ಮಗುವಿಗೆ ತಿಂಗಳು 2 ಆಗುತ್ತಿದ್ದಂತೆ ಗಂಡಂಗೆ ಇನ್‌ಸ್ಟಾಗ್ರಾಮ್‌ನಲ್ಲೇ ತಲಾಖ್ ನೀಡಿದ ದುಬೈ ರಾಣಿ!
ದುಬೈ ರಾಜನ ಪುತ್ರಿ ತನ್ನ ಗಂಡನಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲೇ ವಿಚ್ಛೇದನ ನೀಡಿದ್ದಾರೆ. ದುಬೈ ರಾಜನ ಮಗಳಾದ ಶೈಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಇನ್ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ವಿಚ್ಛೇದನ ನೀಡಿದ್ದಾರೆ.
ದುಬೈ: ದುಬೈ ರಾಜನ ಪುತ್ರಿ ತನ್ನ ಗಂಡನಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲೇ ವಿಚ್ಛೇದನ ನೀಡಿದ್ದಾರೆ. ದುಬೈ ರಾಜನ ಮಗಳಾದ ಶೈಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ನಾನು ನಿನಗೆ ವಿಚ್ಚೇದನ ನೀಡುತ್ತೇನೆ, ನಾನು ನಿನಗೆ ವಿಚ್ಚೇದನ ನೀಡುತ್ತೇನೆ, ನಾನು ನಿನಗೆ ವಿಚ್ಚೇದನ ನೀಡುತ್ತೇನೆ ಎಂದು ಮೂರು ಬಾರಿ ಹೇಳುವ ಮೂಲಕ ಸಾರ್ವಜನಿಕವಾಗಿ ಗಂಡನಿಗೆ ವಿಚ್ಛೇದನ ನೀಡಿದ್ದಾರೆ. ಎರಡು ತಿಂಗಳ ಹಿಂದಷ್ಟೆ ದಂಪತಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ರಾಜಕುಮಾರಿ ಪತಿಗೆ ವಿಚ್ಚೇದನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಆತ್ಮೀಯ ಪತಿ, ನೀವು ಇತರ ಪಾಲುದಾರರನ್ನು ಹೊಂದಿರುವುದರಿಂದ ನಾನು ಈಗ ನಮ್ಮ ವಿಚ್ಛೇದನವನ್ನು ಘೋಷಿಸುತ್ತಿದ್ದೇನೆ. ಈ ಡಿವೋರ್ಸ್ ಯೂ ಐ ಡಿವೋರ್ಸ್ ಯೂ , ಐ ಡಿವೋರ್ಸ್ ಯೂ ಟೇಕ್ ಕೇರ್ ನಿಮ್ಮ ಮಾಜಿ ಪತ್ನಿ ಎಂದು ಬರೆದು ದುಬೈ ರಾಜಕುಮಾರಿ ತಮ್ಮ ಪೋಸ್ಟ್‌ನ್ನು ಕೊನೆಗೊಳಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇವರಿಬ್ಬರು ಪರಸ್ಪರ ಅನ್‌ಫಾಲೋ ಮಾಡಿರುವುದಲ್ಲದೇ ಜೊತೆಗಿರುವ ಎಲ್ಲಾ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೇ ಇವರಿಬ್ಬರೂ ಪರಸ್ಪರ ಬ್ಲಾಕ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಕೆಲವರು ಶೇಖ್ ಮಹ್ರಾ ಅವರ ಖಾತೆ ಹ್ಯಾಕ್ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
50ರ ಇಳಿ ಸಂಜೆಯಲ್ಲಿ ಒಂಟಿಯಾಗುವೆ ಎಂದು ಊಹೆಯೂ ಮಾಡಿರಲಿಲ್ಲ: ಮಿಲಿಂದಾ ಗೇಟ್ಸ್
ದುಬೈ ರಾಜಕುಮಾರಿಯ ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಇದೊಂದು ಕೆಟ್ಟ ಸುದ್ದಿ, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ನಿರ್ಧಾರದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಜಕುಮಾರಿಯ ಧೈರ್ಯವನ್ನು ಕೆಲವರು ಮೆಚ್ಚಿದ್ದು, ಇದು ಬದುಕಿನ ಭಾಗ ಮಾತ್ರ, ಬದುಕಿನಲ್ಲಿ ಸಿಹಿ ಹಾಗೂ ಕಹಿ ನಿರಂತರವಾಗಿದ್ದು, ಜೀವನ ಯಾರಿಗಾಗಿಯೂ ನಿಲ್ಲುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಗಂಡನಿಂದಾಗಿ ವಿಚ್ಛೇದನವಾಗುತ್ತಿದೆ. ಹೆಂಡತಿಗೆ ಖುಲಾ ತೆಗೆದುಕೊಳ್ಳುವ ಹಕ್ಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ಮದುವೆಯಾಗಿ ಕೇವಲ ಒಂದು ವರ್ಷ ಕಳೆದಿತ್ತಷ್ಟೇ, ಕಳೆದ ವರ್ಷ ಮೇ ತಿಂಗಳಲ್ಲಿ ಈ ಜೋಡಿ ಮದುವೆಯಾಗಿತ್ತು, ಮದುವೆಯಾಗಿ ವರ್ಷದ ನಂತರ ಮಗಳು ಜನಿಸಿದ್ದಳು. ಮಗುವಿನ ಜನನದ ವೇಳೆ ಶೇಖಾ ಮಹ್ರಾ ಇದು ತನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಘಟನೆ ಎಂದು ಬರೆದುಕೊಂಡು ಆಸ್ಪತ್ರೆ ಹಾಗೂ ವೈದ್ಯರಿಗೆ ಧನ್ಯವಾದ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿಯೂ ಜೊತೆಗಿದ್ದರು. ಆದರೆ ಮಗುವಿಗೆ ವರ್ಷ ತುಂಬುವ ಮೊದಲೇ ದಂಪತಿ ದೂರವಾಗಿದ್ದಾರೆ.
Tumakuru: ನ್ಯಾಯಾಧೀಶರ ಬುದ್ಧಿಮಾತಿಗೆ ತಲೆತೂಗಿದ ದಂಪತಿಗಳು: ಡಿವೋರ್ಸ್‌ನಿಂದ ದೂರ ಸರಿದ 18 ಜೋಡಿಗಳು!
ವಾರದ ಹಿಂದಷ್ಟೇ ರಾಜಕುಮಾರಿ ಇನ್ಸ್ಟಾಗ್ರಾಮ್‌ನಲ್ಲಿ ವಿಚಿತ್ರವೆನಿಸುವ ಪೋಸ್ಟ್ ಮಾಡಿದ್ದರು, ಮಗುವನ್ನು ಮುದ್ದಾಡುತ್ತಿರುವ ಫೋಟೋ ಶೇರ್ ಮಾಡಿ ಕೇವಲ ನಾವಿಬ್ಬರು ಎಂದು ಬರೆದುಕೊಂಡಿದ್ದರು. ಬಹುಶಃ ದಂಪತಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುಬ ಸೂಚನೆ ಈ ಫೋಟೋದಿಂದಲೇ ಗೋಚರಿಸಿತ್ತು. ಆದರೆ ಇದಾಗಿ ವಾರ ಕಳೆಯುವ ಮೊದಲೇ ರಾಜಕುಮಾರಿ ಇನ್ಸ್ಟಾಗ್ರಾಮ್‌ನಲ್ಲಿ ವಿಚ್ಚೇದನ ಘೋಷಣೆ ಮಾಡಿದ್ದಾರೆ.
ದುಬೈನ ಉಪಾಧ್ಯಕ್ಷ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಧಾನಿ ಹಾಗೂ ದುಬೈನ ಆಡಳಿತಗಾರ ಆಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ (Sheikh Mohammed bin Rashid Al Maktoum)ಅವರ ಪುತ್ರಿಯಾಗಿದ್ದು, ಮಹಿಳಾ ಸಬಲೀಕರಣದ ಬಗ್ಗೆ ಸದಾ ವಕಾಲತ್ತು ನಡೆಸುವ ಇವರು, ದುಬೈನ ಡಿಸೈನರ್ ಕೂಡ ಆಗಿದ್ದಾರೆ. ಯುಕೆಯ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಂಬಂಧಗಳ ಅಧ್ಯಯನದಲ್ಲಿ ಪದವಿ ಪಡೆದಿರುವ ಇವರು ಮೊಹಮ್ಮದ್ ಬಿನ್ ರಶೀದ್ ಗವರ್ನ್‌ಮೆಂಟ್ ಅಡ್ಮಿನಿಸ್ಟ್ರೇಷನ್‌ನಿಂದಲೂ ಪದವಿ ಪಡೆದಿದ್ದಾರೆ.