ನಿಮ್ಮ ಬೆಸ್ಟ್ ಫ್ರೆಂಡ್ ಬರ್ತ್‌ಡೇ ಹತ್ತಿರ ಬಂದಿದೆ ಅಥವಾ ಪ್ರೇಮಿಯದಿರಬಹುದು, ಅಪ್ಪಅಮ್ಮ, ಗಂಡ ಮಕ್ಕಳದಿರಬಹುದು- ಒಟ್ಟಿನಲ್ಲಿ ಹತ್ತಿರದವರ ಬರ್ತ್‌ಡೇ ಎಂದರೆ ಎಲ್ಲರಿಗೂ ಸಂಭ್ರಮವೇ. ಅದನ್ನು ವಿಶೇಷವಾಗಿ ಆಚರಿಸಿ ಅವರಿಗೆ ಸರ್ಪ್ರೈಸ್ ನೀಡಬೇಕೆಂದು ಬಹುತೇಕರು ಬಯಸುತ್ತಾರೆ. ಇದುವರೆಗಾದರೆ ಪ್ರವಾಸ ಹೋಗುವುದು, ಹೋಟೆಲ್, ಶಾಪಿಂಗ್ ಎಂದು ಸುತ್ತಾಡುವುದು ಇತ್ಯಾದಿಯಾಗಿ ಅವರ ಬರ್ತ್‌ಡೇ ಆಚರಿಸುತ್ತಿದ್ದಿರಿ. ಈ ಬಾರಿ ಹಾಗಾಗಲ್ಲ. ಲಾಕ್‌ಡೌನ್ ಎಲ್ಲರನ್ನೂ ಗೃಹಬಂಧನದಲ್ಲಿರಿಸಿದೆ. ಇದನ್ನು ಲೋಪವಾಗಿ ಯೋಚಿಸುವ ಬದಲು ಪ್ರತಿ ವರ್ಷಕ್ಕಿಂತ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಲು ಒಂದು ಅವಕಾಶ ಎಂದು ಬಗೆಯಿರಿ. 

ಮನಸ್ಸಿದ್ದರೆ ಮಾರ್ಗವಿದ್ದೇ ಇರುತ್ತದೆ. ಕ್ವಾರಂಟೈನ್ ಕಾಲಕ್ಕೂ ಬರ್ತ್‌ಡೇ ಆಚರಣೆಗಳು ಸಾಧ್ಯವಿದೆ. ಪ್ರೀತಿಪಾತ್ರರಿಗೆ ಸರ್ಪ್ರೈಸ್ ನೀಡಲು ಏನೆಲ್ಲ ಮಾಡಬಹುದು ನೋಡೋಣ. 

ವಿಡಿಯೋ ಕಾಲಿಂಗ್
ಆತ/ಆಕೆಯ ಬರ್ತ್‌ಡೇಯನ್ನು ವಿಶೇಷವಾಗಿಸಲು ಅವರ ಎಲ್ಲ ಕ್ಲೋಸ್ ಫ್ರೆಂಡ್ಸ್‌ರನ್ನು ಒಳಗೊಂಡಂತೆ ಗ್ರೂಪ್ ವಿಡಿಯೋ ಕಾಲ್ ಮಾಡಿ. ಈ ಸಂದರ್ಭದಲ್ಲಿ ಬ್ಯಾಕ್‌ಗ್ರೌಂಡ್‌ಗೆ ಸೃಜನಾತ್ಮಕವಾದ ಬ್ಯಾನರ್‌ಗಳನ್ನು ಬಳಸಬಹುದು. ಎಲ್ಲರೂ ಬರ್ತ್‌ಡೇ ಕ್ಯಾಪ್ ಹಾಕಿಕೊಂಡು ಕುಳಿತು ಒಟ್ಟಾಗಿ ಹ್ಯಾಪಿ ಬರ್ತ್ಡ್ ಡೇ ಹಾಡನ್ನು ಹೇಳಿ ಖುಷಿ ಪಡಿಸಬಹುದು. 

ಪರ್ಫೆಕ್ಟ್ ಸಂಬಂಧ ಎಂಬುದು ಇಲ್ಲ, ಅದು ಬೇಕಾಗಿಯೂ ಇಲ್ಲ

ಹ್ಯಾಶ್‌ಟ್ಯಾಗ್
ನಿಮ್ಮ ಗೆಳೆಯನ ಹುಟ್ಟುಹಬ್ಬಕ್ಕೆ ಜೊತೆಗಿಲ್ಲದಿದ್ದರೆ ಏನಂತೆ? ಅವರಿಗೆ ಸ್ಪೆಶಲ್ ಎನಿಸುವಂತೆ ಮಾಡಲು ನೀವು ಎಲ್ಲ ಗೆಳೆಯರೂ ಅವರ ಹೆಸರಿನ ಹ್ಯಾಷ್‌ಟ್ಯಾಗ್ ಬಳಸಿ ಅವರೊಂದಿಗಿನ ತಮಾಷೆಯ ಕ್ಷಣಗಳ ಪೋಟೋಗಳನ್ನು ಫೇಸ್ಬುಕ್, ಇನ್ಸ್ಟಾ, ವಾಟ್ಸಾಪ್ ಸ್ಟೇಟಸ್‌ನಲ್ಲಿ ಶೇರ್ ಮಾಡಿ. ಅವರು ನಿಮಗೆ ಎಷ್ಟು ಸ್ಪೆಶಲ್, ಅವರಿಂದಾಗಿ ನಿಮ್ಮ ಸ್ನೇಹ ಜೀವನ ಎಷ್ಟೊಂದು ಹಿತವಾಗಿದೆ ಎಂಬ ಬಗ್ಗೆ ಬರೆದು ಪೋಸ್ಟ್ ಮಾಡಿ. ಇಂಥ ಪ್ರೀತಿಯ ವ್ಯಕ್ತಪಡಿಸುವಿಕೆ ಇಷ್ಟವಾಗದವರು ಯಾರಿದ್ದಾರೆ ಹೇಳಿ?

ಮೂವಿ ಪಾರ್ಟಿ
ಗೆಳೆಯರ ಹುಟ್ಟುಹಬ್ಬದ ಪಾರ್ಟಿಗೆ ಹೊರ ಹೋಗಲಾಗದಿದ್ದರೇನಂತೆ, ನೀವು ನೆಟ್‌ಫ್ಲಿಕ್ಸ್‌ನಲ್ಲೇ ಎಲ್ಲ ಗೆಳೆಯರೊಡಗೂಡಿ, ಬರ್ತ್‌ಡೇ ಇರುವವರಿಗಿಷ್ಟವಿರುವ ಮೂವಿ ಹಾಕಿಕೊಂಡು ವಾಚ್ ಪಾರ್ಟಿ ಮಾಡಬಹುದು. ಈ ಸಂದರ್ಭದಲ್ಲಿ ಚಾಟ್ ಮಾಡಲೂ ಅವಕಾಶ ಇರುವುದರಿಂದ ಎಲ್ಲ ಜೊತೆಗಿರುವ ಅನುಭವವನ್ನೇ ಪಡೆಯಬಹುದು.

ದಾನ ಮಾಡಿ
ನೀವು ಬರ್ತ್‌ಡೇ ಇರುವ ನಿಮ್ಮ ಪ್ರೀತಿಪಾತ್ರರಿಗೆ ಏನೋ ಉಡುಗೊರೆ ಕೊಡಬೇಕೆಂದುಕೊಂಡಿರುತ್ತೀರಿ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಕೊಡಲಾಗುವುದಿಲ್ಲ ಎಂದಾಗಿದ್ದರೆ, ಅದೇ ಹಣವನ್ನು ಬರ್ತ್‌ಡೇ ಬೇಬಿಯ ಹೆಸರಿನಲ್ಲಿ ಅಗತ್ಯವಿರುವವರಿಗೆ ದಾನ ಮಾಡಿ. ಇದರಿಂದ ಕೇವಲ ನಿಮ್ಮ ಗೆಳೆಯ/ತಿ ಖುಷಿಯಾಗುವುದಷ್ಟೇ ಅಲ್ಲ, ನಿಮಗೆ ಕೂಡಾ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಸಿಗುತ್ತದೆ. 

ಸಂಗಾತಿಯೊಂದಿಗೆ ಹೀಗ್ ನಡಕೊಂಡ್ರೆ ಸಂಬಂಧ ಸುಲಭ, ಸುಂದರ

ಹಾಡಿ
ನೀವು ನಿಮ್ಮ ಗೆಳೆಯರು ಒಂದೇ ಕಾಲೋನಿ, ಕಟ್ಟಡದಲ್ಲಿದ್ದರೆ, ಅವರನ್ನು ಬಾಲ್ಕನಿಗೆ ಬರಲು ಹೇಳಿ ನೀವು ಮನೆಮಂದಿಯೆಲ್ಲರೂ ನಿಂತು ಹ್ಯಾಪಿ ಬರ್ತ್‌ಡೇ ಹಾಡಿ. 

ಕೇಕ್ ಮಾಡಿ
ನಿಮ್ಮ ಸಂಗಾತಿಯ ಅಥವಾ ಇತರೆ ಕುಟುಂಬ ಸದಸ್ಯರ ಹುಟ್ಟುಹಬ್ಬವಾಗಿದ್ದಲ್ಲಿ, ನೀವು ಒಂದೇ ಮನೆಯಲ್ಲಿ ಇದ್ದಲ್ಲಿ ಸಾಧ್ಯವಾಾದರೆ ಕೇಕ್ ತಯಾರಿಸಬಹುದು. ಇಲ್ಲದಿದ್ದಲ್ಲಿ ಅವರಿಗಿಷ್ಟವಾದ ಸಿಹಿತಿಂಡಿ ತಯಾರಿಸಿ. ಕೋಣೆಯೊಂದನ್ನು ವಿಶಿಷ್ಠವಾಗಿ ಡೆಕೋರೇಟ್ ಮಾಡಿ ಹುಟ್ಟುಹಬ್ಬ ಆಚರಿಸಬಹುದು. ಈ ಸಂದರ್ಭದಲ್ಲಿ ನೀವೇ ಸ್ವತಃ  ತಯಾರಿಸಿದ ಗ್ರೀಟಿಂಗ್ ಕಾರ್ಡ್‌ನ್ನು ಉಡುಗೊರೆಯಾಗಿ ಕೊಡಬಹುದು. ಜೊತೆಗೆ ಅವರ ಕುರಿತ ನಿಮ್ಮ ಭಾವನೆಗಳ ಬಗ್ಗೆ ಪತ್ರ ಬರೆದು ಕೊಟ್ಟರೆ ಇನ್ನೂ ಚೆನ್ನಾಗಿರುತ್ತದೆ.