Love Story: ರಷ್ಯಾ ಸುಂದರಿ-ಇಂದೋರ್ ಬಾಣಸಿಗ.. ಅದ್ಭುತ ಪ್ರೇಮ್ ಕಹಾನಿ
* ರಷ್ಯಾದ ಚೆಲುವೆ ಮಧ್ಯಪ್ರದೇಶದ ಯುವಕ
* ವಿಡಿಯೋ ಕಾಲ್ ನಲ್ಲಿಯೇ ಪ್ರಪೋಸ್
* ಬಾಣಸಿಗನ ಬಾಳಿಗೆ ರಷ್ಯಾದ ಸುಂದರಿ
ಇಂದೋರ್(ಮೇ 06) ಇಡೀ ಪ್ರಪಂಚವೇ ರಷ್ಯಾ-ಉಕ್ರೇನ್ ಸಮರಾಂಗಣದ (Russian Ukraine War) ಬಗ್ಗೆ ತಲೆ ಕಡಿಸಿಕೊಂಡಿದ್ದರೆ ಇಲ್ಲೊಂದು ಭಾರತ-ರಷ್ಯಾ ಲವ್ ಸ್ಟೋರಿ ಇದೆ. ದೂರದ ದೇಶಗಳ ನಡುವೆ ಪ್ರೇಮಾಂಕುರವಾಗಿದ್ದೆ ಒಂದು ರೋಚಕ ಕತೆ.
ಮಧ್ಯಪ್ರದೇಶದ (Madhya Pradesh) ಈ ಲವ್ ಸ್ಟೋರಿ (Love Story) ಆಧುನಿಕ ಕಾಲದ ಕತೆಯನ್ನು ಹೇಳುತ್ತಿದೆ. ರಷ್ಯಾದ (Russia) ಚೆಲುವೆ ಭಾರತದ ಸೊಸೆಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಬಾಣಸಿಗ ಮತ್ತು ರಷ್ಯಾದ ಚೆಲುವೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಷ್ಯಾದ ಅಲೀನಾ (Alina Barkolseev) ಮತ್ತು ಇಂದೋರ್ ಬಾಣಸಿಗ ರಿಷಿ ವರ್ಮಾ (Rishi Verma) ಲವ್ ಸ್ಟೋರಿ.
ಮಧ್ಯಪ್ರದೇಶದ ಇಂದೋರ್ನ ಸಪ್ತಶೃಂಗಿ ನಗರ ಮೂಲದ ರಿಷಿ ವರ್ಮಾ ಹೈದರಾಬಾದ್ನಲ್ಲಿ ಬಾಣಸಿಗರಾಗಿದ್ದರು. 2019 ರಲ್ಲಿಅವರು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಪ್ರವಾಸಕ್ಕೆ ತೆರಳಿದ್ದರು. ಈ ಸಮಯದಲ್ಲಿ, ಅವರು ಅಲೀನಾ ಬಾರ್ಕೋಲ್ಟ್ಸೆವ್ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಫೋಟೋ ಕ್ಲಿಕ್ಕಿಸುಕೊಳ್ಳುವಾಗಲೇ ಕಣ್ಣೋಟದಲ್ಲಿಯೇ ಹೃದಯದ ಮಾತು ಗೊತ್ತಾಗಿದೆ.
ಕ್ಯಾನ್ಸರ್ ವಿರುದ್ಧ ಗೆದ್ದು 52ನೇ ವಯಸ್ಸಿನಲ್ಲಿ ಮರು ಮದುವೆ... ಅಮ್ಮನ ನಿರ್ಧಾರ ಶ್ಲಾಘಿಸಿದ ಪುತ್ರ
ರಷ್ಯಾಕ್ಕೆ ತೆರಳಿ ಅಲ್ಲಿನ ಸ್ಥಳ ವೀಕ್ಷಣೆ ಮಾಡುತ್ತಿದ್ದ ರಿಷಿ ಪೋಟೋ ತೆಗೆದುಕೊಡುವಂತೆ ಯುವತಿಯೊಬ್ಬಳನ್ನು ಕೇಳಿದ್ದಾರೆ.. ಆಕೆಯೇ ಅಲೀನಾ... ಪೋಟೋ ತೆಗೆಯುವಾಗಲೇ ಪ್ರೀತಿಯ ಸಣ್ಣ ಸಂಚಾರ ಇಬ್ಬರ ಮಧ್ಯೆ ಆಗಿತ್ತು. ಇಬ್ಬರು ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದಾರೆ. ಮಾತುಕತೆ ಶುರುವಾಗಿದೆ.. ಜೋರಾಗಿದೆ.
ವಿಡಿಯೋ ಕಾಲ್ ನಲ್ಲಿ ಪ್ರಪೋಸ್: ಮಾತುಕತೆ ಆಪ್ತತೆಗೆ ತಿರುಗಿದ ನಂತರ ಒಂದು ದಿನ ವಿಡಯೋ ಕಾಲ್ ನಲ್ಲಿ ರಿಷಿ ಪ್ರಪೋಸ್ ಮಾಡಿಯೇ ಬಿಟ್ಟರು. ಲೀನಾ ಸಹ ಒಪ್ಪಿಕೊಂಡರು. ಇನ್ನೇನಿದೆ ಇಬ್ಬರ ನಡುವೆ.. ಮದುವೆ ಮಾತುಕತೆ ಶುರುವಾಗಿಯೇ ಬಿಟ್ಟಿತು.
ಕೊರೋನಾ ಕಾರಣಕ್ಕೆ ಮದುವೆಯನ್ನು ಮುಂದಕ್ಕೆ ಹಾಕಿಕೊಂಡೇ ಬಂದರು. ಈಗ ಎಲ್ಲವೂ ತಹಬದಿಗೆ ಬಂದಿದ್ದು ಡಿಸೆಂಬರ್ ನಲ್ಲಿ ದಾಂಪತ್ಯಕ್ಕೆ ಕಾಲಿಡುವ ತೀರ್ಮಾನ ಮಾಡಿದ್ದಾರೆ. ಆದರೆ ಈಗಾಗಲೇ ಒಮ್ಮೆ ಮದುವೆ ಆಗಿದ್ದಾರೆ.
ಕೊರೋನಾ ಕಾರಣ ವಿಮಾನ ಸಂಚಾರ ಬಂದ್ ಆಗಿತ್ತು. ಯಾವಾಗ ಸಂಚಾರ ಆರಂಭವಾಯಿತೋ ಡಿಸೆಂಬರ್ 2021 ರಲ್ಲಿ ಭಾರತದ ವೀಸಾ ಪಡೆದುಕೊಂಡು ಇಂದೋರ್ ವಿಮಾನ ಹತ್ತಿದರು. ಲೀನಾ ಭಾರತಕ್ಕೆ ಬಂದ ನಂತರವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಒಮ್ಮೆ ರಷ್ಯಾದಿಂದ ಭಾರತಕ್ಕೆ ಬಂದ ಅವರು ಮತ್ತೆ ರಷ್ಯಾ ಕಡೆ ನೋಡಲೇ ಇಲ್ಲ. ಮದುವೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು ರಿಷಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಆಹಾರದಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ಖಾದ್ಯಗಳನ್ನು ಅಲೀನಾ ಇಷ್ಟಪಟ್ಟು ತಿನ್ನುತ್ತಾರಂತೆ.
ಅಲೀನಾ ಈಗ ರಿಷಿಯ ಕುಟುಂಬ ಸದಸ್ಯರೊಂದಿಗೆ ಬೆರೆತುಹೋಗಿದ್ದಾರೆ. ಭಾರತೀಯ ಸಂಪ್ರದಾಯವನ್ನು ಅನುಸರಿಸುತ್ತಾರೆ. ಕುಟುಂಬ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅತ್ತೆ ಜತೆ ಅಡುಗೆಯಲ್ಲಿಯೂ ನೆರವಾಗುತ್ತಾರೆ. ರಷ್ಯಾ ಸೊಸೆಯನ್ನು ಕೊಂಡಾಡಿದ ಅತ್ತೆ ಸುಮನ್ ವರ್ಮ, ಆಕೆ ಚೆನ್ನಾಗಿ ರೊಟ್ಟಿ ಮಾಡುತ್ತಾರೆ ಎಂದು ಶಹಭಾಸ್ ನೀಡಿದರು.
ಮಾದರಿ ಮದುವೆ: ವಧು ಹಾಗೂ ವರ ಇಬ್ಬರಿಗೂ ಮಾತುಗಳು ಬರುವುದಿಲ್ಲ. ಕೈ, ಸನ್ನೆ, ಕಣ್ಣು ಸನ್ನೆಯಲ್ಲಿಯೇ ಎಲ್ಲವೂ. ಇಂಥದರಲ್ಲಿ ಈ ಮೂಗ ವಧು- ವರನಿಗೆ ಅಂತೂ ಇಂತೂ ಕಂಕಣ ಭಾಗ್ಯ ಯೋಗ ಕೂಡಿ ಬಂತು. ವಿಜಯಪುರ ನಗರದ ಆಶ್ರಮ ಹತ್ತಿರದ ಅಕ್ಕಿ ಕಾಲೋನಿಯಲ್ಲಿಮೂಗ ವಧು- ವರರ ವಿವಾಹ ಸಂಭ್ರಮ ಮನೆ ಮಾಡಿತ್ವೋತು.
ನಗರದ ಸ್ವಪ್ನ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯಲ್ಲಿ ಸುಜಾತ ಶಿವಾನಂದ ರೇಶ್ಮಿ ದಂಪತಿ ಪುತ್ರಿ ಸ್ವಪ್ನ (21) ಹಾಗೂ ಹುಬ್ಬಳ್ಳಿಯ ಪ್ರಭಾವತಿ ಚಂದ್ರಶೇಖರ ಶಿವಪ್ಪಯ್ಯನಮಠ ದಂಪತಿ ಪುತ್ರ ವಿನಾಯಕ (26) ಇಬ್ಬರೂ ಮೂಗರು. ಭವಿಷ್ಯದಲ್ಲಿ ಕಂಕಣ ಭಾಗ್ಯ ಒಲಿದು ಬರುತ್ತದೆಯೋ ಇಲ್ಲವೋ ಎಂದು ಇಬ್ಬರ ತಂದೆ- ತಾಯಿಗಳು ಚಿಂತೆಗೀಡಾಗಿದ್ದರು.
ಮೈಸೂರಿನ(Mysuru) ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರದಲ್ಲಿ ವಿಶೇಷ ಶಿಕ್ಷಣ(Special Education) ಪಡೆಯಲು ಈ ಇಬ್ಬರು ತರಬೇತಿ ಕೇಂದ್ರದಲ್ಲಿ ಸೇರಿದ್ದರು. ಆಗ ಈ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ(Love). ಅದು ದಿನವೂ ಗಟ್ಟಿಗೊಂಡು ಇಬ್ಬರು ಪರಸ್ಪರರಲ್ಲಿ ಕಳೆದು ಹೋಗಿದ್ದಾರೆ. ತರಬೇತಿ ಕೇಂದ್ರದವರು ಈ ಯುವಕ, ಯುವತಿಯ ಪ್ರೇಮ ಸಲ್ಲಾಪ ಕಂಡು ತಡ ಮಾಡದೇ ಇಬ್ಬರ ತಂದೆ- ತಾಯಿಗಳಿಗೆ ವಿಷಯ ತಿಳಿಸಿದ್ದು ಮದುವೆ ಮಾಡಿ ಮುಗಿಸಲಾಗಿದೆ.