Asianet Suvarna News Asianet Suvarna News

ಅಬ್ಬಬ್ಬಾ..ಮೂವರು ಸಹೋದರಿಯರಿಗೆ ಒಬ್ಬನೇ ಗಂಡ !

ಮಹಿಳೆ ತನ್ನ ಗಂಡ ಮತ್ತು ಅವನ ಪ್ರೀತಿಯನ್ನು ಹೊರತುಪಡಿಸಿ ಎಲ್ಲವನ್ನೂ ಬೇರೆಯವರೊಂದಿಗೆ ಹಂಚಿಕೊಳ್ಳಬಲ್ಲಳು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಇಲ್ಲಿ ಕೆಲ ಸಹೋದರಿಯರು ಅದು ಸುಳ್ಳೆಂಬುದನ್ನು ಸಾಬೀತುಪಡಿಸಿದ್ದಾರೆ. ಮೂವರು ಸಹೋದರಿಯರು ಒಬ್ಬನನ್ನೇ ಮದ್ವೆಯಾಗಿ ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. 

The Story Of Three Sisters Who Share The Same Husband Vin
Author
First Published Sep 25, 2022, 3:44 PM IST

ಇದು ನಂಬಲಸಾಧ್ಯವೆಂದು ತೋರುತ್ತದೆಯಾದರೂ ಅಕ್ಷರಶಃ ನಿಜ. ಹೌದು, ಒಬ್ಬ ಮಹಿಳೆ ತನ್ನ ಸಹೋದರಿಯರೊಂದಿಗೆ ಗಂಡನೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದಾಳೆ. ಮೂವರು ಸಹೋದರಿಯರು ಸಹ ಒಬ್ಬನೇ ಪುರುಷನನ್ನು ಮದುವೆಯಾಗಿದ್ದಾರೆ. ಮಹಿಳೆ ತನ್ನ ಗಂಡ ಮತ್ತು ಅವನ ಪ್ರೀತಿಯನ್ನು ಹೊರತುಪಡಿಸಿ ಎಲ್ಲವನ್ನೂ ಬೇರೆಯವರೊಂದಿಗೆ ಹಂಚಿಕೊಳ್ಳಬಲ್ಲಳು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಸಹೋದರಿಯರು ಅದು ಸುಳ್ಳೆಂಬುದನ್ನು ಸಾಬೀತುಪಡಿಸಿದ್ದಾರೆ. ಮೂವರು ಹೆಂಡತಿಯರು ಓರ್ವ ಗಂಡನನ್ನು ಹಂಚಿಕೊಂಡಿದ್ದಾರೆ. ಆದ್ರೆ ಇವರೆಲ್ಲರ ಮಧ್ಯೆ ಯಾವುದೇ ರೀತಿಯ ಜಗಳ ನಡೆಯುತ್ತಿಲ್ಲ. ನಾಲ್ವರು ಸಹ ಪರಸ್ಪರ ಪ್ರೀತಿ ಹಂಚಿಕೊಂಡು ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.

ಮೊದಲ ಪತ್ನಿ ಕ್ರಿಸ್ಟಿನ್ ತನ್ನ ಪತಿ ಒಂಬೆನಿ ಪ್ರೀತಿ (Love)ಯನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ತನ್ನ ಸಹೋದರಿ (Sisters)ಯರನ್ನು ತನ್ನ ಗಂಡನ ಎರಡನೇ ಮತ್ತು ಮೂರನೇ ಹೆಂಡತಿ (Wife)ಯನ್ನಾಗಿ ಮಾಡಿದ್ದಾರೆ.  ಕ್ರಿಸ್ಟಿನ್ ಅವರು ತಮ್ಮ ನಡೆಯ ಬಗ್ಗೆ ಹೆಮ್ಮೆಪಡುತ್ತಾರೆ. ತಮ್ಮ ಪತಿ ಪ್ರತಿಯೊಬ್ಬರ ಬಗ್ಗೆಯೂ  ಹೆಚ್ಚು ಕಾಳಜಿ (Care) ವಹಿಸುತ್ತಾರೆ ಮತ್ತು ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ ಎಂದು ಕ್ರಿಸ್ಟಿನ್‌ ತಿಳಿಸಿದ್ದಾರೆ. ಗಂಡ (Husband) ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾರೆ ಎಂದು ಸಂತೋಷಪಡುತ್ತಾರೆ. ಮೂವರೂ ಒಟ್ಟಿಗೇ ಒಂದು ಮನೆಯಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಒಂಬೆನಿ ಅವರು ಮೂರು ಹೆಂಡತಿಯರು ಮತ್ತು 10 ಮಕ್ಕಳೊಂದಿಗೆ ತಮ್ಮ ಕುಟುಂಬದೊಂದಿಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಕುಟುಂಬವನ್ನು ಅತ್ಯಂತ ಸಾಮರಸ್ಯದಿಂದ ನಡೆಸುತ್ತಾರೆ. ಇವರೆಲ್ಲರ ಜವಾಬ್ದಾರಿಯನ್ನು ಒಂಬೆನಿ ಒಬ್ಬರೇ ನಿಭಾಯಿಸುತ್ತಾರೆ. ಕಡು ಬಡತನದಲ್ಲಿ ಬದುಕುತ್ತಿರುವ ಇಷ್ಟು ದೊಡ್ಡ ಕುಟುಂಬ (Family)ವನ್ನು ನಿರ್ವಹಣೆ ಮಾಡಲು ಕಷ್ಟ ಪಡುತ್ತಿದ್ದರೂ ಎಲ್ಲರೂ ತೃಪ್ತರಾಗಿದ್ದಾರೆ. ಯಾರಿಗೂ ಯಾರ ವಿರುದ್ಧವೂ ಯಾವುದೇ ದೂರುಗಳಿಲ್ಲ. ತನ್ನ ಪತಿಯನ್ನು ತನ್ನ ಸಹೋದರಿಗೆ ಎರಡನೇ ಬಾರಿಗೆ ಮದುವೆಯಾಗಬೇಕೆಂದು ಕ್ರಿಸ್ಟಿನ್ ವಿಷಯಕ್ಕೆ ಬಂದಾಗ, ಅವಳು ವಿರೋಧಿಸಲಿಲ್ಲ ಬದಲಾಗಿ ಸಂತೋಷದಿಂದ ಒಪ್ಪಿಕೊಂಡಳು ಎಂದು ಒಂಬೆನಿ ತಿಳಿಸಿದ್ದಾರೆ..

ಕುಟುಂಬದ ವೀಡಿಯೋ ನೋಡಿದ ವೀಕ್ಷಕರು ಸುಂದರವಾದ ಕುಟುಂಬ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  'ಇಲ್ಲಿ ಎಲ್ಲರೂ ಅದೃಷ್ಟವಂತರು,  ಪ್ರೀತಿ ಮತ್ತು ಸಂತೋಷದಿಂದ ಕುಟುಂಬ ಒಟ್ಟಿಗೆ ಬೆಳೆಯಲಿ' ಎಂದು ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಕುಟುಂಬದ ವೀಡಿಯೋ 88,616 ವೀಕ್ಷಣೆಗಳನ್ನು ಗಳಿಸಿದೆ.

ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ !

LGBT ಕಾಯ್ದೆ ಅನುಷ್ಠಾನದ ನಂತರ, ಸ್ವ ಲಿಂಗದಲ್ಲಿಯೇ ಮದುವೆಯಾಗಿರುವ ಅನೇಕ ಘಟನೆಗಳ ಬಗ್ಗೆ ನೀವು ಕೇಳಿರಬಹುದು. ಇದರಲ್ಲಿ 2 ಮಹಿಳೆಯರು ಅಥವಾ ಇಬ್ಬರು ಪುರುಷರು ಪರಸ್ಪರ ಮದುವೆಯಾಗುತ್ತಾರೆ. ಇತ್ತೀಚಿiಗೆ ಈ ಸಂಸ್ಕೃತಿಯನ್ನು ಸಾಕಷ್ಟು ಹೆಚ್ಚುತ್ತಿದೆ. ಹಿಂದೆ ಈ ಮದುವೆ ಬಗ್ಗೆ ಕೇಳಿದ್ರೆ ಅಚ್ಚರಿ ಪಡುತ್ತಿದ್ದ ಜನ, ಇದೀಗ ಅದನ್ನು ಸ್ವೀಕರಿಸಲು ಕಲಿತಿದ್ದಾರೆ. ಆದರೆ ಶತಮಾನಗಳಿಂದ ಮಹಿಳೆಯರು ಪರಸ್ಪರ ಮದುವೆಯಾಗುತ್ತಿರುವ ಒಂದು ಸ್ಥಳ ಜಗತ್ತಿನಲ್ಲಿದೆ ಮತ್ತು ಇದರ ಹಿಂದಿನ ಕಾರಣವು ತುಂಬಾ ವಿಶೇಷವಾಗಿದೆ ಅನ್ನೋದು ನಿಮಗೆ ಗೊತ್ತಾ? ನಾವು ಇಂದು ನಿಮಗೆ ತಾಂಜೇನಿಯಾದ ಬುಡಕಟ್ಟಿನ ಬಗ್ಗೆ ತಿಳಿಸುತ್ತೇವೆ, ಅಲ್ಲಿ ಮಹಿಳೆಯರು ಪರಸ್ಪರ ಮದುವೆಯಾಗುತ್ತಾರೆ, ಆದರೆ ದೈಹಿಕ ಸಂಬಂಧ ಮಾತ್ರ ಬೇರೆಯವರೊಂದಿಗೆ ಮಾಡ್ತಾರೆ. 

ಇಲ್ಲಿ ಒಂದೇ ರಾತ್ರಿಗಾಗಿ ಮದ್ವೆ ನಡೆಯುತ್ತೆ… ಮರುದಿನ ಪತಿ -ಪತ್ನಿ ಬೇರೆಯಾಗ್ತಾರೆ

ಪ್ರಪಂಚದಾದ್ಯಂತ ಮದುವೆಯ ಬಗ್ಗೆ ಅನೇಕ ರೀತಿಯ ಸಂಪ್ರದಾಯಗಳಿವೆ, ಅವುಗಳಲ್ಲಿ ಕೆಲವು ಸಾಕಷ್ಟು ವಿಲಕ್ಷಣವಾಗಿವೆ. ಅವುಗಳಲ್ಲಿ ಒಂದು ತಾಂಜೇನಿಯಾದ ನಯಾಮೊಂಗೊ ಗ್ರಾಮದ ಕುರಿಯಾ ಬುಡಕಟ್ಟು ಜನಾಂಗ, ಅಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುತ್ತಾಳೆ. ಈ ಸಂಪ್ರದಾಯವು ಶತಮಾನಗಳಿಂದ ಇಲ್ಲಿ ನಡೆಯುತ್ತಿದೆ. ಇದನ್ನು ನೆವಂಬಾ ನ್ಯೋಭು ಎಂದು ಕರೆಯಲಾಗುತ್ತೆ, ಅಂದರೆ ಮಹಿಳೆಯರ ಮನೆ ಎಂದರ್ಥ. ಮದುವೆಯ ನಂತರ, ಇಬ್ಬರೂ ಮಹಿಳೆಯರು ಒಂದೇ ಮನೆಯಲ್ಲಿ ಸಂಗಾತಿಗಳಾಗಿ ಒಟ್ಟಿಗೆ ವಾಸಿಸುತ್ತಾರೆ. ಆದರೆ ಅವರು ಪರಸ್ಪರ ದೈಹಿಕ ಸಂಬಂಧಗಳನ್ನು ಹೊಂದೋದಿಲ್ಲ.

ಇಬ್ಬರೂ ಪರಸ್ಪರ ಮಾನಸಿಕವಾಗಿ ಸಂಪರ್ಕ ಹೊಂದಿದ್ದಾರೆ, ಆದರೆ ಸಲಿಂಗಕಾಮಿ ಸಂಬಂಧವನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ತಾಂಜೇನಿಯಾದ ಮಹಿಳೆಯರು ಯಾವುದೇ ಪುರುಷನೊಂದಿಗೆ ಸಂಬಂಧವನ್ನು ಹೊಂದಬಹುದು ಮತ್ತು ಅದರಿಂದ ಜನಿಸಿದ ಮಗುವನ್ನು ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ನಂತರ ನೋಡಿಕೊಳ್ಳಲಾಗುತ್ತದೆ. ಇದನ್ನು ಅವರು ತಮ್ಮದೇ ಮಗುವಿನಂತೆ ಸಾಕುತ್ತಾರೆ. 

Follow Us:
Download App:
  • android
  • ios