ದಾಂಪತ್ಯದಲ್ಲಿ ಏನೇನೋ ಅಡ್ಜಸ್ಟ್ ಮಾಡಿಕೊಳ್ಳಬಹುದು! ಗಂಡ ಗಂಡಲ್ಲದೇ ಹೋದರೆ?

ಎಲ್ಲವೂ ಈ ದಾಂಪತ್ಯದಲ್ಲಿ ನಾರ್ಮಲ್ ಎನಿಸುತ್ತಿತ್ತು. ಆದರೆ, ಏಳು ತಿಂಗಳ ನಂತರ ಆಕೆಗೆ ಗೊತ್ತಾಗಿದ್ದು ಗಂಡ ಗಂಡಸಲ್ಲ, ಹೆಂಗಸು ಎಂದು. ಇದೆಂಥ ವಿಚಿತ್ರ ಸಮಸ್ಯೆ. ಓದಿ ಇಲ್ಲ. 

Transgender cheats marrying woman in Rajastahn saying as man

ಎಲ್ಲರಂತೆಯೇ ಈ ಹೆಣ್ಣೂ ಪುರುಷನನ್ನೇ ಮದುವೆಯಾಗಿದ್ದೇನೆಂದು ಭಾವಿಸಿದ್ದಳು. 7 ತಿಂಗಳು ಸಂಸಾರ ಸುಸೂತ್ರವಲ್ಲದಿದ್ದರೂ, ಒಂದು ರೀತಿ ನಡೆಯುತ್ತಿತ್ತು. ಆಮೇಲೆ ಗೊತ್ತಾಯ್ತು ತಾನು ಮದುವೆಯಾಗಿದ್ದು ಹೆಣ್ಣನ್ನು ಅಂತ. ವಿಚಿತ್ರದಲ್ಲಿ ವಿಚಿತ್ರ ಕೇಸು ಹೌದು. ರಾಜಸ್ಥಾನದ ಜೈಪುರದ ಕೋಟಾದಿಂದ ವರದಿಯಾದ ಘಟನೆ ಇದು. ಆಕೆಗೆ 30 ವರ್ಷ. ಠಾಣೆಗೆ ಹೋಗಿ ಪತಿರಾಯ ಅಲಿಯಾಸ್ ವಂಚಿಸಿದ ಮಹಿಳೆಯ ವಿರುದ್ಧ ದೂರು ನೀಡಿದ್ದಳು. ಗಂಡ ಎಲ್ಲ ಚಿನ್ನ, ನಗದನ್ನು ದೋಚಿಕಂಡು ಓಡಿ ಹೋಗಿದ್ದಾನೆಂದು ದೂರು ನೀಡಿದ್ದಾಳೆ. 

ಈ ದೂರಿನಾಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ವೈದ್ಯಕೀಯ ತಪಾಸಣೆಗೆ (Medical Check Up) ಒಳಪಡಿಸಿದಾಗ ಆಕೆ ಅವನಲ್ಲ, ಅವಳು ಎಂಬುವುದು ಸ್ಪಷ್ಟವಾಗಿದೆ. ವಿಜೇತ ಎಂಬಾಕೆ, ವಿಕಾಸ್ ಎಂಬ ಹೆಸರಲ್ಲಿ ವೇಷ ಮರೆಸಿ ವಂಚಿಸಿದ್ದಾಳೆ. ಗಂಡೆಂದು ಹೇಳಿ ಮದುವೆಯಾಗಿದ್ದಾಳೆ. ಆಕೆ ವಂಚಿಸಿದ ರೀತಿ ಮಾತ್ರ ಪೊಲೀಸರಿಗೆ ವಿಚಿತ್ರ ಎಂದೆನಿಸುವಂತಿತ್ತು. 

ಈ ಮಹಿಳೆಗಿದು ಎರಡನೇ ಮದುವೆ. ಹಲವು ವರ್ಷಗಳ ಹಿಂದೆಯ ಪತಿಯನ್ನು ಕಳೆದುಕೊಂಡು, ಒಂಟಿಯಾಗಿದ್ದಳು. ಯಾವುದೋ ಆಶ್ರಮದಲ್ಲಿ ತನ್ನೆರಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಸೆಕ್ಯೂರಿಟಿ ಗಾರ್ಡ್ ಆಗಿ ಹೊಟ್ಟೆ ಪಾಡಿಗೆ ದಾರಿ ಹುಡುಕಿಕೊಂಡಿದ್ದಳು. ಅಲ್ಲಿಗೆ ಬಂದು ಸೇರಿದ್ದ ವಿಕಾಸ್ ಹೆಸರಿನ ವಿಜೇತ. ಹುಡುಗಿಯೊಂದಿಗೆ ಬಂದಿದ್ದ ಇವನನ್ನು ತನ್ನ ತಂದೆ ಎಂದು ಪರಿಚಯಿಸಿದ್ದಳು. ಪುರುಷನೆಂದು ತನ್ನನ್ನು ಬಿಂಬಿಸಿಕೊಂಡು, ಈ ಮಹಿಳೆಯೊಂದಿಗೆ ವಿವಾಹವಾಗಿದ್ದಳು. ಗಡಸು ಧ್ವನಿ ಇತ್ತು ಅವಳಿಗೆ. ಗಂಡಲ್ಲ ಎಂಬುವುದೇ ಗೊತ್ತಾಗಲಿಲ್ಲ ಈ ಮಹಿಳೆಗೆ.

ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !

ಏಳು ತಿಂಗಳು ಅದು ಹೇಗೆ ಸಂಸಾರ ಮಾಡಿದರೋ ಗೊತ್ತಿಲ್ಲ. ಅಷ್ಟು ತಿಂಗಳಾದರೂ ಇಬ್ಬರ ನಡುವೆ ದೈಹಿಕ ಸಂಪರ್ಕವೂ (Physical Contact) ಏರ್ಪಡಲಿಲ್ಲ. ಅಷ್ಟೇ ಅಲ್ಲ ತನ್ನನ್ನು ಬೆತ್ತೆಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆಂದು ಮಂತ್ರವಾದಿಯೊಬ್ಬರು ಹೇಳಿದ್ದಾರೆಂದು ಬೆದರಿಸಿದ್ದರು. ಹಾಗಾಗಿ ಸಂತ್ರಸ್ತೆ ಸಹ ಸುಮ್ಮನೆ ಇದ್ದಳು. ತಪ್ಪಾಗಿದ್ದು ಅಲ್ಲಿಯೇ. 

ಆ ಒಂದು ದಿನ ಈ ಸಂತ್ರಸ್ತೆ ಬಳಿ ಇದ್ದು ಸುಮಾರು ಒಂದೂವರೆ ಲಕ್ಷ ನಗದು, ಹಾಗೂ 3 ಲಕ್ಷ ಮೌಲ್ಯದ ಚಿನ್ನದೊಡವೆಯೊಂದಿಗೆ (Gold Jewellary) ಓಡಿ ಹೋಗಿದ್ದಾಳೆ. ಮದುವೆಯಾದವನಿಂದಲೇ ವಂಚನೆಯಾಗಿದೆ ಎಂದು ದೂರು ದಾಖಲಾಗಿತ್ತು. ಆದರೆ, ಆಕೆ ಗಂಡಲ್ಲ, ಹೆಣ್ಣೆಂದು ಗೊತ್ತಾಗಿದ್ದು ಬಂಧನದ ನಂತರವೇ. ಏಳು ತಿಂಗಳು ಗಂಡನೆಂದು ಬದುಕಿದ್ದವ ಗಂಡಲ್ಲ, ಹೆಣ್ಣೆಂದು ತಿಳಿದು ಆಗಿದ್ದಾಳೆ ಶಾಕ್. 

ವಿಜಯಪುರದಲ್ಲೊಂದು ವಿಶಿಷ್ಟ ಆಚರಣೆ: ಮಂಗಳಮುಖಿಯರಿಗೆ ಉಡಿ ತುಂಬಿದ ಹುಲಜಂತಿ ಭಕ್ತರು..!

ಸಾಮನ್ಯವಾಗಿ ಮಂಗಳಮುಖಿಯರು (Transgenders) ಹೀಗೆ ವಂಚನೆ ಮಾಡೋದು ಕಾಮನ್. ಇಂಥ ಪ್ರಕರಣಗಳೂ ಈ ಮೊದಲೂ ಆಗಿವೆ. ಉತ್ತರ ಪ್ರದೇಶದಲ್ಲಿಯೂ ಒಮ್ಮೆ ಇಂಥದ್ದೇ ಪ್ರಕರಣವೊಂದು ದಾಖಲಾಗಿತ್ತು. ಅದೂ ಆಕೆ ಮದುವೆಯಾಗಿದ್ದು ಒಬ್ಬಳನ್ನಲ್ಲ, ಇಬ್ಬರನ್ನು. 31 ವರ್ಷ ವಯಸ್ಸಿನ ಕೃಷ್ಣಾ ಸೇನ್ ಎಂಬುವಳು ಮೂರು ವರ್ಷಗಳಲ್ಲಿ ಗಂಡಿನ ವೇಷ ಧರಿಸಿ, ಎರಡೆರಡು ಮದುವೆ ಆಗಿದ್ದಳು. ಇಬ್ಬರಿಂದಲೂ ವರದಕ್ಷಿಣೆ ಬೇರೆ ಪಡೆದಿದ್ದಳು. ಮೊದಲ ಪತ್ನಿ ಪತಿ ಮೇಲೆ ವರದಕ್ಷಿಣಿ ಹಿಂಸೆಯ ಕೇಸು ಜಡಿದಾಗಲೇ ಸತ್ಯ ಬಯಲಾಗಿದ್ದು. ಆದರಿದು ಒಂದು ರೀತಿ ಸೈಬರ್ (Cyber) ವಂಚನೆಯಾಗಿತ್ತು. ಮೊದಲು ಫೇಸ್‌ಬುಕ್‌ನಲ್ಲಿ (Facebook) ಫ್ರೆಂಡ್ ಆಗಿ, ಖೆಡ್ಡಾಕ್ಕೆ ಬೀಳಿಸುತ್ತಿದ್ದಳು. ಅಲ್ಲದೇ ಕತ್ತಲಲ್ಲಿ ಪತ್ನಿಯರಿಗೂ ದೈಹಿಕ ಸುಖ ಕೊಡುವಷ್ಟು ಸಾಮರ್ಥ್ಯವಿತ್ತಂತೆ. ಆದರದು ಸೆಕ್ಸ್ ಟಾಯ್ಸ್ ಬಳಸಿ. ಸಿರಿವಂತ ಮನೆತನದ ಏಕೈಕ ಗಂಡು ಸಂತಾನವೆಂದೇ ತನ್ನನ್ನು ತಾನು ಬಿಂಬಿಸಿಕೊಂಡಿದ್ದಳಂತೆ ಅವಳು! ಒಟ್ಟನಲ್ಲಿ ಹೆಣ್ಣು ಮಕ್ಕಳು ವಂಚನೆಗೊಳಗಾಗಿದ್ದು ಮಾತ್ರ ಸತ್ಯ.
 

Latest Videos
Follow Us:
Download App:
  • android
  • ios