ಲಾಕ್‌ಡೌನ್‌ನಿಂದಾಗಿ ದೂರದಲ್ಲಿರುವ ಸಂಗಾತಿಯನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್!
ಲಾಕ್‌ಡೌನ್ ಕೆಲವರಿಗೆ ಎಂಥಾ ಸಂಕಷ್ಟ ತಂದಿಟ್ಟಿದೆ ಎಂದರೆ ಪತಿ ಒಂದೂರಲ್ಲಿ ಪತ್ನಿ ಮತ್ತೊಂದೂರಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ. ಒಂದೂರಲ್ಲೇ ಇರುವ ಪ್ರೇಮಿಗಳೂ ಮನೆಯಿಂದಾಚೆ ಬರೋಕಾಗದೆ ದೂರ ದೂರವಾಗಿದ್ದಾರೆ.
ಲಾಕ್‌ಡೌನ್ ಕೆಲವರಿಗೆ ಎಂಥಾ ಸಂಕಷ್ಟ ತಂದಿಟ್ಟಿದೆ ಎಂದರೆ ಪತಿ ಒಂದೂರಲ್ಲಿ ಪತ್ನಿ ಮತ್ತೊಂದೂರಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ. ಒಂದೂರಲ್ಲೇ ಇರುವ ಪ್ರೇಮಿಗಳೂ ಮನೆಯಿಂದಾಚೆ ಬರೋಕಾಗದೆ ದೂರ ದೂರವಾಗಿದ್ದಾರೆ.
ಇದೆ ಒಳ್ಳೆ ಚಾನ್ಸು ಅಂತ ಗಂಡಂದಿರು ಖುಷಿಯಾಗುವ ಹಾಗಿಲ್ಲ. ಊರಿಂದ ಬರುವ ಬೇಸರದ ಕಾಲ್‌ಗೆ ಉತ್ತರ ಹೇಳಲೇಬೇಕು. ಪರಸ್ಪರ ಜಗಳವಾದರಂತೂ ಒಂದಿಡೀ ದಿನ ಹಾಳು. ಈಗ ಮೊದಲಿಗಿಂತ ಜಾಸ್ತಿ ಹುಷಾರಾಗಿರಬೇಕು. ತಮ್ಮವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅಯ್ಯೋ ಹೆಂಗಪ್ಪಾ ನೋಡಿಕೊಳ್ಳುವುದು ಎಂದು ಕೇಳಿದರೆ ಉತ್ತರ ವಿಡಿಯೋ ಕಾಲ್. ಅದಲ್ಲದೆ ಕೆಲವು ಐಡಿಯಾಗಳಿವೆ ಓದಿ ನೋಡಿ.
ಲಾಕ್ ಡೌನ್ - ಜೋಡಿಗಳ ಲವ್ ಓಪನ್; ಬೆಂಗಳೂರಿನಲ್ಲಿ ಗರ್ಭನಿರೋಧಕ ಖಾಲಿ ಖಾಲಿ
1. ಒಳ್ಳೆ ಡ್ರೆಸ್ ಹಾಕ್ಕೊಂಡು ರೆಡಿಯಾಗಿ
ಗಂಡ ಮನೆಗೆ ಬರುವಾಗ ಹೆಂಡತಿ ರೆಡಿಯಾಗುವುದು, ಪ್ರೇಮಿ ಸಿಗುತ್ತಾಳೆ ಎಂದಾಗ ಹುಡುಗ ಸ್ಟೆ‘ಲ್ ಆಗೋದು ಇವೆಲ್ಲಾ ಮಾಮೂಲು. ಈಗ ಲಾಕ್‌ಡೌನ್ ಟೈಮಲ್ಲೂ ಇದೆಲ್ಲಾ ಇರಬೇಕು. ನೀವು ಕಾಲ್ ಮಾಡಲು ಕೂರುವ ಜಾವ ಚೆಂದ ಕಾಣಿಸಬೇಕು. ನೀವು ಒಳ್ಳೆಯ ದಿರಿಸು ‘ರಿಸಬೇಕು. ವಿಡಿಯೋ ಕಾಲ್ ಆಚೆ ಇದ್ದವರಿಗೆ ಪ್ರೀತಿ ಜಾಸ್ತಿಯಾಗುವಂತೆ ನಿಮ್ಮ ಮಾತು, ವರ್ತನೆ ಇರಬೇಕು. ಬೇಕಾಬಿಟ್ಟಿ ಎಂದು ಮಾತನಾಡುವವರಿಗೆ ಇದು ಕೆಲಸ ಮಾಡುವುದಿಲ್ಲ
2. ನೆಟ್‌ವರ್ಕ್ ಇರುವ ಜಾಗವನ್ನೇ ಆರಿಸಿ
ಕಾಲ್‌ನಲ್ಲಿ ಮಾತಾಡ್ತಾ ಮಾತಾಡ್ತಾ ಮುಖ್ಯವಾದ ಮಾತುಗಳನ್ನು ಆಡುವಾಗಲೇ ನೆಟ್‌ವರ್ಕ್ ಕೈ ಕೊಡುವುದು ಉಂಟು. ಆಗ ಸಂಗಾತಿ ನನ್ನ ಬಗ್ಗೆ ಗಮನವೇ ಇಲ್ಲ ಎಂದು ಮುನಿಸಿಕೊಳ್ಳುವ ಸಾ‘್ಯತೆ ಇದೆ. ಹಾಗಾಗಿ ಕಾಲ್ ಮಾಡುವ ಮೊದಲು ನೆಟ್‌ವರ್ಕ್ ಚೆನ್ನಾಗಿರುವ ಜಾಗವನ್ನೇ ಆರಿಸಿಕೊಳ್ಳಿ. ಕಾಲ್ ಮ‘್ಯೆ ಕಿರಿಕಿರಿ ಆಗಿ ಮೂಡ್ ಹಾಳಾಗಬಾರದು.
3. ಒಟ್ಟಿಗೆ ಕುಳಿತು ಆಟವಾಡಿ
ವಿಡಿಯೋ ಕಾಲ್ ಮಾಡಲು ಆಗದಿದ್ದರೆ ಫ್ರೀ ಇದ್ದಾಗ ಆನ್‌ಲೈನ್‌ನಲ್ಲಿ ಆಟವಾಡಿ. ಈಗಂತೂ ಆನ್‌ಲೈನ್‌ನಲ್ಲಿ ಫ್ರೆಂಡ್ಸ್ ಜತೆ ಲೂಡೋ ಆಡುವವರ ಸಂಖ್ಯೆ ಹೆಚ್ಚಾಗಿದೆ. ಲೂಡೋ ಸಂಗಾತಿಯ ಜೊತೆಗೂ ಆಡಬಹುದು ಅನ್ನುವುದು ಈಗ ಅರ್ಥವಾಗಲೇಬೇಕು. ಒಂದು ಆಟ ಒಂದು ದಿನದ ನೆಮ್ಮದಿಯನ್ನು ಕೊಡಬಲ್ಲದು ಅನ್ನುವುದು ನಿಮ್ಮ ಗಮನದಲ್ಲಿರಲಿ.
ಹೇರ್ ಕಂಡೀಷನರ್‍ನಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
4. ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಕಳುಹಿಸಿ
ಸ್ವಲ್ಪ ಸಮಯ ಎತ್ತಿಟ್ಟುಕೊಂಡು ಪುಟ್ಟ ಪುಟ್ಟ ವಿಡಿಯೋಗಳನ್ನು ಮಾಡಿ ಕಳುಹಿಸಿ. ನೀವು ಅಡುಗೆ ಮಾಡಿದರೆ ಅದರ ವಿಡಿಯೋ ಅಥವಾ ನಿಮ್ಮ ಹಳೆಯ ೆಟೋಗಳನ್ನೆಲ್ಲಾ ಬಳಸಿಕೊಂಡು ಚೆಂದದ ಸಂಗೀತ ಹಾಕಿ ವಿಡಿಯೋ ರೆಡಿ ಮಾಡಿ ಕಡೆಗೊಂದು ಐ ಲವ್ ಯೂ ಹಾಕಿ ಕಳುಹಿಸಿ ಕೊಡಿ. ವಾಪಸ್ ಕಾಲ್ ಬರದೇ ಇದ್ದರೆ ಕೇಳಿ.
5. ಅವರಿಷ್ಟದ ಪ್ಲೇ ಲಿಸ್ಟ್ ರೆಡಿಯಾಗಲಿ
ಪರಸ್ಪರ ಸಿಗದೆ ಇದ್ದರೆ ಗಿಫ್ಟು, ಸರ್ಪ್ರೈಸ್ ಕೊಡುವುದು ಸಾಧ್ಯವಿಲ್ಲ ಎಂದು ಯೋಚಿಸಬಾರದು. ಈಗ ವರ್ಚುವಲ್ ಗ್ಟಿು ಕೊಡುವ ಸಮಯ. ಅದಕ್ಕೆ ಸುಲ‘ದ ದಾರಿ ಎಂದರೆ ನಿಮ್ಮ ಸಂಗಾತಿಯ ಪ್ಲೇ ಲಿಸ್ಟ್ ಅನ್ನು ನೀವು ರೆಡಿ ಮಾಡುವುದು. ಅವರು ಕೇಳುವ, ಅವರಿಗಿಷ್ಟವಾಗುವ ಹಾಡುಗಳ ಪ್ಲೇ ಲಿಸ್ಟ್ ಸಿದ್ಧಗೊಳಿಸಿ ಅವರಿಗೆ ಗಿಫ್ಟ್ ಮಾಡಿ. ಪ್ರೀತಿ ಹೆಚ್ಚಾದರೆ ಲಾಕ್‌ಡೌನ್ ಮುಗಿದಾಗ ದೊಡ್ಡ ಗಿಫ್ಟ್ ಸಿಗಬಹುದು.