ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ಮರುಜನ್ಮ, ಮನೆಗೆ ಮರಳಿ ಪತ್ನಿ ಜೊತೆ ಮರು ಮದುವೆ!
ಉತ್ತರಖಂಡದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮೃತಪಟ್ಟ 42 ವರ್ಷದ ಕುಟುಂಬ ಸದಸ್ಯನ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ನಾಲ್ಕೇ ದಿನಕ್ಕೆ ವ್ಯಕ್ತಿ ಮರು ಜನ್ಮ ಪಡೆದು ಮನೆಗೆ ಮರಳಿದ್ದಾನೆ. ಬಳಿಕ ಪತ್ನಿ ಜೊತೆ ಮರು ಮದುವೆಯಾದ ಘಟನೆ ನಡೆದಿದೆ.
ಉತ್ತರಖಂಡ(ಡಿ.02) ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಓಡೋಡಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪ್ರಕ್ರಿಯೆ ಮುಗಿಸಿ ಮೃತದೇಹ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಿದ್ದಾರೆ. ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ಮೃತಪಟ್ಟ ವ್ಯಕ್ತಿ ಪ್ರತ್ಯಕ್ಷರಾಗಿದ್ದಾರೆ. ಮನೆಗೆ ಮರಳಿ ಪತ್ನಿ ಜೊತೆ ಮರು ಮದುವೆ ಆಗಿದ್ದಾರೆ. ಇಷ್ಟೇ ಅಲ್ಲ ಹೊಸ ಹೆಸರನ್ನು ಇಟ್ಟು ಹೊಸ ಬದುಕು ಆರಂಭಿಸಿದ ವಿಚಿತ್ರ ಘಟನೆ ಉತ್ತರಖಂಡದ ಪಿತೋರಘಡದ ಖಾತಿಮಾ ಬಳಿ ನಡೆದಿದೆ.
ಅಚ್ಚರಿಯಾದರೂ ಸತ್ಯ, ಆದರೆ ಈ ಘಟನೆಯಲ್ಲಿ ಕೆಲ ಟ್ವಿಸ್ಟ್‌ಗಳಿವೆ. 42 ವರ್ಷದ ನವೀನ್ ಚಂದ್ರ ಭಟ್ ಒಂದು ವರ್ಷದಿಂದ ನಾಪತ್ತೆಯಾಗಿದ್ದ. ಪತ್ನಿ ಜೊತೆ ಮನಸ್ತಾಪದಿಂದ ಮನೆಬಿಟ್ಟು ತೆರಳಿದ್ದ. ಈ ಕುರಿತು ಕಳೆದ ವರ್ಷವೇ ದೂರು ಕೂಡ ದಾಖಲಾಗಿದೆ. ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿ ಕೈಚೆಲ್ಲಿದ್ದರು. ಇದೀಗ ನವೆಂಬರ್ 25ರಂದು ಪೊಲೀಸರಿಂದ ಕುಟುಂಬಸ್ಥರಿಗೆ ಕರೆ ಬಂದಿದೆ. ನವೀನ್ ಮೃತದೇಹವ ಪತ್ತೆಯಾಗಿದೆ. ರುದ್ರಾಪುರ್ ಜಿಲ್ಲಾ ಆಸ್ಪತ್ರೆಗೆ ಮೃತದೇಹ ಸ್ಥಳಾಂತರ ಮಾಡಲಾಗಿದೆ ಅನ್ನೋ ಮಾಹಿತಿ ಬಂದಿದೆ. ಮೃತದೇಹವನ್ನು ಖಚಿತಪಡಿಸಲು ಕುಟುಂಬಸ್ಥರು ಆಸ್ಪತ್ರೆಗೆ ತೆರಳು ಸೂಚಿಸಿದ್ದಾರೆ.
ಯಾದಗಿರಿಯ ಈ ಬಾಲಕಿ ವೈದ್ಯಕೀಯ ಲೋಕಕ್ಕೆ ಸವಾಲು; 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸಿ ಬದುಕಿದ ಬಾಲೆ!
ಮೃತದೇಹದ ಶರ್ಟ್ ಜೇಬಿನಲ್ಲಿ ನವೀನ್ ಗುರುತಿನ ಚೀಟಿ, ಕೋವಿಡ್ ಸಂದರ್ಭದಲ್ಲಿ ಮಾಡಿದ್ದ ಮೆಡಿಕಲ್ ಚೆಕ್‌ಅಪ್ ದಾಖಲೆಗಳು ಪತ್ತೆಯಾಗಿದೆ. ಇತ್ತ ಕುಟಂಬಸ್ಥರು ಆಸ್ಪತ್ರೆಗೆ ಆಗಮಿಸಿ ಒಂದು ವರ್ಷದಿಂದ ಕಾಣೆಯಾಗಿದ್ದ ನವೀನ್ ರೀತಿ ಈ ಮೃತದೇಹ ಹೋಲುತ್ತಿದೆ. ಕಳೆದೊಂದು ವರ್ಷದಿಂದ ನಾಪತ್ತೆಯಾಗಿದ್ದ ಕಾರಣ ಕೆಲ ಬದಲಾವಣೆ ಆಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಮೃತದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಿದ್ದಾರೆ.
ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ನವೀನ್ ಕುಟುಂಬಸ್ಥರು ಅಚ್ಚರಿ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವ ನವೀನ್ ಮೃತಪಟ್ಟಿಲ್ಲ. ರುದ್ರಾಪುರ್‌ನಲ್ಲಿ ನವೀನ್ ನೋಡಿದ ಕುಟುಂಬದ ವ್ಯಕ್ತಿ, ಹಿಂಬಾಸಿಕೊಂಡು ಹೋಗಿ ಮಾತನಾಡಿಸಿದ್ದಾರೆ. ಬಳಿಕ ನವೀನ್ ಕೆಲಸ ಮಾಡುತ್ತಿದ್ದ ಹೊಟೆಲ್‌ಗೂ ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಅಲ್ಲಿಂದಲೆ ನವೀನ್ ಪತ್ನಿ ಹಾಗೂ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಬಳಿಕ ನವೀನ್ ಕೂಡ ಕುಟುಂಬಸ್ಥರ ಜೊತೆ ಮಾತನಾಡಿದ್ದಾನೆ. ತಾವು ಅಂತ್ಯಸಂಸ್ಕಾರ ಮಾಡಿದ ಮೃತದೇಹ ಬೇರೆ ಯಾರದ್ದೂ ಅನ್ನೋದು ಅರಿವಾಗಿದೆ.
3 ದಿನಗಳಿಂದ ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವೃದ್ಧೆ ದಟ್ಟ ಕಾಡಿನಲ್ಲಿ ಜೀವಂತವಾಗಿ ಪತ್ತೆ!
ನವೀನ್ ಸಹೋದರ ಸೇರಿದಂತೆ ಕುಟುಂಬಸ್ಥರು ರುದ್ರಾಪುರ್‌ಗೆ ತೆರಳಿ ನವೀನ್ ಕರೆ ತಂದಿದ್ದಾರೆ. ಆದರೆ ನವೀನ್‌ಗೆ ಈಗಾಗಲೇ ಅಂತ್ಯಸಂಸ್ಕಾರ ನಡೆಸಿರುವ ಕಾರಣ ಸಂಪ್ರದಾಯ ಹಾಗೂ ಆಚರಣೆ ಪ್ರಕಾರ ಪೂಜೆ ಹಾಗೂ ಪುನರ್‌ಜನ್ಮದ ಕರ್ಮಗಳನ್ನು ಮಾಡಲು ಹಿರಿಯರು ಸೂಚಿಸಿದ್ದಾರೆ. ಹೀಗಾಗಿ ಮನೆಗೆ ಮರಳಿದ ನವೀನ್‌ಗೆ ಹೊಸ ಹೆಸರು ಇಡಲಾಗಿದೆ. ಬಳಿಕ ಪತ್ನಿ ಜೊತೆ ಮರು ಮದುವೆ ಮಾಡಿಸಲಾಗಿದೆ. ಇದೀಗ ನವೀನ್ ಹೊಸ ಬದುಕು ಆರಂಭಿಸಿದ್ದಾರೆ.