Asianet Suvarna News Asianet Suvarna News

Child Care : ಓದಲು ಆಸಕ್ತಿ ತೋರದ ಮಕ್ಕಳ ಪಾಲಕರಿಗೆ ಇಲ್ಲಿದೆ ಟಿಪ್ಸ್

ಕೈನ ಎಲ್ಲ ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಹಾಗೆ ಎಲ್ಲ ಮಕ್ಕಳು ಓದಿನಲ್ಲಿ ಚುರುಕಿರುವುದಿಲ್ಲ. ಕೆಲ ಮಕ್ಕಳು ಅತಿ ಬುದ್ಧಿವಂತರಾಗಿದ್ದರೂ ಓದಿನಲ್ಲಿ ಆಸಕ್ತಿ ತೋರಿಸುವುದಿಲ್ಲ. ಮಕ್ಕಳನ್ನು ಓದಿಸೋದು ದೊಡ್ಡ ತಲೆನೋವು ಎನ್ನುವ ಪಾಲಕರು ಕೆಲ ಟ್ರಿಕ್ ಬಳಸ್ಬಹುದು.
 

These Tricks Increase The Interest Of Child In Study
Author
Bangalore, First Published May 19, 2022, 7:41 PM IST

ಪ್ರತಿ ಮಗು (Child) ವೂ ಒಂದೇ ರೀತಿ ಇರೋದಿಲ್ಲ. ಕೆಲವು ಮಕ್ಕಳು ತುಂಬಾ ಚುರುಕಾಗಿರುತ್ತಾರೆ ಮತ್ತು ಕೆಲವರು ತುಂಬಾ ಬುದ್ಧಿವಂತರಾಗಿರ್ತಾರೆ. ಮತ್ತೆ ಕೆಲವರು ಎಲ್ಲ ಕೆಲಸ (Work) ದಲ್ಲೂ ಹಿಂದಿರುತ್ತಾರೆ. ಅನೇಕ ಮಕ್ಕಳು ತಮ್ಮ ಹೆತ್ತವರಿಂದ ಹೇಳಿಸಿಕೊಳ್ಳದೆ ಅಧ್ಯಯನ (Study)ಕ್ಕೆ ಪ್ರಾಮುಖ್ಯತೆ ನೀಡ್ತಾರೆ. ವಿದ್ಯಾಭ್ಯಾಸದಲ್ಲಿ ಮುಂದಿರಬೇಕೆಂಬ ಕಾರಣಕ್ಕೆ ಪ್ರತಿ ದಿನ ಓದಿ, ಮುಂದೆ ಬರ್ತಾರೆ. ಅಂಥ ಮಕ್ಕಳಿಗೆ ಪೋಷಕರು ಓದುವಂತೆ ಹೆಚ್ಚು ಒತ್ತಾಯ ಮಾಡ್ಬೇಕಾಗಿಲ್ಲ. ಆದರೆ  ಕೆಲ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ಚಿಂತಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿಸುವುದು ಕಷ್ಟವೇನಲ್ಲ. ಪಾಲಕರು ಕೆಲ ಟಿಪ್ಸ್ ಬಳಸಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸಬಹುದು. ಇಂದು ನಾವು ಮಕ್ಕಳಲ್ಲಿ ಹೇಗೆ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಬೇಕೆನ್ನುವ ಬಗ್ಗೆ ಹೇಳ್ತೇವೆ.

ಮಕ್ಕಳಲ್ಲಿ ಓದಿನ ಬಗ್ಗೆ ಹೀಗೆ ಆಸಕ್ತಿ ಹೆಚ್ಚಿಸಿ :

ಮಕ್ಕಳೊಂದಿಗೆ ಕುಳಿತುಕೊಳ್ಳಿ : ಮಕ್ಕಳ ಜೊತೆ ಪಾಲಕರು ಬೆರೆಯುವುದು ಬಹಳ ಮುಖ್ಯ. ಮಕ್ಕಳು ಓದುವ ಸಂದರ್ಭದಲ್ಲಿ ಪಾಲಕರು ಅವರ ಜೊತೆ ಕುಳಿತುಕೊಳ್ಳಬೇಕು. ಪಕ್ಕದಲ್ಲಿ ಕುಳಿತುಕೊಂಡು ಅವರಿಗೆ ಅಧ್ಯಯನದ ಬಗ್ಗೆ ಹೇಳುತ್ತಲೇ ಇರಬೇಕು. ನೀವೇ ಅವರಿಗೆ ಕಲಿಸಲು ಪ್ರಯತ್ನಿಸಬೇಕು. ಇದರಿಂದ ಮಗುವಿಗೆ ಓದುವ ಆಸಕ್ತಿ ಇನ್ನಷ್ಟು ಹೆಚ್ಚುತ್ತದೆ. ಆಗಾಗ ಅವರ ನೆಚ್ಚಿನ ವಿಷಯದ ಬಗ್ಗೆ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಕೇಳುತ್ತಿರಬೇಕು. ನೀವು ಅವರ ಜೊತೆ ಕುಳಿತಾಗ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಶುರುವಾಗುತ್ತದೆ. 

ಸಂಖ್ಯೆಗೆ ಆದ್ಯತೆ ನೀಡ್ಬೇಡಿ : ಮಕ್ಕಳು ಎ ಪ್ಲಸ್ ತೆಗೆದುಕೊಳ್ಳಬೇಕು, ನೂರಕ್ಕೆ ನೂರು ಅಂಕ ತೆಗೆದುಕೊಳ್ಳಬೇಕೆಂದು ಪಾಲಕರು ಬಯಸ್ತಾರೆ. ಸದಾ ಮಕ್ಕಳಿಗೆ ಈ ಸಂಖ್ಯೆ ಬಗ್ಗೆಯೇ ಹೇಳ್ತಿರುತ್ತಾರೆ. ನೀನು ಮೊದಲ ರ್ಯಾಂಕ್ ಬರಬೇಕು, ನೀವು ಎ ಪ್ಲಸ್ ತೆಗೆದುಕೊಳ್ಳಬೇಕು ಹೀಗೆ ಅವರಿಗೆ ವಿದ್ಯಾಭ್ಯಾಸ ಹೇಳಿ ಕೊಡುವಾಗ ಸಂಖ್ಯೆಗೆ ಹೆಚ್ಚು ಆದ್ಯತೆ ನೀಡ್ತಾರೆ. ಆದ್ರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಮಕ್ಕಳಿಗೆ ಸಂಖ್ಯೆಗಳನ್ನು ಹೇಳುವ ಬದಲು, ಹೊಸ ವಿಷಯಗಳನ್ನು ಕಲಿಸಲು ಒತ್ತು ನೀಡಿ. ಸಂಖ್ಯೆಗಳು ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಹೊಸ ವಿಷ್ಯಗಳು ಮಗುವಿನಲ್ಲಿ ಹೊಸ ಆಸಕ್ತಿ ಹುಟ್ಟಿಸುತ್ತದೆ. ಆಗ ಮಕ್ಕಳು ತಾವಾಗಿಯೇ ಕಲಿಕೆ ಬಗ್ಗೆ ಆಸಕ್ತಿ ತೋರಿಸುತ್ತಾರೆ.

ಮಕ್ಕಳಿಗೆ ಇಂಥಾ ಮ್ಯಾನರ್ಸ್ ಹೇಳಿ ಕೊಡದಿದ್ದರೆ ಹೋದಲ್ಲಿ ಅವಮಾನ ಆಗೋದು ಖಂಡಿತ !

ಅಧ್ಯಯನ ವೇಳಾಪಟ್ಟಿಯನ್ನು ತಯಾರಿಸಿ : ನಿಮ್ಮ ಮಗುವಿಗೆ ಓದಲು ಸಮಯವನ್ನು ನಿಗದಿಪಡಿಸಿ. ಇದರಿಂದ ಮಗು ತನ್ನ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತದೆ. ಇದು ಮಗುವಿನ ಸ್ವಂತ ಓದುವ ಬಯಕೆಯನ್ನು ಜಾಗೃತಗೊಳಿಸುತ್ತದೆ. ಮಕ್ಕಳ ಅಧ್ಯಯನ ವೇಳಾಪಟ್ಟಿಯ ಹೊರತಾಗಿ  ಅವರ ಆಹಾರ, ಪಾನೀಯ ಮತ್ತು ಆಟಕ್ಕೂ ನಿಗದಿತ ಸಮಯವನ್ನು ನಿಗದಿಪಡಿಸಬೇಕು. ಇದರಿಂದ ಮಕ್ಕಳಿಗೆ ಸಮಯದ ಮಹತ್ವದ ಅರಿವಾಗುತ್ತದೆ.

ಮಗುವಿನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಿ : ನೀವು ಮಗುವಿಗೆ ಕಲಿಸಿದಾಗಲೆಲ್ಲಾ, ಅವರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮಗು ಓದುವ ಮೂಲಕ ಅಥವಾ ಬರೆಯುವ ಮೂಲಕ ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ನೀವು ನೋಡುತ್ತೀರಿ. ಯಾವ ವಿಧಾನದಲ್ಲಿ ಮಗು ಹೆಚ್ಚು ಕಲಿಯುತ್ತದೆ ಎಂಬುದನ್ನು ತಿಳಿದು, ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಸುತ್ತೀರಿ. 

ಮಗು ನಡೆಯುವುದಕ್ಕೂ ಮೊದಲು ಅಂಬೆಗಾಲಿಡಬೇಕು, ಯಾಕೆ?

ಮಗುವನ್ನು ಪ್ರೇರೇಪಿಸಿ : ಮಗುವನ್ನು ಸದಾ ಪ್ರೇರೇಪಿಸಬೇಕು. ಮಗುವಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗದೆ ಹೋದಾಗಲೂ  ನೀವು ಅವರನ್ನು ನಿಂದಿಸಬೇಡಿ. ಉತ್ತಮ ಪ್ರದರ್ಶನ ನೀಡಲು ನೀವು ಅವನನ್ನು ಪ್ರೇರೇಪಿಸಬೇಕು. ಇದು ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ. ಆಗ ಮಕ್ಕಳು ಅಧ್ಯನಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇದರಿಂದ ಅವರ ಕಲಿಕೆ ವೇಗ ಹೆಚ್ಚಾಗುತ್ತದೆ.   

Follow Us:
Download App:
  • android
  • ios