Asianet Suvarna News Asianet Suvarna News

ಸೆಕ್ಸ್ ವಿಚಾರದಲ್ಲಿ ಈ ಎಡವಟ್ಟು ಮಾಡಬೇಡಿ!

ದಾಂಪತ್ಯ ಬದುಕಿನ ನೆಮ್ಮದಿಗೆ ಸೆಕ್ಸ್ ಕೂಡ ಅಗತ್ಯ. ಪತಿ-ಪತ್ನಿ ನಡುವೆ ಹೊಂದಾಣಿಕೆ, ಪ್ರೀತಿ ಹಾಗೂ ವಿಶ್ವಾಸ ಮೂಡಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತೆ. ಆದ್ರೆ ಸೆಕ್ಸ್ ವಿಚಾರದಲ್ಲಿ ಗೊತ್ತೋ, ಗೊತ್ತಿಲ್ಲದೆಯೋ ಮಾಡುವ ಕೆಲವು ಎಡವಟ್ಟುಗಳು ಸಂಬಂಧ ಕೆಡಿಸುತ್ತವೆ.

These mistakes ruin your sex life
Author
Bangalore, First Published May 30, 2020, 5:39 PM IST

ವೈವಾಹಿಕ ಬದುಕು ಸುಂದರವಾಗಿರಬೇಕೆಂದ್ರೆ ಪತಿ-ಪತ್ನಿ ಮಧ್ಯೆ ಹೊಂದಾಣಿಕೆ, ಪ್ರೀತಿ, ಸಹಕಾರ, ಅರ್ಥೈಸಿಕೊಳ್ಳುವಿಕೆಯಂತಹ ಗುಣಗಳು ಇರೋದು ಅಗತ್ಯ. ಆದ್ರೆ ಇವೆಲ್ಲ ಇದ್ದೂ ಲೈಂಗಿಕ ಸಂಪರ್ಕ ಇರದಿದ್ರೆ? ಆ ಸಂಬಂಧದಲ್ಲೊಂದು ಅಪೂರ್ಣತೆ ಕಾಡೇ ಕಾಡುತ್ತೆ. ಸುಖಿ ದಾಂಪತ್ಯಕ್ಕೆ ಸೆಕ್ಸ್ ಕೂಡ ಅಗತ್ಯ. ಅದಕ್ಕೇ ಅಲ್ಲವೆ ಹೇಳೋದು ಗಂಡ-ಹೆಂಡ್ತಿ ಜಗಳ ಉಂಡು ಮಲಗೋ ತನಕ ಎಂದು. ಇಬ್ಬರ ನಡುವಿನ ಅನೇಕ ಮನಸ್ತಾಪಗಳಿಗೆ ಸೆಕ್ಸ್ ತೇಪೆ ಹಾಕಬಲ್ಲದು. ಆದ್ರೆ ಇಲ್ಲೂ ಅರ್ಥೈಸಿಕೊಳ್ಳುವಿಕೆ, ಹೊಂದಾಣಿಕೆ ಅಗತ್ಯ. ಇಲ್ಲವಾದ್ರೆ ಸೆಕ್ಸ್ಗೆ ಸಂಬಂಧಿಸಿ ನೀವು ಮಾಡುವ ಕೆಲವು ಎಡವಟ್ಟುಗಳು ದಾಂಪತ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿರುತ್ತೆ. ಅಂಥ ತಪ್ಪುಗಳು ಯಾವುವು ಗೊತ್ತಾ

ಪುರುಷತ್ವ ಕಡಿಮೆಯಾಗೋಕೆ ಪೋರ್ನ್ ಕಾರಣಾನಾ?

ಬೇಡ ಎಂದ ಮೇಲೂ ಒತ್ತಾಯಿಸೋದು
ಸೆಕ್ಸ್‌ಗೆ ಇಬ್ಬರ ಸಮ್ಮತಿಯೂ ಅಗತ್ಯ. ಆದ್ರೆ ಕೆಲವು ಪುರುಷರು ಪತ್ನಿಗೆ ಒಪ್ಪಿಗೆಯಿಲ್ಲದಿದ್ರೂ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಾರೆ. ಮೂಡ್ ಇಲ್ಲದಿರುವಾಗ ಸೆಕ್ಸ್‌ಗಾಗಿ ಒತ್ತಾಯಿಸೋದು ಸರಿಯಲ್ಲ. ಇದ್ರಿಂದ ಒಬ್ಬರ ಮೇಲೆ ಇನ್ನೊಬ್ಬರಿಗಿರುವ ಅಭಿಪ್ರಾಯಗಳು ಬದಲಾಗಬಹುದು. ಮನಸ್ಸಿನಲ್ಲಿ ಸಣ್ಣದೊಂದು ಅಸಮಾಧಾನ ಹೊಗೆಯಾಡಬಹುದು. ಬೇರೆಲ್ಲ ವಿಚಾರಗಳಂತೆ ಸೆಕ್ಸ್‌ಗೆ ಸಂಬಂಧಿಸಿದಂತೆಯೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೇ ದಾಂಪತ್ಯದಲ್ಲಿ ಅನುರಾಗ ಅರಳಲು ಸಾಧ್ಯ. 

ಅನಾರೋಗ್ಯವಿದ್ರೂ ಕೇರ್ ಮಾಡದಿರೋದು
ಸಂಗಾತಿಗೆ ಮೈ ಹುಷಾರಿಲ್ಲದಿದ್ದಾಗ ಅಥವಾ ಯಾವುದೋ ಒತ್ತಡ ಅಥವಾ ಚಿಂತೆಯಲ್ಲಿರುವಾಗ ಸೆಕ್ಸ್‌ಗಾಗಿ ಒತ್ತಾಯಿಸೋದು ಸರಿಯಲ್ಲ. ಸೆಕ್ಸ್ ಎನ್ನೋದು ಎರಡು ಮನಸ್ಸು ಹಾಗೂ ದೇಹಕ್ಕೆ ಸಂಬಂಧಿಸಿದ ವಿಷಯ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಪಾಲ್ಗೊಂಡಾಗ ಮಾತ್ರ ಅಲ್ಲೊಂದು ಆರೋಗ್ಯಕರ ಸಂಬಂಧ ಬೆಳೆಯುತ್ತೆ. ಅದೆಷ್ಟೇ ಸೆಕ್ಸ್ ಬಯಕೆಯಾದ್ರೂ ಇಂಥ ಸಂದರ್ಭದಲ್ಲಿ ಸೂಕ್ಷ್ಮತೆಯಿಂದ ವರ್ತಿಸೋದು ಅಗತ್ಯ. 

ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್‌ ಸೆಕ್ಸ್‌ ಕಾರುಬಾರು!

ಕಾರಣವಿಲ್ಲದೆ ನಿರಾಕರಿಸೋದು
ಸಂಗಾತಿ ಮೇಲೆ ಏನೋ ಸಿಟ್ಟಿರುತ್ತೆ ಅದನ್ನು ಹಾಸಿಗೆಯ ತನಕವೂ ಕೊಂಡು ಹೋಗುವ ಅಭ್ಯಾಸ ಕೆಲವರಿಗಿರುತ್ತೆ. ಸೇಡು ತೀರಿಸಿಕೊಳ್ಳಬೇಕು ಅಥವಾ ಬುದ್ಧಿ ಕಲಿಸಬೇಕು ಎಂಬ ಕಾರಣಕ್ಕೆ ಯಾವುದೋ ಸಿಲ್ಲಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಏರ್ಪಟ್ಟ ವೈಮನಸ್ಸನ್ನೇ ದೊಡ್ಡದು ಮಾಡಿ ಅವರಾಗಿಯೇ ಹತ್ತಿರ ಬಂದರೂ ದೂರ ತಳ್ಳೋದು ಸರಿಯಲ್ಲ. ಈ ರೀತಿ ಕಾರಣವಿಲ್ಲದೆ ಪದೇಪದೆ ಸೆಕ್ಸ್ ನಿರಾಕರಿಸೋದ್ರಿಂದ ಭಿನ್ನಾಭಿಪ್ರಾಯ ಇನ್ನಷ್ಟು ಹೆಚ್ಚಿ ಸಂಬಂಧ ಹದಗೆಡುವ ಸಾಧ್ಯತೆಯಿದೆ. 

These mistakes ruin your sex life

ಪೋರ್ನ್ ನೋಡಲು ಒತ್ತಾಯಿಸೋದು
ಇತ್ತೀಚಿನ ದಿನಗಳಲ್ಲಿ ಪೋರ್ನ್ ಅಡಿಕ್ಟ್ ಆಗುತ್ತಿರೋರ ಸಂಖ್ಯೆ ಹೆಚ್ಚುತ್ತಿರೋದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ಇಂಥವರು ಪೋರ್ನ್ ವಿಡಿಯೋಗಳಲ್ಲಿರುವ ಭಂಗಿಗಳನ್ನು ತಮ್ಮ ಸಂಗಾತಿಯಿಂದಲೂ ನಿರೀಕ್ಷಿಸುತ್ತಾರೆ. ಆದ್ರೆ ಆ ಎಲ್ಲ ಭಂಗಿಗಳನ್ನು ಎಲ್ಲರಿಗೂ ಟ್ರೈ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಅದರಲ್ಲಿರುವ ಎಲ್ಲ ದೃಶ್ಯಗಳು ವಾಸ್ತವವಲ್ಲ. ಹೀಗಾಗಿ ಪೋರ್ನ್ ನೋಡಲು ಇಷ್ಟವಿಲ್ಲದಿದ್ರೂ ಸಂಗಾತಿಯನ್ನು ಒತ್ತಾಯಿಸೋದು, ಅದ್ರಲ್ಲಿರುವಂತೆ ಮಾಡಲು ಪೀಡಿಸೋದು ಸರಿಯಲ್ಲ. ಇದ್ರಿಂದ ನಿಮ್ಮನ್ನು ಸ್ಯಾಡಿಸ್ಟ್ ಅಥವಾ ಮನೋರೋಗ ಹೊಂದಿರುವ ವ್ಯಕ್ತಿ ಎಂದು ನಿಮ್ಮ ಸಂಗಾತಿ ಭಾವಿಸುವ ಸಾಧ್ಯತೆಯಿದೆ. ನಿಮ್ಮ ಈ ಅಭ್ಯಾಸವೇ ದಾಂಪತ್ಯ ಬದುಕಿಗೆ ಮುಳ್ಳಾಗಬಹುದು, ಎಚ್ಚರ.

ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!

ಲೈಂಗಿಕ ಬಯಕೆಗಳಿಗೆ ಸ್ಪಂದಿಸದಿರೋದು
ದಾಂಪತ್ಯದಲ್ಲಿ ಪತಿ-ಪತ್ನಿ ಪರಸ್ಪರ ಬಯಕೆಗಳಿಗೆ ಸ್ಪಂದಿಸೋದು ಅಗತ್ಯ. ಇದು ಸೆಕ್ಸ್ ವಿಚಾರಕ್ಕೂ ಅನ್ವಯಿಸುತ್ತದೆ. ಸಂಗಾತಿಯ ಸೆಕ್ಸ್ ಬಯಕೆ ಈಡೇರಿಸಲು ಸಾಧ್ಯವಿದೆ ಅಥವಾ ವಾಸ್ತವಕ್ಕೆ ಹತ್ತಿರವಿದೆ ಎಂದಾದ್ರೆ ಅದನ್ನು ತಿರಸ್ಕರಿಸೋದು ಸರಿಯಲ್ಲ. ಕೆಲವೊಂದು ಕಾರಣ ಅಥವಾ ಪರಿಸ್ಥಿತಿಯ ಕಾರಣಕ್ಕೆ ಅದಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದಾದ್ರೆ ಓಕೆ, ಆದ್ರೆ ಎಲ್ಲವೂ ಸರಿಯಿದ್ದು, ಅವರ ಬಯಕೆಯೂ ಯೋಗ್ಯವಾಗಿದ್ರೆ ಅದಕ್ಕೆ ಸ್ಪಂದಿಸೋದು ನಿಮ್ಮ ಕರ್ತವ್ಯ. ಸುಳ್ಳು ನೆಪ ಅಥವಾ ಇನ್ಯಾವುದೋ ಕಾರಣಕ್ಕೆ ಸಂಗಾತಿ ಸೆಕ್ಸ್ ಬಯಕೆ ವ್ಯಕ್ತಪಡಿಸಿದಾಗಲೆಲ್ಲ ನಿರಾಕರಿಸೋದ್ರಿಂದ ಇಬ್ಬರ ನಡುವೆ ದೊಡ್ಡ ಕಂದಕ ಏರ್ಪಡಬಹುದು. ಇದು ವೈವಾಹಿಕ ಜೀವನದ ಮೇಲೆ ಬಹುದೊಡ್ಡ ಹಾನಿಯನ್ನುಂಟು ಮಾಡಬಲ್ಲದು. 

These mistakes ruin your sex life

Follow Us:
Download App:
  • android
  • ios