Asianet Suvarna News Asianet Suvarna News

ವರನೊಂದಿಗೆ ಹಾರ ಬದಲಿಸಿ ಲವರ್ ಜೊತೆ ವಧು ಎಸ್ಕೇಪ್ : ಮತ್ತೊಂದು ಹುಡುಗಿಗೆ ತಾಳಿ ಕಟ್ಟಿದ ವರ

 ಇಲ್ಲೊಬ್ಬಳು ಯುವತಿ ವರ ತಾಳಿ ಕಟ್ಟಿದ್ದ ಬಳಿಕ ತನ್ನ ಪ್ರೇಮಿಯ ಜೊತೆ ಮದುವೆ ಮಂಟಪದಿಂದ ಪರಾರಿಯಾದ ಘಟನೆ ಬಿಹಾರದ ಭಗಲ್‌ಪುರದಲ್ಲಿ ನಡೆದಿದೆ. 

The bride remained quiet until garland exchange in Marriage then escaped with her lover In Bihar akb
Author
First Published Dec 3, 2023, 3:41 PM IST

ಬಿಹಾರ: ಮದುವೆ ಮುಹೂರ್ತ ಬರುವವರೆಗೂ ಗುಮ್ಮನಂತೆ ಕುಳಿತಿದ್ದು, ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹುಡುಗಿ ಏನಾದರೂ ಅವಾಂತರ ಮಾಡಿ ಮದುವೆ ಮುರಿದು ಬಿಡುವ ಅಥವಾ ನಾಳೆ ಮದುವೆ ಇದ್ದರೆ ಇಂದು ಮನೆಯಿಂದ ಎಸ್ಕೇಪ್ ಆಗಿ ಮನೆಯವರನ್ನು ಪೇಚಿಗೆ ಸಿಲುಕಿಸುವಂತಹ ಹಲವು ಘಟನೆಗಳು ಇತ್ತೀಚೆಗೆ ಆಗಾಗ ಅಲ್ಲಲ್ಲಿ ಹೆಚ್ಚೆಚ್ಚು ನಡೆಯುತ್ತಿವೆ. ಅದೇ ರೀತಿ ಇಲ್ಲೊಬ್ಬಳು ಯುವತಿ ವರ ತಾಳಿ ಕಟ್ಟಿದ್ದ ಬಳಿಕ ತನ್ನ ಪ್ರೇಮಿಯ ಜೊತೆ ಮದುವೆ ಮಂಟಪದಿಂದ ಪರಾರಿಯಾದ ಘಟನೆ ಬಿಹಾರದ ಭಗಲ್‌ಪುರದಲ್ಲಿ ನಡೆದಿದೆ. 

ನವಂಬರ್ 27 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಭಗಲ್‌ಪುರ ಜಿಲ್ಲೆಯ ಕಜ್ರೈಲಿ ನಿವಾಸಿ ಪದ್ದು ಶಾ ಅವರ ಪುತ್ರ ಪ್ರಕಾಶ್ ಶಾ ಎಂಬುವವರ ವಿವಾಹವನ್ನು ಭಗಲ್ಪುರದ ಸನ್ಹೋಲ್ ಪ್ರದೇಶದ ಯುವತಿಯೊಂದಿಗೆ ನಿಗದಿ ಮಾಡಲಾಗಿತ್ತು. ಹೀಗಾಗಿ ಮದುವೆ ಮಾಡಿಕೊಂಡು ಯುವತಿಯನ್ನು ಕರೆದೊಯ್ಯುವ ಸಲುವಾಗಿ ವರನ ಕಡೆಯವರು ತಮ್ಮ ಬಂಧುಗಳು, ಸಂಬಂಧಿಗಳು ನೆಂಟರಿಷ್ಟರ ಜೊತೆಗೂಡಿ  ಮದುವೆ ನಿಗದಿಯಾದ ಸ್ಥಳಕ್ಕೆ ಬಂದಿದ್ದರು. ಬರೀ ಇಷ್ಟೇ ಅಲ್ಲ ವರ ಹಾಗೂ ವಧುವಿನ ನಡುವೆ ಹೂ ಹಾರಗಳ ಬದಲಾವಣೆಯೂ ಆಗಿತ್ತು. ಫೋಟೋವನ್ನು ತೆಗೆಯಲಾಗಿತ್ತು.  ಆದರೆ ಅಷ್ಟರಲ್ಲಿ ವಧು ತನ್ನ ನಿರ್ಧಾರ ಬದಲಿಸಿ ಮಂಟಪದಿಂದಲೇ ಪರಾರಿಯಾಗಿದ್ದಾಳೆ. 

ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ಮರುಜನ್ಮ, ಮನೆಗೆ ಮರಳಿ ಪತ್ನಿ ಜೊತೆ ಮರು ಮದುವೆ!

ಇದರಿಂದ ಮದುವೆ ಮನೆಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಹುಡುಗಿಯ ಮನೆಯವರು ಹುಡುಗನ ಮನೆಯವರು ಸೇರಿದಂತೆ ಎಲ್ಲರೂ ಆತಂಕಗೊಂಡಿದ್ದು, ವಧುವಿಲ್ಲದೇ ತಾವು ಹಿಂದಿರುಗುವುದಿಲ್ಲ ಎಂದು ವರನ ಮನೆಯವರು ಪಟ್ಟು ಹಿಡಿದರು. ಇದಾದ ನಂತರ ಮದುವೆಗೆ ಹೊದ ಅತಿಥಿಗಳು ಮರಳಿ ಮನೆಗೆ ಹೋದರೆ ವರನ ಕಡೆಯವರು ಅಲ್ಲಿಯೇ ಉಳಿದು ಬೇರೊಂದು ಹುಡುಗಿಗಾಗಿ ಹುಡುಕಾಡಿದ್ದಾರೆ. ನಂತರ ಅದೇ ಮಂಟಪದಲ್ಲಿ ಅವರು ಕಹಲಗಾಂವ್‌ನಲ್ಲಿ ವಾಸವಿದ್ದ ಹುಡುಗಿಯೊಬ್ಬಳೊಂದಿಗೆ ಮದುವೆ ಮಾಡಿದ್ದಾರೆ. ನಾಥನಗರದ ಮನಸ್ಕಾಮನ ನಾಥ ನಗರದಲ್ಲಿ ಈ ಮದುವೆ ನಡೆದಿದೆ. ಈ ಮದುವೆಯಲ್ಲಿ ಹುಡುಗ ಹಾಗೂ ಹುಡುಗಿ ಎರಡೂ ಮನೆಯವರು ಭಾಗಿಯಾಗಿದ್ದು ಪ್ರಕರಣ ಸುಖಾಂತ್ಯಗೊಂಡಿದೆ. 

ಮೃತಪಟ್ಟು ವರ್ಷ ಕಳೆದ ಬಳಿಕ ಮನೆಗೆ ಮರಳಿದ ವ್ಯಕ್ತಿ; ಪುರ್ನಜನ್ಮವೆಂದು ನಂಬಿ ಕುಟುಂಬ ಸದಸ್ಯರಿಂದ ಮರುಮದುವೆ!

Follow Us:
Download App:
  • android
  • ios