ಮನೆಯಲ್ಲಿ ಮುನಿಸಿಕೊಂಡಿರುವ ಪತಿ, ಪತ್ನಿಯರೇ ಇಲ್ಲಿ ಕೇಳಿ
ಗಂಡ, ಹೆಂಡತಿ ಅಂದಮೇಲೆ ಪರಸ್ಪರ ಅಸಮಾಧಾನಗಳು ನೂರಿರುತ್ತವೆ. ತಪ್ಪುಗಳೂ ನಡೆಯುತ್ತಿರುತ್ತವೆ. ಆದರೆ ಆ ತಪ್ಪುಗಳ ವಿಮರ್ಶೆ ಮಾಡಲು ಈಗ ಒಳ್ಳೆ ಟೈಮು ಅಲ್ಲ. ತಪ್ಪಾದರೆ ಆಗಲಿ ಬಿಡಿ.
1. ವಿಚಾರ ವಿಮರ್ಶೆ ಏನಿದ್ದರೂ ಕೊರೋನಾ ಪಿಚ್ಚರ್ ಮುಗಿದ ಮೇಲೆ
ಗಂಡ, ಹೆಂಡತಿ ಅಂದಮೇಲೆ ಪರಸ್ಪರ ಅಸಮಾಧಾನಗಳು ನೂರಿರುತ್ತವೆ. ತಪ್ಪುಗಳೂ ನಡೆಯುತ್ತಿರುತ್ತವೆ. ಆದರೆ ಆ ತಪ್ಪುಗಳ ವಿಮರ್ಶೆ ಮಾಡಲು ಈಗ ಒಳ್ಳೆ ಟೈಮು ಅಲ್ಲ. ತಪ್ಪಾದರೆ ಆಗಲಿ ಬಿಡಿ. ಇನ್ನು ಕೆಲವರು ಅರ್ಧ ಸಂಬಳದಲ್ಲಿ ದುಡಿಯಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ.
ಇಂಥಾ ಸಂದರ್ಭದಲ್ಲಿ ನಾನು ಮೊದಲೇ ಹೇಳಿದ್ದೇ ಈ ಕೆಲಸ ಬೇಡ ಎಂಬಂಥ ಮಾತುಗಳು ಬರದೇ ಇರಲಿ. ಈಗ ಏನಿದ್ದರೂ ಮೆಚ್ಚುವ ಕಾಲ. ಕಾಫಿ ಮಾಡಿ ತಂದರೆ ವಾ, ಎಷ್ಟ್ ಚೆಂದ ಕಾಫಿ ಎಂಬ ಮಾತು ಹೇಳಿದರೂ ಸಾಕು. ದಿನಕ್ಕೆ ಮೂರು ಮೆಚ್ಚುಗೆಯ ಮಾತುಗಳು ಬಂದರೆ ಅಲ್ಲಿಗೆ ಆ ದಿನ ಸಂಪನ್ನ. ಮೆಚ್ಚುಗೆಗೆ ಉಬ್ಬದೇ ಇರುವವರು ಯಾರಿದ್ದಾರೆ ಸ್ವಾಮಿ, ಬೇಕಿದ್ದರೆ ಟ್ರೈ ಮಾಡಿ.
2. ಕೋಪಕ್ಕಿಂತ ಕುತೂಹಲಕ್ಕೆ ಜಾಸ್ತಿ ಮರ್ಯಾದೆ
ಮನೆಯಲ್ಲಿ ಜಾಸ್ತಿ ಹೊತ್ತು ಇರದೇ ಇರುವವರು ಮನೆಯಲ್ಲೇ ಇರಬೇಕಾಗಿ ಬಂದಿದೆ. ಹಾಗಾಗಿ ವ್ಯವಸ್ಥೆಗಳು ಆಚೀಚೆಯಾಗಿಬಿಟ್ಟಿದೆ. ಇಂಥಾ ಸಂದರ್ಭದಲ್ಲಿ ಯಾರು ಯಾವಾಗ ಬೇಕಾದರೂ ಒತ್ತಡಕ್ಕೆ ಒಳಗಾಗಬಹುದು. ಒತ್ತಡವನ್ನು ನಿಭಾಯಿಸುವುದನ್ನು ಈಗ ಅರ್ಜೆಂಟಾಗಿ ಕಲಿಯಬೇಕಾಗಿದೆ. ಸಾಮಾನ್ಯವಾಗಿ ಒತ್ತಡದಲ್ಲಿ ಇರುವವರು ಜಾಸ್ತಿ ಮಾತನಾಡಲು ಶುರು ಮಾಡುತ್ತಾರೆ. ಅವರ ಮಾತಿಗೆ ಏನಾದರೂ ಉಲ್ಟಾ ಮಾತನಾಡಿದಿರೋ ಸಿಟ್ಟು ಬರುತ್ತದೆ. ಅಥವಾ ಅವರ ಮಾತು ಕೇಳಿ ನಿಮಗೂ ಸಿಟ್ಟು ಬರಬಹುದು.
ಲಾಕ್‌ಡೌನ್‌ನಿಂದಾಗಿ ದೂರದಲ್ಲಿರುವ ಸಂಗಾತಿಯನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್!
ಈ ಟೈಮಲ್ಲಿ ಸಿಟ್ಟಿಗಿಂತ ಕುತೂಹಲ ಇರಬೇಕು. ಅವರು ಏನು ಮಾತನಾಡುತ್ತಾರೆ ಅನ್ನುವುದನ್ನು ಸುಮ್ಮನೆ ಕೇಳಬೇಕು. ಆಗ ಅವರು ಸಮಾನವಾಗುತ್ತಾರೆ. ಅವರ ಮನಸಲ್ಲಿ ಏನಿದೆ ಅನ್ನುವುದನ್ನು ಕೇಳಿ ನೀವೂ ಸಮ‘ಾನ ಹೊಂದುತ್ತೀರಿ. ಸಿಟ್ಟನ್ನು ನಾಳೆಗೆ ಮುಂದೂಡಲಾಗಿದೆ.
3. ಪಾಠ ಕಲಿಸುವ ಕಾಲವಿದಲ್ಲ
ಕೊರೋನಾ ಇದೆ, ಜೀವನ ಕಷ್ಟ ಇದೆ ಅಂತ ಒಬ್ಬರು ಮಾತನಾಡುತ್ತಿದ್ದರೆ ಇನ್ನೊಬ್ಬರು ಅದೇ ಮಾತನ್ನು ಹೇಳಬೇಕಿಲ್ಲ. ಸಂಗಾತಿಯ ಯೋಚನೆಗಳೇ ಬೇರೆ ಇರಬಹುದು. ಅವರಿಗೆ ಎಲ್ಲಿ ಕೊರೋನಾ ಎಷ್ಟಾಯಿತು ಎಂಬ ಮಾಹಿತಿ ಇಲ್ಲದೇ ಇರಬಹುದು. ಅಂಥಾ ಹೊತ್ತಲ್ಲಿ ಕೊರೋನಾ ಗಾಂಭೀರ್ಯತೆಯನ್ನು ಅರ್ಥ ಮಾಡಿಸಲು ಹೊರಡುವವರಿದ್ದಾರೆ. ಒಂದು ವೇಳೆ ಹಾಗೆ ಪಾಠ ಕಲಿಸಲು ಹೋದರೆ ಪೆಟ್ಟು ತಿನ್ನಬೇಕಾದೀತು.
ಸಾಮಾನ್ಯ ಜ್ಞಾನ ಇದ್ದರೆ ಅಷ್ಟೇ ಸಾಕು, ಅದಕ್ಕಿಂತ ಕೊರೋನಾ ಅಥವಾ ಯಾವುದೇ ವಿಷಯದ ಬಗ್ಗೆ ಪೂರ್ತಿಯಾಗಿ ಇನ್ನೊಬ್ಬರು ತಿಳಿದಿರಲೇಬೇಕು ಎಂಬ ಹಠ ಬೇಡ. ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ಜೀವನ ಮುಂದುವರಿಯುತ್ತದೆ.