ಎಡವಿ ಬಿದ್ದವಳ ಅವಮಾನಿಸಿದ ಗಂಡ: ಮದುವೆಯಾದ ಮೂರೇ ನಿಮಿಷಕ್ಕೆ ತಲಾಖ್ ನೀಡಿದ ವಧು
ಇತ್ತೀಚೆಗೆ ದುಬೈ ರಾಜಕುಮಾರಿ ಮದುವೆಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಪತಿಗೆ ಇನ್ಸ್ಟಾಗ್ರಾಮ್‌ನಲ್ಲೇ ತಲಾಖ್ ನೀಡಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಕುವೈತ್‌ನಲ್ಲಿ ಜೋಡಿಯೊಂದು ಮದುವೆಯಾಗಿ ಮೂರು ನಿಮಿಷ ಕಳೆಯುವ ಮೊದಲೇ ತಲಾಖ್ ಹೇಳಿ ದೂರಾಗಿದ್ದಾರೆ.
ಕುವೈತ್: ಇತ್ತೀಚೆಗೆ ದುಬೈ ರಾಜಕುಮಾರಿ ಮದುವೆಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಪತಿಗೆ ಇನ್ಸ್ಟಾಗ್ರಾಮ್‌ನಲ್ಲೇ ತಲಾಖ್ ನೀಡಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಕುವೈತ್‌ನಲ್ಲಿ ಜೋಡಿಯೊಂದು ಮದುವೆಯಾಗಿ ಮೂರು ನಿಮಿಷ ಕಳೆಯುವ ಮೊದಲೇ ತಲಾಖ್ ಹೇಳಿ ದೂರಾಗಿದ್ದಾರೆ. ವರ ಮದುವೆ ಮಂಟಪದಲ್ಲೇ ವಧುವನ್ನು ಅವಮಾನಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ದಿ ಇಂಡಿಪೆಂಡೆಂಟ್ ವರದಿ ಪ್ರಕಾರ, ಮದುವೆಯ ಎಲ್ಲಾ ಪ್ರಕ್ರಿಯೆ ಮುಗಿದು ವಧು ವರರು ಮದುವೆ ಹಾಲ್ ಬಿಟ್ಟು ತೆರಳುತ್ತಿದ್ದ ವೇಳೆ, ವಧು ಎಡವಿದ್ದು ತನ್ನ ಆಗಷ್ಟೇ ಮದುವೆಯಾದ ಗಂಡನ ಮೇಲೆ ಬಿದ್ದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವರ ಆಕೆಗೆ ಸ್ಟುಪಿಡ್ ಎಂದು ಬೈದಿದ್ದಾನೆ. ಆದರೆ ಅಚಾನಕ್ ಆಗಿ ಎಡವಿ ಬಿದ್ದ ತನ್ನನ್ನು ರಕ್ಷಿಸುವುದು ಬಿಟ್ಟು ಸ್ಟುಪಿಡ್ ಎಂದು ಬೈದ ಗಂಡನ ನಡೆಗೆ ಸಿಟ್ಟಾದ ಆಕೆ ಅಲ್ಲೇ ಈ ವಿವಾಹವನ್ನು ಮುರಿದಿದ್ದಾಳೆ.
ವರನ ನಡೆಯಿಂದ ಕೋಪಗೊಂಡಿದ್ದ ವಧು ಅಲ್ಲೇ ಇದ್ದ ಜಡ್ಜ್ ಬಳಿ ಈ ಮದುವೆಯನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದಾಳೆ. ಹೀಗಾಗಿ ಜಡ್ಜ್ ಮದುವೆಯಾದ ಮೂರೇ ನಿಮಿಷದಲ್ಲಿ ಈ ವಿವಾಹವನ್ನು ರದ್ದುಗೊಳಿಸಿದ್ದಾರೆ. ಇದು ಕುವೈತ್ ದೇಶದ ಇತಿಹಾಸದಲ್ಲೇ ಅತ್ಯಂತ ಅಲ್ಪಕಾಲ ಅಸ್ತಿತ್ವದಲ್ಲಿದ್ದ ಮದ್ವೆ ಎಂಬ ದಾಖಲೆ ಬರೆದಿದೆ. ಈ ವಿಚಾರವೂ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಚಾರವಾಗಿದೆ. ಜನರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.
ಮಗುವಿಗೆ ತಿಂಗಳು 2 ಆಗುತ್ತಿದ್ದಂತೆ ಗಂಡಂಗೆ ಇನ್‌ಸ್ಟಾಗ್ರಾಮ್‌ನಲ್ಲೇ ತಲಾಖ್ ನೀಡಿದ ದುಬೈ ರಾಣಿ!
ನಾನೊಂದು ಮದುವೆಗೆ ಹೋಗಿದ್ದೆ ಅಲ್ಲಿ ಮಧುಮಗ ತನ್ನ ಭಾಷಣದಲ್ಲಿ ತನ್ನ ನವವಧುವಿನ ಬಗ್ಗೆಯೇ ಗೇಲಿ ಮಾಡಿದ್ದ, ಆದರೆ ವಧು ಸುಮ್ಮನಿದ್ದಳು, ಆಕೆಯೂ ಈ ವಧುವಿನಂತೆ ಮಾಡಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯಲ್ಲಿ ಆರಂಭದಿಂದಲೇ ಪರಸ್ಪರ ಗೌರವ ಇಲ್ಲದಿದ್ದರೆ ಅದು ಯಾವಾಗಲೂ ಯಶಸ್ವಿಯಾಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆರಂಭದಲ್ಲೇ ಇಂತಹ ವರ್ತನೆ ತೋರಿದವರ ಜೊತೆ ಜೀವನದ ಹೆಜ್ಜೆ ಇಡುವುದಕ್ಕಿಂತ ಮದುವೆ ಮುರಿದಿದ್ದೆ ಒಳ್ಳೆದಾಯ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
2004ರಲ್ಲಿ ಯುಕೆಯಲ್ಲಿ ಜೋಡಿಯೊಂದು ಮದುವೆಯಾದ 90 ನಿಮಿಷದಲ್ಲಿ ವಿಚ್ಛೇದನ ನೀಡಿದ್ದರು. ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿರುವ ಸ್ಟಾಕ್‌ಪೋರ್ಟ್ ರಿಜಿಸ್ಟರ್ ಆಫೀಸ್‌ನಲ್ಲಿ ಈ ಘಟನೆ ನಡೆದಿತ್ತು. ಸ್ಕಾಟ್ ಮೆಕ್ಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಎಂಬುವವರು ಮದುವೆಯಾಗುತ್ತಿರುವುದಾಗಿ ಘೋಷಣೆ ಮಾಡಿದ ಒಂದು ಗಂಟೆಯ ನಂತರ ಈ ಮದುವೆ ಮುರಿದು ಬಿದ್ದಿತ್ತು. ಬ್ರೈಡ್‌ಮೇಡ್ (bridemaids) ಅಥವಾ ವಧುವಿನ ಸಹಾಯಕರಿಗೆ ತನ್ನ ಗಂಡ ಟೋಸ್ಟ್ ಮಾಡಿದ್ದರಿಂದ ಮಹಿಳೆ ಆಕ್ರೋಶಗೊಂಡಿದ್ದಳು (ವೆಡ್ಡಿಂಗ್ ಟೋಸ್ಟ್ ಎಂದರೆ ನವವಿವಾಹಿತರಿಗೆ ಹಾಸ್ಯದಿಂದ ಕೂಡಿದ ಶುಭಾಶಯಗಳು) ಅಲ್ಲದೇ ತಮ್ಮ ರಿಸೆಪ್ಷನ್‌ನಲ್ಲೇ ಸಿಗರೇಟ್ ಬೂದಿ ಸಂಗ್ರಹಿಸುವ ಏಶ್ ಟ್ರೇನಿಂದ (ashtray)ಅವನ ತಲೆಗೆ ಹೊಡೆದಿದ್ದಳು.
ಡಿವೋರ್ಸ್ ರೂಮರ್ಸ್ ನಡುವೆ ಮಗನೊಂದಿಗೆ ದೇಶ ತೊರೆದ್ರಾ ಹಾರ್ದಿಕ್ ಪಾಂಡ್ಯ ಪತ್ನಿ?