Asianet Suvarna News Asianet Suvarna News

ಬಹುತೇಕ ಪುರುಷರು ಹೇಳೋ ಸುಳ್ಳಿದು, ನೀವೂ ಹೇಳ್ತೀರಾ?

ಮನುಷ್ಯ ಒಂದಲ್ಲ ಒಂದು ಕಾರಣಕ್ಕೆ ಸುಳ್ಳು ಹೇಳ್ತಾನೆ. ಅದ್ರಲ್ಲೂ ಮದುವೆಯಾದ ಪುರುಷರು ಹೆಚ್ಚು ಸುಳ್ಳು ಹೇಳ್ತಾರೆ ಅಂದ್ರೆ ತಪ್ಪಾಗೋದಿಲ್ವೇನೋ. ಒಂದಿಷ್ಟು ಸಾಮಾನ್ಯ ಸುಳ್ಳುಗಳಿವೆ. ಅದನ್ನು ಪುರುಷರು ಒಮ್ಮೆಯಾದ್ರೂ ಹೇಳಿರ್ತಾರೆ.
 

Most Common Lies Men Tell To Their Wife
Author
Bangalore, First Published Aug 8, 2022, 12:15 PM IST

ಮಹಿಳೆ, ಪುರುಷ ಸೇರಿದಂತೆ ಮಕ್ಕಳಾದಿಯವರೆಗೆ ಎಲ್ಲರೂ ಸುಳ್ಳು ಹೇಳ್ತಾರೆ. ಕೆಲವೊಮ್ಮೆ ಸಂಕಷ್ಟದಿಂದ ಹೊರಗೆ ಬರಲು ಜನರು ಸುಳ್ಳು ಹೇಳ್ತಾರೆ. ಸುಳ್ಳಿನಲ್ಲಿ ನಾವು  ಪ್ರಿಯ ಸುಳ್ಳು, ಅಪ್ರಿಯ ಸುಳ್ಳು ಎಂದು ವಿಂಗಡನೆ ಮಾಡಬಹುದು. ಸತ್ಯವನ್ನು ಮುಚ್ಚಿಡಲು ಅನೇಕರು ಸುಳ್ಳು ಹೇಳ್ತಾರೆ. ದಾಂಪತ್ಯದ ವಿಷ್ಯ ಬಂದಾಗ ಜನರು ಹೆಚ್ಚು ಸುಳ್ಳು ಹೇಳ್ತಾರೆ. ಕೆಲವರು ಕಾರಣವಿಲ್ಲದೆ ಸುಳ್ಳು ಹೇಳುತ್ತಾರೆ. ಸಂಗಾತಿ ಮಧ್ಯೆ ಜಗಳವಾಗದಿರಲಿ, ದಾಂಪತ್ಯದಲ್ಲಿ ಬಿರುಕು ಮೂಡದಿರಲಿ ಹಾಗೆ ಸಂಗಾತಿಗೆ ನೋವಾಗದಿರಲಿ ಎನ್ನುವ ಕಾರಣಕ್ಕೆ ಸುಳ್ಳು ಹೇಳುವ ಜನರೂ ಇದ್ದಾರೆ. ಸುಳ್ಳು ಹೇಳುವುದು ತಪ್ಪಲ್ಲ. ಆದ್ರೆ ಆ ಸಂದರ್ಭ ಹೇಗಿದೆ ಎಂಬುದನ್ನು ಅದು ಅವಲಂಬಿಸಿರುತ್ತದೆ. ವಿನಾಃ ಕಾರಣ ಸುಳ್ಳು ಹೇಳುವುದು ತಪ್ಪು. ಆದ್ರೆ ಬೇರೆಯವರಿಗೆ ನೋವುಂಟಾಗುತ್ತದೆ ಅಥವಾ ಅವರಿಗೆ ಅಪಾಯವಿದೆ ಎಂದಾಗ ಸುಳ್ಳನ್ನು ಹೇಳುವುದು ಅನಿವಾರ್ಯವಾಗುತ್ತದೆ. ಇಂದು ನಾವು ಪುರುಷರು ಸಾಮಾನ್ಯವಾಗಿ ಸಂಗಾತಿ, ಗರ್ಲ್ ಫ್ರೆಂಡ್ ಅಥವಾ ಸ್ನೇಹಿತೆಗೆ ಏನೇನು ಸುಳ್ಳು ಹೇಳ್ತಾರೆ ಎಂಬುದನ್ನು ಹೇಳ್ತೇವೆ.

ಮಹಿಳೆಯರ ಮುಂದೆ ಈ ಸುಳ್ಳು ಹೇಳ್ತಾರೆ ಪುರುಷರು : 
ನಾನು ಸಿಂಗಲ್ (Single) :
ಈಗಾಗಲೇ ರಿಲೇಶನ್ಶಿಪ್ ನಲ್ಲಿದ್ದು ಇನ್ನೊಂದು ಮಹಿಳೆಗೆ ಆಕರ್ಷಿತನಾದ್ರೆ ಪುರುಷ ಸುಳ್ಳು (Lie) ಹೇಳ್ತಾನೆ. ನಾನು ಸಿಂಗಲ್, ಇನ್ನೂ ಮದುವೆ (Marriage) ಯಾಗಿಲ್ಲ, ಯಾವುದೇ ಸಂಬಂಧದಲ್ಲಿ ಇಲ್ಲ ಎಂದು ಸುಳ್ಳು ಹೇಳೋದು ಸಾಮಾನ್ಯ. ನನಗೆ ಮದುವೆಯಾಗಿದೆ ಅಂದ್ರೆ ಆಕೆ ನನ್ನ ಜೊತೆ ಮಾತುಬಿಡಬಹುದು ಎಂಬ ಭಯಕ್ಕೆ ಸಿಂಗಲ್ ಎಂದು ಸುಳ್ಳು ಹೇಳುವ ಪುರುಷರು ಅನೇಕರಿದ್ದಾರೆ.

ನಾನು ಆಕೆಯನ್ನು ನೋಡಿಲ್ಲ : ಕಣ್ಣುಗಳಿರೋದು ಸೌಂದರ್ಯ ಸವಿಯಲು ಎನ್ನುವವರಿದ್ದಾರೆ. ಆದ್ರೆ ಪಕ್ಕದಲ್ಲಿ ಸಂಗಾತಿ ಅಥವಾ ಗರ್ಲ್ ಫ್ರೆಂಡ್ ಕುಳಿತಿದ್ದಾಗ ಬೇರೆ ಹುಡುಗಿ ನೋಡುವ ಧೈರ್ಯ ಮಾಡೋದು ಕಷ್ಟ. ಒಂದ್ವೇಳೆ ಧೈರ್ಯ ಮಾಡಿ ನೋಡಿದ್ರೂ ನಂತ್ರ ಹುಡುಗ್ರು ಸುಳ್ಳು ಹೇಳ್ತಾರೆ. ಆಕೆಯನ್ನು ಏಕೆ ನೋಡ್ದೆ ಎಂದು ಸಂಗಾತಿ ಪ್ರಶ್ನೆ ಮಾಡಿದ್ರೆ, ನಾನು ಆಕೆಯನ್ನು ನೋಡಿಲ್ಲ. ಏನೋ ಆಲೋಚನೆ ಮಾಡ್ತಾ ಇದ್ದೆ ಎನ್ನುವ ಸುಳ್ಳು ಹೇಳ್ತಾರೆ.

ಕೊಲೀಗ್ ಜೊತೆ ರೊಮ್ಯಾನ್ಸ್‌ನಲ್ಲಿದ್ದಾಗ ಹೆಂಡತಿ ನೋಡಿದ್ದಾಳೆ, ಏನ್ಮಾಡಲಿ?

ನನಗೆ ದುಷ್ಚಟವಿಲ್ಲ : ನನಗೆ ಯಾವುದೇ ದುಷ್ಚಟವಿಲ್ಲ ಎಂಬುದು ಪುರುಷರ ಸಾಮಾನ್ಯ ಸುಳ್ಳು. ಧೂಮಪಾನ ಮಾಡೋದನ್ನು ಸಂಗಾತಿ ವಿರೋಧಿಸಿದ್ರೆ ಆಕೆ ಭೇಟಿಗೆ ಮುನ್ನವೇ ಧೂಮಪಾನ ಮಾಡಿ ಮುಗಿಸಿರ್ತಾರೆ ಹುಡುಗ್ರು. ನಂತ್ರ ಸಿಗರೇಟ್ ವಾಸನೆ ಬರ್ತಿದೆ ಅಂತಾ ಹುಡುಗಿ ಹೇಳಿದ್ರೆ, ನಾನು ಸಿಗರೇಟ್ ಬಿಟ್ಟು ತುಂಬಾ ದಿನವಾಯ್ತು. ನನ್ನ ಮುಂದೆ ವ್ಯಕ್ತಿಯೊಬ್ಬ ಧೂಮಪಾನ ಮಾಡ್ತಿದ್ದ. ಆ ಹೊಗೆ ನನ್ನ ಅಂಗಿಗೆ ಅಂಟಿಕೊಂಡಿದೆ ಎನ್ನುತ್ತಾರೆ ಹುಡುಗ್ರು.

ನಾನು ನಿನ್ನ ಬಗ್ಗೆ ಮಾತ್ರ ಆಲೋಚನೆ ಮಾಡ್ತೇನೆ : ಸಂಗಾತಿಯನ್ನು ಸಂತೋಷಪಡಿಸಲು ಹಾಗೆ ಆಕೆ ದುಃಖದಲ್ಲಿದ್ದರೆ ಅದರಿಂದ ಹೊರ ಬರುವಂತೆ ಮಾಡಲು, ನಾನು ನಿನ್ನ ಬಗ್ಗೆ ಮಾತ್ರ ಆಲೋಚನೆ ಮಾಡ್ತೇನೆಂದು ಪುರುಷರು ಸುಳ್ಳು ಹೇಳುವುದಿದೆ.

ಹಣದ ವಿಷ್ಯಕ್ಕೆ ಸುಳ್ಳು : ಹಣಕಾಸಿನ ವಿಷ್ಯವನ್ನು ಪುರುಷರು ಮುಚ್ಚಿಡ್ತಾರೆ. ಸಂಗಾತಿಗೆ ಇದ್ರ ಬಗ್ಗೆ ತಿಳಿಸೋದಿಲ್ಲ. ಹಣ ಎಷ್ಟು ಖರ್ಚಾಗಿದೆ ಎನ್ನುವದರಿಂದ ಹಿಡಿದು ಹಣ ಎಷ್ಟು ಸಂಪಾದನೆ ಮಾಡಿದ್ದೇವೆ ಎನ್ನುವವರೆಗೂ ಅವರು ಸುಳ್ಳು ಹೇಳ್ತಾರೆ.

50ರ ನಂತರವೂ ಅದ್ಭುತ 'ಸೆಕ್ಸ್ ಲೈಫ್' ನಿಮ್ಮದಾಗಲು ಇಲ್ಲಿವೆ ಸೂಪರ್ ಟಿಪ್ಸ್

ಮದುವೆಗಿಂದ ಮುನ್ನ ಸೆಕ್ಸ್ : ಮದುವೆಗೆ ಮುನ್ನ ಸೆಕ್ಸ್ ಇಲ್ವೇ ಇಲ್ಲ ಎನ್ನುವ ಹುಡುಗರು, ಹುಡುಗಿ ಮದುವೆಗೆ ಒಪ್ಪಿ ಹತ್ತಿರವಾಗ್ತಿದ್ದಂತೆ ತಮ್ಮ ಮಾತು ಬದಲಿಸ್ತಾರೆ.

ನನ್ನ ಮೊದಲ ಪ್ರೀತಿ ನೀನು : ಈ ಹಿಂದೆ ಎಷ್ಟೇ ಹುಡುಗಿಯರನ್ನು ಪ್ರೀತಿ ಮಾಡಿರಲಿ ಹೊಸ ಹುಡುಗಿ ಸಿಕ್ಕಾಗ ನೀನೇ ಮೊದಲು ಎಂಬ ಸುಳ್ಳನ್ನು ಹುಡುಗ್ರು ಹೇಳ್ತಾರೆ.
 

Follow Us:
Download App:
  • android
  • ios