Asianet Suvarna News Asianet Suvarna News

Late Marriage Benefits: ವಯಸ್ಸು 30 ಆದರೂ ಮದುವೆ ಆಗಿಲ್ವಾ? ಚಿಂತೆ ಬಿಟ್ಹಾಕಿ!

ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ, ಯಾವಾಗ ಮದುವೆ? ನಿನ್ನ ವಯಸ್ಸಿನಲ್ಲಿ ನನಗೆ ಇಬ್ಬರು ಮಕ್ಕಳಿದ್ದವು, ಯಾಕೆ ಇನ್ನು ಮದುವೆ ಆಗಿಲ್ಲ? ಓದಿ ಗುಡ್ಡೆ ಹಾಕೋದು ಗೊತ್ತಿದೆ, ಮೊದಲು ಮದುವೆ ಆಗು, ಹೀಗೆ 20ರ ಗಡಿದಾಟುತ್ತಿದ್ದಂತೆ, ಹುಡುಗಿಯರಿಗೆ ಮದುವೆ ಆಗಲು ಒತ್ತಡ ಜಾಸ್ತಿಯಾಗುತ್ತದೆ. ಭಾರತದಲ್ಲಿ 20-25ರ ವಯಸ್ಸಿನಲ್ಲಿ ಮದುವೆಯಾಗುವ ಹುಡುಗರ ಸಂಖ್ಯೆಯೂ ಕಡಿಮೆಯಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ ಮದುವೆ ವಯಸ್ಸು 29 ದಾಟುತ್ತಿದೆ. ವಯಸ್ಸು 30 ಆದ್ಮೇಲೆ ಮದುವೆಯಾದ್ರೆ ಅನೇಕ ಲಾಭಗಳಿವೆ. ಅದು ಯಾವುದು ಎಂಬುದನ್ನು ನಾವು ಇಂದು ಹೇಳ್ತೆವೆ.
 

The benefits of getting married after 30 and effect on life
Author
Bangalore, First Published Dec 4, 2021, 6:32 PM IST
  • Facebook
  • Twitter
  • Whatsapp

ಭಾರತ,ಭಾರತೀಯರು ನಿಧಾನವಾಗಿ ಬದಲಾಗುತ್ತಿದ್ದಾರೆ. 18-20ರ ನಡುವೆ ಇದ್ದ ಮದುವೆ ವಯಸ್ಸು ಈಗ 30ಕ್ಕೆ ಬಂದು ನಿಲ್ಲುತ್ತಿದೆ. ಓದು,ಕೆಲಸ,ಆರ್ಥಿಕ ದೃಢತೆ ಸೇರಿದಂತೆ ಅನೇಕ ಕಾರಣಗಳಿಗೆ ಮದುವೆಯನ್ನು(Marriage) ಮುಂದೂಡಲಾಗ್ತಿದೆ. ಸರಿಯಾದ ಸಂಗಾತಿ ಹುಡುಕಾಟದಲ್ಲಿ ಕೆಲವರ ವಯಸ್ಸು 30ರ ಆಸುಪಾಸಿಗೆ ಬಂದು ನಿಲ್ಲುತ್ತದೆ. ಅಯ್ಯೋ..! ವಯಸ್ಸು 30 ಆಯ್ತು ಕಣ್ರೀ,ಇನ್ನು ಮದುವೆಯಾಗಿಲ್ಲ ಅನ್ನೋರಿಗೆ ನೀವು ಮುಜುಗರವಿಲ್ಲದೆ ಕೆಲ ಸಂಗತಿಯನ್ನು ಹೇಳಬಹುದು. 30ರ ನಂತ್ರ ಮದುವೆಯಾದ್ರೆ ಏನೆಲ್ಲ ಲಾಭವಿದೆ ಎಂಬುದನ್ನು ಅವರಿಗೆ ವಿವರಿಸಬಹುದು. ಮೊದಲನೇಯದಾಗಿ 30 ವರ್ಷಗಳ ನಂತರ ಮದುವೆಯಾಗುವ ದಂಪತಿ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಅವರು ಪ್ರಬುದ್ಧರಾಗಿರುತ್ತಾರೆ.ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುತ್ತದೆ. ಪ್ರತಿ ಕೆಲಸದಲ್ಲೂ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಾರೆ. ದಂಪತಿ ಮಧ್ಯೆ ಜಗಳ ಕಡಿಮೆ. ಹಾಗೆ ವಿಚ್ಛೇದನ ಪ್ರಮಾಣವೂ ಕಡಿಮೆ ಎಂದು ತಜ್ಞರು ಹೇಳುತ್ತಾರೆ.  

ಸಂಗಾತಿ ಆಯ್ಕೆ : ವಯಸ್ಸು ಹೆಚ್ಚಾಗ್ತಿದ್ದಂತೆ ಸಂಗಾತಿ ಆಯ್ಕೆಯಲ್ಲಿ ಗೊಂದಲ ಕಾಡುವುದಿಲ್ಲ. ಆಕರ್ಷಣೆಗಿಂತ ಹೊಂದಾಣಿಕೆಗೆ ಇಲ್ಲಿ ಮಹತ್ವ ಸಿಗುತ್ತದೆ. ಜೀವನ ಸಂಗಾತಿ ಯಾರಾಗಬೇಕೆಂಬ ಬಗ್ಗೆ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವ ತಿಳುವಳಿಕೆ ಬಂದಿರುತ್ತದೆ.

ಆರ್ಥಿಕ ಒತ್ತಡ : ತಡವಾಗಿ ಮದುವೆಯಾಗುವ ಬಹುತೇಕ ದಂಪತಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಮದುವೆ ಆಗುವ ಮೊದಲೇ ಆರ್ಥಿಕ ಭದ್ರತೆಗೆ ಮಹತ್ವ ನೀಡಿರುತ್ತಾರೆ. ಬಹುತೇಕರ ಬಳಿ ಮನೆ, ಕಾರು ಸೇರಿದಂತೆ ಅಗತ್ಯ ವಸ್ತುಗಳಿರುತ್ತವೆ. ಹಣದ ಬಳಕೆ ಹೇಗೆ ಮಾಡಬೇಕೆಂಬುದು ಈ ವಯಸ್ಸಿನಲ್ಲಿ ಅರಿವಿಗೆ ಬಂದಿರುತ್ತದೆ. ಆಲೋಚನೆ ಮಾಡಿ,ಹಣ ಬಳಕೆ,ಹೂಡಿಕೆ ಮಾಡುವುದ್ರಿಂದ ಹಣದ ಸಮಸ್ಯೆ ಕಾಡುವುದಿಲ್ಲ.

ಮಕ್ಕಳಿಗೆ ಉತ್ತಮ ಆರೈಕೆ : ತಡವಾಗಿ ಮದುವೆಯಾಗುವವರು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬಲ್ಲರು ಎಂಬುದು ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ. ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂಬ ಬಗ್ಗೆ ಅವರಿಗೆ ಅರಿವಿರುತ್ತದೆ.ಇದಕ್ಕಾಗಿ ಅವರಿಗೆ ಇತರರ ಸಹಾಯ ಬೇಕಾಗುವುದಿಲ್ಲ. ವಿವಾಹ ತಡವಾದಂತೆ ಸಂತಾನೋತ್ಪತ್ತಿ ಸಮಸ್ಯೆ ಕಾಡುವುದು ನಿಜ. ವಯಸ್ಸು ಹೆಚ್ಚಾಗಿದೆ ಎಂಬ ಕಾರಣಕ್ಕೆ ಒಂದು ಮಕ್ಕಳು ಸಾಕೆಂಬ ನಿರ್ಧಾರಕ್ಕೆ ದಂಪತಿ ಬರುತ್ತಾರೆ. ಹಾಗಾಗಿ ಚಿಕ್ಕ,ಚೊಕ್ಕ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ.  

ಮದುವೆ ಲೇಟಾಗುತ್ತಿದ್ದರೆ ಇಲ್ಲಿವೆ ವಾಸ್ತು ಟಿಪ್ಸ್

ಕಡಿಮೆ ಹೋರಾಟ, ಹೆಚ್ಚು ಪ್ರೀತಿ : ತಡವಾಗಿ ಮದುವೆಯಾಗುವವರಲ್ಲಿ ರೋಮ್ಯಾನ್ಸ್ ಹೆಚ್ಚಿರುತ್ತದೆ ಎಂದು ತಜ್ಞರು ಹೇಳ್ತಾರೆ. ಸಾಕಷ್ಟು ವರ್ಷಗಳಿಂದ ಸಂಗಾತಿ ಸನಿಹಕ್ಕೆ ಕಾದಿರುವ ಇವರು,ಸಿಕ್ಕ ಕ್ಷಣವನ್ನು ಮಧುರಗೊಳಿಸಲು ಇಚ್ಛಿಸುತ್ತಾರೆ. ಪ್ರೀತಿಯ ಗುಂಗಿನಲ್ಲಿರದೆ ವಾಸ್ತವದ ಪ್ರೀತಿ ಸವಿಯಲು ಮುಂದಾಗುತ್ತಾರೆ. 30 ವರ್ಷಗಳ ನಂತರ ಮದುವೆಯಾಗುವ ದಂಪತಿ ಜೀವನದಲ್ಲಿ ಹೋರಾಟ ಕಡಿಮೆ. ಏಕೆಂದರೆ ಅವರು ಈಗಾಗಲೇ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತಾರೆ ವೈವಾಹಿಕ ಜೀವನವನ್ನು ಹೆಚ್ಚು ಆನಂದಿಸಲು ಬಯಸುತ್ತಾರೆ.

ಕುಟುಂಬ ಸದಸ್ಯರು ಹಸ್ತಕ್ಷೇಪ : ಚಿಕ್ಕ ವಯಸ್ಸಿನಲ್ಲಿ ಮದುವೆಯಾದವರ ಬಾಳಿನಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ಹೆಚ್ಚಿರುತ್ತದೆ. ಮಕ್ಕಳಿಗೆ ತಿಳಿಯುವುದಿಲ್ಲ ಎಂಬ ಕಾರಣವೊಡ್ಡಿ,ದಂಪತಿ ಮಧ್ಯೆ ಬರುವ ಸಮಸ್ಯೆಯನ್ನು ದೊಡ್ಡವರು ಬಗೆಹರಿಸಲು ಮುಂದಾಗುತ್ತಾರೆ. ಸಮಸ್ಯೆ ದೊಡ್ಡದಾಗಿ ವಿಚ್ಛೇದನದಲ್ಲಿ ಅಂತ್ಯವಾಗುವ ಅಪಾಯವಿರುತ್ತದೆ. ಆದರೆ ತಡವಾಗಿ ಮದುವೆಯಾದ ಜೋಡಿಯ ಜೀವನದಲ್ಲಿ ಕುಟುಂಬದ ಇತರ ಸದಸ್ಯರು ಹೆಚ್ಚು ಹಸ್ತಕ್ಷೇಪ ಮಾಡುವುದಿಲ್ಲ.ಅವರು ಪ್ರಬುದ್ಧರಾಗಿದ್ದಾರೆ,ಯಾವುದೇ ಸಮಸ್ಯೆ ಬಂದರೂ ಎದುರಿಸಬಲ್ಲರೂ ಎಂಬುದು ಪಾಲಕರಿಗೂ ತಿಳಿದಿರುತ್ತದೆ.  

30ರ ನಂತರದ ಮದುವೆಯಿಂದ ಅನಾನುಕೂಲ :
ಪ್ರತಿಯೊಂದು ಒಳ್ಳೆಯ ವಿಷಯದಲ್ಲೂ ಕೆಲವು ಅನಾನುಕೂಲಗಳೂ ಇರುತ್ತವೆ. ತಡವಾಗಿ ಮದುವೆಯಾಗುವವರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೈದ್ಯರ ಪ್ರಕಾರ, 30ರ ನಂತರ ಸಂತಾನೋತ್ಪತ್ತಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಗರ್ಭಧಾರಣೆ,ಹೆರಿಗೆ ಸೇರಿದಂತೆ ಮಗುವಿನ ಲಾಲನೆ,ಪಾಲನೆಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.ಅದರಲ್ಲೂ 40ರ ನಂತರ ಗರ್ಭ ಧರಿಸುವ ಸಾಧ್ಯತೆ ಶೇಕಡಾ 33ರಷ್ಟಿರುತ್ತದೆ. 

Follow Us:
Download App:
  • android
  • ios