ವಾರಕ್ಕೊಬ್ಬ ಸಂಗಾತಿಯ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್! ಭಾರತದಲ್ಲೇ ಇದೆ ಈ ವಿಚಿತ್ರ ಸಂಪ್ರದಾಯ!
ವರ್ಷಗಟ್ಟಲೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರೋದು, ಓಕೆ ಅಂದ್ರೆ ಮದುವೆ, ಇಲ್ಲದಿದ್ದರೆ ಬ್ರೇಕಪ್- ಇದನ್ನು ನೀವು ಕೇಳಿದ್ದೀರಿ. ಆದ್ರೆ ಹುಡುಗ ವಾರಕ್ಕೊಬ್ಬ ಹುಡುಗಿ ಜೊತೆ, ಹುಡುಗಿ ವಾರಕ್ಕೊಬ್ಬ ಹುಡುಗನ ಜೊತೆ ಇರಬಹುದಾ? ಇಂತದೊಂದು ವಿಚಿತ್ರ ಸಂಪ್ರದಾಯ ಭಾರತದಲ್ಲೇ ಇದೆ. ಎಲ್ಲಿ? ಇಲ್ಲಿ ಓದಿ.
ಭಾರತದ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಕೆಲವು ವಿಚಿತ್ರ ಸಂಪ್ರದಾಯಗಳಿವೆ. ಇದರಲ್ಲಿ ಲೈಂಗಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಕೆಲವು ಸಂಪ್ರದಾಯಗಳೂ ಕೆಲವು ಬುಡಕಟ್ಟುಗಳಲ್ಲಿ ರೂಢಿಯಲ್ಲಿವೆ. ಅಂಥದೊಂದು ವಿಶಿಷ್ಟ ಸಂಪ್ರದಾಯ ಇಲ್ಲಿದೆ.
ಮುರಿಯಾ ಬುಡಕಟ್ಟು ಜನಾಂಗದವರು ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿ ವಾಸಿಸುತ್ತಾರೆ. ಈ ಬುಡಕಟ್ಟು ಜನಾಂಗದಲ್ಲಿ ಆಸಕ್ತಿದಾಯಕ ಪದ್ಧತಿಗಳು ಜಾರಿಯಲ್ಲಿವೆ. ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಲೈವ್ ಇನ್ ನಲ್ಲಿ ಉಳಿದುಕೊಳ್ತಾರೆ. ಇದು ಹೇಗೆ ಎಂದರೆ ಘೋಟುಲ್ ಎಂಬ ಸಂಪ್ರದಾಯದ ಮೂಲಕ. ಇಲ್ಲಿ ಪುರುಷರು ಮತ್ತು ಮಹಿಳೆಯರ ತಮ್ಮ ಸಂಗಾತಿಗಳನ್ನು ಅಯ್ದುಕೊಳ್ಳಲು ಸ್ವತಂತ್ರರು. ಬೇಡ ಎಂದರೆ ಒಂದು ವಾರದ ನಂತರ ಬಿಡಲೂ ಸ್ವತಂತ್ರ.
ಘೋಟುಲ್ ಎಂಬುದು ಮುರಿಯಾ ಜನರ ಸಂಪ್ರದಾಯ. ಈ ಸಮುದಾಯದ ಜನರು ಇದಕ್ಕಾಗಿಯೇ ಬಿದಿರು ಅಥವಾ ಮಣ್ಣಿನ ಒಂದು ಗುಡಿಸಲನ್ನು ಮಾಡುತ್ತಾರೆ. ಅಲ್ಲಿ ಹುಡುಗಿಯರು ಮತ್ತು ಹುಡುಗರು ಸೇರಿ ರಾತ್ರಿ ನೃತ್ಯ ಮಾಡ್ತಾರೆ. ಹಾಡು ಹೇಳುವ ಮೂಲಕ ಮನರಂಜನೆ ಪಡೆಯುತ್ತಾರೆ. ಇಲ್ಲಿ ಹುಡುಗ ಮತ್ತು ಹುಡುಗಿಗೆ ತಮ್ಮ ತಮ್ಮ ಸಂಗಾತಿ ಆಯ್ದುಕೊಳ್ಳುವ ಅವಕಾಶ ನೀಡಲಾಗುತ್ತದೆ. ಅವರ ಆಯ್ಕೆ ವಿಧಾನ ತುಂಬಾ ವಿಭಿನ್ನವಾಗಿದೆ. ಇವರ ಪ್ರಕಾರ, ಘೋಟುಲ್ ಗೆ ಹುಡುಗ ಬಂದ ಅಂದ್ರೆ ಅವನು ಪ್ರಬುದ್ಧನಾಗಿದ್ದಾನೆ ಎಂದರ್ಥ. ಆತ ಅಲ್ಲಿಗೆ ಬಂದು ಬಿದಿರಿನಿಂದ ಬಾಚಣಿಗೆ ಮಾಡಬೇಕು. ಆತನನ್ನು ಹುಡುಗಿ ಇಷ್ಟಪಟ್ಟರೆ ಬಾಚಣಿಗೆಯನ್ನು ಕದಿಯಬೇಕು. ಕೂದಲಿಗೆ ಬಾಚಣಿಕೆ ಹಾಕಿಕೊಂಡು ಹುಡುಗಿ ಹೊರಗೆ ಬಂದ್ರೆ ಆಕೆ ಯಾವುದೋ ಹುಡುಗನನ್ನು ಇಷ್ಟಪಡ್ತಿದ್ದಾಳೆ ಎಂದರ್ಥ. ಇದಾದ ನಂತ್ರ ಹುಡುಗ ಮತ್ತು ಹುಡುಗಿ ಜೋಡಿಯಾಗಿ ಘೋಟುಲ್ ಒಳಗೆ ಹೋಗುತ್ತಾರೆ. ಇಬ್ಬರೂ ಒಂದೇ ಗುಡಿಸಲಿನಲ್ಲಿ ಒಟ್ಟಿಗೆ ವಾಸಿಸಲು ಶುರು ಮಾಡ್ತಾರೆ. ಅವರು ಅಲ್ಲಿ ಲೈಂಗಿಕ ಕ್ರಿಯೆ ಸೇರಿದಂತೆ, ಏನು ಬೇಕಾದರೂ ಮಾಡಬಹುದು. ಸೆಕ್ಸ್ ನಡೆಸುವುದೇ ಹೆಚ್ಚು.
ಪವಿತ್ರ ಮಾತು ಕೇಳಿ ದರ್ಶನ್ ಕೆಟ್ಟ, ಜ್ಯೋತಿಷಿ ಮಾತು ಕೇಳಿ ʼದೋಸೆ ಕಿಂಗ್ʼ ಕೆಟ್ಟ!
ಒಂದು ವಾರ ಕಾಲ ಇವರು ಗಂಡ ಮತ್ತು ಹೆಂಡತಿಯಂತೆ ಬದುಕುತ್ತಾರೆ. ಪರಸ್ಪರರ ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಈ ಗುಡಿಸಲಿಗೆ ಹೋಗುವ ಹುಡುಗ ಹಾಗೂ ಹುಡುಗಿ ಇಬ್ಬರೂ ಪ್ರೀತಿ ಮಾಡ್ತಿದ್ದಾರೆ ಎಂಬುದು ಇಡೀ ಸಮುದಾಯದ ಜನರಿಗೆ ತಿಳಿದಿರುತ್ತದೆ. ಒಂದು ವಾರದ ನಂತರ ಹುಡುಗ ಮತ್ತು ಹುಡುಗಿ ಹೊರಬರುತ್ತಾರೆ. ಆಗ ಅವರಿಬ್ಬರೂ ಪರಸ್ಪರ ಮದುವೆಯಾಗಲು ತಮಗೆ ಒಪ್ಪಿಗೆ ಇದೆಯಾ ಇಲ್ಲವಾ ಹೇಳಬೇಕು. ಬೇಡ ಎಂದರೆ ಇಬ್ಬರೂ ಬೇರೆ ಬೇರೆಯಾಗಿ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬಹುದು! ನೋ ಹಾರ್ಡ್ ಫೀಲಿಂಗ್ಸ್. ಓಕೆ ಎಂದರೆ, ಇಬ್ಬರ ಕುಟುಂಬಗಳೂ ಅವರ ಮದುವೆಗೆ ಮುಂದಾಗುತ್ತವೆ.
ಇಂದಿಗೂ ನಮ್ಮ ಸಮಾಜದಲ್ಲಿ ಲಿವ್-ಇನ್ ಸಂಬಂಧವನ್ನು ಒಪ್ಪಿಕೊಳ್ಳುವವರ ಸಂಖ್ಯೆ ಕಡಿಮೆಯಿದೆ. ಮದುವೆಯಾಗದೆ ಒಂದೇ ಸೂರಿನಡಿ ವಾಸಿಸುವ ಜೋಡಿಯನ್ನು ಜನ ವಿಚಿತ್ರವಾಗಿ ನೋಡ್ತಾರೆ. ಹೀಗಿರುವಾಗ, ಇಂತದೊಂದು ಸಂಪ್ರದಾಯ ವಿಶಿಷ್ಟ ಮತ್ತು ತುಂಬಾ ಪ್ರಗತಿಪರ ಅನಿಸುತ್ತದಲ್ಲವೇ? ಹಾಗಾಗಿ ಈ ಲಿವ್ ಇನ್ ರಿಲೇಷನ್ಶಿಪ್ ಮುರಿಯಾ ಸೇರಿದಂತೆ ಭಾರತದ ಅನೇಕ ಬುಡಕಟ್ಟು ಜನಾಂಗದಲ್ಲಿ ಹಿಂದಿನಿಂದಲೂ ಜಾರಿಯಲ್ಲಿತ್ತು ಅನ್ನಬಹುದು!
ಮದ್ವೆಯಾಗಿ 6 ವರ್ಷದ ಬಳಿಕ ಗೊತ್ತಾಯ್ತು ಪತಿ ಕಪ್ಪಗಿದ್ದಾರೆ ಎಂದು, ರಾತ್ರೋರಾತ್ರಿ ಪತ್ನಿ ಪರಾರಿ!