Asianet Suvarna News Asianet Suvarna News

ಕ್ರಿಕೆಟ್‌ ಆಡಲು ಚಾನ್ಸ್‌ ಕೊಡುವಂತೆ ಕಾಂಟ್ರ್ಯಾಕ್ಟ್‌, ವರನ ಸ್ನೇಹಿತರ ಷರತ್ತಿಗೆ ವಧು ಕಕ್ಕಾಬಿಕ್ಕಿ !

ಮದುವೆಯ ನಂತರದ ಜೀವನ ಮೊದಲಿದ್ದಂತೆ ಇರುವುದಿಲ್ಲ. ಹೊಸ ಜವಾಬ್ದಾರಿಗಳು, ಬದ್ಧತೆಗಳು ಮೊದಲಿನಂತೆ ಎಲ್ಲವನ್ನೂ ಎಂಜಾಯ್ ಮಾಡಲು ಅಡ್ಡಿಯಾಗಬಹುದು. ಇದನ್ನು ಮನಗಂಡ ಮದುಮಗನ ಸ್ನೇಹಿತರು ಮದ್ವೆಯ ಮೊದಲೇ ವಧುವಿನ ಬಳಿ ಒಪ್ಪಂದ ಮಾಡಿಕೊಂಡಿದ್ದಾರೆ. ತಮ್ಮ ಸ್ನೇಹಿತನಿಗೆ ಶನಿವಾರ ಮತ್ತು ಭಾನುವಾರ ಕ್ರಿಕೆಟ್‌ ಆಡಲು ಅನುಮತಿಸುವಂತೆ ಕಾಂಟ್ರ್ಯಾಕ್ಟ್ ಸಹಿ ಹಾಕಿಸಿಕೊಂಡಿದ್ದಾರೆ. ಕೇಳೋಕೆ ತಮಾಷೆ ಅನಿಸಿದ್ರೂ ಇದು ನಿಜ.

Tamil Nadu Bride Signs Contract Allowing Groom To Play Cricket Vin
Author
First Published Sep 14, 2022, 10:12 AM IST

ಮದುವೆ ಎಲ್ಲರ ಜೀವನದಲ್ಲೂ ಪ್ರಮುಖವಾದ ಘಟ್ಟ. ಆದರೆ ಮದುವೆಯ ನಂತರ ಹಲವರ ಜೀವನ ಬದಲಾಗುತ್ತದೆ. ಹೊಸ ಹೊಸ ಜವಾಬ್ದಾರಿಯಿಂದಾಗಿ ಅಂದುಕೊಂಡಂತೆ ಟ್ರಿಪ್, ಶಾಪಿಂಗ್ ಎಂದು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ. ಸ್ನೇಹಿತರನ್ನು ಭೇಟಿಯಾಗುವುದು, ಅವರ ಜೊತೆ ಸಮಯ ಕಳೆಯುವುದು ಸಹ ಹಲವರಿಗೆ ಕಷ್ಟವಾಗುತ್ತದೆ. ಇದನ್ನು ತಿಳಿದುಕೊಂಡೇ ತಮಿಳುನಾಡಿನಲ್ಲಿ ಮದುಮಗನ ಸ್ನೇಹಿತರ ವಧುವಿನ ಮುಂದೆ ವಿಚಿತ್ರ ಬೇಡಿಕೆಯನ್ನಿಟ್ಟಿದ್ದಾರೆ. ಮಾತ್ರವಲ್ಲ ಕಾಂಟ್ರ್ಯಾಕ್ಟ್‌ಗೂ ಸಹಿ ಹಾಕಿಸಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ವರನ ಸ್ನೇಹಿತರಿಂದ ವಧುವಿಗೆ ವಿಚಿತ್ರ ಡಿಮ್ಯಾಂಡ್‌
ಮದುಮಗಳು ಮದುವೆಗೂ (Marriage) ಮುಂಚೆ ಹುಡುಗನ ಬಳಿ ಕಾರು, ಮನೆ, ದುಬಾರಿ ಉಡುಗೊರೆಗೆ ಬೇಡಿಕೆ ಇಡುವುದು ಕೇಳಿರಬಹುದು. ಆದರೆ ತಮಿಳುನಾಡಿನ ಮದುವೆಯೊಂದರಲ್ಲಿ ವರನ ಸ್ನೇಹಿತರು (Grooms Friend) ವಧುವಿಗೆ ವಿಚಿತ್ರ ಡಿಮ್ಯಾಂಡ್‌ ಇಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಶನಿವಾರ ಮತ್ತು ಭಾನುವಾರ ತಮ್ಮ ಸ್ನೇಹಿತನಿಗೆ ಅಂದ್ರೆ ಆಕೆಯ ಗಂಡನಿಗೆ ಕ್ರಿಕೆಟ್‌ ಆಡಲು ಅನುಮತಿಸುವಂತೆ ಕಾಂಟ್ರಾಕ್ಟ್ ಸಹಿ ಹಾಕಿಸಿಕೊಂಡಿದ್ದಾರೆ.

ತಮಿಳುನಾಡಿನ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಮದುವೆಯಾಗಿದ್ದಾರೆ. ಆತನ ಸ್ನೇಹಿತರು, ಮದುವೆ ಬಳಿಕ ತಾವು ಮುಂಚಿನಂತೆ ಆಟ ಆಡಲು, ಕ್ರಿಕೆಟ್‌ ಮ್ಯಾಚ್‌ ನೋಡಲು ಸಮಯಾವಕಾಶ ನೀಡಬೇಕು ಎಂಬ ಷರತ್ತು (Condition) ವಿಧಿಸಿ ವಧು (Bride)ವಿನ ಹತ್ತಿರ ಕ್ರಿಕೆಟ್‌ ಆಟದ ಕಾಂಟ್ರಾಕ್ಟ್‌ಗೆ ಸಹಿ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ (Social meia) ವೈರಲ್‌ ಆಗುತ್ತಿದೆ.

ಬಯಸಿ ಮದ್ವೆಯಾಗಿದ್ದಲ್ಲ, ಪ್ರೀತಿಯೂ ಇಲ್ಲ, ಆದರೂ ಖುಷಿ ಇದೆಯಂತೆ!

ತಾಳಿ ಕಟ್ಟುವ ಮೊದಲು ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿದ ವಧು
ಮದುವೆಯ ನಂತರದ ಜೀವನವು ಬ್ರಹ್ಮಚಾರಿಯಾಗಿದ್ದ ಸಮಯಕ್ಕಿಂತ ಭಿನ್ನವಾಗಿರಬಹುದು. ಜವಾಬ್ದಾರಿಗಳು ಮತ್ತು ಬದ್ಧತೆಗಳು ಸ್ನೇಹಿತರೊಂದಿಗೆ ತಮ್ಮ ದಿನನಿತ್ಯದ ಸಮಯವನ್ನು ಆನಂದಿಸಲು ಅಡ್ಡಿಯಾಗಬಹುದು. ಆದರೆ, ಥೇಣಿಯ ಗೆಳೆಯರ ಬಳಗವೊಂದು ಈಗಷ್ಟೇ ಮದುವೆಯಾದ ತಮ್ಮ ಸ್ನೇಹಿತ ತಮ್ಮ ಸಾಂಪ್ರದಾಯಿಕ ಕ್ರಿಕೆಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಂಡರು. ಅವರು ಆಯ್ಕೆ ಮಾಡಿದ ವಿಧಾನವು ಚಮತ್ಕಾರಿ ಮತ್ತು ತಮಾಷೆಯಾಗಿದೆ. ತಮಿಳುನಾಡಿನ ತೇಣಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಹರಿಪ್ರಸಾದ್ ಭಾನುವಾರ ಪೂಜಾ ಅವರನ್ನು ವಿವಾಹವಾದರು. ಆದರೆ, ಪೂಜಾ ಒಂದು ಷರತ್ತಿಗೆ ಒಪ್ಪಬೇಕಾಯಿತು.

ಮದುವೆಯ ಬಳಿಕವೂ ಹರಿಪ್ರಸಾದ್ ಕ್ರಿಕೆಟ್‌ ಪಂದ್ಯಾವಳಿಗೆ (Cricket torunement) ಲಭ್ಯವಾಗಬೇಕೆಂದು ಅವರ ಸ್ನೇಹಿತರು ಬಯಸಿದ್ದರು. ವರನ ಸ್ನೇಹಿತರು 20 ರೂಪಾಯಿಯ ಸ್ಟಾಂಪ್ ಪೇಪರ್ ತಂದರು. ಮತ್ತು ತಾಳಿ ಕಟ್ಟುವ ಮೊದಲು ಪೂಜಾಗೆ ಸಹಿ ಹಾಕುವಂತೆ ಕೇಳಿದರು. ಸ್ಟಾಂಪ್ ಪೇಪರ್ ಮೇಲೆ, "ಪೂಜಾ ಎಂಬ ನಾನು ಈ ಮೂಲಕ ಹರಿಪ್ರಸಾದ್ ಅವರಿಗೆ ಸೂಪರ್ ಸ್ಟಾರ್ ಕ್ರಿಕೆಟ್ ತಂಡಕ್ಕಾಗಿ ಶನಿವಾರ ಮತ್ತು ಭಾನುವಾರ ಕ್ರಿಕೆಟ್ ಆಡಲು ಅವಕಾಶ ನೀಡುತ್ತೇನೆ" ಎಂದು ಬರೆಯಲಾಗಿತ್ತು. ವಧು ಹಿಂದೆ ಮುಂದೆ ಯೋಚಿಸದೆ ಕಾಂಟ್ರ್ಯಾಕ್ಟ್‌ಗೆ ಸಹಿ (Sign) ಮಾಡಿದ್ದು ಹರಿಪ್ರಸಾದ್ ಗೆಳೆಯರಿಗೆ ಸಮಾಧಾನವಾಯಿತು.

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ವರದಿಯ ಪ್ರಕಾರ, ವರನು ಉತ್ತಮ ಕ್ರಿಕೆಟ್ ಆಟಗಾರ. ಅವರ ಜೀವನದಲ್ಲಿ ಕ್ರಿಕೆಟ್‌ನ ಮಹತ್ವವನ್ನು ತಿಳಿದ ಅವರ ಸ್ನೇಹಿತರು, ಹರಿಪ್ರಸಾದ್ ಅವರ ಮದುವೆಯ ನಂತರವೂ ಆಟವಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದರು. ನಂತರದ ಆಲೋಚನೆಯು ಪೂಜಾ ಸಹಿ ಮಾಡಲು ಒಪ್ಪಂದವನ್ನು ತರಲು ಅವರನ್ನು ಪ್ರೇರೇಪಿಸಿತು. ವಧು ಡಾಕ್ಯುಮೆಂಟ್‌ಗೆ ಸಹಿ ಮಾಡಿದ ಕೂಡಲೇ, ವಧು ಮತ್ತು ವರರು ಒಪ್ಪಂದದ ಜೊತೆಗೆ ಫೋಟೋಗೆ ಪೋಸ್ ನೀಡಿದರು.

Follow Us:
Download App:
  • android
  • ios