ಹುಟ್ಟುಹಬ್ಬಕ್ಕೆ ಒಂದು ಸರ್ಪ್ರೈಸ್ ಸಿಗದೇ ಹೋದರೆ ಏನ್ ಚೆಂದ. ಆದರೆ ಈಗ ಸರ್ಪ್ರೈಸ್ ಕೊಡೋದ್ ಹೇಗೆ ಅಂತ ಯೋಚಿಸುತ್ತಿದ್ದವರೆಲ್ಲಾ ಹುಷಾರಾಗಿಬಿಟ್ಟಿದ್ದಾರೆ. ತಮ್ಮ ಆತ್ಮೀಯರ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅದರಲ್ಲಿ ಒಂದು ವರ್ಚುವಲ್ ಪಾರ್ಟಿ.

ಕ್ವಾರಂಟೈನ್ ಎಂದ ಮಾತ್ರಕ್ಕೆ ಪ್ರೀತಿಪಾತ್ರರ ಬರ್ತ್‌ಡೇ ಬಡವಾಗದಿರಲಿ

ಯಾರದಾದರೂ ಹುಟ್ಟುಹಬ್ಬ ಇದ್ದರೆ ಅವರಿಗೊಂದು ವರ್ಚುವಲ್ ಪಾರ್ಟಿ ನೀವೂ ಅರೇಂಜ್ ಮಾಡಬಹುದು. ಅವರಿಗೆ ಯಾರೆಲ್ಲಾ ಆತ್ಮೀಯರಿದ್ದಾರೋ ಅವರನ್ನೆಲ್ಲಾ ವರ್ಚುವಲ್ ಪಾರ್ಟಿಗೆ ಕರೆಯುವುದು ಮತ್ತು ಒಂದು ಒಳ್ಳೆಯ ಕ್ಷಣದಲ್ಲಿ ಅವರನ್ನೆಲ್ಲಾ ಹುಟ್ಟುಹಬ್ಬ ಆಚರಿಸುತ್ತಿರುವವರಿಗೆ ತೋರಿಸುವುದು. ಈಗ ಝೂನ್, ಹೌಸ್ ಪಾರ್ಟಿ ಆ್ಯಪ್‌ಗಳೆಲ್ಲಾ ಇರುವುದರಿಂದ ಅದರಲ್ಲೇ ಪಾರ್ಟಿ ಮಾಡಬಹುದು. ಯಾರಾರು ಎಲ್ಲೆಲ್ಲಿದ್ದಾರೋ ಅಲ್ಲಿಂದಲೇ ವಿಶ್ ಮಾಡಬಹುದು, ಹಗ್ ಮಾಡಬಹುದು. ಹೀಗೊಂದು ಸರ್ಪ್ರೈಸ್ ಕೊಟ್ಟರೆ ಹುಟ್ಟುಹಬ್ಬ ಸಂಪನ್ನವಾಗುತ್ತದೆ.