Asianet Suvarna News Asianet Suvarna News

6.3 ಇಂಚಿನ ಮರದ ದೊಣ್ಣೆ, 2000 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ಸೆಕ್ಸ್ ಟಾಯ್?

ಸಂಗಾತಿ ಜೊತೆ ಸಂಭೋಗದ ನಂತರ ಸಂತೃಪ್ತಿ ಸಿಗದಿದ್ದಾಗ ಸೆಕ್ಸ್ ಟಾಯ್‌ ನೆರವು ಪಡೆಯುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅವಿವಾಹಿತರು, ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿ ಇರೋರು ಹೆಚ್ಚಾಗಿ ಸೆಕ್ಸ್ ಟಾಯ್ ಬಳಸುತ್ತಾರೆ. ಆದ್ರೆ ಸೆಕ್ಸ್ ಟಾಯ್ ಬಳಕೆ 2000 ವರ್ಷಗಳ ಹಿಂದೆಯೇ ಇತ್ತು ಅಂದ್ರೆ ನೀವ್ ನಂಬ್ತೀರಾ ?

This 6.3 inch wooden object may have been used as sex toy 2000 years ago Vin
Author
First Published Feb 21, 2023, 11:10 AM IST | Last Updated Feb 21, 2023, 11:11 AM IST

ಲೈಂಗಿಕ ವಿಷ್ಯ ಬಂದಾಗ ದಂಪತಿ ಅನೇಕ ವಿಷ್ಯಗಳನ್ನು ನಿರ್ಲಕ್ಷ್ಯಿಸ್ತಾರೆ. ಅದ್ರಲ್ಲಿ ಸಂತುಷ್ಟಿ ಕೂಡ ಒಂದು. ಸಾಮಾನ್ಯವಾಗಿ ಇಂಟರ್ಕೋರ್ಸ್ ನಂತ್ರ ಸಂಗಾತಿಗಳು ಬ್ಯುಸಿಯಾಗ್ತಾರೆ. ಸಂಗಾತಿಗೆ ಈ ಮಿಲನದಿಂದ ತೃಪ್ತಿಯಾಗಿದ್ಯಾ? ಸೆಟಿಸ್ಪೆಕ್ಷನ್ ಸಿಕ್ಕಿದ್ಯಾ ಎಂಬುದನ್ನು ಬಹುತೇಕರು ಕೇಳೋದಿಲ್ಲ. ಈ ಪ್ರಶ್ನೆಯನ್ನು ಸಂಗಾತಿ ಮುಂದಿಡದೆ ಹೋದ್ರೆ ಅವರ ಭಾವನೆ ತಿಳಿಯೋದು ಕಷ್ಟ. ಆಗ್ಲೆ ಸಂಭೋಗ ಯಾಂತ್ರಿಕವಾಗುತ್ತದೆ. ಇಬ್ಬರ ಮಧ್ಯೆ ಭಾವನೆಗಳಿಗೆ ಬೆಲೆ ಇರೋದಿಲ್ಲ. ಸಂಗಾತಿ (Partner) ಸಂಭೋಗದಿಂದ ಸಂತೃಪ್ತಿಗೊಂಡಾಗ ಮಾತ್ರ ಸಂಬಂಧ (Relationship) ಮತ್ತಷ್ಟು ಗಟ್ಟಿಯಾಗಲು ಸಾಧ್ಯ. ಅನೇಕ ಕಾರಣಕ್ಕೆ ಸಂಗಾತಿ, ಸಂಭೋಗದಿಂದ ಸೆಟಿಸ್ಪೆಕ್ಷನ್ ಹೊಂದಿರೋದಿಲ್ಲ. ಒಂದ್ವೇಳೆ ನಿಮ್ಮ ಸಂಗಾತಿ ಕೂಡಾ ಸಂಭೋಗದ ನಂತ್ರ ತೃಪ್ತಿ ಹೊಂದಿಲ್ಲವೆಂದಾದ್ರೆ ಸೆಕ್ಸ್‌ ಟಾಯ್ಸ್‌ಗಳನ್ನು ಬಳಸುತ್ತಾರೆ. 

ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಲೈಂಗಿಕ ಖುಷಿಗಾಗಿ ಸೆಕ್ಸ್ ಟಾಯ್ಸ್ ಬಳಕೆ ಹೆಚ್ಚಾಗ್ತಿದೆ. ಮದುವೆ(Marriage)ಯಾಗದವರು, ಮದುವೆಯಾಗಿ ಲೈಂಗಿಕ ಸಂತೃಪ್ತಿ ಸಿಗದವರು ಸೆಕ್ಸ್‌ ಟಾಯ್ಸ್ ಬಳಸುತ್ತಾರೆ. ಆನ್‌ಲೈನ್‌ನಲ್ಲಿ ಹಲವು ವೆರೈಟೆ ಸೆಕ್ಸ್‌ ಟಾಯ್‌ಗಳು ಲಭ್ಯವಿರುವ ಕಾರಣ ಸುಲಭವಾಗಿ ಆರ್ಡರ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಸೆಕ್ಸ್‌ ಟಾಯ್ಸ್‌ ಬಳಕೆ ಶುರುವಾಗಿರೋದು ಕೇವಲ ಇತ್ತೀಚಿನ ವರ್ಷಗಳಲ್ಲಿ ಅಲ್ಲ ಅಂದ್ರೆ ನೀವು ನಂಬ್ತೀರಾ ?

ಹೆಣ್ಣು ಮಕ್ಕಳೂ ಹಸ್ತಮೈಥುನ ಮಾಡಿಕೊಳ್ತಾರಾ ? ಇದು ಸಹಜ ಪ್ರಕ್ರಿಯೆಯೇ ?

ರೋಮನ್ ಕೋಟೆ ವಿಂಡೋಲಾಂಡದಲ್ಲಿ ವಿಚಿತ್ರವಾದ ಮರದ ಕಲಾಕೃತಿ
ಲೈಂಗಿಕ ಆಟಿಕೆಗಳನ್ನು (Sex toy)ಸಾಮಾನ್ಯವಾಗಿ ಆಧುನಿಕ ಲೈಂಗಿಕ ಸಾಧನಗಳೆಂದು ಪರಿಗಣಿಸಲಾಗುತ್ತದೆ, ಆದರೆ, ಹೊಸ ಅಧ್ಯಯನವು ಅವುಗಳನ್ನು ಸುಮಾರು 2,000 ವರ್ಷಗಳ ಹಿಂದೆ ಬಳಸಿರಬಹುದೆಂದು ಸೂಚಿಸುತ್ತದೆ. ಇಂಗ್ಲೆಂಡಿನ ರೋಮನ್ ಕೋಟೆ ವಿಂಡೋಲಾಂಡದಲ್ಲಿ ಸಂಶೋಧಕರು ವಿಚಿತ್ರವಾದ ಮರದ ಕಲಾಕೃತಿಯನ್ನು ಕಂಡುಹಿಡಿದಿದ್ದಾರೆ, ಇದನ್ನು ಲೈಂಗಿಕ ಸಂತೋಷಕ್ಕಾಗಿ ಬಳಸಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. 6.3-ಇಂಚಿನ ಉದ್ದದ ಮರದ ಕಲಾಕೃತಿಯು ಡಜನ್‌ಗಟ್ಟಲೆ ಬೂಟುಗಳು ಮತ್ತು ಡ್ರೆಸ್ ಪರಿಕರಗಳ ಜೊತೆಗೆ ಕಂಡುಬಂದಿದೆ, 

ಹೊಸ ಅಧ್ಯಯನದಲ್ಲಿ, ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ಮತ್ತು ಯೂನಿವರ್ಸಿಟಿ ಕಾಲೇಜ್ ಡಬ್ಲಿನ್‌ನ ತಜ್ಞರು ವಸ್ತುವಿನ ಫಾಲಿಕ್ ಸ್ಟ್ರಕ್ಚರ್‌ ಗಮನಿಸಿದರೆ ಇದು ಸೆಕ್ಸ್ ಟಾಯ್‌ ಆಗಿರಬಹುದು ಎಂದು ಹೇಳಿದ್ದಾರೆ. ಈ ಸೆಕ್ಸ್ ಟಾಯ್‌ನ್ನು ಫಾಲ್ಲಿ ಎಂದು ಗುರುತಿಸಲಾಗಿದ್ದು, ರೋಮನ್ ಸಾಮ್ರಾಜ್ಯದಾದ್ಯಂತ ಫಾಲ್ಲಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಸಣ್ಣ ಫಲ್ಲಿಯನ್ನು ಪೆಂಡೆಂಟ್‌ಗಳಾಗಿ ಧರಿಸಲಾಗುತ್ತಿತ್ತು ಅಥವಾ ಮನೆಯ ಅಲಂಕಾರಕ್ಕಾಗಿ ಬಳಸಲಾಗುತ್ತಿತ್ತು. ಈ ವಸ್ತುವಿನ ಗಾತ್ರವನ್ನು ಗಮನಿಸಿದರೆ, ಸಂಶೋಧಕರು ಇದನ್ನು ಲೈಂಗಿಕ ಸಾಧನವಾಗಿ ಬಳಸಿರಬಹುದು ಎಂದು ಭಾವಿಸುತ್ತಾರೆ.

ಪೋರ್ನ್‌ ಸೈಟ್‌ಗೆ ಸಹಪಾಠಿ ನಂಬರ್‌ ಅಪ್‌..ಕೋರಿಯರ್‌ನಲ್ಲಿ ಸೆಕ್ಸ್ ಟಾಯ್ಸ್!

2000 ವರ್ಷಗಳ ಹಿಂದೆ 'ಸೆಕ್ಸ್ ಟಾಯ್' ಆಗಿ ಬಳಸಲ್ಪಟ್ಟಿರುವ ವಸ್ತು
ವಸ್ತುವಿನ ಎರಡೂ ತುದಿಗಳು ಗಮನಾರ್ಹವಾಗಿ ಸುಗಮವಾಗಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಲೈಂಗಿಕ ಸಂಬಂಧದಲ್ಲಿ ಪುನರಾವರ್ತಿತ ಸಂಪರ್ಕ'ವನ್ನು ಸೂಚಿಸುತ್ತದೆ.ಮರದ ವಸ್ತುವನ್ನು (Wooden object) 1992 ರಲ್ಲಿ ವಿಂಡೋಲಾಂಡಾದಲ್ಲಿ ಕಂಡುಹಿಡಿಯಲಾಯಿತು' ಎಂದು ಉತ್ತರ ಇಂಗ್ಲೆಂಡ್‌ನ ಹ್ಯಾಡ್ರಿಯನ್ ಗೋಡೆಯ ದಕ್ಷಿಣಕ್ಕೆ ರೋಮನ್ ಕೋಟೆ.ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಡಾ ರಾಬ್ ಕಾಲಿನ್ಸ್, MailOnline ಗೆ ಹೇಳಿದರು, "ವಸ್ತುವು ಲೈಂಗಿಕ ಆಟಿಕೆ ಆಗಿದ್ದರೆ, ಅದು ಬ್ರಿಟನ್‌ನಿಂದ ಹಳೆಯ ಉದಾಹರಣೆಯಾಗಿದೆ ಎಂದು ನಾವು ನಂಬುತ್ತೇವೆ.' ಎಂದು ತಿಳಿಸಿದ್ದಾರೆ.

'ಆಟಿಕೆಯನ್ನು ಮರದಿಂದ ಕೆತ್ತಲಾಗಿದೆ ಎಂಬ ಅಂಶವು ಅದರ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾವು ಅದರ ಉದ್ದೇಶಿತ ಬಳಕೆಯ ಬಗ್ಗೆ ಖಚಿತವಾಗಿರಲು ಸಾಧ್ಯವಿಲ್ಲ, ಆ ಆಕಾರವನ್ನು ಸ್ಪಷ್ಟತೆಗಾಗಿ ಸಾಂಕೇತಿಕವಾಗಿ ಬಳಸುವ ಸೆಕ್ಸ್ ಟಾಯ್‌ನಂತೆ ತೋರುತ್ತದೆ' ಎಂದು ಡಾ ಕಾಲಿನ್ಸ್ ಹೇಳಿದರು. ಫಾಲಸ್ ಆಕಾರದ ವಸ್ತುವನ್ನು ಈಗ ನಾರ್ತಂಬರ್‌ಲ್ಯಾಂಡ್‌ನ ವಿಂಡೋಲಾಂಡ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುತ್ತದೆ.

Latest Videos
Follow Us:
Download App:
  • android
  • ios