Asianet Suvarna News Asianet Suvarna News

ಗಂಡ-ಹೆಂಡತಿ ಖುಷಿಯಾಗಿರುವುದು ಪ್ರತ್ಯೇಕ ಬಾತ್‌ರೂಂ ಹೊಂದುವುದರಲ್ಲಿದೆಯಂತೆ!

ಬಾತ್‌ರೂಂಗೂ ವಿವಾಹದ ಸಂತೋಷಕ್ಕೂ ಎತ್ತಣದೆತ್ತಣ ಸಂಬಂಧವಪ್ಪಾ ಎಂದುಕೊಳ್ತಾ ಇದೀರಾ ಅಲ್ವಾ? ತಜ್ಞರ ಪ್ರಕಾರ, ಇದು ನೇರವಾಗಿ ಬಾತ್‌ರೂಂಗೆ ಸಂಬಂಧಿಸಿದ್ದಲ್ಲ, ಬದಲಿಗೆ ಇದು ಕೆಲ ಖಾಸಗಿ ಕ್ಷಣಗಳನ್ನು, ಸ್ವಾತಂತ್ರ್ಯವನ್ನು ಅನುಭವಿಸುವ ಸಮಯದ ಕುರಿತಾಗಿದೆ.

The key to a happy marriage is having separate bathrooms
Author
Bangalore, First Published Nov 23, 2019, 3:18 PM IST

ವಿಶ್ವದ ಹ್ಯಾಪಿ ಕಪಲ್ ಎಂದೊಡನೆ ಟಾಪ್ 1 ಅಲ್ಲಿ ಕಾಣಿಸುವುದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾ. ಕೆಲ ದಿನಗಳ ಹಿಂದಷ್ಟೇ ಬರಾಕ್ ಒಬಾಮಾ ಪ್ರತಿ ಜೋಡಿ ಕೂಡಾ ವಿವಾಹಕ್ಕೆ ಮುನ್ನ ಕೇಳಿಕೊಳ್ಳಬೇಕಾದ 3 ಪ್ರಶ್ನೆಗಳ ಬಗ್ಗೆ ಮಾತನಾಡಿದ್ದರು. ಇದೀಗ ಅವರ ಪತ್ನಿ ಮಿಶೆಲ್ ಒಬಾಮಾ, ಸಂತೋಷದ ವೈವಾಹಿಕ ಜೀವನದ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. 

ಮಗು ಹೆರುವವರೆಗೂ ಆಕೆಗೆ ಗರ್ಭ ಧರಿಸಿದ್ದೇ ಗೊತ್ತಿರಲಿಲ್ಲ!

ಸೀಕ್ರೆಟ್

ಅವರ ಮನೆಯಲ್ಲಿ ಪತಿಪತ್ನಿ ಇಬ್ಬರಿಗೂ ಪ್ರತ್ಯೇಕ ಬಾತ್‌ರೂಂಗಳಿವೆ. ಮಿಶೆಲ್ ಒಬಾಮಾ ಪ್ರಕಾರ,  ''ಹೀಗೆ ಪ್ರತ್ಯೇಕ ಬಾತ್‌ರೂಂ ಹೊಂದಿರುವುದು ಅವರ ಯಶಸ್ವೀ ವೈವಾಹಿಕ ಜೀವನದ ಗುಟ್ಟು''! "ಒಬಾಮಾ ನನ್ನ ಬಾತ್‌ರೂಂ ಬಳಸಿದಾಗ, ಇವರೇಕೆ ಇಲ್ಲಿದ್ದಾರೆ ಎಂದು ನಾನು ಯೋಚಿಸುತ್ತಿದ್ದರೆ, ನನ್ನ ಮನೆಯಲ್ಲಿರುವ ಬಾತ್‌ರೂಂ ನಾನೂ ಬಳಸಬಾರದೆ ಎಂಬಂತೆ ಒಬಾಮಾ ಪ್ರತಿಕ್ರಿಯೆ ಇರುತ್ತದೆ" ಎಂದಿದ್ದಾರೆ. 

ಅಮೆರಿಕದ ಪ್ರಸ್ತುತ ಫಸ್ಟ್ ಲೇಡಿಯದೂ ಇದೇ ಅಭಿಪ್ರಾಯ

ಆಶ್ಚರ್ಯವೆಂದರೆ, ಅಮೆರಿಕದ ಫಸ್ಟ್ ಲೇಡಿ ಕೂಡಾ ಮಾಡಿ ಫಸ್ಟ್ ಲೇಡಿಯ ಮಾತನ್ನು ಅನುಮೋದಿಸಿದ್ದಾರೆ. 2015ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಿದ್ದಾಗ, ಪತ್ನಿ ಮೆಲೆನಿಯಾ ಟ್ರಂಪ್ ಪೀಪಲ್ ಮ್ಯಾಗಜಿನ್‌ಗೆ “ಆರೋಗ್ಯವಂತ ವೈವಾಹಿಕ ಜೀವನದ ರಹಸ್ಯವೆಂದರೆ ಪ್ರತ್ಯೇಕ ಬಾತ್‌ರೂಂ ಹೊಂದಿರುವುದು” ಎಂದಿದ್ದರು.  ಟ್ರಂಪ್ ಜೋಡಿ ಕೂಡಾ ಶ್ವೇತಭವನದಲ್ಲಿ ಪ್ರತ್ಯೇಕ ಬಾತ್‌ರೂಂ‌ಂಗಳನ್ನು ಹೊಂದಿದ್ದಾರೆ. ಇವರಷ್ಟೇ ಅಲ್ಲ, ಹಾಲಿವುಡ್ ನಟ ಮೈಕೆಲ್ ಕೇನ್, ನಟಿಯರಾದ ಸಾರಾ ಮೈಕೆಲ್ ಗೆಲ್ಲರ್, ಜೋನ್ ಕೊಲಿನ್ಸ್ ಕೂಡಾ ಬೇರೆ ಬೇರೆ ಸಂದರ್ಶನಗಳಲ್ಲಿ ಇದೇ ಮಾತನ್ನು ಹೇಳಿದ್ದಾರೆ. ಜೋನ್ ಕೊಲಿನ್ಸ್, "ಎಲ್ಲರಿಂದಲೂ ಇದನ್ನು ಹೊಂದಲಾಗುವುದಿಲ್ಲ. ಆದರೂ ಗಂಡ ಹೆಂಡತಿ ಇಬ್ಬರಿಗೂ ಪ್ರತ್ಯೇಕ ಬಾತ್‌ರೂಂ ಇರುವುದು ಒಳ್ಳೆಯದು, ಇದು ಹ್ಯಾಪಿ ಮ್ಯಾರೇಜ್‌ಗೆ ಸಹಾಯಕ" ಎಂದಿದ್ದಾರೆ. 

ಸ್ನಾನ ಮಾಡಿದ್ರೆ ಉಲ್ಬಣವಾಗುತ್ತಾ ಜ್ವರ?

ಲಾಜಿಕ್

ಬಾತ್‌ರೂಂಗೂ ವಿವಾಹದ ಸಂತೋಷಕ್ಕೂ ಎತ್ತಣದೆತ್ತಣ ಸಂಬಂಧವಪ್ಪಾ ಎಂದುಕೊಳ್ತಾ ಇದೀರಾ ಅಲ್ವಾ? ತಜ್ಞರ ಪ್ರಕಾರ, ಇದು ನೇರವಾಗಿ ಬಾತ್‌ರೂಂಗೆ ಸಂಬಂಧಿಸಿದ್ದಲ್ಲ, ಬದಲಿಗೆ ಇದು ಕೆಲ ಖಾಸಗಿ ಕ್ಷಣಗಳನ್ನು, ಸ್ವಾತಂತ್ರ್ಯವನ್ನು ಅನುಭವಿಸುವ ಸಮಯದ ಕುರಿತಾಗಿದೆ. ಪ್ರತ್ಯೇಕ ಬಾತ್‌ರೂಂ ಹೊಂದುವುದರಿಂದ ತಮಗೆ ಬೇಕಾದ ಸಮಯದಲ್ಲಿ ಸ್ವಾತಂತ್ರ್ಯ ದೊರೆಯುತ್ತದೆ ಎಂಬುದಾಗಿದೆ. ಆದರೆ, ಕೆಲ ಮನಃಶಾಸ್ತ್ರಜ್ಞರು ಇದು ಕೆಲವರಿಗೆ ಅನ್ವಯವಾಗುತ್ತದೆ ಅಷ್ಟೇ. ನಿಮಗೂ, ನಿಮ್ಮ ಪತ್ನಿಗೂ ಹಾಗೆನಿಸುತ್ತಿದ್ದರೆ ನೀವಿಬ್ಬರೂ ಪ್ರತ್ಯೇಕ ಬಾತ್‌ರೂಂ ಖಂಡಿತಾ ಹೊಂದಿ. ಒಬ್ಬೊಬ್ಬರ ಸ್ವಚ್ಛತಾ ಮಾನದಂಡ ಬೇರೆ ಬೇರೆ ಇದ್ದಾಗ ಕೂಡಾ ಇದು ಜಗಳಗಳನ್ನು ತಡೆಯುತ್ತದೆ ಎನ್ನುತ್ತಾರೆ. 

ಇದರಲ್ಲಿಇನ್ನೂ ಒಂದು ಲಾಭವಿದೆ. ಪತಿ ಪತ್ನಿ ಇಬ್ಬರೂ ಬೆಳಗ್ಗೆ ಒಂದೇ ಸಮಯಕ್ಕೆ ಉದ್ಯೋಗಕ್ಕಾಗಿ ಮನೆ ಬಿಡಬೇಕೆಂದರೆ, ಬಾತ್‌ರೂಂನಲ್ಲಿ ಒಂದೇ ಸಿಂಕಿದ್ದರೆ ಆಗ ವಾದ, ಜಗಳಗಳು ಆಗಾಗ ಏಳುತ್ತಲೇ ಇರುತ್ತವೆ. ಅದೇ ಬಾತ್‌ರೂಂ ಪ್ರತ್ಯೇಕವಾಗಿದ್ದಾಗ, ವಾದವೂ ಕಡಿಮೆಯಾಗುತ್ತದೆ ಅಲ್ಲವೇ? ಟಾಯ್ಲೆಟ್ ಫ್ಲಶ್ ಮಾಡುವುದು ಕಡಿಮೆಯಾದಾಗ, ಶವರ್ ಬಳಸಿ ನೀರನ್ನು ತಣ್ಣಗೊಳಿಸುವುದು ನಿಂತಾಗ, ಪತ್ನಿಯ ಕೇಶರಾಶಿಯಿಂದಾಗಿ ನೀರು ಕಟ್ಟಿಕೊಳ್ಳುವ ಕಿರಿಕಿರಿ ತಪ್ಪಿದಾಗ, ಇಬ್ಬರೂ ಮತ್ತೊಬ್ಬರು ಬಾತ್‌ರೂಂ ತೊಳೆಯಲಿ ಎಂದು ನಿರೀಕ್ಷಿಸುವುದು ನಿಂತಾಗ  ಜಗಳಗಳು ಕಡಿಮೆಯಾಗಲೇ ಬೇಕಲ್ಲ... ಆಗ ಅದು ಒಂದು  ಮಟ್ಟಿಗೆ ಹ್ಯಾಪಿ ಮ್ಯಾರೇಜ್ ಆಗಲೇಬೇಕಲ್ಲ...

ಹರ್ಬಲ್ ಬಾತ್; ಅಂದ ಪ್ಲಸ್ ಆನಂದ ಬೋನಸ್!

ಸಂಶೋಧನೆ ಏನು ಹೇಳುತ್ತದೆ?

ಅಧ್ಯಯನಗಳ ಪ್ರಕಾರ, ವಿವಾಹಿತ ಜೋಡಿಯು ಹೆಚ್ಚು ಬಾತ್‌ರೂಂ ಇರುವ ಮನೆಯನ್ನೇ ಬಯಸುತ್ತಾರೆ. ಅಮೆರಿಕದಲ್ಲಿ ಸುಮಾರು 4,780 ಜೋಡಿಗಳ ಮೇಲೆ ರಿಯಲ್ ಎಸ್ಟೇಟ್ ಕಂಪನಿಯೊಂದು ನಡೆಸಿದ ಸರ್ವೆ ಕೂಡಾ ಇದೇ ಮಾತನ್ನು ಅಂಗೀಕರಿಸಿದೆ.

ಆದರೆ, ಮನೆಗೊಂದಾದರೂ ಶೌಚಾಲಯವಿರಲಿ ಎಂದು ಪ್ರಧಾನಿಯೇ ಕರೆ ಕೊಡಬೇಕಾದ ದೇಶದಲ್ಲಿ ಒಬ್ಬೊಬ್ಬರಿಗೊಂದೊಂದು ಬಾತ್‌ರೂಂ ಬಯಸುವುದು ಕಾಸ್ಟ್ಲಿಯೇ ಎನಿಸಬಹುದು. ಏಕೆಂದರೆ ಉಳ್ಳವರು ಶಿವಾಲಯವ ಕಟ್ಟಿಸುವರು, ಬಡವರು ಶೌಚಾಲಯ ಕಟ್ಟಿಸಲೂ ಹೆಣಗಾಡುವರು. 

Follow Us:
Download App:
  • android
  • ios