ಆಸ್ಟ್ರೇಲಿಯಾದ ರೂಪದರ್ಶಿಯೊಬ್ಬರಿಗೆ ಮಗು ಹೆರುವವರೆಗೂ ತಾನು ಗರ್ಭಣಿ ಎಂಬ ವಿಚಾರವೇ ತಿಳಿದಿರಲಿಲ್ಲವಂತೆ. ತಮಾಷೆಯಲ್ಲ....! ಮುಂದಿದೆ ಎಲ್ಲಾ ವಿವರ

ಕ್ಯಾನ್‌ಬೆರಾ[ನ.16]: ಆಸ್ಪ್ರೇಲಿಯಾದ ರೂಪದರ್ಶಿಯೊಬ್ಬಳಿಗೆ ತಾನು ಗರ್ಭಿಣಿ ಎನ್ನುವ ವಿಷಯವೇ ತಿಳಿದಿರಲಿಲ್ಲವಂತೆ. ಮಗುವನ್ನು ಹೆರುವುದಕ್ಕೆ 10 ನಿಮಿಷ ಮುನ್ನ ಸ್ನಾನದ ಕೋಣೆಗೆ ಹೋಗಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾಳೆ.

View post on Instagram

23 ವರ್ಷದ ಎರಿನ್‌ ಲ್ಯಾಂಗ್ಮೇಡ್‌ ಎಂಬಾಕೆ ತಾನು ತಾಯಿ ಆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ತನಗೆ ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಂಡುಬರುವ ಬದಲಾವಣೆಗಳು ಗೊಚರಿಸಲಿಲ್ಲ. ಹೊಟ್ಟೆಭಾಗವೂ ಮೊದಲಿನಂತೆಯೇ ಇತ್ತು. ಎಲ್ಲ ಬಟ್ಟೆಗಳೂ ತನಗೆ ಸರಿಯಾಗಿ ಹೊಂದುತ್ತಿದ್ದವು. ತಾನು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದೆ ಎಂದು ಲ್ಯಾಂಗ್ಮೇಡ್‌ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

View post on Instagram

ತಜ್ಞರು ಹೇಳುವ ಪ್ರಕಾರ 2,500ರಲ್ಲಿ ಒಬ್ಬ ಮಹಿಳೆಯರಲ್ಲಿ ಈ ರೀತಿಯ ಲಕ್ಷಣಗಳು ಕಂಡುಬರುತ್ತವಂತೆ.