮಗೆ ಬರುತ್ತವೆ. ಅವುಗಳಿಗೆ ಪತ್ರಿಕ್ರಿಯೆ ನೀಡಿಯೇ ತನಗೆ ಸಾಕಾಗುತ್ತದೆ ಎನ್ನುತ್ತಾನೆ.
ಬೆಂಗಳೂರು (ಏ.30): ಆಯುಶ್ಮಾನ್ ಖುರಾನ (Ayushmann Khurrana) ನಟಿಸಿದ ಹೊಸ ಅಲೆಯ ಚಿತ್ರ ವಿಕ್ಕಿ ಡೋನರ್ (Vicky Donor) ನೆನಪಿರಬೇಕಲ್ಲ. 2012ರಲ್ಲಿ ತೆರೆಕಂಡ ಈ ಚಿತ್ರದ ಕಥೆಯೇ ಭಿನ್ನವಾಗಿತ್ತು. ಮಕ್ಕಳಿಲ್ಲದ ದಂಪತಿಗಳಿಗೆ ವೀರ್ಯವನ್ನು ದಾನ (sperm donoation) ಮಾಡುವ ಕಂಟೆಂಟ್ ಹೊಂದಿತ್ತು. ಈ ಚಿತ್ರದ ಸ್ಫೂರ್ತಿಯಿಂದಾಗಿಯೇ ಮುಂಬೈನ ಒಬ್ಬ ವ್ಯಕ್ತಿ ವೀರ್ಯ ದಾನಿ ಕೂಡ ಆಗಿದ್ದರು. ಆದರೆ, ಇದೇ ಚಿತ್ರಕಥೆಯನ್ನು ಹೋಲುವಂಥ ನೈಜ ಪ್ರಕರಣ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಕ್ಯಾಲಿಫೋರ್ನಿಯಾ (California) ಮೂಲದ ಕೈಲ್ ಗೋರ್ಡಿ (Kyle Gordy) ತಾವು ಈವರೆಗೂ 47 ಮಕ್ಕಳ ತಂದೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಇನ್ನೂ 10 ಮಕ್ಕಳಿಗೆ (ಜೈವಿಕ ತಂದೆ) ತಂದೆಯಾಗಲಿದ್ದೇನೆ ಎಂದೂ ಹೆಮ್ಮೆಯಿಂದ ಹೇಳಿದ್ದಾರೆ. ಆದರೆ, ಇವೆಲ್ಲವುಗಳಿಂದ ನನ್ನ ವೈಯಕ್ತಿಕ ಜೀವನ ಹಾಳಾಗಿದೆ. ಡೇಟಿಂಗ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೆಕ್ಕೆಲ್ಲ ಕಾರಣವೇನೆಂದರೆ 30 ವರ್ಷದ ಕೇಲ್ ಗೋರ್ಡಿ ವೀರ್ಯ ದಾನಿ.
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕೇಲ್ ಗೊರ್ಡಿ, ವೀರ್ಯ ದಾನದ ಕಾರಣದಿಂದಾಗಿ ಗೆಳತಿಯರ ಜೊತೆ ಕಾಲ ಕಳೆಯಲು ಸಮಯವೂ ಸಿಗುತ್ತಿಲ್ಲ. ಆಕೆಯನ್ನು ಡೇಟಿಂಗ್ ಗೆ ಕರೆದುಕೊಂಡು ಹೋಗಲು ಅಗುತ್ತಿಲ್ಲ ಎಂದಿದ್ದಾರೆ. ಶೀಘ್ರದಲ್ಲಿಯೇ ತಮ್ಮ ವೀರ್ಯದಿಂದ ಹುಟ್ಟಿರುವ ಮಕ್ಕಳ ಸಂಖ್ಯೆ 57ಕ್ಕೆ ಏರಲಿದೆ ಎಂದೂ ಹೇಳಿದ್ದಾರೆ.
ದಿ ಮಿರರ್ ಪತ್ರಿಕೆ ಇದನ್ನು ವರದಿ ಮಾಡಿದ್ದು ಗೊರ್ಡಿ ಈವರೆಗೂ 47 ಮಕ್ಕಳಿಗೆ ತಂದೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ನನ್ನ ಡೇಟಿಂಗ್ ಜೀವನ ಸರಾಸರಿಯಾಗಿತ್ತು, ನಾನು ಅನೇಕ ಜನರೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ಕೇಲ್ ಗೋರ್ಡಿ ಹೇಳುತ್ತಾರೆ. ಆದರೆ ಯಾರೊಂದಿಗೂ ದೀರ್ಘ ಸಂಬಂಧದಲ್ಲಿ ಇರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇನ್ಸ್ ಟಾಗ್ರಾಮ್ ನಲ್ಲಿ ಸಂದೇಶಗಳ ಮಹಾಪೂರ: ಆದರೆ, ಗೋರ್ಡಿಗೆ ಈಗ ತಾವು ಮಾಡುತ್ತಿರುವ ಕೆಲಸ ಬೇಸರ ತರಿಸಿದೆ. ಮಗು ಬೇಕೆಂದಾಗ ಮಾತ್ರವೇ ಮಹಿಳೆಯರು ತಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ನಾನು ವೀರ್ಯವನ್ನು ದಾನ ಮಾಡಿದ ಬಳಿಕ, ಸಾಕಷ್ಟು ಗರ್ಭಧಾರಣೆಗಳು ಯಶಸ್ವಿಯಾಗಿದ್ದವು. ಆ ನಂತರವೇ ಈ ಮಹಿಳೆಯರು ತನಗೆ ಇನ್ಸ್ ಟಾಗ್ರಾಮ್ ನಲ್ಲಿ ಸಂದೇಶ ಕಳಿಸಲು ಆರಂಭಿಸಿದರು ಎನ್ನುತ್ತಾರೆ. ಇಷ್ಟು ಮಂದಿ ಮಹಿಳೆಯರು ಇದರಲ್ಲಿ ಆಸಕ್ತರಾಗಿದ್ದಾರೆ ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಏಕೆಂದರೆ, ಶ್ರೀಮಂತ ಮಹಿಳೆಯರು, ನೇರವಾಗಿ ಸಂಪರ್ಕ ಮಾಡುವ ಬದಲು ವೀರ್ಯಬ್ಯಾಂಕ್ ಗೆ ತೆರಳುತ್ತಾರೆ ಎಂದು ತಾನು ಭಾವಿಸಿದ್ದೆ ಎಂದು ಗೋರ್ಡಿ ಹೇಳುತ್ತಾರೆ.
ಮುಂದಿನ ಸಿಎಂ ನೀವು, ಹೀಗೆಲ್ಲ ಬಟ್ಟೆ ಧರಿಸಬೇಡಿ; ಕಂಗನಾ ಬೋಲ್ಡ್ ಅವತಾರಕ್ಕೆ ನೆಟ್ಟಿಗರ Reply
ಅನೇಕ ಮಹಿಳೆಯರು ತಮ್ಮ ಮಗುವಿನ 'ಬಯೋಲಾಜಿಕ್ ಫಾದರ್' ಅನ್ನು ನೋಡಬೇಕೆನ್ನುವ ಆಸೆಯನ್ನೂ ಗೋರ್ಡಿಗೆ ಹೇಳಿದರು. ಆದರೆ, 'ದುರದೃಷ್ಟವಶಾತ್, ಈಗ ಅನೇಕ ಮಹಿಳೆಯರು ನನ್ನೊಂದಿಗೆ ಡೇಟಿಂಗ್ ಮಾಡಲು ಇಷ್ಟಪಡುವುದಿಲ್ಲ' ಎಂದಿದ್ದಾರೆ. ಆದರೆ, ಮುಂದೊಂದು ದಿನ ತಾವೂ ಕುಟುಂಬ ಹೊಂದುವ ವಿಶ್ವಾಸವನ್ನು ಕೇಲ್ ಗೋರ್ಡಿ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದಲ್ಲೂ ವಿಶೇಷ ಮಹಿಳೆಯೊಬ್ಬರು ಬರುತ್ತಾರೆ. ಆಕೆಯ ಮಗುವಿಗೆ ನಾನು ತಂದೆಯಾಗುವ ವಿಶ್ವಾಸವಿದೆ ಎನ್ನುತ್ತಾರೆ.
ಊಟದ ಮೆನುವಿನಲ್ಲಿ ಲಡ್ಡು ಇರಲ್ಲಿಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರನ ಕುಟುಂಬ !
ಈವರೆಗೂ 1 ಸಾವಿರಕ್ಕೂ ಅಧಿಕ ಮಹಿಳೆಯರು ತಮ್ಮಿಂದ ವೀರ್ಯ ದಾನವನ್ನು ಕೇಳಿದ್ದಾರೆ. ಇನ್ನೂ ಕೆಲವರು ನನ್ನ ವೀರ್ಯದಿಂದ ಹುಟ್ಟಿದ ಮಕ್ಕಳ ಚಿತ್ರವನ್ನೂ ಕಳಿಸುತ್ತಾರೆ ಎಂದಿದ್ದಾರೆ.
ಕೇಲ್ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೆಫೀನ್ ಇರುವ ಆಹಾರ, ಆಲ್ಕೋಹಾಲ್, ಡ್ರಗ್ಸ್ ಮತ್ತು ಸಿಗರೇಟ್ ಸೇವಿಸುವುದಿಲ್ಲ. ಕೆಲ್ ಸದ್ಯಕ್ಕೆ ಕೆಲ ದಿನಗಳ ಮಟ್ಟಿಗೆ ವೀರ್ಯ ದಾನಿಯಾಗಿ ಉಳಿಯಲು ಬಯಸುತ್ತಾರೆ, ಅವರ ಸೇವೆಯ ಅಗತ್ಯವಿರುವ ಯಾವುದೇ ಮಹಿಳೆಯರು ಇನ್ಸ್ ಟಾಗ್ರಾಮ್ ಮೂಲಕ ಸಂಪರ್ಕದಲ್ಲಿರಬಹುದು ಎಂದು ಹೇಳಿದ್ದಾರೆ.