Sex ವೇಳೆ ಯೋನಿಯಲ್ಲಿ ಶುಷ್ಕತೆ, ಸೈಡ್ ಎಫೆಕ್ಟ್ ಇಲ್ಲದೇ ನಿವಾರಿಸೋದು ಹೇಗೆ?
ಲೈಂಗಿಕತೆ (Sex) ವೇಳೆ ಯೋನಿ (Vagina)ಯಲ್ಲಿ ಶುಷ್ಕತೆ ಉಂಟಾದರೆ ಉರಿ, ನೋವು (Pain) ಇತ್ಯಾದಿ ಕಾಣಿಸಿಕೊಳ್ಳಬಹುದು. ಇದನ್ನು ಸೈಡ್ ಎಫೆಕ್ಟ್ (Side effect)ಗಳಿಲ್ಲದೇ ನಿವಾರಿಸೋದು ಹೇಗೆ?
ಸೆಕ್ಸ್ (Sex)ವೇಳೆಗೆ ಎಲ್ಲವೂ ಸರಿಯಾಗಿದ್ದರೆ ಯೋನಿ(vagina)ಯಲ್ಲಿ ಲ್ಯೂಬ್ರಿಕೆಂಟ್(lubricant) ಅಥವಾ ತೇವ ಉಂಟಾಗುತ್ತದೆ. ಹೀಗಾದರೆ ಸೆಕ್ಸ್ ವೇಳೆ ಯಾವುದೇ ಕಿರಿಕಿರಿ, ಉರಿ, ನೋವು ಉಂಟಾಗೋದಿಲ್ಲ. ಲೈಂಗಿಕತೆ(Sex)ಯಲ್ಲಿ ಇಬ್ಬರೂ ಸರಾಗವಾಗಿ ಪಾಲ್ಗೊಳ್ಳಲು ಇದು ಸಹಕಾರಿ. ಜೊತೆಗೆ ಲೈಂಗಿಕ ತೃಪ್ತಿಯೂ(satisfaction) ಸಿಗುತ್ತದೆ. ಯೋನಿ ನೈಸರ್ಗಿಕವಾಗಿಯೇ ತೇವಾಂಶವನ್ನು ಹೊಂದಿರುವ ಅಂಗ. ಇದು ಲೈಂಗಿಕ ಚಟುವಟಿಕೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ ಯೋನಿಯು ಶುಷ್ಕವಾದಾಗ ಲೈಂಗಿಕ ಕ್ರಿಯೆಯ ಸಮಯದಲ್ಲಿ ಉರಿ, ನೋವು(pain) ಉಂಟಾಗಬಹುದು, ಇದನ್ನು ತಡೆಯುವುದಕ್ಕಾಗಿ ಹಾಗೂ ಕೃತಕವಾಗಿ ಯೋನಿಯನ್ನು ತೇವಗೊಳಿಸಲು ಕೃತಕ ಲ್ಯೂಬ್ರಿಕೆಂಟ್(Aartificial lubricant) ಬಳಸುತ್ತಾರೆ.
ಆದರೆ ಇದೆಷ್ಟು ಸೇಫ್, ಇದರಿಂದ ಏನೆಲ್ಲ ಸೈಡ್ ಎಫೆಕ್ಟ್‌ಗಳಿವೆ ಅನ್ನೋದರ ಬಗ್ಗೆ ಹೆಚ್ಚಿನವರು ಯೋಚಿಸೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಲ್ಯೂಬ್ರಿಕೆಂಟ್ ಅನಿವಾರ್ಯವಾಗಿ ಬಳಸಬೇಕಾದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಅದನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವರಂತೂ ಅಗತ್ಯವಿಲ್ಲದಿದ್ದರೂ ಬಳಸಿ, ಸಮಸ್ಯೆಯನ್ನು ತಂದುಕೊಳ್ಳುತ್ತಾರೆ.
ವಾಕಿಂಗ್ ಮಾಡ್ತಿರೇನೋ ನಿಜ, ಆದ್ರೆ ಸರಿಯಾದ ರೀತಿಯಲ್ಲಿ ಮಾಡ್ತಿದ್ದೀರಾ ? ಇಲ್ಲಾಂದ್ರೆ ನೋ ಯೂಸ್ !
ಸಾಮಾನ್ಯವಾಗಿ ಲೈಂಗಿಕ ಪ್ರಚೋದನೆಯಾದಾಗ ಯೋನಿಯು ಹೆಚ್ಚುವರಿ ದ್ರವವನ್ನು ಸ್ರವಿಸುತ್ತದೆ. ಇದರಿಂದ ಯೋನಿಯಲ್ಲಿ ಘರ್ಷಣೆಯನ್ನು ಕಡಿಮೆಯಾಗುತ್ತದೆ. ಕೆಲವೊಮ್ಮೆ ಯೋನಿ ಶುಷ್ಕತೆ ಅಥವಾ ಡ್ರೈನೆಸ್(dryness) ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಹಲವು. ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದೇ ಇರಬಹುದು, ಈಸ್ಟ್ರೋಜಿನ್ ಪ್ರಮಾಣ ಕಡಿಮೆ ಇದ್ದಾಗ ಹೀಗಾಗಬಹುದು. ಮೆನೊಪಾಸ್ ಬಳಿಕ ಅಂದರೆ ಮುಟ್ಟು ನಿಂತುಹೋದ ಬಳಿಕ ಈ ಸಮಸ್ಯೆ ಬರಬಹುದು. ಕೆಲವೊಂದು ಔಷಧಗಳ ಸೇವನೆ (medication) , ಕೀಮೋ ಥೆರಪಿ (chemo therapy), ಆರೋಗ್ಯ ಸಮಸ್ಯೆ, ಧೂಮಪಾನ(smoking) ಇತ್ಯಾದಿ ಕಾರಣ ಆಗಿರಬಹುದು. ಇಂಥಾ ವೇಳೆಯಲ್ಲಿ ಕೃತಕ ಲೂಬ್ರಿಕೆಂಟ್ ಉಪಯೋಗಕ್ಕೆ ಬರುತ್ತದೆ. ಇದು ಯೋನಿಯ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಇವು ಜೆಲ್(gel) ರೂಪದಲ್ಲಿ ಸಾಮಾನ್ಯವಾಗಿ ಬರುತ್ತವೆ. ಬೇರೆ ಬೇರೆ ಸುವಾಸನೆಯಲ್ಲಿರುತ್ತವೆ.
ಕೆಲವರಿಗೆ ಈ ಲ್ಯೂಬ್ರಿಕೆಂಟ್ ಬಳಕೆಯಿಂದ ಸಮಸ್ಯೆ ಆಗಬಹುದು. ಗ್ಲಿಸರಿನ್(glycerin) ಯುಕ್ತವಾದ ವಾಟರ್ ಕಂಟೆಂಟ್ ಇರುವ ಲ್ಯೂಬ್ರಿಕೆಂಟ್‌ಗಳು ಜನಪ್ರಿಯವಾಗಿವೆ. ಆದರೆ ಚರ್ಮದ ಸೋಂಕು, ಬ್ಯಾಕ್ಟೀರಿಯಾ ಸೋಂಕು ಇರುವವರು ಗ್ಲಿಸರಿನ್ ಇಲ್ಲದ ಲ್ಯೂಬ್ರಿಕೆಂಟ್ ಬಳಸೋದು ಉತ್ತಮ. ಜೊತೆಗೆ ಗ್ಲಿಸರಿನ್ ಇಲ್ಲದ ಲ್ಯೂಬ್ರಿಕೆಂಟ್‌ಗಳು ಅಪ್ಲೈ(apply) ಮಾಡಿ ಕಾಂಡೋಮ್ ಮೂಲಕ ಲೈಂಗಿಕ ಕ್ರಿಯೆ ನಡೆಸಿದರೂ ಸಮಸ್ಯೆ ಆಗಲ್ಲ. ಹೆಚ್ಚು ಸಮಯ ಇದು ಯೋನಿಯನ್ನು ತೇವವಾಗಿರಿಸುತ್ತದೆ.
ರಾತ್ರಿ ಅನ್ನ ತಿನ್ನೋದ್ರಿಂದ ಇಷ್ಟೆಲ್ಲಾ ತೊಂದ್ರೆಯಾಗುತ್ತಂತೆ ನೋಡಿ !
ಜೊತೆಗೆ ಸಿಲಿಕೋನ್ ಆಧಾರಿತ ಲೂಬ್ರಿಕೆಂಟ್‌ಗಳು ನೀರು ಆಧಾರಿತ ಲೂಬ್ರಿಕಂಟ್‌ಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ, ಇದು ತೀವ್ರವಾದ ಯೋನಿ ಶುಷ್ಕತೆ ಅಥವಾ ಲೈಂಗಿಕ ಸಮಯದಲ್ಲಿ ನೋವನ್ನು ಹೊಂದಿರುವ ಮಹಿಳೆಯರಿಗೆ ಉತ್ತಮ ಆಯ್ಕೆ. ಆದರೆ ಇದರಲ್ಲಿ ಜಿಡ್ಡಿನ ಅಂಶ ಹೆಚ್ಚಿರುವ ಕಾರಣ ಕಾಂಡೋಮ್(condom) ಹಾಕಿದಾಗ ಸುರಕ್ಷಿತ ಲೈಂಗಿಕತೆ ಸಾಧ್ಯವಾಗದೇ ಹೋಗಬಹುದು. ಇದರ ಜೊತೆಗೆ ಎಣ್ಣೆಯಂಥಾ ವಸ್ತುಗಳು ಲ್ಯೂಬ್ರಿಕೆಂಟ್‌ಗಳಂತೆ ಕೆಲಸ ಮಾಡುತ್ತವೆ. ಯೋನಿಯಲ್ಲಿ ತೇವಾಂಶ ಉಳಿಯಲು ಸಹಕಾರಿಯಾಗುವ ಮಾಯಿಶ್ಚರೈಸರ್‌ಗಳೂ(Moisturaisers) ಇವೆ. ಇವು ದೀರ್ಘಕಾಲ ಕಾರ್ಯನಿರ್ವಹಿಸುವ ಲೂಬ್ರಿಕಂಟ್‌ಗಳಾಗಿವೆ.ಇ
ದು ದೀರ್ಘಕಾಲದ ಶುಷ್ಕತೆಗೆ ಸಹಾಯ ಮಾಡುತ್ತದೆ. ಅವುಗಳ ಪರಿಣಾಮವು ಸಾಮಾನ್ಯವಾಗಿ ಹಲವಾರು ದಿನಗಳವರೆಗೆ ಇರುತ್ತದೆ. ತೀವ್ರವಾದ ಯೋನಿ ಶುಷ್ಕತೆಯನ್ನು ಅನುಭವಿಸುವ ಜನರಿಗೆ ಈ ಉತ್ಪನ್ನ ಉತ್ತಮ ಆಯ್ಕೆಯಾಗಿದೆ, ಲೈಂಗಿಕತೆಯನ್ನು ಹೊಂದಿರದಿದ್ದರೂ ಸಹ. ಈ ಮಾಯಿಶ್ಚರೈಸರ್‌ಗಳು ಯೋನಿ ಲೂಬ್ರಿಕಂಟ್‌ಗಳ ಜೊತೆಗೆ ಬಳಸಲು ಸುರಕ್ಷಿತವಾಗಿದೆ.
Sleeplessness : ವಯಸ್ಸಾದವರಿಗೆ ನಿದ್ರೆ ಯಾಕೆ ಬರಲ್ಲ?
ಯೋನಿ ಶುಷ್ಕತೆಗಾಗಿ ಕೆಲವರು ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಇತರ ಭಾಗಗಳಿಗೆ ಪರಿಣಾಮಕಾರಿ ಮಾಯಿಶ್ಚರೈಸರ್ ಎಂದು ಅಧ್ಯಯನಗಳು ಸೂಚಿಸುತ್ತವೆ, ಆದರೆ ಲ್ಯಾಟೆಕ್ಸ್ ಕಾಂಡೋಮ್‌ನೊಂದಿಗೆ ತೆಂಗಿನ ಎಣ್ಣೆಯನ್ನು ಬಳಸಬೇಡಿ. ಯಾಕೆಂದರೆ ಇದು ಲ್ಯಾಟೆಕ್ಸ್ ಮತ್ತು ಕಾಂಡೋಮ್ ಹರಿಯಬಹುದು ಅಥವಾ ಜಾರಬಹುದು.
ಲ್ಯೂಬ್ರಿಕೆಂಟ್ ಕವರ್‌ನಲ್ಲಿರುವ ನಿರ್ದೇಶನದಂತೆ ಅದನ್ನು ಬಳಸಿ. ಆರಂಭದಲ್ಲಿ ಜಾಸ್ತಿ ಬಳಸೋದು ಬೇಡ. ಏನೂ ಸಮಸ್ಯೆ ಇಲ್ಲ ಅಂತ ಖಚಿತವಾದ ಮೇಲೆ ಎಷ್ಟು ಅವಶ್ಯವೋ ಅಷ್ಟು ಲ್ಯೂಬ್ರಿಕೆಂಟ್ ಬಳಸಬಹುದು. ಈ ಲ್ಯೂಬ್ರಿಕೆಂಟ್ ಬಳಕೆಯ ನಂತರ ಯೋನಿಯಲ್ಲಿ ತುರಿಕೆ, ಉರಿ ಉಂಟಾದರೆ ತಕ್ಷಣ ಶುದ್ಧ ನೀರಿನಿಂದ ಯೋನಿಯನ್ನು ಸ್ವಚ್ಛಗೊಳಿಸಿ. ಲ್ಯೂಬ್ರಿಕೆಂಟ್ ಬಳಕೆಯಿಂದ ಉಂಟಾದ ಅಲರ್ಜಿ ಸರಿ ಹೋಗದಿದ್ದರೆ ತಕ್ಷಣವೇ ಗೈನಕಾಲಜಿಸ್ಟ್ ಭೇಟಿ ಮಾಡೋದು ಅತ್ಯವಶ್ಯಕ. ಇದರಲ್ಲಿ ಸ್ಪರ್ಮ್ ಫ್ರೆಂಡ್ಲಿ ಲ್ಯೂಬ್ರಿಕೆಂಟ್‌ಗಳೂ ಸಿಗುತ್ತವೆ. ಗರ್ಭ ಧರಿಸಬೇಕೆಂದಿರುವವರು ಇದನ್ನು ಟ್ರೈ ಮಾಡಬಹುದು.
ಇಷ್ಟೆಲ್ಲ ವ್ಯವಸ್ಥೆ ಇದ್ದರೂ ವೈದ್ಯರ ಪ್ರಕಾರ ಸಹಜವಾಗಿ ಯೋನಿಯಲ್ಲಿ ತೇವಾಂಶ ಇದ್ದರೇ ಅದು ಆರೋಗ್ಯಕರ. ಲ್ಯೂಬ್ರಿಕೆಂಟ್ ತಾತ್ಕಾಲಿಕ ಪರಿಹಾರವಷ್ಟೇ. ಹೆಚ್ಚೆಚ್ಚು ನೀರು ಕುಡಿಯುವುದು, ನಿಯಮಿತ ವ್ಯಾಯಾಮ, ಫೋರ್ ಪ್ಲೇ ಅವಧಿ ಹೆಚ್ಚಿಸಿಕೊಳ್ಳೋದು ಇತ್ಯಾದಿಗಳು ಒಂದು ಹಂತದವರೆಗೆ ಲೈಂಗಿಕತೆ ವೇಳೆ ಯೋನಿ ಲ್ಯೂಬ್ರಿಕೆಂಟ್ ಆಗಿರುವಂತೆ ಮಾಡುತ್ತವೆ. ಈ ಬಗ್ಗೆ ಹೆಚ್ಚು ಗಮನಹರಿಸುವುದು ಉತ್ತಮ.