Asianet Suvarna News

ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್‌ ಸೆಕ್ಸ್‌ ಕಾರುಬಾರು!

ಪಿಂಕಿಯಂತೆ ಇನ್ನೂ ಹಲವರು ಸೆಕ್ಸ್‌ ವರ್ಕರ್‌ಗಳು ಅವರ ರೆಡ್‌ಲೈಟ್‌ ಏರಿಯಾದಲ್ಲಿ ಆಡಿಯೋ ಸೆಕ್ಸ್, ವಿಡಿಯೋ ಸೆಕ್ಸ್‌ನಲ್ಲಿ ಪರಿಣತರಾಗಿದ್ದಾರೆ.ಫೋನ್‌ ಮೂಲಕವೇ ಗಿರಾಕಿಗೆ ಸುಖ ಕೊಡುವ ಕಲೆ ಕಲಿತು ಲಾಕ್‌ಡೌನ್ ವೇಳೆ ದಂಧೆಯ ಹೊಸ ದಾರಿಗಳನ್ನು ಕಂಡುಕೊಂಡಿದ್ದಾರೆ.

 

Red Light area workers go online during India Lockdown
Author
Bengaluru, First Published May 27, 2020, 5:26 PM IST
  • Facebook
  • Twitter
  • Whatsapp

ಆಕೆಯ ಹೆಸರು ಹಿಂದೂ ಗಿರಾಕಿಗಳು ಬಂದ್ರೆ ಪಿಂಕಿ, ಮುಸ್ಲಿಂ ಗಿರಾಕಿಗಳು ಬಂದ್ರೆ ಫಾತಿಮಾ. ಗಿರಾಕಿಗಳ ಆಸೆಗೆ ತಕ್ಕ ಈಕೆಯ ಅವತಾರ. ಅವರ ಹಂಬಲಗಳಿಗೆ ತಕ್ಕ ಹಾಗೆ ವರ್ತಿಸುವ ಕಲೆ ಆಕೆಗೆ ಕರಗತ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್‌ನಿಂದಾಗಿ ಅವರು ಇರುವ ಏರಿಯಾಗೆ ಗಿರಾಕಿಗಳು ಕಾಲಿಡುತ್ತಿಲ್ಲ. ಇವರೂ ಮನೆಯ ಬಾಗಿಲು ತೆರೆಯುವಂತಿಲ್ಲ. ಇವರ ಏರಿಯಾದಲ್ಲಿ ಸ್ಟ್ರಿಕ್ಟ್ ಆಗಿ ಪೊಲೀಸ್‌ ಪಹರೆ ಇದೆ. ಹೀಗಾಗಿ ವ್ಯಾಪಾರ ನಡೆಸಲು ಸಾಧ್ಯವೇ ಇಲ್ಲ. ಇಂಥ ಹೊತ್ತಿನಲ್ಲಿ ದಂಧೆ ನಡೆಸಲು ಪಿಂಕಿ ಹೊಸ ಸಾಧ್ಯತೆ ಕಂಡುಕೊಂಡಳು.
 

ತನ್ನ ಡೈರಿಯಲ್ಲಿದ್ದ ಹಳೆಯ ಗಿರಾಕಿಗಳ ನಂಬರ್‌ಗೆ ಕರೆ ಮಾಡಿದಳು. ಅವರು ಇದಕ್ಕೇ ಕಾಯುತ್ತಿದ್ದಂತಿತ್ತು. ಹಲವು ದಿನಗಳಿಂದ ಸೆಕ್ಸ್ ಇಲ್ಲದೆ ಅವರ ದೇಹ ಕಾದು ಕೆಂಡವಾಗಿತ್ತು. ಇಂಥ ಹೊತ್ತಿನಲ್ಲಿ ಅವಳು ಫೋನ್‌ ಮಾಡಿದರೆ ಯಾಕೆ ಬೇಡವೆಂದಾರು. ನಾಲ್ಕಾರು ಪ್ರೀತಿಯ ಮಾತು ಆಡುವಷ್ಟರಲ್ಲಿ ಅವರು ಇನ್ನೊಂದಷ್ಟು ಸುತ್ತಿನ ಆಟಕ್ಕೆ ರೆಡಿಯಾಗಿದ್ದರು. ಆಗ ಆಕೆ ಬೇಡಿಕೆ ಇಟ್ಟಳು- ನಿಮಗೆ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಸೆಕ್ಸ್‌ ಮಾತಾಡ್ತೀನಿ. ನಿಮಗೆ ಖುಷಿಯಾಗೋವರೆಗೆ, ನಿಮ್ಮ ಅಂತಿಮ ಸುಖದ ಚರಣದವರೆಗೂ ಮಾತಿನ ಸುಖ ಕೊಡ್ತೀನಿ. ಆದರೆ ಅರ್ಧ ಗಂಟೆಗೆ ಸೆಷನ್‌ಗೆ ಮುನ್ನೂರು ರೂಪಾಯಿ. ಗೂಗಲ್‌ ಪೇ ಅಥವಾ ಫೋನ್‌ ಪೇ ಮಾಡಿ. ಯಾವುದೋ ಒಂದು ಸೆಕ್ಸ್‌ಗಾಗಿ ಹಾತೊರೆಯುತ್ತಿದ್ದ ಗಿರಾಕಿ ಈ ಅವಕಾಶ ಬಿಡಲು ಸಾಧ್ಯವೇ. ಅವನ ಮುನ್ನೂರು ರೂಪಾಯಿ ಇವಳ ಇನ್‌ಬಾಕ್ಸ್‌ಗೆ ಬಂದು ಬಿದ್ದ ಬಳಿಕ ಅವಳ ಸೆಕ್ಸ್‌ ಸೆಷನ್‌ ಆರಂಭವಾಯಿತು. ಯಾವುದೇ ಮುಜುಗರವಿಲ್ಲದೆ, ದೇಹ ಮಾಡಬೇಕಾದ್ದನ್ನು ನಾಲಿಗೆಯಲ್ಲೇ ಮಾಡಿ ಮುಗಿಸಿದ್ದಳು ಅವಳು. ಆ ಕಡೆ ಇದ್ದ ಗಿರಾಕಿ ಪೂರ್ತಿ ಬೆವತುಹೋಗಿದ್ದ.

 

ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!

 

ಇವನೊಬ್ಬ ಬಗೆಯ ಗಿರಾಕಿ. ಸೆಕ್ಸ್‌ ಚಾಟಿಂಗ್‌ನಲ್ಲೇ ಅವನಿಗೆ ತೃಪ್ತಿ. ಇನ್ನು ಕೆಲವರಿಗೆ ಹಾಗಲ್ಲ. ಅವರಿಗೆ ದೇಹ ನೋಡಬೇಕು. ಅಂಥವರಿಗೂ ಪಿಂಕಿಯಲ್ಲಿ ವ್ಯವಸ್ಥೆ ಇದೆ. ಅವರಿಗೆ ಬೇಕಾದ ಹೊತ್ತಿನಲ್ಲಿ ಫೋನ್‌ ಮಾಡಿದರೆ ಪಿಂಕಿ ಅದಕ್ಕೆ ಸದಾ ಸಿದ್ಧ. ಹೇಗೂ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ಕ್ಯಾಮೆರಾ ಇದೆ, Zoom App‌ ಬಳಸಲು ಗೊತ್ತಿದೆ. ಅಥವಾ ವಾಟ್ಸ್ಯಾಪ್‌ ಕಾಲ್‌ನಲ್ಲಿ ಕೂಡ ಕೆಲಸ ಪೂರೈಸಬಹುದು. ಮಾತು ಮತ್ತು ವಿಡಿಯೋಗಳೆರಡರ ಮೂಲಕವೂ ಗಿರಾಕಿಯನ್ನು ಪ್ರಚೋದಿಸುತ್ತಾ ಹೋಗುತ್ತಾಳೆ. ಫೀಸ್‌ ಮಾತ್ರ ಐನೂರು ರೂಪಾಯಿ, ಎಂಟುನೂರು ರೂಪಾಯಿ ಹೀಗೆ ಗಿರಾಕಿಗೆ ತಕ್ಕಂತೆ ವ್ಯತ್ಯಾಸ. ಇಲ್ಲೂ ಗಿರಾಕಿಯ ಹಣ ಅಕೌಂಟ್‌ಗೆ ಬಂದು ಬಿದ್ದ ನಂತರವೇ ಕೆಲಸ ಶುರು. ಮುಖಕ್ಕೆ ಮಾತ್ರ ವೇಲ್‌ ಕಟ್ಟಿಕೊಳ್ಳುತ್ತಾಳೆ. ಯಾಕೆಂದರೆ ಮುಖದ ಗುರುತು ಸಿಗಬಾರದು. ಈ ವಿಡಿಯೋ ಸೆಷನ್‌ ಅನ್ನು ಯಾರೂ ರೆಕಾರ್ಡ್‌ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಬಾರದಲ್ಲ. ಕೆಲವೇ ದಿನಗಳಲ್ಲಿ ಆಕೆ, ಆಕೆಯಂತೆ ಇನ್ನೂ ಹಲವರು ಸೆಕ್ಸ್‌ ವರ್ಕರ್‌ಗಳು ಅವಳ ರೆಡ್‌ಲೈಟ್‌ ಏರಿಯಾದಲ್ಲಿ ಆಡಿಯೋ ಸೆಕ್ಸ್, ವಿಡಿಯೋ ಸೆಕ್ಸ್‌ನಲ್ಲಿ ಪರಿಣತರಾಗಿದ್ದಾರೆ.

 

#FeelFree: ಚೆಂದುಳ್ಳಿ ಹೆಂಡ್ತಿ ಇದ್ರೂ ಗಂಡ ಹಸ್ತ ಮೈಥುನ ಮಾಡ್ಕೋತಾನಲ 

 

ವಿಡಿಯೋ ಸೆಕ್ಸ್ ಮತ್ತು ಆಡಿಯೋ ಸೆಕ್ಸ್ ಎಂಬುದು ಹಿಂದೆಯೂ ಇತ್ತು. ಆದರೆ ಅದು ಇಂಟರ್‌ನೆಟ್‌ ಬಳಸುತ್ತಿದ್ದ, ಪೋರ್ನ್‌ ಸೈಟ್‌ಗಳ ಲಭ್ಯತೆ ಇದ್ದ, ಬೆಂಗಳೂರಿನಂಥ ಕಾಸುಳ್ಳ ನಗರಗಳಲ್ಲಿ ಹೈಕ್ಲಾಸ್‌ ಕಾಲ್‌ಗರ್ಲ್‌ಗಳ ನಡುವೆ ವ್ಯವಹಾರ ನಡೆಸುತ್ತಿದ್ದ ಕೆಲವೇ ಹೈಫೈ ಮಂದಿಗೆ ಸೀಮಿತವಾಗಿತ್ತು. ಈಗ ಅದು ಮುಂಬಯಿಯ ರೆಡ್‌ಲೈಟ್‌ ಏರಿಯಾಗಳಂತ ಪ್ರದೇಶಗಳಿಗೂ ವ್ಯಾಪಿಸಿದೆ. ಕೋವಿಡ್‌ ಹಾವಳಿಯಿಂದಾಗಿ ದೇಹ ದೇಹಗಳು ಒಂದಾಗುವಂತಿಲ್ಲ. ಹೀಗಾಗಿ ಕಾಲ್‌ಗರ್ಲ್‌ಗಳೂ ದುಡಿಮೆಗಾಗಿ ತಮ್ಮದೇ ಹಾದಿಯನ್ನು ಹುಡುಕಿಕೊಂಡಿದ್ದಾರೆ. ಮೊದಲು ದೇಹ ದುಡಿಯುತ್ತಿತ್ತು. ಈಗ ನಾಲಿಗೆ ಹೆಚ್ಚಾಗಿ ಬಳಸಬೇಕು. ಮಾತಾಡಬೇಕು. ಸೆಕ್ಸಿ ಮಾತುಕತೆಯಲ್ಲಿ ನುರಿತವರಿಗೆ ಹೆಚ್ಚಿನ ಆದ್ಯತೆ. ಅದರ ಜೊತೆಗೆ ದೇಹದ ಅಂದವೂ ಇದ್ದರೆ, ವಿಡಿಯೋ ಫೋನ್‌ ಬಳಸಿ ದೇಹವನ್ನು ಸ್ವಲ್ಪ ಸ್ವಲ್ಪವೇ ತೋರಿಸಿ ಗಿರಾಕಿಯ ಮೈಯನ್ನು ತಣಿಸಬಲ್ಲ ಕುಶಲ ಕಲೆ ಗೊತ್ತಿದ್ದವರಿಗೆ ಹೆಚ್ಚು ಆದ್ಯತೆ.

 

ಬೇಡದ ಸ್ಥಳದಲ್ಲಿ ಬೆಳೆವ ಕೂದಲಿಗೂ ಉದ್ದೇಶವಿದೆ!

 

ಸದ್ಯಕ್ಕೆ ಇದೇ ಸುರಕ್ಷಿತ ಹಾದಿ ಅನ್ನುತ್ತಾರೆ ಪೊಲೀಸರು, ತಜ್ಞರು ಕೂಡ. ಸದ್ಯಕ್ಕಂತೂ ರೆಡ್‌ಲೈಟ್‌ ಏರಿಯಾಗಳೂ ತೆರೆಯುವ ಯಾವುದೇ ಸಾಧ್ಯತೆ ಇಲ್ಲ. ಈ ಪರಿಸರವನ್ನು ನಂಬಿದವರು ಸಾಮಾನ್ಯವಾಗಿ ವಲಸೆ ಕಾರ್ಮಿಕರು, ಒಂಟಿಯಾಗಿ ಇರುವವರು. ಕಾಲ್‌ಗರ್ಲ್‌ ಕೆಲಸ ಮಾಡುವವರೂ ಅಂಥವರೇ. ಆದರೂ ಇವರ ಓಡಾಟ, ದಂಧೆಯ ಹೆಚ್ಚಳದಿಂದ ಈ ಏರಿಯಾಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುವ ಸಾಧ್ಯತೆ ಇದೆ. ಈಗಾಗಲೇ ಮುಂಬಯಿಯಲ್ಲಿ ಲೆಕ್ಕ ಮೀರಿ ಕೊರೊನಾ ಹಬ್ಬಿದೆ. ಈ ಏರಿಯಾ ಓಪನ್‌ ಮಾಡಿ ಇನ್ನಷ್ಟು ಸಮಸ್ಯೆ ಮೈಮೇಲೆ ಎಳೆದುಕೊಳ್ಳಲು ಯಾರೂ ಸಿದ್ಧರಿಲ್ಲ. ಆದರೆ ಸೆಕ್ಸ್ ಅನ್ನುವುದು ಮನುಷ್ಯನ ಬೇಸಿಕ್‌ ಅವಶ್ಯಕತೆಯಾದುದರಿಂದ ಅದು ಬೇರೆ ಬೇರೆ ಅವತಾರ ಪಡೆಯುವುದ್ನು ತಡೆಯಲೂ ಸಾಧ್ಯವಿಲ್ಲ. ಹೀಗಾಗಿ ಈ ಬೆಳವಣಿಗೆ ಗೊತ್ತಿದ್ದರೂ ಸುಮ್ಮನಿದ್ದೇವೆ ಎನ್ನುತ್ತಾರೆ ಪೊಲೀಸರು. ಅಫ್‌ಕೋರ್ಸ್, ಇದನ್ನು ತಡೆಯಲು ಯಾವ ಕಾನೂನಿಗೂ ಸಾಧ್ಯವಿಲ್ಲ ಕೂಡ.

Follow Us:
Download App:
  • android
  • ios