ಅತಿಯಾದ ಕಾಮಾಸಕ್ತಿ ನಿಯಂತ್ರಿಸಲು ನೀವಿದನ್ನ ಮಾಡಿ
ಅತಿಯಾದ ಕಾಮಾಸಕ್ತಿಯಿಂದ ಮುಂದೆ ನಿಮ್ಮ ಜೀವನಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಆದುದರಿಂದ ಇದನ್ನು ನಿಯಂತ್ರಿಸುವುದು ತುಂಬಾನೆ ಮುಖ್ಯವಾಗಿದೆ. ಆದರೆ ಹೆಚ್ಚಿನ ಕಾಮಾಸಕ್ತಿಯನ್ನು ಹೇಗೆ ನಿಯಂತ್ರಿಸೋದು, ಅದಕ್ಕಾಗಿ ಏನು ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.
ಅತಿಯಾದ ಕಾಮಾಸಕ್ತಿಯು ಒಂದು ರೋಗವಾಗಿದ್ದು, ಈ ರೋಗದಿಂದ ಬಳಲುತ್ತಿರುವ ಜನರು ಈ ರೋಗದ ಬಗ್ಗೆ ಸರಿಯಾಗಿ ತಿಳಿದಿರೋದಿಲ್ಲ ಮತ್ತು ಅವರು ಈ ಕಾಯಿಲೆ ರೋಗನಿರ್ಣಯಕ್ಕೆ ಒಳಗಾಗುವ ಹೊತ್ತಿಗೆ, ಅದು ತುಂಬಾ ತಡವಾಗಿರುತ್ತೆ. ಕಾಮಾಸಕ್ತಿ (ಅತಿಯಾದ ಲೈಂಗಿಕತೆಯನ್ನು ಹೊಂದುವ ಬಯಕೆ, ಇಂಗ್ಲಿಷ್ ನಲ್ಲಿ sex addiction) ಎಂದು ಕರೆಯಲಾಗುತ್ತದೆ) ಚಿಕಿತ್ಸೆ ನೀಡಬಹುದಾದ ಮಾನಸಿಕ ಕಾಯಿಲೆ. ಅಂದರೆ ಹೆಚ್ಚಿನ ಕಾಮಾಸಕ್ತಿ ಹೊಂದಿರೋ ಜನರನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ಇರಿಸಿದರೆ, ರೋಗವನ್ನು ಎರಡರಿಂದ ಮೂರು ವಾರಗಳಲ್ಲಿ ನಿಯಂತ್ರಿಸಬಹುದು.
ಆಧ್ಯಾತ್ಮಿಕತೆಯಲ್ಲಿ ತೊಡಗಿರುವ ಜನರು ಪ್ರಾಪಂಚಿಕ ಸುಖಗಳ ಮೇಲೆ ಗಮನ ಕಡಿಮೆ ಮಾಡಲು ತಮ್ಮ ಲೈಂಗಿಕ ಡ್ರೈವ್ (sex drive) ನಿಯಂತ್ರಿಸಲು ಬಯಸುತ್ತಾರೆ.ಇತರ ಜನರು ತಮ್ಮ ಅತಿಯಾದ ಲೈಂಗಿಕ ಡ್ರೈವ್ ಕಡಿಮೆ ಮಾಡಲು ಬಯಸುತ್ತಾರೆ ಏಕೆಂದರೆ ಅವರು ಲೈಂಗಿಕತೆಯ ಸಮಯದಲ್ಲಿ ತಮ್ಮ ನಿಯಂತ್ರಣ ಕಳೆದುಕೊಳ್ಳುತ್ತಾರೆ ಅಥವಾ ಅವರಿಗೆ ಯಾವುದೇ ಸಂಗಾತಿ ಇರುವುದಿಲ್ಲ, ಆದ್ದರಿಂದ ಹೆಚ್ಚಿನ ಸೆಕ್ಸ್ ಡ್ರೈವ್ ಹತಾಶೆಯ ಪರಿಣಾಮವಾಗಿದೆ.
ನಿಮ್ಮ ಸೆಕ್ಸ್ ಡ್ರೈವ್ ಉತ್ತುಂಗದಲ್ಲಿದ್ದರೆ ಮತ್ತು ಕೆಲವು ಕಾರಣಗಳಿಂದಾಗಿ ನೀವು ಅದನ್ನು ಪೂರೈಸಲು ಸಾಧ್ಯವಾಗದಿದ್ದರೆ, ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆ ಮಾಡುವ ಮೂಲಕ ನೀವು ನಿಮ್ಮ ಕಾಮಾಸಕ್ತಿಯನ್ನು ನಿಯಂತ್ರಿಸಬಹುದು. ಈ ರೋಗವನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವೊಂದು ಕ್ರಮಗಳ ಬಗ್ಗೆ ವಿವರವಾಗಿ ಇಲ್ಲಿ ಮಾಹಿತಿ ನೀಡುತ್ತೇವೆ.
ಬ್ಲೂ ಫಿಲಂ (blue film) ನೋಡೋದನ್ನು ನಿಲ್ಲಿಸಿ
ನೀವು ಹೆಚ್ಚು ಹೆಚ್ಚು ಬ್ಲೂ ಫಿಲಂ ನೋಡುತ್ತಿದ್ದರೆ, ಅದನ್ನೂ ಸಹ ನಿಯಂತ್ರಿಸಬೇಕು. ನಿಮ್ಮ ಬಳಿ ಇದ್ದ ಎಲ್ಲಾ ಬ್ಲೂ ಫಿಲಂಗಳನ್ನು ಡಿಲಿಟ್ ಮಾಡಿ. ನಿಮ್ಮ ಕಂಪ್ಯೂಟರಿಗೆ ಬ್ಲಾಕರ್ ಸಾಫ್ಟ್ ವೇರ್ ತೆಗೆದುಕೊಳ್ಳಿ. ಇದನ್ನು ಮಾಡೋದ್ರಿಂದ, ನಿಮ್ಮ ಮನಸ್ಸಿನಲ್ಲಿ ಎಲ್ಲಾ ಸಮಯದಲ್ಲೂ ಅಶ್ಲೀಲ ಆಲೋಚನೆಗಳು ಮೂಡೋದು ಕಡಿಮೆಯಾಗುತ್ತದೆ.
ಹುಡುಗಿಯರನ್ನು ಮತ್ತೊಂದು ಕೋನದಿಂದ ನೋಡಿ: ಲೈಂಗಿಕ ವ್ಯಸನಿಗಳಾಗಿರುವುದರ (sex addiction) ಅತಿದೊಡ್ಡ ಅನಾನುಕೂಲವೆಂದರೆ ಅವರು ಪ್ರತಿ ಹುಡುಗಿಯನ್ನು ಲೈಂಗಿಕ ವಸ್ತುವಿನಂತೆ ನೋಡಲು ಪ್ರಾರಂಭಿಸುತ್ತಾರೆ. ಇದನ್ನು ತಪ್ಪಿಸಲು, ಹುಡುಗಿಯರನ್ನು ವಿಭಿನ್ನ ಕೋನದಿಂದ ನೋಡಿ. ಅವರನ್ನು ನೋಡಿ ಅವರ ಬಾಲ್ಯ ಹೇಗಿದ್ದಿರಬಹುದು?, ಅವರು ಏನನ್ನು ಇಷ್ಟಪಡ್ತಾರೆ? ಅನ್ನೋದೆಲ್ಲಾ ತಿಳಿಯಿರಿ. ನೀವು ಅವರೊಂದಿಗೆ ಮಾತನಾಡಲು ಅವಕಾಶ ಪಡೆದರೆ, ಅವರ ಇಷ್ಟಗಳು ಮತ್ತು ಕಷ್ಟಫ಼ಳ ಬಗ್ಗೆ ತಿಳಿಯಿರಿ. ಅವರ ದೇಹದ ಬದಲು, ಅವರ ಕಣ್ಣುಗಳ ಮೇಲೆ ಗಮನ ಇರಲಿ.
ಇಂಟರ್ನೆಟ್ ಬಳಸೋದನ್ನು ನಿಲ್ಲಿಸಿ: ಇಂಟರ್ನೆಟ್ ಮಾತ್ರ ಬಳಸುವುದನ್ನು ನಿಲ್ಲಿಸಿ. ಕುಟುಂಬದ ನಡುವೆ ಸಾಧ್ಯವಾದಷ್ಟು ಸಮಯ ಕಳೆಯಿರಿ. ಮಕ್ಕಳೊಂದಿಗೆ ಆಟವಾಡಿ. ಅವರ ಸುತ್ತಲೂ ಇರಿ. ಸಂಗೀತ, ಚಿತ್ರಕಲೆಯಂತಹ ಹವ್ಯಾಸ ಬೆಳೆಸಿಕೊಳ್ಳಿ ಮತ್ತು ಅದರಲ್ಲಿ ವ್ಯಸ್ತರಾಗಿರಿ.
ಸಾಮಾಜಿಕ ಚಟುವಟಿಕೆಗಳಲ್ಲಿ (social acitivity) ಪಾಲ್ಗೊಳ್ಳಿ: ಧಾರ್ಮಿಕ ಆಚರಣೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳೋದು ತುಂಬಾನೆ ಮುಖ್ಯ. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಅಂದರೆ ನೆರೆಹೊರೆಯ ಜನರೊಂದಿಗೆ ಸಂತೋಷ ಮತ್ತು ದುಃಖ ಹಂಚಿಕೊಳ್ಳಿ. ಏನಾದರೂ ಕೆಟ್ಟ ವಿಷಯ ನಡೆದರೆ, ಅದನ್ನು ಸ್ನೇಹಿತರ ಜೊತೆ ಹಂಚಿ. ಧಾರ್ಮಿಕ ಪುಸ್ತಕಗಳನ್ನು ಇಟ್ಟುಕೊಳ್ಳಿ, ಕ್ಯಾಸೆಟ್ ಆಲಿಸಿ, ಕ್ಯಾಲೆಂಡರ್ ಗಳನ್ನು ನಿಮ್ಮ ಕೋಣೆಯಲ್ಲಿ ಇರಿಸಿ.
ಹಸ್ತಮೈಥುನಕ್ಕೆ ಮೊರೆ ಹೋಗಬೇಡಿ: ಲೈಂಗಿಕ ಬಯಕೆಯನ್ನು ಪೂರೈಸಲು ಹಸ್ತಮೈಥುನವನ್ನು (masturbation) ಆಶ್ರಯಿಸಬೇಡಿ. ನೀವು ಉದ್ರೇಕಗೊಂಡಾಗ ಅಲೈಂಗಿಕ ಚಿತ್ರಗಳ ಬಗ್ಗೆ ಯೋಚಿಸಿ ಮತ್ತು ಪ್ರಚೋದನೆ ಕಡಿಮೆಯಾಗುವವರೆಗೆ ಇತರ ಕೆಲವು ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ.
ನಿಮ್ಮ ನೆಚ್ಚಿನ ಆಹಾರ ಸೇವಿಸಿ: ಆಹಾರವು ಎಲ್ಲವನ್ನೂ ಮರೆಯಬಹುದಾದ ಒಂದು ವಸ್ತುವಾಗಿದೆ. ನೀವು ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಬಯಸಿದರೆ, ಆಹಾರಕ್ಕಾಗಿ ಎಲ್ಲಿಗಾದರೂ ಹೋಗಿ ಅಥವಾ ಮನೆಯಲ್ಲಿ ನಿಮ್ಮ ನೆಚ್ಚಿನ ಆಹಾರ (favorite food) ಸೇವಿಸುವ ಮೂಲಕ ನೀವು ಈ ಬಯಕೆಯನ್ನು ನಿವಾರಿಸಬಹುದು.
ಬೇರೆ ರೀತಿಯ ಚಟುವಟಿಕೆ ಮಾಡಿ: ಜನರೊಂದಿಗೆ ಉತ್ತಮ ರೀತಿಯ ಸಂಬಂಧ ಹೊಂದಿ. ಅಂದರೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಪ್ರಯಾಣ ಅಥವಾ ವಿವಿಧ ರೀತಿಯ ಹೊಸ ಹವ್ಯಾಸಗಳನ್ನು ಮಾಡಿ. ಇದಲ್ಲದೆ, ನೀವು ಕ್ಲಬ್ ಅಥವಾ ಸ್ವಯಂಸೇವಕ ಸಂಸ್ಥೆಗೆ ಸೇರಬಹುದು. ಇದರಿಂದ ಇತರ ಜನರೊಂದಿಗೆ ಉತ್ತಮ ಸಂಬಂಧ ಹೊಂದಲು ಸಹಾಯವಾಗುತ್ತೆ..