Asianet Suvarna News Asianet Suvarna News

Relationship Tips : ಬೆಡ್ ರೂಮಿನಲ್ಲಿದೆ ದಂಪತಿಯನ್ನು ಒಂದು ಮಾಡುವ ಗುಟ್ಟು

ಬೆಡ್ ರೂಮ್ (Bedroom) ಎಂದ ತಕ್ಷಣ ಸಂಗಾತಿ (Partner) ಒಂದಾಗುವ ಜಾಗ ಎಂಬುದು ಎಲ್ಲರಿಗೂ ಗೊತ್ತು. ಬರೀ ಶಾರೀರಿಕ ಸಂಬಂಧಕ್ಕೆ ಮಾತ್ರ ಬೆಡ್ ರೂಮ್ ಸೀಮಿತವಲ್ಲ. ಬೆಡ್ ರೂಮಿನಲ್ಲಿ ದಂಪತಿ (Couple) ಅನ್ಯೋನ್ಯತೆ ಹೆಚ್ಚಾಗ್ಬೇಕೆಂದ್ರೆ ಇನ್ನೂ ಅನೇಕ ಕೆಲಸ ಮಾಡ್ಬೇಕು. 
 

Things Besides Intimacy Married Couple Can Do In Bed
Author
Bangalore, First Published May 20, 2022, 3:48 PM IST

ಬೆಡ್ ರೂಮ್ (Bedroom), ದಂಪತಿ (Couple) ಪರಸ್ಪರ ಹತ್ತಿರದಿಂದ ಅರ್ಥ ಮಾಡಿಕೊಳ್ಳಲು ಇರುವ  ಸ್ಥಳವಾಗಿದೆ. ಮದುವೆ (Marriage), ಜೀವನದ ದೊಡ್ಡ ಬದಲಾವಣೆ. ಇಬ್ಬರು ಒಂದಾಗಿ ಜೀವನ ಪರ್ಯಂತ ಬಾಳಬೇಕು. ಇಬ್ಬರು ತಮ್ಮ ಜೀವನದ ಸಂತೋಷ ಮತ್ತು ದುಃಖಗಳನ್ನು ಹೊರತುಪಡಿಸಿ ಅನೇಕ ಅಮೂಲ್ಯ ಕ್ಷಣಗಳನ್ನು ಒಟ್ಟಿಗೆ ಕಳೆಯುತ್ತಾರೆ. ವಿವಾಹಿತ ದಂಪತಿ  ತಮ್ಮ ಮಲಗುವ ಕ್ಷಣಗಳನ್ನು ವಿಶೇಷವಾಗಿಸಲು ಅನೇಕ ಪ್ರಯತ್ನಗಳನ್ನು ಮಾಡ್ತಾರೆ. ಸಂಬಂಧದಲ್ಲಿ ಅನ್ಯೋನ್ಯತೆ ಅತ್ಯವಶ್ಯಕವಾಗಿದೆ. ಸಂಬಂಧವನ್ನು ಬಲಪಡಿಸುವ ಮತ್ತು ಸಂಗಾತಿಯನ್ನು ಪರಸ್ಪರ ಹತ್ತಿರ ತರುವ ಹಲವು ವಿಷಯಗಳಿವೆ.  ದಂಪತಿ  ತಮ್ಮ ಮಲಗುವ ಕೋಣೆಯಲ್ಲಿ ಅನ್ಯೋನ್ಯತೆಯ ಹೊರತಾಗಿ ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು. ಮಲಗುವ ಕೋಣೆಯಲ್ಲಿ ದಂಪತಿ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಭಿನ್ನಾಭಿಪ್ರಾಯ : ಮಲಗುವ ಕೋಣೆ ನಿಮ್ಮ ಸುರಕ್ಷಿತ ಸ್ಥಳವಾಗಿದೆ. ಬೆಡ್ ರೂಮಿನಲ್ಲಿ ಪ್ರೀತಿ ಮಾತ್ರವಲ್ಲ ದಂಪತಿ ಭಿನ್ನಾಭಿಪ್ರಾಯವನ್ನು ತೋರಿಸಲು ಕೂಡ ಇದು ಸೂಕ್ತ ಸ್ಥಳವಾಗಿದೆ. ಕೆಲವೊಮ್ಮೆ ನೀವು ನಿಮ್ಮ ಅತ್ತೆ-ಮಾವಂದಿರು ಅಥವಾ ಮಕ್ಕಳೊಂದಿಗೆ ಹಂಚಿಕೊಳ್ಳಲು ಬಯಸದ ವಿಷಯಗಳಿರುತ್ತವೆ. ಮಲಗುವ ಕೋಣೆ ನಿಮ್ಮ ವೈಯಕ್ತಿಕ ಸ್ಥಳವಾಗಿದೆ. ಅಲ್ಲಿ ನೀವು ಪರಸ್ಪರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಅಭಿಪ್ರಾಯಗಳನ್ನು ಸಂಗಾತಿ ಜೊತೆ ಹಂಚಿಕೊಳ್ಳಬಹುದು. ಮನೆಯ ಸಮಸ್ಯೆಯಾಗಿರಬಹುದು ಅಥವಾ ನಿಮ್ಮಿಬ್ಬರ ವೈಯಕ್ತಿಕ ಸಮಸ್ಯೆಗಳೂ ಆಗಿರಬಹುದು.  ಅದನ್ನು ನೀವು ಹಂಚಿಕೊಳ್ಳುವ ಮೂಲಕ ನಿಮ್ಮಿಬ್ಬರ ಸಮಸ್ಯೆಯನ್ನು ಕಡಿಮೆ ಮಾಡಬಹುದು. 

Sex ವೇಳೆ ಯೋನಿಯಲ್ಲಿ ಶುಷ್ಕತೆ, ಸೈಡ್‌ ಎಫೆಕ್ಟ್ ಇಲ್ಲದೇ ನಿವಾರಿಸೋದು ಹೇಗೆ?

ಒಟ್ಟಿಗೆ ಆಟವಾಡಿ ಎಂಜಾಯ್ ಮಾಡಿ : ಇಡೀ ದಿನ ಇಬ್ಬರೂ ಒಂದಲ್ಲ ಒಂದು ಕೆಲಸದಲ್ಲಿರುತ್ತಾರೆ. ಕೆಲಸದಿಂದಾಗಿ ಸುಸ್ತು ಅನಿವಾರ್ಯ. ಇಬ್ಬರು ಸಮಯ ಕಳೆಯಲು ಅವಕಾಶವಿರುವದಿಲ್ಲ. ಬೆಡ್ ರೂಮ್ ಇಬ್ಬರು ಒಟ್ಟಿಗೆ ಸಮಯ ಕಳೆಯಲು ಅವಕಾಶ ನೀಡುತ್ತದೆ. ಬೆಡ್ ರೂಮಿನಲ್ಲಿ ಆಟವಾಡಿ ಇಬ್ಬರೂ ಎಂಜಾಯ್ ಮಾಡ್ಬಹುದು. ಮಲ್ಟಿ-ಪ್ಲೇಯರ್ ವೀಡಿಯೋ ಗೇಮ್‌ಗಳಿಂದ ಸ್ಕ್ರ್ಯಾಬಲ್‌ವರೆಗೆ ಅಲ್ಲದೆ ಒಳಾಂಗಣ ಆಟಗಳವರೆಗೆ ನಿಮಗೆ ಇಷ್ಟವಾದ ಆಟವನ್ನು ಆಡಬಹುದು. ಇದು ನಿಮ್ಮ ಸಂಬಂಧವನ್ನು ವಿನೋದ ಮತ್ತು ಒತ್ತಡ ಮುಕ್ತವಾಗಿರಿಸುತ್ತದೆ.

ಪರಸ್ಪರ ಒಬ್ಬರಿಗೊಬ್ಬರು ಮಸಾಜ್ ಮಾಡಿ : ಮಲಗುವ ಕೋಣೆ ಅಂದ ತಕ್ಷಣ ನಾವು ಸೆಕ್ಸ್ ಎಂದುಕೊಳ್ತೇವೆ. ಶಾರೀರಿಕ ಸಂಬಂಧಕ್ಕೆ ಮಾತ್ರ ಇದು ಸೀಮಿತವಾಗಿರಬಾರದು. ದಂಪತಿ ಪರಸ್ಪರ ಮಸಾಜ್ ಮಾಡಿಕೊಳ್ಳಬಹುದು. ಇದು ರೋಮ್ಯಾಂಟಿಕ್ ಆಗಿರುತ್ತದೆ. ಹಾಗೆ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಅದೇ ಸಮಯದಲ್ಲಿ ಇದು ದಿನದ ಆಯಾಸದಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ನಿಮ್ಮ ಸಂಗಾತಿ ಮಾಡುವ ಬಿಸಿ ಎಣ್ಣೆ ಮಸಾಜ್‌ನಿಂದ ರಿಲ್ಯಾಕ್ಸ್ ಆಗುವ ಜೊತೆಗೆ ಮೂಡ್ ಫ್ರೆಶ್ ಆಗುತ್ತದೆ.

Child Care : ಓದಲು ಆಸಕ್ತಿ ತೋರದ ಮಕ್ಕಳ ಪಾಲಕರಿಗೆ ಇಲ್ಲಿದೆ ಟಿಪ್ಸ್

ನಿಮ್ಮ ಕಲ್ಪನೆಗೆ ಧ್ವನಿ ನೀಡಿ : ದಂಪತಿ ಮಧ್ಯೆ ಮಾತು ಮುಖ್ಯ. ಇಬ್ಬರು ತಮ್ಮ ಕಲ್ಪನೆಗೆ ಬಣ್ಣ ನೀಡಲು ಇದು ಒಳ್ಳೆಯ ಸ್ಥಳ. ಪರಸ್ಪರ ಒಬ್ಬರನೊಬ್ಬರು ಮೆಚ್ಚಿಸಲು ಮೋಜಿನ ಮಾರ್ಗಗಳನ್ನು ಚರ್ಚಿಸಬಹುದು. ಅನೇಕ ಬಾರಿ ಮನಸ್ಸಿನಲ್ಲಿರುವ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವೇ ಆಗಿರುವುದಿಲ್ಲ. ಬೆಡ್ ರೂಮಿನಲ್ಲಿ ಇಬ್ಬರು ಕುಳಿತು ಇದ್ರ ಬಗ್ಗೆ ಚರ್ಚೆ ಮಾಡ್ಬಹುದು. ಅದನ್ನು ಜಾರಿಗೆ ತರಲು ತಯಾರಿ ತಡೆಸಬಹುದು. ಪರಸ್ಪರ ಒಬ್ಬೊಬ್ಬರ ಆಸೆ ತಿಳಿದಾಗ ಇಬ್ಬರ ಜೀವನ ಮತ್ತಷ್ಟು ಸುಖಕರವಾಗಿರುತ್ತದೆ.

ಪರಸ್ಪರ ದಿನದ ಬಗ್ಗೆ ಚರ್ಚೆ ನಡೆಸಿ : ಸಾಮಾನ್ಯವಾಗಿ ಪತಿ ಕಚೇರಿಗೆ ಹೋದ್ರೆ ಪತ್ನಿ ಮನೆಯಲ್ಲಿರುತ್ತಾಳೆ. ಅನೇಕ ಬಾರಿ ಪತಿ – ಪತ್ನಿ ಇಬ್ಬರೂ ಕೆಲಸಕ್ಕೆ ಹೋಗಿರುತ್ತಾರೆ. ಮನೆಗೆ ಬಂದ್ಮೇಲೆ ಬೇರೆ ಕೆಲಸದಲ್ಲಿ ಇಬ್ಬರೂ ಬ್ಯೂಸಿಯಾಗ್ತಾರೆ. ಆದ್ರೆ ಈ ಎಲ್ಲದರ ಮಧ್ಯೆಯೇ ಬೆಡ್ ರೂಮಿಗೆ ಬರ್ತಿದ್ದಂತೆ ಈ ದಿನ ಹೇಗೆ ಕಳೆಯಿತು ಎಂಬುದನ್ನು ಹಂಚಿಕೊಳ್ಳಿ. ಖರ್ಚು – ವೆಚ್ಚದ ಬಗ್ಗೆ ಮಾತನಾಡಿ. ಮುಂದಿನ ಉಳಿತಾಯದ ಯೋಜನೆಗಳ ಬಗ್ಗೆ ಪ್ಲಾನ್ ಮಾಡಿ.  

Follow Us:
Download App:
  • android
  • ios