Asianet Suvarna News Asianet Suvarna News

Relationship Tips: ಮದುವೆಯಾದ ಬಳಿಕ ಎಕ್ಸ್‌ ಜತೆ ಸಂಪರ್ಕದಲ್ಲಿರ್ಬೇಕಾ, ಬೇಡ್ವಾ?

ಮದುವೆಯಾದ ಬಳಿಕ ಎಕ್ಸ್‌ ಜತೆಗೆ ಸಂಪರ್ಕದಲ್ಲಿ ಇರಬೇಕೋ ಬೇಡವೋ ಎನ್ನುವುದು ಸಾಕಷ್ಟು ಮಹಿಳೆಯರ ಗೊಂದಲ. ಎಕ್ಸ್‌ ಜತೆ ಯಾವ ರೀತಿಯ ಸಂಪರ್ಕದಲ್ಲಿ ಇರುತ್ತಾರೆ ಎನ್ನುವುದು ಮುಖ್ಯ. ಪತಿಗೆ ತಿಳಿದೇ ಔಪಚಾರಿಕ ಸ್ನೇಹವಿದೆಯೇ ಅಥವಾ ಪತಿಯಿಂದ ಮುಚ್ಚಿಡಬೇಕಾದ ಸ್ನೇಹವಾಗಿದೆಯೇ ಎನ್ನುವುದನ್ನು ಸ್ಪಷ್ಟ ಮಾಡಿಕೊಳ್ಳಬೇಕು. ಹಾಗಿದ್ದರೆ ಅದಕ್ಕೆ ಅರ್ಥವೇನು ಎಂದು ಪ್ರಶ್ನಿಸಿಕೊಳ್ಳಬೇಕು.
 

After marriage contact with ex boyfriend is right or wrong
Author
First Published Nov 12, 2022, 4:57 PM IST

“ಆಕೆಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಹೊಸ ಬದುಕಿನಲ್ಲಿ ಹೊಸತಾದ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹೊತ್ತಿನಲ್ಲಿ ಎಕ್ಸ್‌ ಬಾಯ್‌ ಫ್ರೆಂಡ್‌ ನಿಂದ ಫೇಸ್‌ ಬುಕ್‌ ನಲ್ಲಿ ಫ್ರೆಂಡ್‌ ಶಿಪ್‌ ರಿಕ್ವೆಸ್ಟ್. ಬಳಿಕ, ಚಾಟಿಂಗ್‌ ಆರಂಭ. “ಒಮ್ಮೆ ಮೀಟ್‌ ಮಾಡೋಣʼ ಎನ್ನುವ ಸ್ನೇಹಿತನ ಬಯಕೆಯನ್ನು ತಿರಸ್ಕರಿಸಲೂ ಆಗದೆ, ಮದುವೆಯ ಬಳಿಕ ಹಳೆಯ ಸ್ನೇಹಕ್ಕೆ ಮತ್ತೆ ಹೊಸ ಬಣ್ಣ ತುಂಬುವುದು ಸರಿಯಲ್ಲ ಎನ್ನುವ ಭಾವನೆಯೂ ಕಾಡಿ ತಳಮಳಿಸುತ್ತಿದ್ದಾಳೆʼ. ಹಾಗೆ ನೋಡಿದರೆ ಇದು ಆಕೆಯೊಬ್ಬಳ ಕಥೆಯಲ್ಲ. ಮನೆಮನೆಯಲ್ಲಿ ಒಬ್ಬಿಬ್ಬರಾದರೂ ಮಹಿಳೆಯರು ಈ ಸಂದಿಗ್ಧತೆಯಲ್ಲಿ ತೊಳಲಾಡುತ್ತಿರಬಹುದು. ಜೀವನದ ಒಂದಲ್ಲ ಒಂದು ಹಂತದಲ್ಲಿ ಇಂಥದ್ದೊಂದು ಗೊಂದಲಕ್ಕೆ ಸಮೀಪವಾಗಿರಬಹುದು. ಏಕೆಂದರೆ, ಜಗತ್ತು ದುಂಡಗಿದೆ. ಒಬ್ಬರು ಒಮ್ಮೆ ಮರೆಯಾದರು ಎಂದ ಮಾತ್ರಕ್ಕೆ ಮತ್ತೆ ಯಾವಾಗಲೋ ಅವರು ಎದುರಾಗಬಾರದು ಎಂದೇನಿಲ್ಲ. ಆ ಸಮಯದಲ್ಲಿ ನಾವು ಹೇಗಿರುತ್ತೇವೆ, ಯಾವುದಕ್ಕೆ ಆದ್ಯತೆ ನೀಡುತ್ತೇವೆ, ಭಾವನೆಗಳಲ್ಲಿ ಕೊಚ್ಚಿ ಹೋಗುತ್ತೇವೆಯೋ ಇಲ್ಲವೋ ಎನ್ನುವುದು ಮುಖ್ಯ. ಎಕ್ಸ್‌ ಎದುರಾದಾಗ ಹಳೆಯ ನೆನಪುಗಳು, ಒಡನಾಡಿದ ಕ್ಷಣಗಳು, ಅವರೊಂದಿಗೆ ಕಳೆದ ಸಮಯ ಎಲ್ಲವೂ ಕಾಡುವುದು ಸಹಜ. ಅಂಥದ್ದೊಂದು ಹೊಸ್ತಿಲಲ್ಲಿ ನೀವಿದ್ದರೆ ಏನ್‌ ಮಾಡ್ತೀರಿ?

ನಿಜ, ಮದುವೆಯ ಬಳಿಕ ಎಕ್ಸ್‌ (Ex BoyFriend) ಜತೆ ಸಂಪರ್ಕದಲ್ಲಿರಬೇಕೇ (Contact) ಇಲ್ಲವೇ ಎನ್ನುವುದು ಬಹಳಷ್ಟು ಮಹಿಳೆಯರಿಗೆ (Woman) ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಹಳೆಯ ಸ್ನೇಹಿತನ ಬೇಡಿಕೆ ತಿರಸ್ಕರಿಸಲಾಗದೆ ದೈಹಿಕ ಸಂಪರ್ಕಕ್ಕೆ (Physical Contact) ಮುಂದಾಗುವವರೂ ಇದ್ದಾರೆ. ಬಳಿಕ, ಅದರಿಂದಾಗುವ ಪರಿತಾಪ, ಸುಳ್ಳು (Lie) ಹೇಳುವ ಪರಿಸ್ಥಿತಿ, ಪತಿಯಿಂದ ಹಲವು ಸಂಗತಿಗಳನ್ನು ಮುಚ್ಚಿಡಬೇಕಾದ ಅನಿವಾರ್ಯತೆ, ಅದರಿಂದ ಉಂಟಾಗುವ ಹಿಂಜರಿಕೆ, ತಳಮಳ ಎಲ್ಲವೂ ಅವರನ್ನು ಕಾಡುತ್ತವೆ, ನಿಸ್ಸಹಾಯಕರನ್ನಾಗಿ (Helpless) ಮಾಡಿಬಿಡುತ್ತವೆ. ಅವರ ಸ್ವತಂತ್ರ ಬದುಕು, ಸಾಮಾಜಿಕ ಜೀವನ (Social Life) ನಿಧಾನವಾಗಿ ಹಾಳಾಗುತ್ತದೆ. ಹೀಗಾಗಿ, ಹಳೆಯ ಸ್ನೇಹಿತನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಮುನ್ನವೇ ಎಚ್ಚರಿಕೆ ವಹಿಸಬೇಕು. ಅಷ್ಟಕ್ಕೂ ಹಳೆಯ ಸ್ನೇಹ (Old Friendship) ಮತ್ತೆ ಈಗ ಯಾಕೆ ಬೇಕೆಂದು ಮೊದಲನೆಯದಾಗಿ ಕೇಳಿಕೊಳ್ಳಬೇಕು. ಅಂದು ದೂರವಾದ ಸ್ನೇಹವೇ ಇಂದು ಬೇಕು ಎನಿಸುತ್ತಿದೆ ಎಂದಾದರೆ ಅದಕ್ಕೆ ಕಾರಣವೇನೆಂದು ವಿಮರ್ಶೆ ಮಾಡಿಕೊಳ್ಳಬೇಕು. 

ಮದ್ವೆಯಾಗೋ ಹುಡುಗನಲ್ಲಿ ಇಂಥಾ ಗುಣವಿರ್ಲಿ ಅಂತ ಹುಡುಗೀರು ಬಯಸ್ತಾರಂತೆ

ದೈಹಿಕ ಸಂಬಂಧದ ಆಕರ್ಷಣೆ (Physical Atrraction)
ಯಾವುದೇ ಸಂಬಂಧಕ್ಕೂ (Relation) ಒಂದಿಷ್ಟು ಆರಂಭಗಳಿರುತ್ತವೆ. ಎಕ್ಸ್‌ ಜತೆಗಿನ ಸಂಬಂಧವೂ ಹೀಗೆಯೇ. ಬಹಳಷ್ಟು ಮಹಿಳೆಯರು ಥ್ರಿಲ್‌ ಗೆಂದೋ ಅಥವಾ ಅನಿವಾರ್ಯವಾಗಿಯೋ ಈ ದಾರಿಯಲ್ಲಿ ಬಂದು ನಿಂತುಬಿಡುತ್ತಾರೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಮನಸ್ಥಿತಿ ಅಗತ್ಯ. ಏಕೆಂದರೆ, ಅಂದು ದೂರವಾಗಿದ್ದ ಸ್ನೇಹಿತ, ನಿಮ್ಮ ಮದುವೆ (Marriage) ಎನ್ನುವುದು ತಿಳಿದರೂ ದೂರವಾಗಿಯೇ ಇದ್ದ ಸ್ನೇಹಿತ ಈಗ ಮತ್ತೆ ನಿಮ್ಮ ಬಳಿ ಬಂದು ಭಾವನಾತ್ಮಕವಾಗಿ (Emotional) ನಿಮ್ಮನ್ನು ಒಲಿಸಿಕೊಳ್ಳಲು ಇಷ್ಟಪಡುತ್ತಿದ್ದಾನೆ ಎಂದರೆ, ಅದರ ಹಿಂದೆ, ಕೇವಲ ನಿಮ್ಮ ಕುರಿತಾಗಿರುವ ಪೊಸೆಸಿವ್‌ ನೆಸ್‌ (Possessiveness) ಹಾಗೂ ದೈಹಿಕ ವಾಂಛೆ ಇರಬಹುದು. ಅದಕ್ಕಾಗಿ, ಇಲ್ಲಸಲ್ಲದ ಮಾತುಗಳನ್ನು ಆಡಬಹುದು. ನೀವೇ ಯೋಚನೆ ಮಾಡಿ. ನೈತಿಕ ಮೌಲ್ಯ (Moral Value) ಇರುವವರಾದರೆ ಮದುವೆಯಾದ ನಿಮ್ಮ ಸಂಪರ್ಕ ಬಯಸಿ ಹತ್ತಿರವಾಗಲು ಯತ್ನಿಸುವುದಿಲ್ಲ. ಒಂದೊಮ್ಮೆ ನೀವು ಎದುರಾದರೂ ಸ್ನೇಹದಿಂದ ವರ್ತಿಸಿ, ನಿಮ್ಮ ಪತಿಯನ್ನೂ ಸ್ನೇಹದಿಂದಲೇ ಕಂಡು ಸುಮ್ಮನಿರುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಪುನಃ ನಿಮ್ಮೊಂದಿಗೆ ಗುಟ್ಟಾಗಿ ಹತ್ತಿರವಾಗಲು ಇಷ್ಟಪಡುವುದಿಲ್ಲ. ಅದಕ್ಕೆ ಯತ್ನಿಸುತ್ತಿದ್ದಾರೆ ಎಂದರೆ, ನಿಮ್ಮೊಂದಿಗೆ ಬೇರೆಯವರನ್ನು ನೋಡಿ ಅವರು ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ ಹಾಗೂ ಅವರ ಅಹಂಗೆ ಇದರಿಂದಾಗಿ ಏಟು ಬಿದ್ದಿದೆ ಎಂದರ್ಥ. ಹೀಗಾಗಿ, ಮರಳಿ ನಿಮ್ಮನ್ನು ಪಡೆಯುವ ಹಠಕ್ಕೆ ಬಿದ್ದಿರಬಹುದು. ಇದು ಖಂಡಿತವಾಗಿ ಟಾಕ್ಸಿಕ್‌ ಲವ್ (Toxic Love).

ಪ್ರೀತಿಸ್ದೋರನ್ನ ದೂರ ಮಾಡ್ಬೇಕು ಅಂದ್ರೆ ಕಷ್ಟ ಕಷ್ಟ!

ಬಾಹ್ಯ ಸಂಬಂಧ (Extra Affair) ಬೇಕೆ?
ಇಂತಹ ಸನ್ನಿವೇಶಗಳಲ್ಲಿ ಮಹಿಳೆಯರು ಸ್ವಯಂ ತಾವೇ ದೃಢರಾಗಬೇಕು. ಮದುವೆಯ ಜೀವನ, ಮುಂದಿನ ದೀರ್ಘಕಾಲದ ಬದುಕು (Long Life) ಎಲ್ಲವನ್ನೂ ಪರಾಮರ್ಶೆ ಮಾಡಿಕೊಳ್ಳಬೇಕು. ಅಷ್ಟಕ್ಕೂ ನಿಮ್ಮ ಎಕ್ಸ್‌ ಜತೆಗಿನ ಸಂಬಂಧಕ್ಕೆ ಬರುವ ಹೆಸರು “ಪ್ರೀತಿʼ ಎಂದಲ್ಲ, ಅದು “ಬಾಹ್ಯ ಸಂಬಂಧʼ ಎನಿಸಿಕೊಳ್ಳುತ್ತದೆ. ಅದಕ್ಕೆ ನಮ್ಮ ಸಮಾಜದಲ್ಲಿ ಗೌರವವಿಲ್ಲ. ಅಷ್ಟಕ್ಕೂ ನಿಮ್ಮ ಹಳೆಯ ಗೆಳೆಯನೇ ಬೇಕು ಎನಿಸಿದರೆ ಪತಿಯಿಂದ (Husband) ಅಧಿಕೃತವಾಗಿ ದೂರವಾಗಿ ಎಕ್ಸ್‌ ನನ್ನೇ ಮದುವೆ ಮಾಡಿಕೊಳ್ಳಬೇಕು.   
 
 

Follow Us:
Download App:
  • android
  • ios