ಜ್ವರ ಬಂದಾಗ ಫ್ಯಾನ್ ಹಾಕಬಾರದು, ಸ್ನಾನ ಮಾಡಬಾರದು...ಎಂದೆಲ್ಲ ಹೇಳುತ್ತಾರೆ. ಆದರೆ, ಹೆಚ್ಚಾದ ದೇಹದ ಉಷ್ಣಾಂಶ ತಣ್ಣಾಗಾಗಿಸಲು ಜ್ವರ ಬಂದವರು ಮಲಗಿದೆ ಕೋಣೆಯ ಕಿಟಿಕಿಗಳು ತೆಗೆದಿರಬೇಕು. ತಪ್ಪದೇ ತಣ್ಣೀರಿನಲ್ಲಿ ಅಲ್ಲದೇ ಹೋದರೂ ಉಗರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ಮನಸ್ಸೂ ನಿರಾಳವಾಗಿ, ಜ್ವರವೂ ಇಳಿಯುತ್ತೆ. 
 
ದ್ರವಾಹಾರ ಹೆಚ್ಚಿಗೆ ಸೇವಿಸಿ
ದೇಹದಲ್ಲಿ ಯಾವತ್ತೂ ನೀರಿನ ಪ್ರಮಾಣ ಹೆಚ್ಚಿರಬೇಕು. ಅದರಲ್ಲೂ ಜ್ವರದಿಂದು ಬಳಲುತ್ತಿರುವಾಗ ದೇಹದಲ್ಲಿ ನೀರಿನಾಂಶ ಅತ್ಯಗತ್ಯ. ಜ್ವರದ ತಾಪದಿಂದ ದೇಹದಲ್ಲಿ ವೇಗವಾಗಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಎಳನೀರು ದೇಹವನ್ನು ತಂಪಾಗಿಸುವುದರೊಂದಿಗೆ, ದೇಹದಲ್ಲಿ ನೀರಿನಾಂಶ ಹಿಡಿದಿಟ್ಟುಕೊಳ್ಳುತ್ತದೆ.

ಜ್ವರವನ್ನು ಹೀಗ್ ಹ್ಯಾಂಡಲ್ ಮಾಡಿ

ಒಂದಕ್ಕಿಂತ ಹೆಚ್ಚು ಔಷಧಿ ಸೇವಿಸಬೇಡಿ 
ಜ್ವರ ಕಡಿಮೆಯಾಗಬೇಕೆಂದು ಒಂದೇ ಬಾರಿ ಎರಡು ಬಗೆಯ ಔಷಧಿ ಸೇವಿಸಬೇಡಿ. ಇದು ಇನ್ಫೆಕ್ಷನ್ ಆಗುವುದರೊಂದಿಗೆ, ಅಪಾಯಕಾರಿಯೂ ಹೌದು. ಇದು ನಿಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಜ್ವರವೂ ಕಡಿಮೆಯಾಗುವುದಿಲ್ಲ.

ವೈದ್ಯರ ಬಳಿ ಯಾವಾಗ ಹೋಗಬೇಕು? 
ಕೆಲವೊಮ್ಮೆ ಜ್ವರ ದೇಹಕ್ಕೆ ಪ್ರಯೋಜನಕಾರಿ. ಇದನ್ನು ಕೃತಕವಾಗಿ, ಔಷಧಿ ಸೇವಿಸಿ ನಿಯಂತ್ರಿಸಬಾರದು. ಆದರೆ ಕೆಲವೊಮ್ಮೆ ಗಂಭೀರ ಪರಿಸ್ಥಿತಿಯಲ್ಲಿ ಇದನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಜ್ವರ ಬಳಲುವ ವ್ಯಕ್ತಿಯ ಮೆದುಳಿಗೆ ಹಾನಿಯುಂಟು ಮಾಡಬಹುದು. ಅದಕ್ಕೂ ಹೆಚ್ಚಾಗಿ ಕೋಮಾಗೆ ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಜ್ವರ ಬಂದಾಗ ಕೊಂಚ ಎಚ್ಚರ ವಹಿಸಿ, ಒಂದು ತಿಂಗಳಾದರೂ ಜ್ವರದ ತಾಪ ಇಳಿಯದಿದ್ದಲ್ಲಿ ಉತ್ತಮ ವೈದ್ಯರನ್ನು ಸಂಪರ್ಕಿಸಿ ಔಷಧಿ ಪಡೆದುಕೊಳ್ಳಿ

ವೈರಲ್ ಫೀವರ್‌ಗೆ ಇಲ್ಲಿದೆ ಮದ್ದು