ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !
ಹಾಲಿವುಡ್ (Hollywood) ದಂಪತಿಗಳಾದ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಅವರ ವಿಚ್ಛೇದನ ಪ್ರಕರಣವು ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಸುದ್ದಿಯಲ್ಲಿದೆ. ವಿಚಾರಣೆ ಪ್ರತಿ ಬಾರಿಯೂ ಹೊಸ ಹೊಸ ತಿರುವುಗಳೊಂದಿಗೆ ಹೊರಬರುತ್ತಿರುವ ರೀತಿ ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ. ಅನೇಕ ದಂಪತಿಗಳು (Couple) ಇದೇ ರೀತಿ ವಿಚಿತ್ರ ಕಾರಣಗಳಿಗಾಗಿಯೇ ಡೈವೋರ್ಸ್ (Divorce) ಪಡೆದುಕೊಂಡಿದ್ದಾರೆ. ಅ ಬಗ್ಗೆ ತಿಳಿಯೋಣ.
ಮದುವೆಯೆಂಬುದು ಒಂದು ಸುಂದರವಾದ ಅನುಬಂಧ. ಹುಡುಗ-ಹುಡುಗಿ ಮಾತ್ರವಲ್ಲ ಎರಡು ಕುಟುಂಬಗಳನ್ನೂ ಒಗ್ಗೂಡಿಸುವ ಸಮಾರಂಭ. ಆದರೆ ಕೆಲವೊಮ್ಮೆ ಗಂಡ-ಹೆಂಡತಿ ಮಧ್ಯೆ ಹೊಂದಾಣಿಕೆಯಾಗದಿದ್ದಾಗ ಅನಿವಾರ್ಯವಾಗಿ ದೂರವಾಗಬೇಕಾಗುತ್ತದೆ. ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಡೈವೋರ್ಸ್ ಪಡೆದುಕೊಂಡರೆ, ಇನ್ನು ಕೆಲವರು ಬಗೆಹರಿಸಲಾಗದ ದೊಡ್ಡ ಸಮಸ್ಯೆಗಳಿಂದ ಪಾರಾಗಲು ವಿಚ್ಛೇದನದ ಮೊರೆ ಹೋಗುತ್ತಾರೆ. ಕೆಲವು ವಿವಾಹ (Marriage) ಸಲಹೆಗಾರರು ವಿಚ್ಛೇದನ ಪಡೆಯಲು ದಂಪತಿ (Couple) ಹೇಳುತ್ತಿದ್ದ ಕಾರಣಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ದಂಪತಿಗಳು ಪ್ರತ್ಯೇಕಗೊಳ್ಳಲು ನಿರ್ಧರಿಸಲು ನಂಬಲು ಸಾಧ್ಯವಾಗದಂತಹ ಆಘಾತಕಾರಿ ಕಾರಣಗಳೂ ಇದ್ದವು ಎಂಬುದು ಬಯಲಾಗಿದೆ. ಆದರೆ ಕೆಲವು ವಿಚಾರಗಳು ಈ ಕೆಳಗಿವೆ.
ವಿಚ್ಛೇದನ ಪಡೆಯಲು ದಂಪತಿ ಹೇಳುತ್ತಿದ್ದ ವಿಚಿತ್ರ ಕಾರಣಗಳು
ಹೆಂಡತಿ ಆತ್ಮಗಳೊಂದಿಗೆ ಮಾತನಾಡುತ್ತಿದ್ದಳು: ನನ್ನ ಹೆಂಡತಿ ಹುಚ್ಚಳಾಗಿದ್ದಳು. ನಾವು ವೈವಾಹಿಕ ಜೀವನದಲ್ಲಿದ್ದಾಗ, ಅವಳು ಆತ್ಮಗಳೊಂದಿಗೆ ಮಾತನಾಡುತ್ತಿದ್ದಳು. ಅವಳು ಮಾಟಮಂತ್ರಕ್ಕೆ ಸಂಬಂಧಿಸಿದ ಅಂತಹ ವಿಷಯಗಳನ್ನು ನಿರಂತರವಾಗಿ ಹುಡುಕುತ್ತಿದ್ದಳು, ಅವಳು ದೈನಂದಿನ ಜೀವನದಲ್ಲಿ ಅನ್ವಯಿಸಲು ನೋಡುತ್ತಿದ್ದಳು. ಈ ಸಂಪೂರ್ಣ ಪರಿಸ್ಥಿತಿಯು ತುಂಬಾ ಭಯಾನಕವಾಗಿತ್ತು ಮತ್ತು ನಾನು ಅವಳೊಂದಿಗೆ ಇದ್ದಾಗಲೆಲ್ಲಾ ನನಗೆ ಸುರಕ್ಷಿತವಾಗಿರಲಿಲ್ಲ. ಇದನ್ನು ನಿಲ್ಲಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅವರು ಕಿವಿಗೊಡಲಿಲ್ಲ. ಕೊನೆಗೆ ನಾನು ವಿಚ್ಛೇದನ (Divorce) ಕೇಳಿದೆ ಎಂದು ಪತಿ (Husband)ಯೊಬ್ಬರು ಹೇಳಿದ್ದಾರೆ.
ಗಂಡ ತುಂಬಾ ಮಾತನಾಡುತ್ತಾನೆ: ನನ್ನ ಪತಿ ತುಂಬಾ ಮಾತನಾಡುತ್ತಿದ್ದರು. ಹೊತ್ತು ಗೊತ್ತಿನ ಪರಿವೆಯಿಲ್ಲದೆ ಮಾತನಾಡುತ್ತಲೇ ಇರುತ್ತಾರೆ. ಒಂದು ನಿಮಿಷವೂ ಸುಮ್ಮನಿರುವುದಿಲ್ಲ. ಅವರು ಯಾವಾಗಲೂ ಏನನ್ನಾದರೂ ಹೇಳುತ್ತಿದ್ದರು. ಮೊದಮೊದಲು ಇಷ್ಟ ಆಯ್ತು, ಆಮೇಲೆ ಅದು ನನಗೆ ಸಮಸ್ಯೆಯಾಯಿತು. 5 ನಿಮಿಷವಾದರೂ ನನಗೆ ಶಾಂತಿ ಸಿಗಲಿಲ್ಲ. ನನಗೆ ದುಃಸ್ವಪ್ನದಂತೆ ಆಗುತ್ತಿತ್ತು. ಇದರಿಂದಾಗಿ ನಮ್ಮ ನಡುವೆ ಅನೇಕ ಬಾರಿ ಜಗಳ ನಡೆಯಿತು. ಕೊನೆಗೆ ಅವನ ಜೊತೆ ಇರುವುದು ನನಗೆ ಅಸಹನೀಯವಾಯಿತು. ಹೀಗಾಗಿ ವಿಚ್ಛೇದನಕ್ಕೆ ಮುಂದಾದೆ ಎಂದು ಒಬ್ಬಾಕೆ ಹೇಳಿದರು.
Relationship Tips : ಸಮಯ ನೀಡದ ಗಂಡ, ಮಾಜಿ ಲವರ್ ಜೊತೆ ಒಂದಾದ ಹೆಂಡತಿ
ನಾನು ಪ್ರತಿ ಬಾರಿಯೂ ಅಳುತ್ತಿದ್ದೆ: ನಾನು ನನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ. ಏಕೆಂದರೆ ನಾವು ಅನ್ಯೋನ್ಯವಾಗಿದ್ದಾಗ, ನಾನು ಇಡೀ ಸಮಯ ಅಳುತ್ತಿದ್ದೆ. ಇದಕ್ಕೆ ಕಾರಣ ಅವರ ವೈಯಕ್ತಿಕ ಭಾಗವಾಗಿತ್ತು. ನನಗೆ ಈ ಅನುಭವ ಭಯಕ್ಕೆ ಕಾರಣವಾಗುತ್ತಿತ್ತು. ನನ್ನ ಗಂಡನೊಂದಿಗೆ ಹಾಸಿಗೆ ಹಂಚಿಕೊಳ್ಳಲು ನಾನು ಹೆದರುತ್ತಿದ್ದೆ. ನಾನು ಸಾಮಾನ್ಯ ಜೋಡಿಗಳಂತೆ ಭಾವೋದ್ರಿಕ್ತ ಪ್ರೇಮ ಜೀವನವನ್ನು ಹೊಂದಲು ಬಯಸಿದ್ದೆ, ಆದ್ದರಿಂದ ನಾನು ಅವರಿಂದ ವಿಚ್ಛೇದನ ಮಾಡಿ ಮತ್ತೆ ಮದುವೆಯಾಗಿದ್ದೇನೆ ಎಂದು ಪತ್ನಿ (Wife)ಯೊಬ್ಬಳು ಹೇಳಿದ್ದಾಳೆ.
ಮಳೆಯಲ್ಲಿ ನಿಜವಾದ ಮುಖ ಬಯಲಾಯಿತು: ನನ್ನ ಹೆತ್ತವರು ನನಗೆ ಮದುವೆಯಾಗಲು ಒತ್ತಡ ಹೇರಿದಾಗ, ನಾನು ಸಹ ಒಪ್ಪಿದೆ. ಹುಡುಗಿಯನ್ನು ನೋಡಿದಾಗ, ಅವಳ ಸೌಂದರ್ಯವನ್ನು ನೋಡಿ ನಾನು ಆಕರ್ಷಿತನಾಗಿದ್ದೆ. ಅವಳು ಯಾವಾಗಲೂ ಸುಂದರವಾಗಿ ಕಾಣುತ್ತಿದ್ದಳು. ಅವಳ ಸಂಪೂರ್ಣ ನೋಟವು ಯಾವಾಗಲೂ ಪರಿಪೂರ್ಣವಾಗಿ ಕಾಣುತ್ತಿತ್ತು. ನಾವು ನಿಶ್ಚಿತಾರ್ಥ ಮಾಡಿಕೊಂಡೆವು. ಇಷ್ಟು ಸುಂದರ ಪತ್ನಿ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಯಿತು.
Samantha Ruth Prabhu ಮಾಜಿ ಪತಿ Naga Chaitanya ಮತ್ತೆ ಮದುವೆಯಾಗುತ್ತಾರಾ?
ಆದರೆ, ಒಂದು ದಿನ ನಾವು ಡೇಟಿಂಗ್‌ಗೆ ಹೋದಾಗ, ಆ ಸಮಯದಲ್ಲಿ ಮಳೆ ಪ್ರಾರಂಭವಾಯಿತು. ನಾವಿಬ್ಬರೂ ನೀರಿಗಿಳಿದೆವು. ಇದರಿಂದ ಆಕೆಯ ಸಂಪೂರ್ಣ ಮೇಕಪ್ ಕೂಡ ತೊಳೆದು ನನ್ನ ಮುಂದೆ ಆಕೆಯ ನಿಜ ಮುಖ ಹೊರಬಿತ್ತು. ಅವಳು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಂತೆ ಕಾಣುತ್ತಿದ್ದಳು. ನಾನು ಗಾಬರಿಯಾದೆ. ಅವಳು ನನ್ನನ್ನು ಇಷ್ಟು ದಿನ ಮೋಸ ಮಾಡುತ್ತಿದ್ದಳು ಎಂದು ಅನಿಸಿತು. ಅದರ ನಂತರ ನಾನು ಮದುವೆಯನ್ನು ನಿಲ್ಲಿಸಿದೆ ಎಂದು ಒಬ್ಬಾತ ತಿಳಿಸಿದ್ದಾನೆ
ಗಂಡ ಸ್ನಾನ ಕೂಡ ಮಾಡುತ್ತಿರಲಿಲ್ಲ: ನನ್ನ ಪತಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಲಿಲ್ಲ, ನಾನು ಮಾತನಾಡುವಾಗಲೂ ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ. ನಿಮ್ಮ ಮಾತನ್ನು ಕೇಳದ ಸಂಗಾತಿಯೊಂದಿಗೆ ಇರುವುದು ಕಷ್ಟ. ಅವರ ಪಕ್ಕದಲ್ಲಿ ಮಲಗುವಾಗಲೂ ನನಗೆ ಬೇಸರವಾಗುತ್ತಿತ್ತು. ಅವರು ವಿರಳವಾಗಿ ಸ್ನಾನ ಅಥವಾ ಕ್ಷೌರ ಮಾಡುತ್ತಿದ್ದರು. ಅವನ ಬಾಯಿಂದ ದುರ್ವಾಸನೆ ಬರುತ್ತಿತ್ತು. ಅವನ ಬಳಿ ಏನಾದರೂ ಇದ್ದರೆ, ಅದು ಕೇವಲ ಹಣ. ಅದಕ್ಕೇ ನಾನು ಅವನನ್ನೇ ಮದುವೆಯಾಗಬೇಕಿತ್ತು. ಆದರೆ ನಂತರ ಇಡೀ ಪರಿಸ್ಥಿತಿ ನನಗೆ ಅಸಹನೀಯವಾಯಿತು. ಹೀಗಾಗಿ ನಾನು ಮದುವೆಯಾದೆ ಎಂದು ನೊಂದ ಮಹಿಳೆಯೊಬ್ಬರು ಹೇಳಿದ್ದಾರೆ.