ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!
ಲಾಕ್‌ಡೌನ್ ವೇಳೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಮಂದಿ ಸೆಕ್ಸ್ ಆಟಿಕೆಗಳು, ಸೆಕ್ಸ್ ಆಡಿಯೋಗಳು, ಸೆಕ್ಸ್ ವಿಡಿಯೋಗಳು, ಲೈಂಗಿಕ ಸಾಹಿತ್ಯದ ಮೊರೆ ಹೋಗಿದ್ದಾರೆ ಎಂಬುದು. ಕ್ವಾರಂಟೈನ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಸೆಕ್ಸ್ ತೃಪ್ತಿಯ ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಿದ್ದೆವು ಹಾಗೂ ಹೆಚ್ಚು ಕಾಲ್ಪನಿಕತೆಯ ಮೊರೆ ಹೋಗಿದ್ದೆವು ಎಂದು ತುಂಬ ಮಂದಿ ಹೇಳಿಕೊಂಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಸೆಕ್ಸ್ ವಿಷಯದಲ್ಲಿ ಬ್ರಹ್ಮಚಾರಿಗಳು, ಅವಿವಾಹಿತರು ಹೆಚ್ಚು ಹೆಚ್ಚು ಸ್ವಾವಲಂಬನೆ ಸಾಧಿಸಿದ್ದಾರಂತೆ. ವಿವಾಹಿತರೂ ಸ್ವಾವಲಂಬನೆ ಸಾಧಿಸುವಲ್ಲಿ ಹಿಂದೆ ಬಿದ್ದಿಲ್ಲವಂತೆ!
ಆತ್ಮನಿರ್ಭರತೆ ಎಂದರೆ ಸ್ವಾವಲಂಬನೆ. ಲಾಕ್‌ಡೌನ್ ಸಂದರ್ಭದಲ್ಲಿ ಸೆಕ್ಸ್ ವಿಷಯದಲ್ಲೂ ಸ್ವಾವಲಂಬನೆ ಸಾಧಿಸಿದ್ದಾರೆ ನಮ್ಮವರು. ತಾರಷಿ ಎಂಬ ಎನ್‌ಜಿಒ ಒಂದು, ಈ ವಿಷಯಕ್ಕೆ ಸಂಬಂಧಿಸಿ ನೂರಾರು ಮಂದಿಯ ಸಂದರ್ಶನ ನಡೆಸಿದೆ. ಅದರಲ್ಲಿ ಹೊರಬಿದ್ದ ವಿಚಾರ ಅಂದರೆ- ಲಾಕ್‌ಡೌನ್ ವೇಳೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಮಂದಿ ಸೆಕ್ಸ್ ಆಟಿಕೆಗಳು, ಸೆಕ್ಸ್ ಆಡಿಯೋಗಳು, ಸೆಕ್ಸ್ ವಿಡಿಯೋಗಳು, ಲೈಂಗಿಕ ಸಾಹಿತ್ಯದ ಮೊರೆ ಹೋಗಿದ್ದಾರೆ ಎಂಬುದು.
ಕ್ವಾರಂಟೈನ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಸೆಕ್ಸ್ ತೃಪ್ತಿಯ ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಿದ್ದೆವು ಹಾಗೂ ಹೆಚ್ಚು ಕಾಲ್ಪನಿಕತೆಯ ಮೊರೆ ಹೋಗಿದ್ದೆವು ಎಂದು ತುಂಬ ಮಂದಿ ಹೇಳಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಪಡೆದಿರುವ ಈ ಅನುಭವ ಹಾಗೂ ಖುಷಿಗಳ ಪರಿಣಾಮ, ಲಾಕ್ಡೌನ್ ನಂತರವೂ ಹೊಸ ಅನುಭವಗಳನ್ನು ಪ್ರಯೋಗಿಸಿ ನೋಡಲು ಹೆಚ್ಚಿನವರು ಮುಂದಾಗಿದ್ದಾರೆ.
ಈ ಸ್ವಾವಲಂಬನೆಯ ವಿಚಾರದಲ್ಲಿ ಪುರುಷರಿಗೂ ಸ್ತ್ರೀಯರಿಗೂ ವ್ಯತ್ಯಾಸವಿದೆ, ಸ್ತ್ರೀಯರು ಈ ವೇಳೆಯಲ್ಲಿ ತಮ್ಮ ಕಲ್ಪನೆ ಅಥವಾ ಇಮ್ಯಾಜಿನೇಶನ್‌ಗೆ ಮತ್ತು ತಮ್ಮ ಕೈಗಳಿಗೆ ಹೆಚ್ಚು ಕೆಲಸ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಸಾಹಿತ್ಯ, ಲೈಂಗಿಕ ಸಂದೇಶಗಳ ಚಾಟಿಂಗ್, ಸೆಕ್ಸ್ಟಿಂಗ್ ಮತ್ತು ಸೆಕ್ಸ್ ಆಟಿಕೆಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಕೈಗಳನ್ನು ಬಳಸಿಕೊಂಡಿದ್ದಾರೆ ಎಂದರೆ ಕೇವಲ ಹಸ್ತಮೈಥುನ ಎಂಬರ್ಥವಲ್. ಕೈಗಳನ್ನು ಹಾಗೂ ಮೈಯ ಇತರ ಅಂಗಗಳನ್ನು ಕ್ರಿಯೇಟಿವ್ ಆಗಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ, ಒಬ್ಬಾಕೆ ತನ್ನದೇ ವಯಸ್ಸಿನ ಹಾಗೂ ಸಮಾನ ಮನಸ್ಸಿನ ಸ್ತ್ರೀಯರ ಒಂದು ವಾಟ್ಸ್ಯಾಪ್ ಗ್ರೂಪ್ ರಚಿಸಿಕೊಂಡಿದ್ದಾಳೆ. ಅದರಲ್ಲಿ ತಮ್ಮ ದೇಹದ ಒಂದು ಭಾಗದ ಸೂಕ್ಷ್ಮ ಫೋಟೋ ತೆಗೆದು ಅಪ್‌ಲೋಡ್ ಮಾಡಿ, ಅದು ಏನು ಎಂದು ಊಹಿಸುವ ಆಟ ಆಡಿದ್ದಾರೆ. ಇದು ತನ್ನದೇ ಆದ ರೀತಿಯಲ್ಲಿ ಕ್ರಿಯೇಟಿವ್ ಕಲ್ಪನೆಯನ್ನು ಪ್ರಚೋದಿಸಿ, ಉಳಿದವರೂ ಆ ದಿಕ್ಕಿನಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುವಂತೆ ಮಾಡಿತು. ಈ ಬಗೆಯ ಚಿತ್ರಗಳ ವಿನಿಮಯ ಅವರ ದೈಹಿಕ ಬಯಕೆಗಳನ್ನು ಪ್ರಚೋದಿಸುವ ಹಾಗೂ ತಣಿಸುವ ಪ್ರಯತ್ನಗಳಲ್ಲಿ ಒಂದಾಗಿತ್ತು ಎಂದು ಬೇರೆ ಹೇಳಬೇಕಿಲ್ಲ.
ಅಮೆರಿಕದಲ್ಲಿ ಬೈಯ್ಯೋ ಪೋರ್ನ್ ಈಗ ಸಖತ್ ಟ್ರೆಂಡಿಂಗ್, ಏನಿದು?
ಪುರುಷರು ಸ್ತ್ರೀಯರಷ್ಟು ಕ್ರಿಯೇಟಿವ್ ಆಗಿ ಈ ಸನ್ನಿವೇಶವನ್ನು ಬಳಸಿಕೊಂಡಿಲ್ಲ. ಅವರು ತಮ್ಮ ಬಯಕೆಗಳನ್ನು ತಣಿಸಿಕೊಳ್ಳಲು ಪೋರ್ನ್ ಹಾಗೂ ಹಸ್ತಮೈಥುನದ ಮೊರೆ ಹೋಗಿದ್ದಾರೆ. ಲೈಂಗಿಕ ಸಾಹಿತ್ಯದ ಮೊರೆ ಹೋದವರು ಕಡಿಮೆ. ಅಂದರೆ ಲಾಕ್‌ಡೌನ್ ಅವಧಿಗೂ ಅದಕ್ಕೂ ಮೊದಲಿನ ಪ್ರವೃತ್ತಿಗೂ ಪುರುಷರಲ್ಲಿ ಅಂಥ ವ್ಯತ್ಯಾಸವೇನೂ ಆಗಿಲ್ಲ ಎಂದಾಯಿತು. ಆದರೆ ಸೆಕ್ಸ್‌ನ ಅವಧಿಯಲ್ಲಿ ಮಾತ್ರ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಲಾಕ್‌ಡೌನ್‌ಗಿಂತ ಮೊದಲು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದವರು ಲಾಕ್‌ಡೌನ್ ಅವಧಿಯಲ್ಲಿ ಕಡ್ಡಾಯ ಏಕಾಂತವನ್ನು ಮೀರಲು ಪ್ರತಿದಿನ ಎಂಬಂತೆ ಹಸ್ತಮೈಥುನ ಮಾಡಿಕೊಂಡ ಉದಾಹರಣೆಗೆಳು ಹೆಚ್ಚು ಕಂಡುಬಂದಿವೆ.
#Feelfree: ಮೊದಲ ರಾತ್ರಿ ಅವಳನ್ನು ಗೆಲ್ಲುವೆನೋ ಇಲ್ವೋ ಎಂಬ ಭಯ!
ನಿಜಕ್ಕೂ ಸ್ತ್ರೀಯರ ಲೈಂಗಿಕತೆಯ ಬಗ್ಗೆ ತಲೆ ಕೆಡಿಸಿಕೊಂಡವರು ಕಡಿಮೆ. ಅಧ್ಯಯನಕಾರರು ಹೇಳುವ ಪ್ರಕಾರ ಎಪ್ಪತ್ತು ಶೇಕಡ ಹೆಣ್ಣು ಮಕ್ಕಳಿಗೆ ಲೈಂಗಿಕ ಸುಖದ ಅನುಭವ ಆಗುವುದೇ ಆಗುವುದಿಲ್ಲ. ಆದರೂ ಸಂಗಾತಿಯಿಂದ ಆಗುವುದಿಲ್ಲ. ಬದಲು, ಹಸ್ತಮೈಥುನದಿಂದ ಆಗುತ್ತದೆ. ಅಂದರೆ ಸಂಗಾತಿಯನ್ನು ತೃಪ್ತಿಪಡಿಸುವ ಕಲೆಯನ್ನು ಪುರುಷರು ಸರಿಯಾಗಿ ಕಲಿತೇ ಇಲ್ಲ.
ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು..
ಲೈಂಗಿಕ ತೃಪ್ತಿ ಬರೀ ದೇಹಕ್ಕಲ್ಲ. ಅದು ಮನಸ್ಸಿಗೂ ತೃಪ್ತಿ ಉಂಟುಮಾಡುವಂಥದ್ದು ಎಂಬುದು ಈ ಅವಧಿಯಲ್ಲಿ ಗೊತ್ತಾಯಿತು. ಲಾಕ್‌ಡೌನ್‌ನಿಂದಾಗಿ ಬಂಧಿಗಳಾಗಿದ್ದವರು ಲೈಂಗಿಕ ಕಲ್ಪನೆಗಳಿಂದ, ಕ್ರಿಯೆಯಿಂದ ಸಂತೃಪ್ತಿ ಕಂಡುಕೊಂಡರು. ಈ ಅವಧಿಯಲ್ಲಿ ಬಿಡುಗಡೆಯಾಗುವ ಸೆರೊಟೋನಿನ್, ಡೋಪಮೈನ್, ಆಕ್ಸಿಟೋಸಿನ್ ಮುಂತಾದ ಹಾರ್ಮೋನ್‌ಗಳ ಸ್ರಾವ ನಮ್ಮ ದೇಹದಲ್ಲಿ ಸುಖದ ಅಲೆ ಉಂಟುಮಾಡುವುದಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒತ್ತಡ, ಖಿನ್ನತೆಗಳನ್ನೂ ದೂರ ಮಾಡುತ್ತದೆ.