ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಡೋ ಮೊದ್ಲು ಈ ವಿಷ್ಯ ನೆನಪಿರಲಿ
ಪೋಷಕರು ಕೆಲಸದ ಕಾರಣದಿಂದಾಗಿ ಕೆಲವೊಮ್ಮೆ ತಮ್ಮ ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡಬೇಕಾಗುತ್ತೆ. ಕೆಲವೊಮ್ಮೆ ಕೆಲಸದಿಂದ ಮತ್ತು ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿ, ಪೋಷಕರು ಮಕ್ಕಳನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಡ್ತಾರೆ. ಪೋಷಕರು ಅಂತಹ ಪರಿಸ್ಥಿತಿಗಳಿಗೆ ತಮ್ಮ ಮಕ್ಕಳನ್ನು ಸಿದ್ಧಪಡಿಸಬೇಕು. ಮಕ್ಕಳು ಮನೆಯಲ್ಲಿ ಏಕಾಂಗಿಯಾಗಿದ್ದಾಗ ಏನನ್ನು ನೋಡಿಕೊಳ್ಳಬೇಕು ಎಂದು ತಿಳಿದಿರಬೇಕು. ನೀವು ಹತ್ತಿರದ ಜಾಗಕ್ಕೆ ಹೋಗುತ್ತಿದ್ದರೂ, ನೀವು ಬರಲು ಕೇವಲ 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತೀರಿ, ಆದರೆ ನಿಮ್ಮ ಮಗುವಿಗೆ ಮನೆಯಲ್ಲಿ ಏಕಾಂಗಿಯಾಗಿರುವಾಗ ಏನು ಮಾಡಬೇಕು? ಅನ್ನೋ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ನೀವು ಇದ್ದಕ್ಕಿದ್ದಂತೆ ಮನೆಯಿಂದ ಯಾವಾಗ ಬೇಕಾದರೂ ಹೊರಗೆ ಹೋಗಬೇಕಾದ ಸ್ಥಿತಿ ಉಂಟಾಗಬಹುದು ಮತ್ತು ನಿಮ್ಮ ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ(Alone) ಬಿಡುವಂತಹ ಸ್ಥಿತಿಯೂ ಉಂಟಾಗಬಹುದು. ಈ ಪರಿಸ್ಥಿತಿಯನ್ನು ನಿಭಾಯಿಸಲು ನೀವು ನಿಮ್ಮ ಮಗುವಿಗೆ ಕಲಿಸೋದು ಉತ್ತಮ. ಇದರೊಂದಿಗೆ, ಮಗು ಸ್ವಾವಲಂಬಿಯಾಗಬಹುದು ಮತ್ತು ಯಾವುದೇ ತೊಂದರೆ ಇದ್ದರೆ, ಅದನ್ನು ಚೆನ್ನಾಗಿ ನಿರ್ವಹಿಸಲು ಸಹ ಇದರಿಂದ ಸಾಧ್ಯವಾಗುತ್ತೆ ಮತ್ತು ನೀವು ಚಡಪಡಿಕೆ ಇಲ್ಲದೆ ಹೋಗಲು ಸಾಧ್ಯವಾಗುತ್ತೆ.
ಮನಃಶಾಸ್ತ್ರಜ್ಞರು ಮಕ್ಕಳಿಗೆ ಮನೆಯಲ್ಲಿ ಏಕಾಂಗಿಯಾಗಿರಲು ಕಲಿಸಿದರೆ, ಅವರು ಹೆಚ್ಚು ಸ್ವಾವಲಂಬಿ, ಜವಾಬ್ದಾರಿಯುತ(Responsible) ಮತ್ತು ಆತ್ಮವಿಶ್ವಾಸಿಗಳಾಗುತ್ತಾರೆ. ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವಾಗ ಸಹಾಯಕ್ಕೆ ಬರುವ ಕೆಲವು ಸಲಹೆಗಳು ಇಲ್ಲಿವೆ. ಈ ಸಲಹೆಗಳ ಸಹಾಯದಿಂದ, ನೀವು ನಿಮ್ಮ ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿರಲು ಸಿದ್ಧಗೊಳಿಸಬಹುದು.
ಎಮರ್ಜೆನ್ಸಿ ನಂಬರ್ (Emergency number)
ಮಗುವಿನ ಫೋನಲ್ಲಿ ಕುಟುಂಬದವರ ಫೋನ್ ನಂಬರ್ ಇದ್ರೂ ಸಹ, ನೀವು ಅವರಿಗೆ 2 ರಿಂದ 3 ಎಮರ್ಜೆನ್ಸಿ ನಂಬರ್ ನೆನಪಿನಲ್ಲಿಡಲು ಕಲಿಸಬೇಕು. ಇದು ಪೋಷಕರ ಸಂಖ್ಯೆ, ಹತ್ತಿರದ ಸಂಬಂಧಿ ಮತ್ತು ವಿಶ್ವಾಸಾರ್ಹ ನೆರೆಹೊರೆಯವರ ಸಂಖ್ಯೆಯನ್ನು ಹೊಂದಿರಬೇಕು. ನೀವು ಮನೆಯಲ್ಲಿ ಕಾಂಟಾಕ್ಟ್ ನಂಬರ್ ಡೈರಿಯನ್ನು ಸಹ ಮಾಡಬಹುದು. ಮನೆಯಿಂದ ಹೊರಬಂದ ನಂತರ, ಮಗುವಿನ ಸ್ಥಿತಿಯನ್ನು ಕೇಳಲು ಆಗಾಗ್ಗೆ ಕರೆ ಮಾಡುತ್ತಲೇ ಇರಿ.
ಸ್ಕ್ರೀನ್ ಟೈಮ್ (Screen Time)
ನೀವು ಇಲ್ಲದೇ ಇದ್ದಾಗ, ಮಗು ಟಿವಿ ನೋಡೋದು, ವೀಡಿಯೊ ಗೇಮ್ಸ್ ಆಡೋದು ಅಥವಾ ಇಂಟರ್ನೆಟ್ ಬಳಸೋದರಲ್ಲೇ ಎಲ್ಲಾ ಸಮಯವನ್ನು ಕಳೆಯಬಹುದು. ಸ್ಕ್ರೀನ್ ಟೈಮ್ ಬಗ್ಗೆ ಸ್ವಲ್ಪ ಕಟ್ಟುನಿಟ್ಟಾಗಿರಿ ಮತ್ತು ಅಂತಹ ನಿಯಮಗಳು ಮಗುಗೆ ಏಕೆ ಮುಖ್ಯ ಎಂದು ಮಗುವಿಗೆ ವಿವರಿಸಿ.
ಸೇಫ್ಟಿ
ಸುರಕ್ಷತೆಯ ದೃಷ್ಟಿಯಿಂದ, ಮಗು ಮನೆಯಲ್ಲಿ ಏಕಾಂಗಿಯಾಗಿರೋದು ಕಷ್ಟವಾಗಬಹುದು. ಗ್ಯಾಸ್ (Gas) ಆನ್ ಮತ್ತು ಆಫ್ ಮಾಡಲು ಮಗುವಿಗೆ ಕಲಿಸಿ. ನೀವು ಮನೆಯಲ್ಲಿ ಇಲ್ಲದಿದ್ದಾಗ ಅವನು ಚಾಕು ಬಳಸಬಾರದು ಎಂದು ಅವನಿಗೆ ತಿಳಿಸಿ. ಹರಿತ ವಸ್ತುಗಳನ್ನು ಸಾಧ್ಯವಾದಷ್ಟು ಮಕ್ಕಳ ಕೈಗೆ ಸಿಗದಂತೆ ಇರಿಸಿ.
ಊಟ
ಮನೆಯಲ್ಲಿ ಮಗುವಿಗೆ ತಿಂಡಿ ಅಥವಾ ತಿನ್ನಲು ಏನಾದರೂ ಮಾಡಿ ಇಡಲು ಮರೆಯಬೇಡಿ. ನೀವು ಮನೆಯಲ್ಲಿ ಇಲ್ಲದಿದ್ದರೆ, ಮಗು ಏನನ್ನೂ ಮಾಡಬೇಕಾಗಿಲ್ಲ ಎಂದು ಹೇಳಿ ಮತ್ತು ಮಗು ತಿಂಡಿ ತಿನ್ನಬೇಕು ಮತ್ತು ತನ್ನ ಹಸಿವನ್ನು ನಿವಾರಿಸಿಕೊಳ್ಳಬೇಕು ಅನ್ನೋದನ್ನು ತಿಳಿಸಿ.ಮಕ್ಕಳು ಒಬ್ರೆ ಇರೋವಾಗ ಗ್ಯಾಸ್ ಇತ್ಯಾದಿಗಳನ್ನು ಆನ್ ಮಾಡೋದು ಅಪಾಯಕಾರಿಯಾಗಬಹುದು. ಹಾಗಾಗಿ ನೀವು ಮಗುವನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಡಬೇಕು ಎಂದು ತಿಳಿದಿದ್ದರೆ, ಮುಂಚಿತವಾಗಿ ಅವರಿಗಾಗಿ ಆಹಾರ(Food) ತಯಾರಿಸಿಡಿ.
ಬಾಗಿಲನ್ನು(Door) ಯಾವಾಗ ತೆರೆಯಬೇಕು
ಯಾರಾದರೂ ಬಾಗಿಲನ್ನು ತಟ್ಟಿದಾಗ, ಬಾಗಿಲನ್ನು ತೆರೆಯಬೇಕೇ ಅಥವಾ ಬೇಡವೇ ಎಂಬುದು ಮುಖ್ಯವಾದ ವಿಷಯ. ಹೊರಗೆ ಯಾರು ಎಂದು ತಿಳಿಯುವವರೆಗೆ ಬಾಗಿಲು ತೆರೆಯದಂತೆ ಮಗುವಿಗೆ ಕಲಿಸಿ. ಅಪರಿಚಿತರನ್ನು ಒಳಗೆ ಬಿಡಬಾರದು. ಯಾರಾದರೂ ಪರಿಚಿತರಾಗಿದ್ದರೂ, ನೀವು ಮೊದಲು ಪೋಷಕರನ್ನು ಕರೆದು ಕೇಳಬೇಕು ಎಂದು ತಿಳಿಸಿ ಹೇಳಿ.