ಬಯಸಿ ಮದ್ವೆಯಾಗಿದ್ದಲ್ಲ, ಪ್ರೀತಿಯೂ ಇಲ್ಲ, ಆದರೂ ಖುಷಿ ಇದೆಯಂತೆ!
ಮದುವೆ ಹಿಂದಿನ ಉದ್ದೇಶಗಳು ಬೇರೆ ಬೇರೆ ಇರುತ್ತವೆ. ಪ್ರೀತಿಗಾಗಿ ಕೆಲವರು ಮದುವೆಯಾದ್ರೆ ಮತ್ತೆ ಕೆಲವರು ಹಣಕ್ಕಾಗಿ ಮದುವೆಯಾಗ್ತಾರೆ. ಇನ್ನು ಕೆಲವರು ಸುರಕ್ಷತೆಗಾಗಿ ಮದುವೆಯಾಗ್ತಾರೆ. ಕಾರಣ ಯಾವುದೇ ಇರಲಿ, ಕೊನೆಯಲ್ಲಿ ಸಂತೋಷ ಸಿಗೋದು ಬಹಳ ಮುಖ್ಯ ಎನ್ನುತ್ತಾಳೆ ಈಕೆ
ಮದುವೆ,ಪ್ರೀತಿ, ವೃತ್ತಿ ಜೀವನದ ಆಯ್ಕೆ ಬಂದಾಗ ಬಹುತೇಕರು ಪ್ರೀತಿಯನ್ನು ಆಯ್ಕೆ ಮಾಡಿಕೊಳ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ವೃತ್ತಿಗೆ ಆದ್ಯತೆ ನೀಡ್ತಾರೆ. ಅದ್ರಲ್ಲೂ ಮಹಿಳೆಯರು ಬೆರಳೆಣಿಕೆಯಷ್ಟು ಮಂದಿ ಮಾತ್ರ ವೃತ್ತಿಗೆ ಮಹತ್ವ ನೀಡ್ತಾರೆ. ಇಲ್ಲೊಬ್ಬ ಮಹಿಳೆ ಕೂಡ ವೃತ್ತಿಯನ್ನು ಪ್ರೀತಿಗಿಂತ ಹೆಚ್ಚಾಗಿ ಪ್ರೀತಿಸಿ ಉನ್ನತ ಸ್ಥಾನಕ್ಕೇರುವ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ. ಆಕೆಗೆ ಮದುವೆ (Marriage) ಯಾಗಿ ಐದು ವರ್ಷ ಕಳೆದಿದೆ. ದಂಪತಿ ಇಬ್ಬರ ಮಧ್ಯೆ ಪ್ರೀತಿ (Love) ಯಿಲ್ಲ. ಇಬ್ಬರ ಮಧ್ಯೆ ಗೌರವವಿದೆ. ಆದ್ರೆ ನನಗೆ ಈ ಜೀವನ ಖುಷಿ ನೀಡಿದೆ ಎನ್ನುತ್ತಾಳೆ ಮಹಿಳೆ. ಮನುಷ್ಯನ ಜೀವನ ಯಾವ ಕ್ಷಣದಲ್ಲಿ ಬೇಕಾದ್ರೂ ಬದಲಾಗಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎನ್ನುತ್ತಾಳೆ ಆಕೆ.
ಆಕೆ ನಾಲ್ಕೈದು ವರ್ಷಗಳಿಂದ ಒಂದೇ ಕಂಪನಿ (Company) ಯಲ್ಲಿ ಕೆಲಸ ಮಾಡ್ತಿದ್ದಳಂತೆ. ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡ್ತಿದ್ದ ಆಕೆ ಹಗಲಿರುಳು ದುಡಿಯುತ್ತಿದ್ದಳಂತೆ. ಆದ್ರೆ ಆಕೆ ಕೆಲಸಕ್ಕೆ ಯಾರೂ ಹೆಚ್ಚಿನ ಮಹತ್ವ ನೀಡಿರಲಿಲ್ಲವಂತೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಮುಂದೆ ಬರೋದು ಕಷ್ಟ ಎಂಬ ಭಾವನೆಯಲ್ಲಿದ್ದ ಮಹಿಳೆ, ಕೆಲಸ ಬಿಡುವ ನಿರ್ಧಾರ ತೆಗೆದುಕೊಂಡಿದ್ದಳಂತೆ. ಆದ್ರೆ ಒಂದು ದಿನ ಆಕೆ ಬಾಸ್ ಎಲ್ಲರನ್ನೂ ಕರೆದು ಹೊಸ ಜವಾಬ್ದಾರಿ ವಹಿಸಿದ್ದರಂತೆ. ಹೊಸ ಪ್ರಾಜೆಕ್ಟ್ ಗೆ ಕೆಲಸ ಮಾಡುವಂತೆ ಹೇಳಿದ್ದರಂತೆ. ಈ ಜವಾಬ್ದಾರಿಯನ್ನು ಹೊತ್ತ ಮಹಿಳೆ, ಯಾವುದೇ ಸಮಸ್ಯೆಯಾಗದಂತೆ ಕೆಲಸ ಸಂಭಾಳಿಸಿದ್ದಳಂತೆ. ಇಷ್ಟರ ಮಧ್ಯೆ ಒಂದು ದಿನ ಕಂಪನಿ ಸಿಇಒ ಮಹಿಳೆಯನ್ನು ಚೇಂಬರ್ ಗೆ ಕರೆದಿದ್ದಾನೆ. ಇದು ಮಹಿಳೆ ಆತಂಕ ಹೆಚ್ಚಿಸಿದೆ. ಕೆಲಸ ಹೋಗುತ್ತೆ ಎಂಬ ಭಯ ಶುರುವಾಗಿದೆ. ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಸಿಇಓ ತನ್ನ ಮಗನನ್ನು ಮದುವೆಯಾಗುವಂತೆ ಈಕೆಯನ್ನು ಕೇಳಿದ್ದಾನೆ. ಇದನ್ನು ಕೇಳಿದ ಮಹಿಳೆ ಶಾಕ್ ಆಗಿದ್ದಾಳೆ. ಧೈರ್ಯ ಮಾಡಿ, ನನ್ನನ್ನು ಆಯ್ಕೆ ಮಾಡಲು ಕಾರಣವೇನು ಎಂದು ಕೇಳಿದ್ದಾಳೆ.
ಕಿರಿಯ ಮಗನಿಗೆ ಇನ್ನೂ ಜವಾಬ್ದಾರಿ ಬಂದಿಲ್ಲ. ನೀನು ಕಚೇರಿಯಲ್ಲಿ ಕೆಲಸ ಮಾಡುವ ರೀತಿ ನನಗೆ ಇಷ್ಟವಾಗಿದೆ. ನನ್ನ ಮಗನನ್ನು ಮದುವೆಯಾದ್ರೆ ಆತನ ಬದುಕು ಸುಧಾರಿಸಲಿದೆ ಎಂದು ಸಿಇಓ ಹೇಳಿದ್ದಾನಂತೆ. ಇದನ್ನು ಕೇಳಿ ಮತ್ತಷ್ಟು ಗೊಂದಲಕ್ಕೊಳಗಾದ ಮಹಿಳೆ ಸಮಯ ಕೇಳಿದ್ದಳಂತೆ.
'ಬೇರೆ ಮಹಿಳೆ ಎದುರಿಗೆ ಬಂದರೆ ಸಾಕು, ಏನೇನೋ ಆಸೆ, ಏನ್ಮಾಡ್ಲಿ?'
ಈಗಾಗಲೇ ಹಣ, ಗೌರವ, ವ್ಯವಹಾರ ಇರುವ ಕಡೆ ಆಫರ್ ಬಂದಾಗ ಅದನ್ನು ಬಿಡುವುದು ನನಗೆ ಇಷ್ಟವಾಗಿಲ್ಲ ಎನ್ನುತ್ತಾಳೆ ಮಹಿಳೆ. ನಾನು ನಾಲ್ಕು ವರ್ಷದಿಂದ ಕೆಲಸ ಮಾಡ್ತಿದ್ದರು ದೊಡ್ಡ ಹುದ್ದೆ ಏರಲು ಸಾಧ್ಯವಾಗಿಲ್ಲ. ಸಿಇಓ ಮಗನನ್ನು ಮದುವೆಯಾದ್ರೆ ಹುದ್ದೆ ತಾನಾಗಿಯೇ ಒಲಿದು ಬರುತ್ತದೆ. ಆ ಹುದ್ದೆ, ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವುದೇ ನನ್ನ ಕನಸು. ಹಾಗಾಗಿ ಈ ಆಫರ್ (Offer) ಒಪ್ಪಿಕೊಂಡೆ ಎನ್ನುತ್ತಾಳೆ ಮಹಿಳೆ.
ಸೆಕ್ಸ್‌ಗಾಗಿ ದಿನವಿಡೀ ಗಂಡನ ಕಾಟ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಹಾಯ ಕೋರಿದ ವೃದ್ಧೆ
ಮಹಿಳೆ ಒಪ್ಪಿಗೆ ನೀಡಿದ ನಂತ್ರ ಕಚೇರಿಯಲ್ಲಿ ಅನೇಕ ಮಾತುಗಳು ಕೇಳಿ ಬಂದಿದ್ದವಂತೆ. ಅನೇಕರು ಕೆಂಗಣ್ಣು ಬೀರಿದ್ದರಂತೆ. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲವಂತೆ ಮಹಿಳೆ. ದೊಡ್ಡ ಮನೆತನವಾದ್ದರಿಂದ ಇಬ್ಬರನ್ನು ಲವ್ ಮ್ಯಾರೇಜ್ (Love Marriage) ಎಂದು ಮಾಧ್ಯಮಗಳಿಗೆ ಹೇಳಿ ಮದುವೆ ನಡೆದಿತ್ತಂತೆ. 2018ರಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು. ಈಗ ನಾನು ಕಲ್ಪಿಸಿಕೊಳ್ಳದ ಸ್ಥಾನದಲ್ಲಿ ಕೆಲಸ ಮಾಡ್ತಿದ್ದೇನೆ. ಆದ್ರೆ ನನ್ನ ಹಾಗೂ ಪತಿ ಮಧ್ಯೆ ಪ್ರೀತಿಯಿಲ್ಲ. ಇಬ್ಬರೂ ಪ್ರೀತಿ ನಾಟಕವಾಡ್ತಿದ್ದೇವೆ. ಒಬ್ಬರಿಗೊಬ್ಬರು ಕಷ್ಟದ ಸಮಯದಲ್ಲಿ ನೆರವಾಗಿದ್ದೇವೆ. ಇಬ್ಬರೂ ಪರಸ್ಪರ ಸ್ಪಂದಿಸುತ್ತೇವೆ ಎನ್ನುವ ಮಹಿಳೆ, ಪ್ರೀತಿ ಇಲ್ಲದ ಸಂಸಾರದಲ್ಲೂ ನನಗೆ ಖುಷಿ ಇದೆ ಎಂದಿದ್ದಾಳೆ. ನಾನು ಇಷ್ಟಪಟ್ಟ ಜೀವನ ನನಗೆ ಸಿಕ್ಕಿದೆ ಎನ್ನುತ್ತಾಳೆ.