ಗಂಡ ಡ್ಯೂಟಿಗೆ ಹೋಗ್ತಾನೆ, ಹೆಂಡತಿ ಹೌಸ್‌ವೈಫು, ಮಗೂನ ಶಾಲೆಗೆ ರೆಡಿ ಯಾರು ಮಾಡ್ಬೇಕು?

ಇಲ್ಲೊಂದು ಕುತೂಹಲಕಾರಿಯಾದ ಚರ್ಚೆ ನಡೆದಿದೆ. ಅದು ಗಂಡ- ಹೆಂಡತಿ ಡ್ಯೂಟಿಗಳ ಬಗೆಗೆ. ಮಗುವನ್ನು ಶಾಲೆಗೆ ಬಿಡೋಕೆ ಗಂಡ ತಯಾರು ಮಾಡಬೇಕೋ, ಹೆಂಡತಿಯೋ? ಈ ಪ್ರಶ್ನೆಗೆ ಉತ್ತರ ಕೊಡೋದು ಸುಲಭವಲ್ಲ.

 

This X post creates row over home maker mother duties modern life of men bni

ಎಕ್ಸ್ ಅಥವಾ ಟ್ವಿಟರ್‌ನಲ್ಲಿ ಒಂದು ಕುತೂಹಲಕಾರಿ ಪೋಸ್ಟ್ ಅನ್ನು ಒಬ್ಬರು ಹಾಕಿದ್ದರು. ಅದರಲ್ಲಿ ಹೀಗಿತ್ತು: ಇಂದು ನನ್ನ ಜೀವಮಾನದ ಕಲ್ಚರ್ ಶಾಕ್ ನನಗೆ ಎದುರಾಯಿತು. ಒಬ್ಬ ಹುಡುಗ ಶಾಲೆ ಬಸ್ಸಿಗಾಗಿ ಕಾಯುತ್ತಿದ್ದ. ಯಾಕೆ ಒಬ್ನೇ ಇದೀಯ ಅಂತ ಕೇಳಿದೆ. ಆತ ಹೇಳಿದ್ದು ಹೀಗೆ- ನನ್ನ ಅಮ್ಮ ಮಾರ್ನಿಂಗ್ ಪರ್ಸನ್ ಅಲ್ಲ. ಬೆಳಗ್ಗೆ ನಂಗೆ ತಿಂಡಿ ತಯಾರು ಮಾಡಿ ಶಾಲೆಗೆ ರೆಡಿ ಮಾಡೋದೆಲ್ಲ ಡ್ಯಾಡೀನೇ ಅಂತ. ಇಲ್ಲಿ ಒಂದು ವಿಶೇಷ ಇದೆ. ಆತನ ಡ್ಯಾಡಿ ಕೂಡ ಆಫೀಸ್‌ಗೆ ಹೋಗುತ್ತಾರೆ. ಆದ್ರೆ ಆತನ ಹೆಂಡತಿ ಅಂದ್ರೆ ಈ ಹುಡುಗನ ತಾಯಿ ಹೌಸ್‌ವೈಫು! 

 

ಮಾರ್ನಿಂಗ್ ಪರ್ಸನ್ ಅಲ್ಲ ಎಂದರೆ ಬೆಳಗ್ಗೆ ಬೇಗ ಎದ್ದೋಳೋ ಸ್ವಭಾವ ಅಲ್ಲ ಅಂತ ಅರ್ಥ. ಹೀಗಾಗಿ ಮಗುವನ್ನು ಶಾಲೆಗೆ ರೆಡಿ ಮಾಡುವ ಹೊಣೆಯೆಲ್ಲ ಅಪ್ಪನ ಮೇಲಿದೆಯಂತೆ. ಅಪ್ಪ ಬೇಗ ಎದ್ದು, ಮಗನನ್ನು ಶಾಲೆಗೂ ರೆಡಿ ಮಾಡಿ, ತಾನೂ ರೆಡಿಯಾಗಿ ಆಫೀಸಿಗೆ ಹೋಗಬೇಕು, ಹೋಗುತ್ತಾನೆ. ಇದೊಂದು ಕಲ್ಚರ್ ಶಾಕ್ ಅಂತ ಪೋಸ್ಟ್ ಹಾಕಿದ ವ್ಯಕ್ತಿ ಹೇಳಿದಾನೆ ಅಂತ ಅರ್ಥ ಆಯ್ತಾ? ಒಂದು ವೇಳೆ, ಆ ಮಗುವಿನ ತಾಯಿಯೂ ಬೇಗ ಏಳುವ ಸ್ವಭಾವದವಳಾಗಿದ್ದು ಡ್ಯೂಟಿಗೆ ಹೋಗೋಳಾದರೆ, ಈ ಕೆಲಸಗಳನ್ನೆಲ್ಲ ಯಾರು ಮಾಡುತ್ತಿದ್ದರು? ಆಕೆಯೇ ಮಾಡುತ್ತಾಳೆ ತಾನೆ? ಭಾರತದ ಪ್ರತಿ ಮನೆಯಲ್ಲೂ ನಡೆಯುವುದು ಇದೇ ತಾನೆ? ಹೀಗಾಗಿ ಇಂಥ ಹೊಸ ದೃಶ್ಯಗಳನ್ನು ಕಂಡಾಗ ಶಾಕ್ ಆಗಿಯೇ ಆಗುತ್ತದೆ.  

ಈ ಈ ಪೋಸ್ಟ್‌ಗೆ ತರಹೇವಾರಿ ರೆಸ್ಪಾನ್ಸ್ ಬಂದಿದೆ. ಟಿಪಿಕಲ್ ಭಾರತೀಯ ಸಾಂಪ್ರದಾಯಿಕ ಮನಸ್ಥಿತಿಯವರೂ ಪ್ರತಿಕ್ರಿಯಿಸಿದ್ದಾರೆ. ಹಾಗೇ ಆಧುನಿಕ ಮನಸ್ಥಿತಿಯವರೂ ಪ್ರತಿಕ್ರಿಯಿಸಿದ್ದಾರೆ. "ಆ ಮಗುವಿನ ತಂದೆಗೆ ಈ ವಿಷಯದಲ್ಲಿ ಪ್ರಾಬ್ಲೆಂ ಇಲ್ಲವಾದರೆ ನಿನಗೇನು ಪ್ರಾಬ್ಲೆಂ ಬ್ರೋ?" ಎಂಬುದು ಅವುಗಳಲ್ಲಿ ಒಂದು. "ಇದು ಕಲ್ಚರ್ ಶಾಕ್ ಅಲ್ಲ. ಇದು ಡೈವೋರ್ಸ್‌ಗೆ ಮೊದಲಿನ ಸ್ಥಿತಿ" ಎಂದು ಇನ್ನೊಬ್ಬರು ಕಟಕಿಯಾಡಿದ್ದಾರೆ. ಅಂದರೆ ಆಕೆ ಇನ್ನೆಂತಾ ಸೋಮಾರಿ ಇರಬಹುದು. ಆಕೆ ತನ್ನ ಗೃಹಿಣಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸ್ತ ಇಲ್ಲ ಎಂಬರ್ಥ ಬರುವಂತೆ ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ.

ಅಜ್ಜ ಅಜ್ಜಿ ಜೊತೆಗಿಲ್ಲದ ಟಿಪಿಕಲ್ ಆಧುನಿಕ ಸಂಸಾರಗಳಲ್ಲಿ, ಸಂಸಾರದ ಎಲ್ಲ ಹೊಣೆಯನ್ನೂ ಗಂಡ ಹೆಂಡತಿ ಹಂಚಿಕೊಂಡು ಮಾಡುತ್ತಾರೆ.  ಅಲ್ಲಿ ಮಗುವನ್ನು ತಯಾರು ಮಾಡಲು ಅಪ್ಪ ಅಮ್ಮ ಎಂಬ ಭೇದ ಇರುವುದಿಲ್ಲ. ಆದರೆ ಭಾರತೀಯ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಬೆಳೆದುಬಂದ ಪುರುಷರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಆಫೀಸಿಗೆ ಹೊರಡಲು ಒಂದು ಗಂಟೆ ಮೊದಲು ಎದ್ದು, ಆಕಳಿಸುತ್ತಾ ಹೆಂಡತಿ ಮಾಡಿಕೊಟ್ಟ ಕಾಫಿ ಕುಡಿದು, ಸ್ನಾನ ಮಾಡಿ, ಬ್ಯಾಗ್ ಹಿಡಿದುಕೊಂಡು ಕಚೇರಿಗೆ ಹೊರಡುತ್ತಾರೆ. ಮಧ್ಯೆ ಪೇಪರ್ ಓದಬಹುದು. ಇದರ ನಡುವೆ ಅಡುಗೆ ಮನೆಯಲ್ಲಿ ಏನಾಗ್ತಿದೆ ಎಂದು ನೋಡುವ ವ್ಯವಧಾನ ಆತನಿಗೆ ಇರುವುದಿಲ್ಲ. ಇನ್ನು ಮಗು ಶಾಲೆಗೆ ರೆಡಿ ಆಯ್ತಾ, ಶಾಲೆಗೆ ಕಳಿಸೋ ವ್ಯಾನ್ ಬಂತಾ ಇಲ್ಲವಾ- ಇದನ್ನೆಲ್ಲ ಹೆಂಡತಿಯೇ ನೋಡಿಕೋಬೇಕು. 

ಈ 5 ತಪ್ಪುಗಳನ್ನು ಮಾಡ್ತಿಲ್ಲ ಅಂದ್ರೆ ನಿಮ್ಮ ಪೇರೆಂಟಿಂಗ್ ರೀತಿ ಸೂಪರ್ ಆಗಿದೆ ಎಂದರ್ಥ!

ಅತ್ತ ಮಗುವನ್ನೂ ಏಳಿಸಿ ಹಲ್ಲುಜ್ಜಿಸಿ ಸ್ನಾನ ಮಾಡಿಸಿ ಡ್ರೆಸ್ ಹಾಕಿಸಿ ಬ್ಯಾಗಿಗೆ ಪುಸ್ತಕ ತುಂಬಿಕೊಟ್ಟು ಲಂಚ್ ಬ್ಯಾಗ್ ರೆಡಿ ಮಾಡಿ ಕೊಟ್ಟು ಇನ್ನೂ ನಿದ್ದೆಗಣ್ಣಿನಲ್ಲಿರುವ ಆ ಮಗುವಿನ ಹಟಮಾರಿತನವನ್ನೂ ಸಹಿಸಿಕೊಂಡು, ಅತ್ತ ಗಂಡನಿಗೂ ಸ್ನಾನಕ್ಕೆ ಬಿಸಿನೀರಿಗಿಟ್ಟು ಕಾಫಿ ಮಾಡಿಕೊಟ್ಟು ಇತ್ತ ಮಗುವಿನ ಸ್ಕೂಲ್ ವ್ಯಾನ್‌ಗೆ ಲೇಟಾಗದಂತೆ ಬೀದಿ ಕೊನೆಗೆ ಕರೆದೊಯ್ದು ನಿಂತು ಬಸ್ಸಿಗೆ ತುಂಬಿ ಕಳಿಸಿ, ನಂತರ ಗಂಡನ ಹೊಟ್ಟೆ ಹಸಿವನ್ನೂ ನಿವಾರಿಸುವ ಕರ್ತವ್ಯ ನಿಭಾಯಿಸಿ, ಎಲ್ಲವೂ ಮುಗಿದ ಬಳಿಕ ತಾನೂ ತಯಾರಾಗಿ ಕಚೇರಿಗೆ ಓಡಬೇಕು. ಇದು ಟಿಪಿಕಲ್ ಭಾರತೀಯ ಗಂಡುತನ! ಹೀಗಾಗಿಯೇ ಇಂಥ ದೃಶ್ಯಗಳು ಕಂಡಾಗ ಕಲ್ಚರ್ ಶಾಕ್ ಆದಂತೆನಿಸುವುದು.

ಒಂದು ಕ್ಷಣ ಬೆಳಗಿನ ಆ ತಯಾರಿಯ ದೃಶ್ಯಗಳನ್ನೆಲ್ಲ ಕಣ್ಣ ಮುಂದೆ ಕಲ್ಪಿಸಿಕೊಂಡರೆ ಸಾಕು, ಯಾರು ಎಷ್ಟು ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇಲ್ಲಿ ಹೆಂಡತಿ ಹೌಸ್‌ವೈಫ್ ಎನ್ನುವುದು ನಿಮಿತ್ತ ಮಾತ್ರ. ಆಕೆ ಬಹುಶಃ ಸಂಜೆ ಮಗುವನ್ನು ಕರೆತರುವುದು, ಅಡುಗೆ ಮಾಡುವುದು, ಗಂಡ ಮಗುವಿನ ಬಟ್ಟೆ ತೊಳೆಯುವುದು, ಮನೆ ಕ್ಲೀನಾಗಿಡುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತಿರಬಹುದು. ಆಕೆ ಬೆಳಗ್ಗೆ ಬೇಗನೆ ಏಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಜಡ್ಜ್ ಮಾಡಬಾರದು ಅಲ್ಲವೇ? ಹಾಗಂತ ತುಂಬ ಮಂದಿ ಆ ಪೋಸ್ಟ್‌ಗೆ ಕಾಮೆಂಟ್  ಮಾಡಿದ್ದಾರೆ. ಭಾರತೀಯ ಮನಸ್ಥಿತಿ ನಿಧಾನವಾಗಿ ಚೇಂಜ್ ಆಗುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತೆ ಅಲ್ವೇ?    

9ನೇ ಕ್ಲಾಸ್ ಹುಡುಗಿ ಮೇಲೆ ಚಿಗುರು ಮೀಸೆ ಹುಡುಗನ ಲವ್, ಇದು ಸ್ಯಾಂಡಲ್‌ವುಡ್ ಸ್ಟಾರ್ ನಟನ ರಿಯಲ್ ಪ್ರೇಮ ಕಥೆ!
 

Latest Videos
Follow Us:
Download App:
  • android
  • ios