ಗರ್ಭಿಣಿಯಾದ ಶಿಕ್ಷಕಿಗೆ ಹೈಸ್ಕೂಲ್ ಶಿಷ್ಯನೊಂದಿಗೇ ಇತ್ತು ಸಂಬಂಧ, ಗುಟ್ಟು ರಟ್ಟಾಗಿದ್ದು ಹೇಗೆ?
ಶಿಕ್ಷಕಿಯೊಬ್ಬಳು ನಾಚಿಕೆಗೇಡಿ ಕೆಲಸ ಮಾಡಿದ್ದಾಳೆ. ವಿದ್ಯಾರ್ಥಿಗೆ ಪಾಠ ಹೇಳುವ ಬದಲು ಆತನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಸುಳ್ಳು ಹೇಳಿ ಸಂಬಂಧ ಬೆಳೆಸಿದ ಶಿಕ್ಷಕಿ ಬಣ್ಣ ಬಯಲಾಗಿದೆ.
ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಗುರುವಿಗೆ ಸಂಪೂರ್ಣ ಶರಣಾದ್ರೆ ವಿದ್ಯೆ ಒಲಿಯುತ್ತದೆ ಎನ್ನುವ ನಂಬಿಕೆ ಇದೆ. ಆದ್ರೆ ಈಗಿನ ಕಾಲದಲ್ಲಿ ಗುರುವನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಶಿಕ್ಷಕ – ಶಿಕ್ಷಕಿಯೇ ವಿದ್ಯಾರ್ಥಿಗಳ ಮೊದಲ ಕ್ರಶ್ ಎನ್ನುವ ಮಾತೂ ಇದೆ. ಆದ್ರೆ ವಿದ್ಯಾರ್ಥಿಗಳ ಜೊತೆ ಸಂಬಂಧ ಬೆಳೆಸುವ ಶಿಕ್ಷಕರೂ ನಮ್ಮಲ್ಲಿದ್ದಾರೆ. ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿ, ಅವರ ಉತ್ತಮ ಭವಿಷ್ಯಕ್ಕೆ ಶ್ರಮಿಸಬೇಕಾದ ಶಿಕ್ಷಕರೇ ಅವರ ಬಾಳು ಹಾಳು ಮಾಡ್ತಿದ್ದಾರೆ. ಭವಿಷ್ಯ ನಾಶ ಮಾಡ್ತಿದ್ದಾರೆ. ಶಿಕ್ಷಕರು, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಆಗಾಗ ಬೆಳಕಿಗೆ ಬರ್ತಿರುತ್ತದೆ. ಆದ್ರೆ ಶಿಕ್ಷಕಿಯೊಬ್ಬಳು ವಿದ್ಯಾರ್ಥಿ ಬಾಳಿನಲ್ಲಿ ಆಟವಾಡಿದ್ದಾಳೆ. ವಿದ್ಯಾರ್ಥಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಆಕೆ ಗರ್ಭಿಣಿ ಆದ್ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
30 ವರ್ಷದ ಶಿಕ್ಷಕಿ (Teacher) ರೆಬೆಕಾ ಜೋಯ್ನ್ಸ್ ತನ್ನದೇ ಶಾಲೆಯ 15 ವರ್ಷದ ಹುಡುಗನೊಂದಿಗೆ ದೈಹಿಕ ಸಂಬಂಧ (Physical Relationship) ಹೊಂದಿ, ಗರ್ಭ ಧರಿಸಿದ್ದಳು. ಶಿಕ್ಷಕಿ ವಿದ್ಯಾರ್ಥಿ (student) ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಳು. ವಿದ್ಯಾರ್ಥಿಗಾಗಿ ಗುಸ್ಸಿ ಬೆಲ್ಟ್ ಖರೀದಿಸಿದ್ದಳು. ಈ ವಿಷಯ ತಿಳಿದ ವಿದ್ಯಾರ್ಥಿ ಮನೆಯವರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸುಶಿಕ್ಷಿತೆ, ಉದ್ಯೋಗಸ್ಥ ಮಹಿಳೆಯನ್ನ ಮದ್ವೆ ಆಗೋದು ಕೆಟ್ಟ ನಿರ್ಧಾರ ಅಂದ ಆರ್ಥಿಕತಜ್ಞನಿಗೆ ಫುಲ್ ಕ್ಲಾಸ್
ವಿದ್ಯಾರ್ಥಿ ವಯಸ್ಸು 15 ವರ್ಷ. ಗಣಿತ ಶಿಕ್ಷಕಿ ರೆಬೆಕಾ, ಪೀಡಿತ ವಿದ್ಯಾರ್ಥಿಗೆ ತನ್ನ ಫೋನ್ ನಂಬರನ್ನು ನೀಡಿರಲಿಲ್ಲ. 11ರ ಬದಲು ಹತ್ತು ನಂಬರ್ ಮಾತ್ರ ನೀಡಿದ್ದಳು. ಉಳಿದ ನಂಬರ್ ಗೆಸ್ ಮಾಡುವಂತೆ ಹೇಳಿದ್ದಳು. ಇದೇ ವಿಷ್ಯದ ಕಾರಣಕ್ಕೆ ರೆಬೆಕಾ ಮತ್ತು ವಿದ್ಯಾರ್ಥಿ ಹತ್ತಿರವಾಗಿದ್ದರು. ಇಬ್ಬರ ಮಧ್ಯೆ ಶುರುವಾದ ಮಾತುಕತೆ ಸಂಬಂಧ ಬೆಳೆಸುವಲ್ಲಿಗೆ ಬಂದು ನಿಂತಿತ್ತು.
ವಿದ್ಯಾರ್ಥಿ ಆಗಾಗ ರೆಬೆಕಾ ಮನೆಗೆ ಹೋಗ್ತಿದ್ದ. ಸ್ನೇಹಿತನ ಮನೆಗೆ ಹೋಗೋದಾಗಿ ಹೇಳಿ ವಿದ್ಯಾರ್ಥಿ ರೆಬೆಕಾ ಮನೆಗೆ ಹೋಗ್ತಿದ್ದ. ವಿದ್ಯಾರ್ಥಿ ಜೊತೆ ಶಿಕ್ಷಕಿ 30ಕ್ಕೂ ಹೆಚ್ಚು ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಳು. ಶಿಕ್ಷಕಿ ಫ್ಲಾಟ್ ನಲ್ಲಿ ವಿದ್ಯಾರ್ಥಿ ಇದ್ದ ಸಮಯದಲ್ಲಿ ಆತನ ಸ್ನೇಹಿತರು ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋ ನಂತ್ರ ಶಾಲೆಯಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದ ಶಾಲಾ ಆಡಳಿತ ಮಂಡಳಿ (School Management Committee) ತನಿಖೆ ಶುರು ಮಾಡಿತ್ತು. ತನಿಖೆ ನಂತ್ರ ರೆಬೆಕಾಳಿಗೆ ಗೇಟ್ ಪಾಸ್ ನೀಡಲಾಗಿದೆ.
ರೆಬೆಕಾ ಈ ವಿದ್ಯಾರ್ಥಿ ಜೊತೆ ಮಾತ್ರವಲ್ಲ ಇನ್ನೂ ಕೆಲ ವಿದ್ಯಾರ್ಥಿಗಳ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪೀಡಿತ ವಿದ್ಯಾರ್ಥಿಗೆ ರೆಬೆಕಾ ಸುಳ್ಳು ಹೇಳಿದ್ದಳು. ತನಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇರುವ ಕಾರಣ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದಿದ್ದಳು. ಆದ್ರೆ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ದ ಶಿಕ್ಷಕಿ ಗರ್ಭಧರಿಸಿದ್ದಳು.
ಸುಖ ದಾಂಪತ್ಯ ಜೀವನಕ್ಕೆ ಮೂಲ ನಿಯಮಗಳಿವು, ತಪ್ಪಿದ್ರೆ ಜಗಳ ಗ್ಯಾರಂಟಿ!
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದರೇನು? : ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಎನ್ನುವುದು ಅಂಡಾಶಯಗಳು ಅಸಹಜ ಪ್ರಮಾಣದ ಆಂಡ್ರೋಜೆನ್‌ಗಳನ್ನು ಉತ್ಪಾದಿಸುವ ಸ್ಥಿತಿ. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡು ಬರುವ ಪುರುಷ ಲೈಂಗಿಕ ಹಾರ್ಮೋನ್. ಪಿಸಿಓಎಸ್ ಹೊಂದಿರುವ ಮಹಿಳೆಯರು ಹೆಚ್ಚಾಗಿ ಹೆಚ್ಚಿನ ಮಟ್ಟದ ಆಂಡ್ರೋಜೆನ್‌ಗಳನ್ನು ಹೊಂದಿರುತ್ತಾರೆ. ಇದು ಮಹಿಳೆಯ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಪಿಸಿಓಎಸ್ ಗುಣಪಡಿಸಲು ಸಾಧ್ಯವಿಲ್ಲ. ಕೆಲ ಔಷಧಿ ಮೂಲಕ ಅದನ್ನು ನಿಯಂತ್ರಿಸಬಹುದು. ಇದು ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಕೆಲವು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಪಿಸಿಓಎಸ್ ಹೊಂದಿರುವ ಅನೇಕ ಮಹಿಳೆಯರು ಇನ್ಸುಲಿನ್ ಪ್ರತಿರೋಧವನ್ನು ಹೊಂದಿರುತ್ತಾರೆ.