ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !
ಜೀವನ (Life)ದಲ್ಲಿ ಬದಲಾವಣೆಗಳು ಎಲ್ಲಿ ಯಾವಾಗ ಎದುರಾಗುತ್ತವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಹುಟ್ಟುತ್ತ ಗಂಡು ಮಗುವಾಗಿದ್ದ ಅವನು ಬೆಳೆಯುತ್ತ ಹೆಣ್ಣಾಗಿ (Woman) ಬದಲಾದನು. ಆದರೆ ಅವರ ಸಾಧನೆಯ ಓಟಕ್ಕೆ ಮಾತ್ರ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳು (Transgenders) ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಎಂದು ಮಾತನಾಡುವವರ ಮಧ್ಯೆ ಈಕೆ ಸಾಧಿಸಿ ತೋರಿಸಿದ್ದಾಳೆ.
ಲಿಂಗದ (Gender) ಕುರಿತಾಗಿರುವ ಚರ್ಚೆ ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದಲೂ ಹೆಣ್ಣು-ಗಂಡು, ಬೇಧಭಾವ, ತಾರತಮ್ಯದ ಕುರಿತಾಗಿರುವ ಚರ್ಚೆ ನಡೆಯುತ್ತಲೇ ಬಂದಿದೆ. ಅಷ್ಟೇ ಅಲ್ಲದೆ, ಸಮಾಜ (Society)ದಲ್ಲಿ ಟ್ರಾನ್ಸ್‌ಜೆಂಡರ್ (Transgender) ಅಸ್ತಿತ್ವವನ್ನು ಮೊದಲಿನಿಂದಲೂ ಕಡೆಗಣಿಸಲಾಗಿದೆ. ಸಮಾಜ ಅವರಿಗೆ ಯಾವತ್ತೂ ಗುರುತನ್ನು ನೀಡಿಲ್ಲ. ಅವರ ಲಿಂಗದಿಂದಾಗಿ ಸಮಾಜ ಅವರನ್ನು ಕೀಳಾಗಿ ಕಾಣುತ್ತಿದೆ. ಸಮಾಜದಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಕಂಡಾಗ ಎಲ್ಲರೂ ಮುಖ ಸಿಂಡರಿಸುತ್ತಾರೆ. ಅವರಿಗೆ ನೆರವಾಗಲು ಹಿಂಜರಿಯುತ್ತಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಾತ್ರ ಅವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಅವಕಾಶಗಳನ್ನು ಪಡೆಯುತ್ತಿರುವುದನ್ನು ನೋಡಬಹುದು.
ಹೀಗಿರುವಾಗ ವ್ಯಕ್ತಿಯೊಬ್ಬರು ತಾವು ಗಂಡಾಗಿ ಹುಟ್ಟಿ ಹೆಣ್ಣಾಗಿ (Woman) ಮಾಡಿದ ಸಾಧನೆಯ ಕಥೆಯನ್ನು ವಿವರಿಸಿದ್ದಾರೆ.ತೃತೀಯ ಲಿಂಗಿಗಳು ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಸೀಮಿತ ಎನ್ನುವ ಹುಚ್ಚು ನಂಬಿಕೆಯನ್ನು ಮೆಟ್ಟಿ ನಿಂತ ಆಕೆ ಯಶಸ್ವೀ ಡಾಕ್ಟರ್ (Doctor) ಆಗಿದ್ದಾರೆ. ಅವ್ರು ಎನ್ ಹೇಳಿದ್ದಾರೆ ತಿಳಿಯೋಣ.
ಅವನಾಗಿರಲಾ, ಅವಳಾಗಿರಲಾ ? ಸಿಕ್ಕಾಪಟ್ಟೆ ಕನ್‌ಫ್ಯೂಶನ್ !
ತೃತೀಯ ಲಿಂಗಿಯ ಸ್ವ ಅನುಭವದ ಮಾತುಗಳು
ನಾನು ಜನಿಸಿದಾಗ, ನನ್ನ ಕುಟುಂಬವು ಮೊದಲ ಮಗು ಗಂಡಾಯಿತು ಎಂದು ತುಂಬಾ ಖುಷಿಪಟ್ಟರು. ಆದರೆ ನಾನು ದೊಡ್ಡವನಾಗುತ್ತಾ ಹೋದಂತೆ ಎಂದಿಗೂ ನನ್ನನ್ನು ಹುಡುಗ ಎಂದು ಭಾವಿಸಿರಲಿಲ್ಲ. ನಾನು ಅಮ್ಮನ ಸೀರೆಯನ್ನು ಧರಿಸುತ್ತಿದ್ದೆ ಅವಳ ಮೇಕಪ್ ಹಾಕಿ ಮನೆಯೆಲ್ಲಾ ಸುತ್ತು ಬರುತ್ತಿದೆ. ಆರಂಭದಲ್ಲಿ ಎಲ್ಲರಿಗೂ ಇದು ಮುದ್ದಾಗಿ ಕಂಡಿತು. ಆದರೆ ನಾನು ಬೆಳೆಯುತ್ತಾ ಹೋದಂತೆ ಹೀಗೆ ಡ್ರೆಸ್ ಮಾಡುವುದನ್ನು, ಮೇಕಪ್ ಮಾಡಿಕೊಳ್ಳುವುದಕ್ಕೆ ನಿರಾಕರಿಸಿದರು. ಸೀರೆ, ಮೇಕಪ್ ಐಟಂಗಳನ್ನು ನನ್ನಿಂದ ಬಚ್ಚಿಟ್ಟರು. ನನಗೆ ತಮ್ಮ ಹುಟ್ಟಿದಾಗ ಆತ ನನ್ನನ್ನು ಅಣ್ಣ ಎಂದು ಕರೆಯುವುದು ನನಗೆ ಕಿರಿಕಿರಿಯೆನಿಸುತ್ತಿತ್ತು. ಬದಲಾಗಿ ಅಕ್ಕಾ ಎಂದು ಕರೆಯಲಿ ಎಂದು ನಾನು ಆಶಿಸುತ್ತಿದ್ದೆ
ಹದಿಹರೆಯಕ್ಕೆ ಬಂದಾಗ ತಂದೆ ನನ್ನನ್ನು ಬಲವಂತಾಗಿ ಹುಡುಗರು ಮಾಡುವ ಚಟುವಟಿಕೆಗಲ್ಲಿ ಪಾಲ್ಗೊಳ್ಳಲು ಸೂಚಿಸಿದರು. ಕ್ರೀಡೆ ಸೇರಿದಂತೆ ಹೊರಾಂಗಣ ಚಟುವಟಿಕೆಗಳಲ್ಲಿ ಸೇರಿಸಿದರು. ಆದರೆ ಅಲ್ಲಿ ಎಲ್ಲರೂ ಹುಡುಗ ಎಂದು ಕರೆಯುವುದು ನನಗೆ ಒಂದು ಹೊರೆಯಂತೆ ಭಾಸವಾಯಿತು. ನಾನು ನನ್ನ ಬಗ್ಗೆ ಎಲ್ಲವನ್ನೂ ದ್ವೇಷಿಸುತ್ತಿದ್ದೆ. ಸಂಪೂರ್ಣವಾಗಿ ಹುಡುಗರಿಂದ ಕೂಡಿದ್ದ ಪ್ರೌಢಶಾಲೆಯ ಜೀವನ ನನಗೆ ತುಂಬಾ ಕಷ್ಟಕರವಾಗಿತ್ತು. ಹುಡುಗನಾಗಿದ್ದು, ಹುಡುಗಿಯಂಥಾ ನನ್ನ ಸ್ವಭಾವವನ್ನು ಎಲ್ಲರೂ ಲೇವಡಿ ಮಾಡುತ್ತಿದ್ದರು. ಇದರಿಂದ ನಾನು ಕೂಡಾ ಖಿನ್ನತೆಗೊಳಗಾದೆ. ನನಗೆ ಸ್ವಯಂ ಹಾನಿ ಮಾಡಿಕೊಳ್ಳಲು ಆರಂಭಿಸಿದೆ. ನಾನು ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ನನ್ನನ್ನು ಸರಿ ಮಾಡು, ಎಲ್ಲರಂತೆ ಮಾಡು ಎಂದು ಕೇಳಿ ಕೊಳ್ಳುತ್ತಿದ್ದೆ.
ನಾನು 10ನೇ ತರಗತಿಯಲ್ಲಿದ್ದಾಗ ನಾನು ಮತ್ತು ತಾಯಿ ಸಿನಿಮಾ ನೋಡುತ್ತಿದ್ದೆವು. ಇದರಲ್ಲಿ ವಿಲನ್ ಸಲಿಂಗಕಾಮಿಯಾಗಿದ್ದ.
ತಾಯಿ ಅವನ ಉಚ್ಚಾರಣೆಯನ್ನು ಗೇಲಿ ಮಾಡಿದರು. ಅದು ನನ್ನಲ್ಲಿ ಏನನ್ನೋ ಪ್ರಚೋದಿಸಿತು ಮತ್ತು ನಾನು ಪುರುಷರನ್ನು ಇಷ್ಟಪಡುವುದು ನನ್ನ ಅರಿವಿಗೆ ಬಂತು. ಇದನ್ನು ನಾನು ಮನೆಯಲ್ಲಿ ತಿಳಿಸಿದೆ. ಆದರೆ ಮನೆಮಂದಿಯೆಲ್ಲಾ ಇದನ್ನು ವಿರೋಧಿಸಿದರು. ನಾವೆಲ್ಲರೂ ಒಂದೇ ಮನೆಯಲ್ಲಿದ್ದರೂ ಯಾರೂ ನನ್ನೊಂದಿಗೆ ಮಾತನಾಡುತ್ತಿರಲ್ಲಿಲ್ಲ. ಇದು ಶಾಲೆಯಲ್ಲೂ ಎಲ್ಲರಿಗೂ ತಿಳಿಯಿತು. ಎಲ್ಲರೂ ನನಗೆ ಕಿರುಕುಳ ನೀಡಲು ಆರಂಭಿಸಿದರು. ನನ್ನ ಶಿಕ್ಷಕರು ಕೂಡ ನನ್ನನ್ನು ಬಿಡಲಿಲ್ಲ. ನನ್ನ ಧ್ವನಿಯನ್ನು ಅಪಹಾಸ್ಯ ಮಾಡುವುದಕ್ಕಾಗಿಯೇ ತರಗತಿಯಲ್ಲಿ ಗಟ್ಟಿಯಾಗಿ ಓದುವಂತೆ ಮಾಡುತ್ತಿದ್ದರು.
Transgender Funeral : ರಾತ್ರಿ ನಡೆಯುವ ಶವಯಾತ್ರೆ ನೋಡಿದ್ರೆ ಏನಾಗುತ್ತೆ?
ಎಲ್ಲರ ಕಿರುಕುಳದಿಂದ ನಾನು ಬೇಸತ್ತಿದ್ದೆ, ಆದರೆ ಏನೂ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. ನಾನು ನನ್ನ ಎಲ್ಲಾ ಶಕ್ತಿಯನ್ನು ನನ್ನ ಅಧ್ಯಯನದ ಕಡೆಗೆ ಹರಿಸಿದೆ. ಅದು ನನ್ನಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಾಗದ ಒಂದು ವಿಷಯವಾಗಿತ್ತು. ಕಾಲಾನಂತರದಲ್ಲಿ ನಾನು ನನ್ನ ಜ್ಞಾನವನ್ನು ಆಪರೇಟಿಂಗ್ ಕೋಣೆಯಲ್ಲಿ ಬಳಸಲು ಬಯಸುತ್ತೇನೆ ಎಂದು ನಾನು ಅರಿತುಕೊಂಡೆ. ನಾನು ವೈದ್ಯನಾಗಬೇಕೆಂದು ಬಯಸಿದ್ದೆ. ನಾನು ಅಂತಿಮವಾಗಿ ಯಶಸ್ವಿಯಾಗಿದ್ದೇನೆ. ಡಾಕ್ಟರ್ ಆಗಬೇಕೆಂಬ ನನ್ನ ಕನಸನ್ನು ನನಸಾಗಿಸಿಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಈ ಜೀವನಕಥೆಗೆ ನೆಟ್ಟಿಗರು ಸಹ ಅದ್ಭುತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಸಾಧನೆಗೆ ಹ್ಯಾಟ್ಸಾಫ್. ಈಗ ನಿಮ್ಮನ್ನು ಹೀಯಾಳಿಸಿದವರೆಲ್ಲರೂ ನಾಚಿಕೆಪಡುವ ಸಮಯ ಎಂದು ಹೇಳಿದ್ದಾರೆ.