ಮುಲ್ಲಾ ನಸ್ರುದ್ದೀನ್ ಒಬ್ಬಾಕೆಯನ್ನು ಪ್ರೀತಿಸುತ್ತಿದ್ದ. ಆಕೆಯ ತಂದೆ ಶ್ರೀಮಂತ. ಒಂದು ದಿನ ಮುಲ್ಲಾಗೆ ಆಕೆ ಹೇಳಿದಳು- ನನ್ನ ಸಣ್ಣ ತಂಗಿಗೆ ಹದಿನೈದು ವರ್ಷ. ಆಕೆಯನ್ನು ಮದುವೆಯಾಗುವವನಿಗೆ ನನ್ನ ತಂದೆ ಇಪ್ಪತ್ತು ಸಾವಿರ ರೂಪಾಯಿ ಕೊಡುತ್ತಾರಂತೆ. ನನ್ನ ಎರಡನೇ ತಂಗಿಗೆ ಇಪ್ಪತ್ತು ವರ್ಷ. ಆಕೆಯನ್ನು ಮದುವೆ ಆಗುವವನಿಗೆ ತಂದೆ ಮೂವತ್ತು ಸಾವಿರ ಕೊಡುತ್ತಾರೆ. ನನಗೆ ಇಪ್ಪತ್ತೈದು ವರ್ಷ. ನನ್ನನ್ನು ಮದುವೆ ಆಗುವವನಿಗೆ ನಲುವತ್ತು ಸಾವಿರ ಕೊಡುತ್ತಾರೆ. 
ಮುಲ್ಲಾ ಕೇಳಿದ: ನಿನಗೆ ಐವತ್ತು ವರ್ಷದ ಅಕ್ಕ ಇದ್ದಾಳಾ?
----------
ಕೊಲ್ಯ ಒಬ್ಬಾಕೆಯನ್ನು ಪ್ರೀತಿಸುತ್ತಿದ್ದ. ಕೋಲ್ಯನ ಮನೆಯವರು ದೈವಭಕ್ತರು. ಆದರೆ ಆತನ ಗರ್ಲ್‌ಫ್ರೆಂಡ್‌ ದೈವಭಕ್ತೆ ಆಗಿರಲಿಲ್ಲ. ಕೋಲ್ಯನ ತಾಯಿ ಆತನಿಗೆ ಹೇಳಿಕೊಟ್ಟಳು. ಪ್ರತಿದಿನವೂ ಸ್ವಲ್ಪಸ್ವಲ್ಪವೇ ಆಕೆಗೆ ದೈವಭಕ್ತಿ ಮೂಡಿಸುವಂತೆ ಮಾತಾಡು. ಆಗ ಆಕೆ ನಮ್ಮ ಮನೆಗೆ ಒಗ್ಗಿಕೊಳ್ಳಬಲ್ಲ ಸೊಸೆ ಆಗಬಲ್ಲಳು. ಕೋಲ್ಯ ಹಾಗೇ ಮಾಡಿದ. ನಿಧಾನವಾಗಿ ಆಕೆ ದೈವಭಕ್ತೆ ಆಗತೊಡಗಿದಳು.
ಒಂದು ದಿನ ಕೋಲ್ಯ ವ್ಯಗ್ರನಾಗಿ ಮನೆಗೆ ಬಂದ. ತಾಯಿ ಯಾಕೆಂದು ವಿಚಾರಿಸಿದಳು. ಆತ ಹೇಳಿದ- ನೀನು ಹೇಳಿದ ಹಾಗೆ ಆಕೆಗೆ ದೇವರು ಪುರಾಣ ಪುಣ್ಯಕಥಾಶ್ರವಣ ಮಾಡಿದೆ. ಈಗ ನೋಡು, ಸನ್ಯಾಸಿ ಆಗ್ತಾಳಂತೆ!
------------
ಸೋಮು ಮತ್ತು ಆತನ ಗೆಳತಿ ಎಷ್ಟೋ ವರ್ಷಗಳಿಂದ ಒಟ್ಟಿಗೇ ಸುತ್ತಾಡುತ್ತಿದ್ದರು. ಆದರೆ ಸೋಮು ಆ ವಿಷಯಗಳಲ್ಲಿ ಅರಸಿಕ, ದಡ್ಡ. ಇವನೇ ಪ್ರಪೋಸ್ ಮಾಡಲಿ ಎಂದು ಅವನ ಗರ್ಲ್‌ಫ್ರೆಂಡ್‌ಗೆ  ಕಾದೂ ಕಾದೂ ಸಾಕಾಗಿತ್ತು. ಒಂದು ದಿನ ಸೋಮು ಹೇಳಿದ- ನಿನ್ನೆ ರಾತ್ರಿ ಒಂದು ಕನಸು ಬಿತ್ತು. ಅದರಲ್ಲಿ ನೀನು ನನ್ನನ್ನು ಮದುವೆ ಆಗ್ತೀಯಾ ಅಂತ ನಾನು ನಿನ್ನ ಬಳಿ ಕೇಳ್ತಾ ಇದ್ದೆ. ಇದರ ಅರ್ಥ ಏನಿರಬಹುದು?
ರೋಸಿ ಹೋದ ಅವನ ಗೆಳತಿ ಹೇಳಿದಳು- ಅದರರ್ಥ, ನೀನು ಎಚ್ಚರದಲ್ಲಿರೋದಕ್ಕಿಂತಲೂ ನಿದ್ದೆ ಮಾಡಿದಾಗ ಹೆಚ್ಚು ಬುದ್ಧಿವಂತ ಆಗಿರ್ತೀ ಅಂತ!
------------------

ಲೈಫ್‌ನ ದೊಡ್ಡ ರಿಗ್ರೆಟ್ ಬಗ್ಗೆ ಬಾಯಿಬಿಟ್ಟ ದೀಪಿಕಾ ಪಡುಕೋಣೆ! 

ನಸ್ರುದ್ದೀನನ ತಾಯಿ ಮಗನ ಮೇಲೆ ರೇಗಿದಳು- ನಾನು ಹೇಳಿಲ್ವಾ ನಿಂಗೆ, ನಿನ್ನ ಗೆಳತಿಯನ್ನು ಒಬ್ಬಳೇ ನಿನ್ನ ರೂಮಿಗೆ ಕರೆದುಕೊಂಡು ಹೋಗಬೇಡ ಅಂತ. ಇಂಥ ವಿಚಾರ ಎಲ್ಲಾ ನನಗೆ ತುಂಬಾ ಚಿಂತೆ ಉಂಟುಮಾಡುತ್ತೆ.
ನಸ್ರುದ್ದೀನ್ ಶಾಂತವಾಗಿ ಹೇಳಿದ- ಅಮ್ಮಾ ನಾನು ಅವಳನ್ನು ನನ್ನ ರೂಮಿಗೆ ಕರೆದುಕೊಂಡು ಬರಲೇ ಇಲ್ಲ. ನಾನೇ ಅವಳ ರೂಮಿಗೆ ಹೋಗಿದ್ದ. ನೀನು ಚಿಂತೆ ಮಾಡಬೇಡ, ಚಿಂತೆ ಮಾಡೊ ಪಾಳಿ ಅವಳ ತಾಯಿಗೆ ಇರಲಿ!ಗರ್ಲ್‌ಫ್ರೆಂಡ್: ನಾನು ಸತ್ತರೆ ಏನು ಮಾಡ್ತೀಯಾ?
ಬಾಯ್‌ಫ್ರೆಂಡ್: ನಾನೂ ಸಾಯ್ತೀನಿ.
ಗರ್ಲ್‌ಫ್ರೆಂಡ್: ಅದ್ಯಾಕೆ?
ಬಾಯ್‌ಫ್ರೆಂಡ್: ನಿನಗಾಗಿ ನಾನು ಮಾಡಿದ ಸಾಲ ಸಿಕ್ಕಪಟ್ಟೆ ಆಗಿದೆ. ಯಾರೂ ನನ್ನ ಬದುಕೋಕೆ ಬಿಡೋಲ್ಲ.

ಹುಡುಗರೇ ಇಲ್ಕೇಳಿ... ಹುಡುಗಿಯರಿಗೆ ನಿಮ್ಮಲ್ಲಿರೋ ಇಷ್ಟವಾಗೋ ಕ್ವಾಲಿಟಿ ... 
--------------
ಗರ್ಲ್‌ಫ್ರೆಂಡ್: ನೀನು ನಂಗೆ ವಜ್ರದ ಉಂಗುರ ತಂದು ಕೊಟ್ಟಂತೆ ಕನಸು ಬಿತ್ತು ಕಣೋ.
ಬಾಯ್‌ಫ್ರೆಂಡ್: ಹೂಂ ಕಣೇ, ನನಗೆ ಬಿದ್ದ ಕನಸಿನಲ್ಲಿ ನಿನ್ನ ತಂದೆ ಅದಕ್ಕೆ ಹಣ ಕೊಡ್ತಿದ್ದದ್ದನ್ನು ಕಂಡೆ.
--------------
ಬಾಯ್‌ಫ್ರೆಂಡ್‌: ನಿನಗೊಂದು ಮುತ್ತು ಕೊಡಲೇ?
ಗರ್ಲ್‌ಫ್ರೆಂಡ್‌: ಬೇಡ.
ಬಾಯ್‌ಫ್ರೆಂಡ್: ನಾನೀಗ ಏನು ಹೇಳಿದೆ?
ಗರ್ಲ್‌ಫ್ರೆಂಡ್‌: ನಿನಗೊಂದು ಮುತ್ತು ಕೊಡಲೇ?
ಬಾಯ್‌ಫ್ರೆಂಡ್‌: ಕೊಡು.

ವಾಚ್ ಕದ್ದ ವಿದ್ಯಾರ್ಥಿ ಶಿಕ್ಷಕನಾಗಿದ್ದು ಹೇಗೆ? ಓಶೋ ಹೇಳಿದ ಕತೆ 
---------------
ಬಾಯ್‌ಫ್ರೆಂಡ್‌: ಪರೀಕ್ಷೆ ಅಂದ್ರೆ ಗರ್ಲ್‌ಫ್ರೆಂಡ್‌ ಇದ್ದ ಹಾಗೆ.
ಗರ್ಲ್‌ಫ್ರೆಂಡ್‌: ಅದು ಹೇಗೋ?
ಬಾಯ್‌ಫ್ರೆಂಡ್‌: ಸಿಕ್ಕಾಪಟ್ಟೆ ಕ್ವೆಶ್ಚನ್ಸ್, ಅರ್ಥ ಮಾಡಿಕೊಳ್ಳೋಕೆ ಕಷ್ಟ, ತುಂಬಾ ಜಟಿಲ, ರಿಸಲ್ಟ್ ಹೇಗೆ ಬರುತ್ತೋ ಅಂದಾಜೇ ಆಗಲ್ಲ.
------------------
ಗುಂಡ: ಅಮ್ಮಾ, ಗರ್ಲ್‌ಫ್ರೆಂಡ್‌ ಸಿಗೋದು ಹೇಗೆ?
ಅಮ್ಮ: ಅದೇನ್ ಗೊತ್ತಾ, ನೀನು ಒಳ್ಳೇ ಹುಡುಗನಾದ್ರೆ ನಿನಗೆ ಒಬ್ಳು ಗರ್ಲ್‌ಫ್ರೆಂಡ್‌ ಸಿಗ್ತಾಳೆ.
ಗುಂಡ: ನಾನು ಕೆಟ್ಟ ಹುಡುಗ ಆದ್ರೆ.
ಅಮ್ಮ: ತುಂಬಾ ಗರ್ಲ್‌ಫ್ರೆಂಡ್ಸ್ ಸಿಗ್ತಾರೆ.