Asianet Suvarna News Asianet Suvarna News

ಪತಿಯ 3ನೇ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದ ಟೆನ್ನಿಸ್ ತಾರೆ

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 2ನೇ ಮದುವೆ ವಿಚಾರವಾಗಿ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ.  ತಮ್ಮ ಹಾಗೂ ಶೋಯೆಬ್ ಮಧ್ಯೆ ಕೆಲ ತಿಂಗಳ ಹಿಂದೆಯೇ ವಿಚ್ಛೇದನವಾಗಿದೆ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

Tennis star Sania Mirza finally breaks silence about husband Pakistani cricketer Shoaib Malik's 3rd Marriage akb
Author
First Published Jan 21, 2024, 1:10 PM IST

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 2ನೇ ಮದುವೆ ವಿಚಾರವಾಗಿ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ.  ತಮ್ಮ ಹಾಗೂ ಶೋಯೆಬ್ ಮಧ್ಯೆ ಕೆಲ ತಿಂಗಳ ಹಿಂದೆಯೇ ವಿಚ್ಛೇದನವಾಗಿದೆ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.  ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ತಮ್ಮ ಮೂರನೇ ಮದ್ವೆ ಬಗ್ಗೆ ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ಸಾನಿಯಾ ಮಿರ್ಜಾ ವೈಯಕ್ತಿಕ ಬದುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳು ಟ್ರೆಂಡ್ ಸೃಷ್ಟಿಸಿದ್ದವು.

ಶೊಯೇಬ್ ಮಲಿಕ್ ಸೌದಿ ಅರೇಬಿಯಾ ಮೂಲದ ಸನಾ ಜಾವೇದ್ ಎಂಬುವವರನ್ನು ಮೂರನೇ ಮದುವೆಯಾಗಿದ್ದು, ಈಕೆ ಪಾಕಿಸ್ತಾನದಲ್ಲಿ ಜನಪ್ರಿಯ ನಟಿಯಾಗಿದ್ದಾಳೆ. ಪಾಕಿಸ್ತಾನದ ಹಲವು ಜನಪ್ರಿಯ ಸೀರಿಯಲ್‌ಗಳಲ್ಲಿ ಆಕೆ ನಟಿಸಿದ್ದಾಳೆ.  

ಮದ್ವೆನೂ ಕಷ್ಟ ಡಿವೋರ್ಸ್‌ ಆದ್ರೂ ಕಷ್ಟ ಎಂದ ಸಾನಿಯಾ ಮಿರ್ಜಾ: ಟೆನ್ನಿಸ್ ತಾರೆಗೇನಾಯ್ತು?

ಶೋಯೆಬ್ ಮದುವೆ ಹಾಗೂ ಸಾನಿಯಾ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ  ಸಾನಿಯಾ ಅವರ ಸೋಶಿಯಲ್ ಮೀಡಿಯಾ ಟೀಮ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅದು ಹೀಗಿದೆ, ಸಾನಿಯಾ ತಮ್ಮ ವೈಯಕ್ತಿಕ ಬದುಕನ್ನು ಸದಾ ಸಾರ್ವಜನಿಕ ಕಣ್ಣುಗಳಿಂದ ದೂರ ಇಟ್ಟಿದ್ದಾರೆ. ಆದರೂ ಇವತ್ತು ಆಕೆ ಮತ್ತು ಶೋಯೆಬ್ ಮಲಿಕ್ ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ ಎಂದು ಸಾರ್ವಜನಿಕವಾಗಿ ಹಂಚಿಕೊಳ್ಳುವ ಸಮಯ ಬಂದಿದೆ. ಶೋಯೆಬ್ ಅವರ ಹೊಸ ಜೀವನಕ್ಕೆ ಅವರು ಶುಭ ಹಾರೈಸುತ್ತಾರೆ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.  
ಅವರ ಜೀವನದ ಈ ಸೂಕ್ಷ್ಮ ಸಮಯದಲ್ಲಿ ಅವರ ಬಂಧುಗಳು ಹಿತೈಷಿಗಳು, ಅಭಿಮಾನಿಗಳು ಯಾವುದೇ ಊಹಾಪೋಹಗಳಿಗೆ ಎಡೆಮಾಡಿಕೊಡದೆ ಅವರ ವೈಯಕ್ತಿಕ ಬದುಕಿನ ಗೌಪ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.  ಸಾನಿಯಾ ಹಾಗೂ ಶೋಯೆಬ್ ದಾಂಪತ್ಯ ಗಂಡು ಮಗುವೊಂದು ಜನಿಸಿದ್ದು, ಆ ಮಗುವಿಗೆ ಈಗ ಐದು ವರ್ಷವಾಗಿದ್ದು, ಅದು ತಾಯಿ ಸಾನಿಯಾ ಜೊತೆ ವಾಸ ಮಾಡುತ್ತಿದೆ.

ಇದೇ ವಿಚಾರವಾಗಿ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಅವರು ಮಾಧ್ಯಮಗಳಿಗೆ ನಿನ್ನೆ ಮಾಹಿತಿ ನೀಡಿದ್ದರು. ಇದೊಂದು 'ಖುಲ' ಇದು ಮುಸ್ಲಿಂ ಮಹಿಳೆಯರ ಅಧಿಕಾರದ ಹಕ್ಕಾಗಿದ್ದು, ಏಕಪಕ್ಷೀಯವಾಗಿ ಅವರು ತಮಗೆ ತಮ್ಮ ಸಂಗಾತಿಯ ಜೊತೆ ಬದುಕಲು ಇಷ್ಟವಿಲ್ಲದಿದ್ದರೆ ವಿಚ್ಛೇದನ ನೀಡಬಹುದಾಗಿದೆ. ಇದನ್ನೇ ಪುರುಷರು ನೀಡಿದರೆ ಇದಕ್ಕೆ ತಲಾಖ್ ಎನ್ನಲಾಗುತ್ತದೆ. ಮಹಿಳೆಯರು ನೀಡಿದರೆ ಅದು ಖುಲ.

ವಿವಾದದ ನಡುವೆ ಶೋಯೆಬ್‌ ಮಲೀಕ್‌ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?

2022ರಿಂದಲೂ ಸಾನಿಯಾ ಶೋಯೆಬ್ ಪ್ರತ್ಯೇಕಗೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಲೇ ಇತ್ತು. ಆದರೆ ಸಾನಿಯಾ ಆಗಲಿ ಶೋಯೆಬ್ ಆಗಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ, ಅಲ್ಲದೇ ಇಬ್ಬರೂ ಎಲ್ಲೂ ಜೊತೆಯಾಗಿ ಕಾಣಿಸಿಕೊಳ್ಳದೇ ಹಲವು ವರ್ಷಗಳೇ ಆಗಿ ಹೋಗಿದ್ದವು. ಇತ್ತೀಚೆಗಷ್ಟೇ ಶೋಯೆಬ್ ಸಾನಿಯಾರನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಆಗಲೂ ಬಹಳವಾಗಿ ವಿಚ್ಛೇದನದ ಊಹಾಪೋಹಾ ಹಬ್ಬಿತ್ತು.  ಕೆಲ ದಿನಗಳ ಹಿಂದಷ್ಟೇ ಸಾನಿಯಾ ಮದುವೆಯಾದ್ರೂ ಕಷ್ಟ ವಿಚ್ಛೇದನವಾದ್ರೂ ಕಷ್ಟ ಎಂಬಂತಹ ಪೋಸ್ಟೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆಗಲೂ ಜನ ಇವರ ವಿಚ್ಛೇದನದ ಬಗ್ಗೆ ಊಹೆ ಮಾಡಿದ್ದರು.  ಆದರೆ ನಿನ್ನೆ ಶೋಯೆಬ್ 2ನೇ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಮದುವೆ ಪೋಸ್ಟ್‌ ಹಾಕುವ ಮೂಲಕ ವಿಚ್ಛೇದನವಾಗಿರುವುದು ನಿಜ ಎಂಬುದು ತಿಳಿದು ಬಂದಿದೆ.  

ಅನೇಕರ ವಿರೋಧದ ನಡುವೆ ಸಾನಿಯಾ ಮಿರ್ಜಾ ಮುತ್ತಿನ ನಗರಿ ಹೈದಾರಾಬಾದ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್‌ನ ಮದುವೆಯಾಗಿದ್ದರು.  ಮದುವೆಯ ನಂತರ ಇಬ್ಬರೂ ಬಹುತೇಕ ದುಬೈನಲ್ಲೇ ವಾಸ ಮಾಡುತ್ತಿದ್ದರು.

 
 
 
 
 
 
 
 
 
 
 
 
 
 
 

A post shared by Imran Mirza (@imranmirza58)

 

Follow Us:
Download App:
  • android
  • ios