Asianet Suvarna News Asianet Suvarna News

ವಿಜಯಪುರದಲ್ಲೊಂದು ವಿಶಿಷ್ಟ ಆಚರಣೆ: ಮಂಗಳಮುಖಿಯರಿಗೆ ಉಡಿ ತುಂಬಿದ ಹುಲಜಂತಿ ಭಕ್ತರು..!

*  ತೃತೀಯಲಿಂಗಿಗಳನ್ನ ಸನ್ಮಾನಿಸುವ ಮೂಲಕ ಶ್ರೀಗಳ ಹುಟ್ಟುಹಬ್ಬ
*  ಮಂಗಳಮುಖಿಯರು ಮುಖ್ಯವಾಹಿನಿಗೆ ಬರಬೇಕು
*  ಮೊದಲು ಹುಟ್ಟು ಹಬ್ಬ ನಿರಾಕರಿಸಿದ ಶ್ರೀಗಳು
 

Unique Ritual in Vijayapura District grg
Author
Bengaluru, First Published May 14, 2022, 8:46 AM IST

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.14):  ಸುಮಂಗಲಿಯರಿಗೆ ಉಡಿ ತುಂಬುವದು ಕಾಮನ್‌, ಆದ್ರೆ ವಿಜಯಪುರದಲ್ಲಿ(Vijayapura) ಮಂಗಳಮುಖಿಯರಿಗೆ(Transgenders) ಉಡಿ ತುಂಬುವ ಮೂಲಕ ವಿಶೇಷ ಸಂಪ್ರದಾಯವನ್ನ ಆಚರಣೆಗೆ ತರಲಾಗಿದೆ. ಈ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದ್ದು ಮಾತ್ರ ಜಾಗೃತ ಸ್ಥಳ ಹುಲಜಂತಿ ಕ್ಷೇತ್ರದ ಮಹಾತ್ಮರು. 

ವಿಶಿಷ್ಟ ರೀತಿಯಲ್ಲಿ ಹುಲಜಂತಿ ಶ್ರೀಗಳ ಹುಟ್ಟುಹಬ್ಬ

ಹುಟ್ಟು ಹಬ್ಬಗಳಲ್ಲಿ ಕೇಟ್‌ ಕಟ್‌ ಮಾಡೋದು, ಸ್ವೀಟ್‌ ಹಂಚುವುದು, ಊಟ ಹಾಕಿಸೋದು ಕಾಮನ್‌. ಆದ್ರೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ(Karnataka-Maharashtra Border) ಸುಕ್ಷೇತ್ರ ಹುಲಜಂತಿಯ ಶ್ರೀಗಳ(Hulajanti Swamiji) ಹುಟ್ಟು ಹಬ್ಬವನ್ನ ಭಕ್ತರು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ಮಂಗಳಮುಖಿಯನ್ನ ಹುಟ್ಟು ಹಬ್ಬಕ್ಕೆ ಆಹ್ವಾನಿಸಿ ಅವರಿ ಸತ್ಕರಿಸುವ ಮೂಲಕ ಶ್ರೀಗಳ ಹುಟ್ಟು ಹಬ್ಬವನ್ನ ಭಕ್ತರು ಆಚರಿಸಿದ್ದಾರೆ.

Transgender Students Harassed ಮಂಗಳಮುಖಿ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹಾಸ್ಟೆಲ್ ಗಾಗಿ ಅರ್ಜಿ

ಮಂಗಳಮುಖಿಯರಿಗೆ ಉಡಿ ತುಂಬುವ ಕಾರ್ಯ

ಸುಮಂಗಲೆಯರನ್ನ ಕಾರ್ಯಕ್ರಮಗಳಿಗೆ ಕರೆದು ಉಡಿತುಂಬಿಸೋದು ಸಂಪ್ರದಾಯ. ಇನ್ನು ಕೆಲವರು ಮಂಗಳಮುಖಿಯರನ್ನು ಶುಭಕಾರ್ಯಕ್ರಮಗಳಿಗೆ ಕರೆಯಿಸಿ ಅವರಿಂದ ಪೂಜೆಗಳನ್ನ ಮಾಡಿಸ್ತಾರೆ. ಆದ್ರೆ ವಿಜಯಪುರದಲ್ಲಿ ನಡೆಸ ಹುಲಜಂತಿ ಶ್ರೀಗಳ ಹುಟ್ಟುಹಬ್ಬದಲ್ಲಿ(Birthday) ಮಂಗಳಮುಖಿಯರಿಗೆ ಉಡಿ ತುಂಬಲಾಗಿದೆ. ಮುಖಕ್ಕೆ ಅರಿಸಿನ, ತಾಳಿಗೆ ಕುಂಕುಮ ಹಚ್ಚಿ, ತಲೆಗೆ ಹೂವು ಮೂಡಿಸಿ ಸತ್ಕರಿಸಲಾಗಿದೆ. ಈ ವೇಳೆ ಮಂಗಳಮುಖಿಯರು ತಮ್ಮ ಹಕ್ಕಿಗಾಗಿ ಹೋರಾಟ ಮಾಡ್ತಿದ್ದಾರೆ. ಆದ್ರೆ ವಿಶೇಷ ಸೌಲಭ್ಯಗಳು ಸಿಗುತ್ತಿಲ್ಲ. ಸ್ವಾಮೀಜಿಗಳ ಹುಟ್ಟು ಹಬ್ಬದಂದು ನಮಗೆ ಉಡಿ ತುಂಬಿ ಸನ್ಮಾನಿಸಿರೋದು ಖುಷಿ ತಂದಿದೆ ಅಂತ ಮಂಗಳಮುಖಿ ಆಶಾ ಭಾವುಕರಾದ ಘಟನೆಯು ನಡೆಯಿತು.

ಮಂಗಳಮುಖಿಯರೇ ನಡೆಸುವ ಹೊಟೇಲ್‌ ಇದು ವಿಡಿಯೋ ನೋಡಿ

ಮೊದಲು ಹುಟ್ಟು ಹಬ್ಬ ನಿರಾಕರಿಸಿದ ಶ್ರೀಗಳು

ಹುಲಜಂತಿ ಮಾಳಿಂಗರಾಯ ಸ್ವಾಮೀಜಿಗೆ 25ನೇ ವರ್ಷದ ಹುಟ್ಟು, ಭಕ್ತರು(Devotees) ಸ್ವಾಮೀಜಿಗೆ ಗೊತ್ತಾಗದಂತೆ ವಿಜಯಪುರದ ಮಹಲ್ ಗ್ರಾಮದ ಮಠದಲ್ಲಿ ಸದ್ದಿಲ್ಲದೇ ಹುಟ್ಟು ಹಬ್ಬದಾಚರಣೆಗೆ ಸಜ್ಜು ಮಾಡಿದ್ರು. ಆದ್ರೆ ಮಾಳಿಂಗರಾಯ ಸ್ವಾಮೀಜಿ ಹುಟ್ಟು ಹಬ್ಬದಾಚರಣೆಗೆ ಮೊದ್ಲು ನಿರಾಕರಿಸಿದ್ದಾರೆ.ಆಗ ಭಕ್ತರು ಸ್ವಾಮೀಜಿಯ 25ನೇ ವರ್ಷದ ಹುಟ್ಟು ಹಬ್ಬವನ್ನು ಮಂಗಳಮುಖಿಯರೊಂದಿಗೆ ವಿಶೇಷವಾಗಿ ಆಚರಿಸ್ತಿರೋದನ್ನ ಹೇಳಿದಾಗ ಸ್ವಾಮೀಜಿ ಒಪ್ಪಿಕೊಂಡಿದ್ರು ಎನ್ನಲಾಗಿದೆ.

ಮಂಗಳಮುಖಿಯರು ಮುಖ್ಯವಾಹಿನಿಗೆ ಬರಬೇಕು

ಹುಟ್ಟು ಹಬ್ಬಗಳನ್ನ ಹುಲಜಂತಿ ಶ್ರೀಗಳು ಆಚರಿಸಿಕೊಳ್ಳುವುದಿಲ್ಲ. ಆದ್ರೆ ಮಂಗಳಮುಖಿಯರು ಈ ಕಾರ್ಯಕ್ರಮದಲ್ಲಿ ಬರ್ತಿದ್ದಾರೆ ಎಂದಾಗ ಇಂಥ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವ ಕಾರಣಕ್ಕೆ ಶ್ರೀಗಳು ಹುಟ್ಟುಹಬ್ಬಕ್ಕೆ ಒಪ್ಪಿದ್ದಾರೆ. ಜೊತೆಗೆ ಮಂಗಳಮುಖಿಯರು ಮುಖ್ಯವಾಹಿನಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಕಾರ್ಯವು ಇರಲಿದೆ ಎಂದಿದ್ದಾರೆ.
 

Follow Us:
Download App:
  • android
  • ios