ತುಂಬಾ ಖತರ್ನಾಕ್ ಆಗಿರ್ತಾರೆ ಈ ಹುಡುಗ್ರು, ಇವರೊಂದಿಗೆ ಸಂಬಂಧ ಬೆಳೆಸುವಾಗ ಹುಷಾರು!
ಮದುವೆ ವಿಷ್ಯ ಬಂದಾಗ ಹುಡುಗಿರು ನೂರಾರು ಬಾರಿ ಆಲೋಚನೆ ಮಾಡ್ಬೇಕು. ಬರೀ ಸಂಬಳ, ಸ್ಟೇಟಸ್ ಮಾತ್ರ ಮುಖ್ಯವಾಗೋದಿಲ್ಲ. ಹುಡುಗನ ಸ್ವಭಾವ ಕೆಟ್ಟದಾಗಿದ್ರೆ, ಜೀವನದಲ್ಲಿ ಎಷ್ಟೇ ಹಣವಿದ್ದೂ ನಿಮ್ಮ ಬಾಳು ಹೆಣವಾದಂತೆ.
ಆಕರ್ಷಕ, ಸದಾ ನಗುತ್ತಿರುವ, ಎಲ್ಲರನ್ನು ನಗಿಸುವ ಹಾಗೂ ತುಂಬಾ ಖುಷಿಯಾಗಿರುವ ಹುಡುಗನನ್ನು ನೋಡಿದ್ರೆ ಹುಡುಗಿಯರು ಆಕರ್ಷಣೆಗೊಳಗಾಗೋದು ಸಜಹ. ಒಂದೇ ನೋಟದಲ್ಲಿ ಹುಡುಗನ ಪ್ರೀತಿಗೆ ಬೀಳುವ ಹುಡುಗಿಯರು ಈತನೇ ನಮ್ಮ ರಾಜಕುಮಾರ ಎಂದುಕೊಳ್ತಾರೆ. ಸಂಬಂಧದ ಆರಂಭದಲ್ಲಿ ಬೆಣ್ಣೆ ಮಾತುಗಳನ್ನಾಡುವ ಹುಡುಗ ಮುಂದೆ ಖತರ್ನಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವಾಗ್ಲೂ ಇಬ್ಬರ ಮಧ್ಯೆ ಪ್ರಾಮಾಣಿಕತೆ ಇರಬೇಕು. ಬರೀ ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿ, ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳುವ ಹುಡುಗ ನಾಟಕವಾಡ್ತಿರುತ್ತಾನೆ. ಒಳಗೊಂದು, ಹೊರಗೊಂದು ಅಭಿಪ್ರಾಯ ಹೊಂದಿರ್ತಾನೆ. ದಿನ ಕಳೆದಂತೆ ಆತನ ಸತ್ಯ ಹೊರ ಬರಲು ಶುರುವಾಗುತ್ತದೆ. ಆದ್ರೆ ಆಗ್ಲೇ ಸಮಯ ಕೈ ಮೀರಿದ ಕಾರಣ ಹುಡುಗಿಯರು ಪಶ್ಚಾತಾಪ ಪಡಬೇಕಾಗುತ್ತದೆ. ಹಾಗಾಗಿ ಹುಡುಗನ ಆಯ್ಕೆ ವೇಳೆ ಅನೇಕ ವಿಷ್ಯಗಳನ್ನು ಹುಡುಗಿಯರು ಗಮನಿಸಬೇಕು.
ಫರ್ಫೆಕ್ಟ್ ಎಲಿಜಿಬಲ್ ಬ್ಯಾಚ್ಯುಲರ್ (Bachelor) : ತನ್ನ ನಡವಳಿಕೆ, ಉದ್ಯೋಗ (Employment), ಜೀವನಕ್ಕೆ ಸಂಬಂಧಿಸಿದಂತೆ ಮೋಡಿಯ ಮಾತುಗಳನ್ನು ಆಡಿ, ಹುಡುಗಿಯರನ್ನು ಆಕರ್ಷಿಸಲು ಪ್ರಯತ್ನಿಸುವ ಪುರುಷರಿಂದ ನೀವು ದೂರವಿರುವುದು ಒಳ್ಳೆಯದು. ಯಾವಾಗ್ಲೂ ಇಂಥ ಪುರುಷರು ಬೇಗ ಹತ್ತಿರವಾಗ್ತಾರೆ. ಅಷ್ಟೇ ಬೇಗ ದೂರವಾಗ್ತಾರೆ. ಕಂಪ್ಲೀಟ್ ಬ್ಯಾಚ್ಯುಲರ್ ಎನ್ನುವ ಮೂಲಕವೇ ಅವರು ಹುಡುಗಿಯರಿಗೆ ಆಪ್ತರಾಗ್ತಾರೆ.
ಅತಿಯಾದ ಕಾಮಾಸಕ್ತಿ ನಿಯಂತ್ರಿಸಲು ನೀವಿದನ್ನ ಮಾಡಿ
ನನ್ನ ಜೀವನ (Life) ದಲ್ಲಿ ಬಂದ ಮೊದಲ ಮಹಿಳೆ ನೀನು. ನಿನಗೆ ನೀಡಿದಷ್ಟು ಜಾಗವನ್ನು ನಾನು ಯಾರಿಗೂ ನೀಡಿಲ್ಲ. ನಿನ್ನಿಂದ ನನ್ನ ಜೀವನ ಸಾರ್ಥಕವಾಯ್ತು ಎಂಬೆಲ್ಲ ಮಾತನಾಡುವ ಪುರುಷರು ಮಹಿಳೆಯನ್ನು ಹತ್ತಿರಕ್ಕೆ ಸೆಳೆಯುತ್ತಾರೆ. ಹುಡುಗಿಯರು ಇದನ್ನು ನಂಬ್ತಾರೆ. ನಾನು ಸ್ಪೇಷಲ್ ಎನ್ನುವ ಭಾವನೆ ಮೂಡಿಸಿಕೊಂಡು ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಸಿದ್ಧರಾಗ್ತಾರೆ. ಈ ಹುಡುಗರು ಬಣ್ಣ ಬದಲಿಸುವ ಸ್ವಭಾವ ಹೊಂದಿರ್ತಾರೆ. ಮಾತಿನಲ್ಲಿಯೇ ಎಲ್ಲವನ್ನೂ ಸೆಳೆಯುವ ಸಾಮರ್ಥ್ಯ ಅವರಿಗಿರುತ್ತೆ.
ಮದುವೆ (Marriage) ಗೆ ಸದಾ ಸಿದ್ಧವಿರುವ ಹುಡುಗ : ನಿಜವಾಗಿ ಪ್ರೀತಿಸುವ, ಸಂಸಾರ ಮಾಡಲು ಬಯಸುವ ಪುರುಷರು ಯಾವಾಗ್ಲೂ ಸ್ವಲ್ಪ ಸಮಯ ಕೇಳ್ತಾರೆ. ಮುಂದಿನ ಭವಿಷ್ಯಕ್ಕೆ ಸಿದ್ಧತೆ ನಡೆಸಿದ ನಂತ್ರ ಅವರು ಮದುವೆಗೆ ಸಿದ್ಧರಾಗ್ತಾರೆ. ಆದ್ರೆ ಭೇಟಿಯಾಗಿ ತಿಂಗಳೊಳಗೆ ಮದುವೆಗೆ ಸಿದ್ಧರಾಗುವು ಹುಡುಗರಿಗೆ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಲು ಬರುವುದಿಲ್ಲ. ಮದುವೆ ಹಾಗೂ ಹನಿಮೂನ್ ಎಲ್ಲವೂ ಒಂದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದೇ ಕಾರಣಕ್ಕೆ ಅವರು ಸುಲಭವಾಗಿ ನಿಮ್ಮ ದೃಷ್ಟಿ ಬದಲಿಸ್ತಾರೆ. ನಿಮಗೆ ಮೋಸ ಮಾಡ್ತಾರೆ. ಹಾಗಾಗಿ ಡೇಟಿಂಗ್ ಶುರು ಮಾಡಿದ ತಿಂಗಳಲ್ಲೇ ಮದುವೆ ಕನಸು ಕಾಣುವ ಹುಡುಗನ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಕಲೆ ಹಾಕಿ.
ನೀವು ಹೇಳಿದ ಹಾಗೆ ಪತಿರಾಯ ಕೇಳ್ಬೇಕೆಂದ್ರೆ ಇಲ್ಲಿವೆ ಸಿಂಪಲ್ ಟಿಪ್ಸ್!
ಹುಡುಗಿ ಹಣದಲ್ಲಿ ಬಿಂದಾಸ್ ಲೈಫ್ : ಪ್ರೀತಿಸಿದ ಹುಡುಗನಿಗೆ ಖರ್ಚು ಮಾಡೋದು ತಪ್ಪಲ್ಲ. ಹಾಗೆನ್ನುತ್ತಲೇ ನೀವು ಹುಡುಗಿನೆ ಹಣ ನೀಡಲು ಶುರು ಮಾಡಿರ್ತಿರಿ. ಆತನ ಶೋಕಿ, ಬಟ್ಟೆ, ಸ್ಟೈಲ್ ನಿಮಗೆ ಇಷ್ಟವಾಗಿರುತ್ತದೆ. ಆದ್ರೆ ಅದೆಲ್ಲವೂ ನಿಮ್ಮ ಹಣದಿಂದಲೇ ಬಂದಿರುವುದಾಗಿರುತ್ತದೆ. ಆರಂಭದಲ್ಲಿ ಪ್ರೀತಿಸಿದ ವ್ಯಕ್ತಿಗೆ ಹಣ ನೀಡೋದು ವಿಶೇಷ ಎನ್ನಿಸದೆ ಇದ್ರೂ ಬರ್ತಾ ಬರ್ತಾ ಅದು ಹಿಂಸೆಯಾಗಲು ಶುರುವಾಗುತ್ತದೆ. ನಿಮ್ಮ ಹಣದ ಮೇಲೆ ಕಣ್ಣಿಟ್ಟಿರುವ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.
ತಾಯಿಯ ಸೆರಗಿಗೆ ಗಂಟು ಬಿದ್ದ ಹುಡುಗ : ತಾಯಿ ಮಾತನ್ನು ಕೇಳಬಾರದು ಎಂದಲ್ಲ. ಹಾಗಂತ ದೊಡ್ಡವರಾದ್ಮೇಲೂ ಸದಾ ತಾಯಿ ನೆರಳಿನಲ್ಲಿರುವ ವ್ಯಕ್ತಿ ಮುಂದೆ ಪತ್ನಿಗೆ ತನ್ನ ಸಂಪೂರ್ಣ ಜೀವನ ಅರ್ಪಿಸಲಾರ. ಇದ್ರಿಂದ ನಿಮ್ಮ ರೋಮ್ಯಾಂಟಿಕ್ ಲೈಫ್ ಹಾಳಾಗುತ್ತದೆ. ಹಾಗಾಗಿ ಅತಿಯಾಗಿ ತಾಯಿಯ ಮಾತು ಕೇಳುವ ವ್ಯಕ್ತಿಯಿಂದಲೂ ನೀವು ದೂರವಿರುವುದು ಒಳ್ಳೆಯದು.