ಇತ್ತೀಚಿನ ದಿನಗಳಲ್ಲಿ ಪುಟಾಣಿ ಮಕ್ಕಳು ಶಾಲೆಗೆ ಹೋಗೋದು ಅನಿವಾರ್ಯವಾಗಿದೆ. ಹಿಂದೆ 6 ವರ್ಷ ತುಂಬುತ್ತಿದ್ದಂತೆ ಶಾಲೆಗೆ ಹೋಗ್ತಿದ್ದ ಮಕ್ಕಳು ಈಗ 3 ವರ್ಷಕ್ಕೆ ಸ್ಕೂಲ್ ಮೆಟ್ಟಿಲು ಹತ್ತುತ್ತಾರೆ. ಮಕ್ಕಳು ಶಾಲೆಗೆ ಹೋಗೋದು ಎಷ್ಟು ಮುಖ್ಯವೋ ಪಾಲಕರು ಮಕ್ಕಳಿಗೆ ಕೆಲ ವಿಷ್ಯ ಕಲಿಸುವುದು ಕೂಡ ಅಷ್ಟೇ ಅಗತ್ಯ.
ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಕಲಿಕೆ ಶುರುವಾಗುತ್ತದೆ. ಮಕ್ಕಳು ಒಂದು ವಯಸ್ಸಿಗೆ ಬರ್ತಿದ್ದಂತೆ ಅವರನ್ನು ಪಾಲಕರು ಶಾಲೆಗೆ ಕಳುಹಿಸ್ಲೇಬೇಕು. ಶಾಲೆಗೆ ಹೋಗಿ ವಿದ್ಯೆ ಕಲಿಯೋದ್ರಿಂದ ಸಾಕಷ್ಟು ಲಾಭವಿದೆ. ಇದು ಮಕ್ಕಳ ಬೆಳವಣಿಗೆಗೆ ತುಂಬಾ ಒಳ್ಳೆಯದು. ಮಗು ಶಾಲೆಗೆ ಹೋಗುವುದರಿಂದ ಮಗುವಿನ ಸಾಮಾಜಿಕ ಕೌಶಲ್ಯವೂ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ಪಾಲಕರು ತಮ್ಮ ಮಗುವನ್ನು ಶಾಲೆಗೆ ಸೇರಿಸುತ್ತಾರೆ. ಆದರೆ ಮಕ್ಕಳ ಜೀವನದ ಈ ಹೊಸ ಪ್ರಯಾಣಕ್ಕೆ ತಮ್ಮ ಮಗುವನ್ನು ಸಿದ್ಧಪಡಿಸಲು ಪಾಲಕರು ಮರೆಯುತ್ತಾರೆ. ಶಾಲೆಗೆ ಹೋಗುವ ಮೊದಲು ಮಗುವಿಗೆ ಕೆಲ ಸಂಗತಿಯನ್ನು ತಿಳಿಸಿರಬೇಕು. ಇಲ್ಲವೆಂದ್ರೆ ಮಗು ಶಾಲೆಯಲ್ಲಿ ಎಲ್ಲ ಮಕ್ಕಳ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬರಬಹುದು. ನಾವಿಂದು ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಪಾಲಕರು ಮಕ್ಕಳಿಗೆ ಏನು ಕಲಿಸಿರಬೇಕು ಎಂಬುದನ್ನು ಹೇಳ್ತೆವೆ.
ಪ್ರಾಕ್ಟಿಕಲ್ ಸ್ಕಿಲ್ (Practicle Skil): ಮಗುವನ್ನು ಪ್ರಿಸ್ಕೂಲ್ (Preschool) ಗೆ ಕಳುಹಿಸುವ ಮೊದಲು, ನೀವು ಅವರಿಗೆ ಸಾಮಾನ್ಯ ವಿಷ್ಯದ ಬಗ್ಗೆ ಸ್ವಲ್ಪ ಕಲಿಸಿರಬೇಕು. ಶಾಲೆ (school) ಗೆ ಹೋಗುವ ಮೊದಲು ಮಗುವಿಗೆ ಸ್ನಾನಗೃಹದ ಬಗ್ಗೆ ತಿಳಿಸಿರಬೇಕು. ತಾನಾಗಿಯೇ ಶೌಚಾಲಯಕ್ಕೆ ಹೋಗುವುದು, ಬಾತ್ ರೂಮಿನಿಂದ ಬಂದ ನಂತರ ಕೈತೊಳೆದುಕೊಳ್ಳುವುದು, ಡ್ರೆಸ್ (Dress) ಬದಲಿಸುವುದು ಸೇರಿದಂತೆ ಕೆಲ ಸಂಗತಿಯನ್ನು ತಿಳಿಸಿರಬೇಕು. ಅನೇಕ ಮಕ್ಕಳಿಗೆ ಬಾತ್ ರೂಮಿನ ಅರಿವಿರುವುದಿಲ್ಲ. ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿರುವುದಿಲ್ಲ. ಶಾಲೆಗೆ ಹೋದಾಗ ಇದು ಅವರಿಗೆ ಸಮಸ್ಯೆಯಾಗುತ್ತದೆ.
ಆಹಾರ ಸೇವನೆ (Food) : ಮಕ್ಕಳಿಗೆ ಮುಖ್ಯವಾಗಿ ಆಹಾರ ಸೇವನೆಯನ್ನು ಕಲಿಸಬೇಕು. ಚಮಚದಲ್ಲಿ ಅಥವಾ ಫೋರ್ಕ್ ನಲ್ಲಿ ಮಕ್ಕಳು ತಿನ್ನಲು ಕಲಿತ್ರೆ ಶಾಲೆಯಲ್ಲಿ ಸಮಸ್ಯೆ ಎನ್ನಿಸುವುದಿಲ್ಲ. ಶಾಲೆ ಸಿಬ್ಬಂದಿ ನಿಮ್ಮ ಮಕ್ಕಳಿಗೆ ತಿನ್ನಿಸುತ್ತ ಸಮಯ ವ್ಯರ್ಥ ಮಾಡಬೇಕಾಗುವುದಿಲ್ಲ. ಹಾಗೆಯೇ ಮಕ್ಕಳಿಗೆ ಯಾವುದೇ ಆಹಾರದ ಅಲರ್ಜಿ ಇದ್ದರೆ ಅದನ್ನು ಶಾಲೆ ಶಿಕ್ಷಕರಿಗೆ ತಿಳಿಸಿ.
ಬಹುತೇಕ ಪುರುಷರು ಹೇಳೋ ಸುಳ್ಳಿದು, ನೀವೂ ಹೇಳ್ತೀರಾ?
ಸಾಮಾಜಿಕ ಕೌಶಲ್ಯ ಮಕ್ಕಳಿಗೆ ಕಲಿಸಿ (Social Skill) : ಮಗುವಿಗೆ ಕೆಲವು ಸಾಮಾಜಿಕ ಕೌಶಲ್ಯಗಳನ್ನು ಕಲಿಸಬೇಕು. ಅವರಿಗೆ ಸ್ನೇಹಿತರ ಅರ್ಥವನ್ನು ವಿವರಿಸಿ ಮತ್ತು ಅವರು ತಮ್ಮ ತರಗತಿಯಲ್ಲಿ ಯಾರನ್ನಾದರೂ ಅಥವಾ ಎಷ್ಟು ಮಕ್ಕಳನ್ನು ತಮ್ಮ ಸ್ನೇಹಿತರನ್ನಾಗಿ ಮಾಡಬಹುದು ಎಂಬುದನ್ನು ಹೇಳಬೇಕು. ಹಾಗೆಯೇ ಸ್ನೇಹಿತರ ಜೊತೆ ಹೇಗೆ ವರ್ತನೆ ಮಾಡಬೇಕು ಎಂಬುದನ್ನು ಕಲಿಸಬೇಕು.
ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಡೋ ಮೊದ್ಲು ಈ ವಿಷ್ಯ ನೆನಪಿರಲಿ
ಅಭ್ಯಾಸದ ಬಗ್ಗೆ ಜ್ಞಾನ : ನಿಮ್ಮ ಮಗು ಪ್ರಿಸ್ಕೂಲ್‌ಗೆ ಹೋಗಲು ಪ್ರಾರಂಭಿಸುವ ಮೊದಲು ನೀವು ಸ್ವಲ್ಪ ಓದಲು ಮತ್ತು ಬರೆಯಲು ಕಲಿಸಬಹುದು. ಅವರು ತಮ್ಮ ಹೆಸರನ್ನು ಬರೆಯಲು ಮತ್ತು ಗುರುತಿಸಲು ಸಾಧ್ಯವಾದ್ರೆ ಮುಂದಿನ ಕಲಿಕೆ ಸುಲಭವಾಗುತ್ತದೆ.
ಪೋಷಕರನ್ನು ಬಿಟ್ಟಿರುವ ಕಲೆ (Independency) : ಅನೇಕ ಮಕ್ಕಳು ತಮ್ಮ ಪೋಷಕರಿಗೆ ಅಂಟಿಕೊಂಡಿರ್ತಾರೆ. ಪಾಲಕರು ಸ್ವಲ್ಪ ಕಣ್ಮರೆಯಾದ್ರೂ ಅಳ್ತಾರೆ. ಆದ್ರೆ ಮಕ್ಕಳಿಗೆ ಪಾಲಕರನ್ನು ಬಿಟ್ಟಿರುವ ಕಲೆ ಕಲಿಸಬೇಕು. ಅವರನ್ನು ಸ್ವಲ್ಪ ಸಮಯ ಸಂಬಂಧಿಕರ ಮನೆಯಲ್ಲಿ ಅಥವಾ ಅಜ್ಜ – ಅಜ್ಜಿ ಜೊತೆ ಬಿಟ್ಟು ಕಲಿಸಬೇಕು. ಆಗ ಮಗು ಶಾಲೆಗೆ ಹೋಗಲು ಅಳುವುದಿಲ್ಲ.
ವೈಯಕ್ತಿಕ ಸ್ವಚ್ಛತೆ (Peronal Hygine) : ಮಗು ಮನೆಯಿಂದ ಹೊರಗೆ ಹೋದಾಗ, ವಿಶೇಷವಾಗಿ ನೀವು ಅವರ ಜೊತೆ ಇಲ್ಲದೆ ಇರುವಾಗ ವೈಯಕ್ತಿಕ ನೈರ್ಮಲ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಮಕ್ಕಳಿಗೆ ತಿಳಿದಿರಬೇಕು. 3 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ವೈಯಕ್ತಿಕ ನೈರ್ಮಲ್ಯ ಕಲಿಸಬೇಕು. ಮೂತ್ರ ತಡೆಯುವುದು ಅಥವಾ ಅದು ಬಂದ ನಂತ್ರ ಶೌಚಾಲಯಕ್ಕೆ ಹೋಗಬೇಕು ಎಂಬುದು ಮಕ್ಕಳಿಗೆ ತಿಳಿದಿರಬೇಕು. ಕೆಲ ಮಕ್ಕಳು ನಿಂತಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಳ್ತಾರೆ. ಇದು ಶಾಲೆಯಲ್ಲಿ ಮುಜುಗರಕ್ಕೆ ಕಾರಣವಾಗುತ್ತದೆ.
