ಮದುವೆಯೆಂಬುದು ಒಂದು ಸುಂದರವಾದ ಸಂಬಂಧ. ಆದ್ರೆ ಮದ್ವೆಯಾಗೋ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಹೆಚ್ಚಿನವರು ಇಷ್ಟಪಟ್ಟು ಮದ್ವೆಯಾದರೆ, ಇನ್ನು ಕೆಲವರು ಕಷ್ಟಪಟ್ಟು ಮದ್ವೆಯಾಗ್ತಾರೆ. ಇನ್ನೂ ಕೆಲವೊಬ್ಬರು ಕೆಲ ವಿಚಿತ್ರ ಕಾರಣಗಳಿಗೆ ಮದ್ವೆಯಾಗ್ತಾರಂತೆ..ಅದೇನು ?

ಮದುವೆ (Marriage)ಯೆಂಬುದು ವ್ಯಕ್ತಿಯು ಜೀವನದಲ್ಲಿ ರೂಪಿಸಿಕೊಳ್ಳುವ ಸುಂದರವಾದ ಸಂಬಂಧ (Relationship). ಆದರೆ ಎಲ್ಲರೂ ಈ ಸಂಬಂಧದಲ್ಲಿ ಇರಬೇಕೆಂದು ಬಯಸುವುದಿಲ್ಲ. ಕೆಲವರಿಗೆ ಮದುವೆಯೆಂಬ ಸಂಬಂಧವೇ ಕಟ್ಟುಪಾಡು ಎನಿಸಿಕೊಳ್ಳುತ್ತದೆ. ಇಂಥವರು ಒಂಟಿಯಾಗಿದ್ದು ಬಿಡುತ್ತಾರೆ. ಉಳಿದವರು ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಮದ್ವೆಯಾಗುತ್ತಾರೆ. ಕೆಲವೊಬ್ಬರು ಸಂಸ್ಕೃತಿ, ಆಚಾರ-ವಿಚಾರವನ್ನು ಗೌರವಿಸಿ ದಾಂಪತ್ಯ ಜೀವನ ಸುಂದರವಾಗಿ ನಡೆಸಿಕೊಂಡು ಹೋಗಬೇಕೆಂದು ಮದ್ವೆಯಾಗ್ತಾರೆ. ಆದರೆ ಇನ್ನು ಕೆಲವರು ವಿಚಿತ್ರ ಕಾರಣಗಳಿಗೆ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಆ ಕಾರಣಗಳೇನು ?

ಸಾಮಾಜಿಕ ಒತ್ತಡ ಸಹಿಸೋಕಾಗಲ್ಲ: ಸಂಬಂಧಿಗಳು, ಸುತ್ತಲಿರುವ ಪ್ರತಿಯೊಬ್ಬರೂ ಮದುವೆಯಾಗುತ್ತಿರುವಾಗ, ಹೆಚ್ಚಿನವರು ಮದುವೆಯಾಗಲು ಸಾಮಾಜಿಕ ಒತ್ತಡವನ್ನು (Social pressure) ಅನುಭವಿಸಬಹುದು. ಸುತ್ತಲಿರುವ ಪ್ರತಿಯೊಬ್ಬರೂ ಬಿಝಿಯಾಗಿರುವಾಗ ಮದುವೆಯ ಪ್ರಶ್ನೆಗಳನ್ನು ನಿರಂತರವಾಗಿ ಕೇಳುವುದು ಹಿಂಸೆಯೆನಿಸಬಹುದು. ಹೀಗಿರುವಾಗ ಅನಾವಶ್ಯಕವಾಗಿ ಇಂಥಾ ಟೆನ್ಶನ್ ಮಾಡುವ ಬದಲು ಹೆಚ್ಚಿನವರು ಮದುವೆಯಾಗುವುದೇ ತುಂಬಾ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. 

ಮದುವೆಗೆ ಹುಡುಗ ಹುಡುಕೋ ಅವಸರದಲ್ಲಿ ಈ ತಪ್ಪು ಮಾಡ್ಬೇಡಿ…

ಕುಟುಂಬದ ಒತ್ತಡ ಯಾರಿಗೆ ಬೇಕು: ಸಮಾಜದ ಹೊರತಾಗಿ, ಕುಟುಂಬದ ಒತ್ತಡವು ಹೆಚ್ಚಿನವರು ಮದುವೆಯಾಗಲು ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಕುಟುಂಬದ ಸದಸ್ಯರು (Family members) ನೀವು ಯಾರನ್ನಾದರೂ ಭೇಟಿಯಾಗಲು ಮತ್ತು ಮದುವೆಯಾಗಲು ನಿರಂತರವಾಗಿ ಒತ್ತಡ ಹೇರಬಹುದು. ಇದನ್ನು ಪ್ರತಿಬಾರಿಯೂ ನಿರ್ಲಕ್ಷಿಸುವುದು ಕಷ್ಟ. ಹೀಗಿದ್ದಾಗ ಮನೆಯವರಿಗೆ ಪ್ರತಿಬಾರಿಯೂ ನೋ ಎನ್ನುವುದು ಕಷ್ಟ ಎಂದು ಹೆಚ್ಚಿನವರು ಮದುವೆಯ ಆಯ್ಕೆಯನ್ನು ಮಾಡಿಕೊಳ್ಳಬಹುದು.

ಮದುವೆ ಸಮಸ್ಯೆಗಳನ್ನು ಪರಿಹರಿಸುತ್ತದೆ: ಕೆಲವೊಮ್ಮೆ ಆಫೀಸ್, ಮನೆ ಎಂಬ ರೊಟೀನ್ ಲೈಫ್ ಬೋರಿಂಗ್ ಅನಿಸಿಬಿಡುತ್ತದೆ. ಇಂಥಾ ಸಂದರ್ಭಗಳಲ್ಲಿ ಮದುವೆಯಾಗುವುದು ಜೀವನದಲ್ಲಿ ಚೇಂಜಸ್ ತರುತ್ತದೆ ಎಂದು ಹಲವರು ನಂಬುತ್ತಾರೆ. ಕೆಲವೊಮ್ಮೆ ಇಬ್ಬರ ನಡುವಿನ ಹೊಂದಾಣಿಕೆ ಸರಿಯಾಗಿದ್ದರೆ ವೈಯುಕ್ತಿಕ ಜೀವನದಲ್ಲಿರುವ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ. ಹೀಗಾಗಿಯೇ ಹೆಚ್ಚಿನವರು ಲೈಫ್‌ಲ್ಲಿ ಚೇಂಜ್ ಬೇಕೆಂದು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ.

ಮದ್ವೆಯಾಗೋ ಹುಡುಗನಲ್ಲಿ ಇಂಥಾ ಗುಣವಿರ್ಲಿ ಅಂತ ಹುಡುಗೀರು ಬಯಸ್ತಾರಂತೆ

ಸಂಗಾತಿ ಬಿಟ್ಟು ಹೋಗಬಹುದು: ಸಂಗಾತಿಯು (Partner) ಮದುವೆಯಾಗಲು ತುಂಬಾ ಉತ್ಸುಕನಾಗಿದ್ದಾಗ ಕೆಲವೊಬ್ಬರು ತಕ್ಷಣ ಮದುವೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮದುವೆಗೆ ಒಪ್ಪದಿದ್ದರೆ, ಸಂಗಾತಿ ನಮ್ಮನ್ನು ಬಿಟ್ಟು ಹೋಗಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ, ನೀವು ಎಂದಿಗೂ ಮದುವೆಯಾಗಲು ಒತ್ತಡವನ್ನು ಅನುಭವಿಸಬಾರದು, ವಿಶೇಷವಾಗಿ ನಿಮ್ಮ ಸಂಗಾತಿಯಿಂದ. ನೀವು ಮಾನಸಿಕವಾಗಿ ಸಿದ್ಧರಾದಾಗ ಮಾತ್ರ ಅದನ್ನು ಒಪ್ಪಿಕೊಳ್ಳಿ.

ಸಂಬಂಧವನ್ನು ಸಾಬೀತುಪಡಿಸುವುದು: ಮದುವೆಯು ಸಮಾಜದ ಮೂಲ ಅಡಿಪಾಯವಾಗಿದೆ ಮತ್ತು ಕುಟುಂಬವನ್ನು ಕಟ್ಟಲು ಇದು ಅತ್ಯಂತ ಮುಖ್ಯವಾಗಿದೆ. ಆದರೆ ಅದಕ್ಕಾಗಿ, ನಿಮ್ಮ ಸಂಬಂಧದ ಪವಿತ್ರತೆಯನ್ನು ಸಾಬೀತುಪಡಿಸಲು ನೀವು ಮದುವೆಯಾಗಬೇಕಾಗಿಲ್ಲ. ಆದರೆ ಹೆಚ್ಚಿನವರು ಸಂಬಂಧವನ್ನು ಸಾಬೀತುಪಡಿಸಲು ಮದುವೆಯಾಗುತ್ತಾರೆ. ಲಿವ್ ಇನ್ ರಿಲೀಶನ್ ಶಿಪ್‌, ಲವ್ ಇದ್ಯಾವುದೂ ಸಂಬಂಧಗಳಿಗೆ ಒಪ್ಪಿಗೆ ಸೂಚನೆಯಲ್ಲ. ಆದರೆ ಮದುವೆಯೆಂದು ಸಂಬಂಧಕ್ಕೆ ಕುಟುಂಬದಿಂದ ಸಂಪೂರ್ಣ ಸಮ್ಮತಿ ಸಿಕ್ಕಂತೆ. ಹೀಗಾಗಿ ಹೆಚ್ಚಿನವರು ಯಾವಾಗಲೂ ಸಂಬಂಧದ ಬಗ್ಗೆ ವಿವರಿಸುತ್ತಾ ಕೂರುವುದು ಚೆನ್ನಾಗಿರಲ್ಲ ಅನ್ನೋ ಕಾರಣಕ್ಕೆ ಸಂಬಂಧವನ್ನು ಅಧಿಕೃತಗೊಳಿಸುತ್ತಾರೆ.

Relationship Tips: ಮದುವೆಯಾದ ಬಳಿಕ ಎಕ್ಸ್‌ ಜತೆ ಸಂಪರ್ಕದಲ್ಲಿರ್ಬೇಕಾ, ಬೇಡ್ವಾ?

ಒಂಟಿಯಾಗಿರಲು ಬೋರಾಗುತ್ತದೆ: ಒಂಟಿ (Alone)ಯಾಗಿರುವುದು ತುಂಬಾ ಕೆಟ್ಟ ಅನುಭವ. ಇದು ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಮೂಡಿಸುತ್ತದೆ. ಒಬ್ಬಂಟಿಯಾಗಿರುವುದು ನಿಜವಾಗಿಯೂ ದುಃಖಕರ ಮತ್ತು ಭಯಾನಕವಾಗಬಹುದು. ಹೀಗಿದ್ದಾಗ ಮದುವೆಯಾಗುವ ಆಪ್ಶನ್ ತುಂಬಾ ಒಳ್ಳೆಯದು. ಇದರಿಂದ ನೀವು ಮನಸ್ಸಿನ ಮಾತುಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಅಂದುಕೊಂಡೇ ಹಲವರು ಮದುವೆಯಾಗುತ್ತಾರೆ