Asianet Suvarna News Asianet Suvarna News

ಮದ್ವೆಯಾಗಿ 6 ವರ್ಷದ ಬಳಿಕ ಗೊತ್ತಾಯ್ತು ಪತಿ ಕಪ್ಪಗಿದ್ದಾರೆ ಎಂದು, ರಾತ್ರೋರಾತ್ರಿ ಪತ್ನಿ ಪರಾರಿ!

ಮದುವೆಯಾಗಿ ಬರೋಬ್ಬರಿ 6 ವರ್ಷ ಕಳೆದಿದೆ. ಇದೀಗ ಇದೀಗ ಪತ್ನಿಗೆ ತನ್ನ ಪತಿ ಕಪ್ಪಾಗಿದ್ದಾರೆ ಎಂದು ಗೊತ್ತಾಗಿದೆ. ಇಷ್ಟೇ ಅಲ್ಲ, ಕಪ್ಪಗಿರುವ ಪತಿ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದು ರಾತ್ರೋರಾತ್ರಿ ಪರಾರಿಯಾಗಿದ್ದಾಳೆ.
 

Husband dark skinned UP Woman runs away from family after 6 years of marriage ckm
Author
First Published Sep 12, 2024, 6:45 PM IST | Last Updated Sep 12, 2024, 6:45 PM IST

ಝಾನ್ಸಿ(ಸೆ.12) ಮದುವೆಯಾಗಿ 6 ವರ್ಷ ಕಳೆದ ಬಳಿಕ ಪತ್ನಿಗೆ ಇದೀಗ ಪತಿ ಬೇಡವಾಗಿದ್ದಾನೆ. ಕಾರಣ ಇಷ್ಟೇ ಪತಿ ಕಪ್ಪಗಿದ್ದಾನೆ. 6 ವರ್ಷದ ಬಳಿಕ ಪತ್ನಿಗೆ ತನ್ನ ಪತಿ ಕಪ್ಪು ಎಂದು ಗೊತ್ತಾಗಿದೆ. ತಕ್ಷಣವೇ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಹುಡುಕಾಡಿ ಸೋತ ಗಂಡ ಕೊನೆಗೆ ದೂರು ದಾಖಸಿದ್ದಾನೆ. 7 ದಿನಗಳ ಬಳಿಕ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಅಚ್ಚರಿ ಮಾಹಿತಿ ನೀಡಿದ್ದಾಳೆ. ಪತಿ ಕಪ್ಪಾಗಿರುವ ಕಾರಣ ಆತನ ಜೊತೆ ಬದುಕಲು ಸಾಧ್ಯವಿಲ್ಲ ಎಂದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಲಹಚುರಾ ನಿವಾಸಿಯಾದ ದುರ್ಗಾಪಾಲ್ 6 ವರ್ಷದ ಹಿಂದೆ ರೋರಾ ಗ್ರಾಮದ ಜ್ಯೋತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಇವರ ಸಂಸಾರದಲ್ಲಿ ಗಂಭೀರ ಸಮಸ್ಯೆಗಳೇನು ಇರಲಿಲ್ಲ.ಅಲ್ಲೊಂದು ಇಲ್ಲೊಂದು  ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತು. ಸಂಸಾರ ಕಳೆದ 6 ವರ್ಷಗಳಿಂದ ಸಾಗುತ್ತಾ ಬಂದಿತ್ತು. ಆದರೆ ಸೆಪ್ಟೆಂಬರ್ 2ರಂದು ಪತ್ನಿ ಜ್ಯೋತಿ ಮಿಸ್ಸಿಂಗ್ ಆಗಿದ್ದಾಳೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಇಲ್ಲ. ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರ ವಿಚಾರಿಸದ್ದಾರೆ. ಪಕ್ಕದ ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಕೆಲೆವೆಡೆ ಪರಿಶೀಲನೆ ನಡೆಸಿದರೂ ಪತ್ತೆ ಇಲ್ಲ.

 30 ಲಕ್ಷ ರೂ ವೇತನ,ಪೋಷಕರಿಂದ ದೂರ: ಭಾವಿ ಪತಿಗೆ ಇರಬೇಕಾದ ಅರ್ಹತೆ ಲಿಸ್ಟ್ ನೀಡಿದ ಮಹಿಳೆ!

ಜ್ಯೋತಿ ನಾಪತ್ತೆಯಾಗಿದ್ದಾಳೆ ಅನ್ನೋದು ಖಚಿತವಾಗುತ್ತಿದ್ದಂತೆ ದುರ್ಗಾಪಾಲ್ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ಇತ್ತ ಪೊಲೀಸರು ಫೋಟೋ, ಮೊಬೈಲ್ ಸಂಖ್ಯೆ ಸೇರಿದಂತೆ ಇತರ ಮಾಹಿತಿ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಮಹಿಳೆ ಹುಡುಕಾಟಕ್ಕಿಳಿದ ಪೊಲೀಸರು 7 ದಿನಗಳ ಬಳಿಕ ಆಕೆಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಮಧ್ಯಪ್ರದೇಶದ ಚತ್ತಾರುಪುರ ಬಳಿ ಮಹಿಳೆ ಪತ್ತೆಯಾಗಿದ್ದಾಳೆ. ಬಳಿಕ ದಿಢೀರ್ ನಾಪತ್ತೆ ಹಿಂದಿನ ಕಾರಣ ಏನು? ಯಾರಾದರೂ ಕಿಡ್ನಾಪ್ ಮಾಡಿದ್ದಾರ? ಅಥವಾ ಗಂಡನಿಂದ ಬೇಸತ್ತು ತೆರಳಿದ್ದಾಳ ಅನ್ನೋದು ತಿಳಿಯಲು ವಿಚಾರಣೆ ಆರಂಭಿಸಿದ್ದಾರೆ.

ಈ ವೇಳೆ ಜ್ಯೋತಿಯ ಮಾತು ಕೇಳಿ ಪೊಲೀಸರು ದಂಗಾಗಿದ್ದಾರೆ. ಪತಿ ಕಪ್ಪಾಗಿದ್ದಾನೆ. ಆತನ ಬದುಕಲು ಸಾಧ್ಯವಿಲ್ಲ ಎಂದು ಹೊರಟಿದ್ದೇನೆ ಎಂದಿದ್ದಾಳೆ. ಪತಿ ಕಪ್ಪು ಎಂದು ಗೊತ್ತಾಗಲು 6 ವರ್ಷ ಬೇಕಾಯ್ತಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದಕ್ಕೆ ಗರಂ ಆದ ಮಹಿಳೆ, ಆತನ ಕುಟುಂಬಸ್ಥರೂ ನನಗೆ ಇಷ್ಟವಿಲ್ಲ. ನನಗೆ ಪತಿ ಜೀವನಾಂಶವಾಗಿ 10 ಲಕ್ಷ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ದ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾಳೆ.  

ಚಾಣಕ್ಯ ನೀತಿ: ಪತಿಯಿಂದ ಪತ್ನಿಗೆ ಸಿಗಬೇಕಾದ 5 ಸುಖಗಳು
 

Latest Videos
Follow Us:
Download App:
  • android
  • ios