ಹೀಗೂ ಮಾಡ್ತಾರಾ..ಮದುವೆಗೆ ಒತ್ತಾಯಿಸಿದ್ದಕ್ಕೆ ದೇವರನ್ನೇ ವರಿಸಿದ ಯುವತಿ !
ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಮಾತ್ರವಲ್ಲ ತಮ್ಮನ್ನೇ ತಾವು ಮದ್ವೆಯಾಗುವ ಸೋಲೋಗಮಿ ಪದ್ಧತಿಯೂ ಈಗ ಸಾಮಾನ್ಯವಾಗಿದೆ. ಆದ್ರೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಜೈಪುರದಲ್ಲೊಬ್ಬ ಮಹಿಳೆ ದೇವರನ್ನೇ ಮದ್ವೆಯಾಗಿದ್ದಾಳೆ.
ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ.
ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ. ಮಾತ್ರವಲ್ಲ ತನ್ನನ್ನೇ ತಾನು ಮದುವೆಯಾಗುವ ಸೋಲೋಗಮಿಯು ಈಗ ಹೆಚ್ಚು ಫೇಮಸ್ ಆಗಿದೆ. ಆದರೆ ಇದ್ಯಾವ ರೀತಿಯೂ ಅಲ್ಲದೆ ರಾಜಸ್ಥಾನದ ಜೈಪುರದಲ್ಲೊಬ್ಬ ಯುವತಿ ದೇವರನ್ನೇ ಮದ್ವೆಯಾಗಿದ್ದಾಳೆ.
ದೇಶದ ಮೊದಲ ಸೋಲೋಗಮಿ: ಎರಡು ದಿನ ಮೊದಲೇ ಸ್ವಯಂ ವಿವಾಹವಾದ ಕ್ಷಮಾ ಬಿಂದು
ಯಾರ ಸಹವಾಸಾನೇ ಬೇಡಾಂತ ದೇವರನ್ನೇ ಮದುವೆಯಾದ್ಲು !
ಮದ್ವೆಯಾಗು, ಮದ್ವೆಯಾಗು ಎಂಬ ಮನೆಯವರ ಒತ್ತಾಯ ತಾಳಲಾಗದ ಯುವತಿಯೊಬ್ಬಳು, ದೇವರನ್ನೇ (God) ಮದುವೆ (Marriage)ಯಾದ ಘಟನೆ ಜೈಪುರದಲ್ಲಿ ನಡೆದಿದೆ. ಪೂಜಾ ಎಂಬ ಯುವತಿಗೆ ಆಕೆ ತಂದೆ ತಾಯಿ ಮದುವೆಗೆ ಬಹಳ ದಿನಗಳಿಂದ ಒತ್ತಾಯಿಸುತ್ತಾ ಇದ್ದರಂತೆ. ಆದರೆ ಚಿಕ್ಕವಯಸ್ಸಿನಿಂದಲೂ ತಂದೆ-ತಾಯಿ ಮಧ್ಯೆ ಪ್ರೀತಿಯ ಬದಲು ಜಗಳ ನೋಡುತ್ತಾ ಬಂದಿದ್ದ ಆಕೆ, ಮದುವೆ ಸಹವಾಸವೇ ಬೇಡ ಎಂದು ಭಗವಂತ ವಿಷ್ಣುವನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾಳೆ. ವಿಷ್ಣು ಮೂರ್ತಿಗೆ ಹಾರ ಮುಟ್ಟಿಸಿ ತಾನೇ ಹಾರ ಹಾಕಿಕೊಂಡಿದ್ದಾಳೆ. ಪ್ರತಿದಿನ ತನ್ನ ಪತಿ ಭಗವಾನ್ ವಿಷ್ಣುಗಾಗಿ ತಿಂಡಿ ತಯಾರಿಸುತ್ತಾಳಂತೆ.
ಜೈಪುರದ ಗೋವಿಂದಗಢ ಸಮೀಪದ ಹಳ್ಳಿಯೊಂದರಲ್ಲಿ ನಡೆದ ಈ ಮದುವೆ ವಿಲಕ್ಷಣ ಕಾರಣಕ್ಕೆ ಸುದ್ದಿಯಾಗುತ್ತಿದೆ. ಮದುವೆಯ ಸಮಯದಲ್ಲಿ ಎಲ್ಲಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಗಣೇಶ ಪೂಜೆಯಿಂದ ತೊಡಗಿ ಸಪ್ತಪದಿಯ ವರೆಗೆ ಎಲ್ಲಾ ಕ್ರಮವನ್ನು ನೆರವೇರಿಸಲಾಯಿತು. ಈ ಮದುವೆಯಲ್ಲಿ ವರ (Bridegroom) ಹೊರತುಪಡಿಸಿ ಎಲ್ಲರೂ ಹಾಜರಿದ್ದರು. ಜೈಪುರದ 30 ವರ್ಷದ ಪೂಜಾ ಸಿಂಗ್ ಭಗವಾನ್ ವಿಷ್ಣುವನ್ನು ಮದುವೆಯಾದ ನಂತರ ಎಲ್ಲರ ನಡುವೆ ಚರ್ಚೆಯ ವಿಷಯವಾಗಿದೆ. ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿವೆ.
Sologomy ಅಂದ್ರೇನು ? ಇದಕ್ಕಿದ್ಯಾ ಕಾನೂನು ಮಾನ್ಯತೆ ?
ತಂದೆ-ತಾಯಿ ಜಗಳ ನೋಡಿ ವೈವಾಹಿಕ ಜೀವನದ ಬಗ್ಗೆ ಬೇಸರಪಟ್ಟುಕೊಂಡಿದ್ದ ಯುವತಿ
ಡಿಸೆಂಬರ್ 8ರಂದು ಪೂಜಾ ಸಿಂಗ್ ಸಂಪೂರ್ಣ ವಿಧಿವಿಧಾನಗಳೊಂದಿಗೆ ಭಗವಾನ್ ವಿಷ್ಣುವನ್ನು ವಿವಾಹವಾದರು. ಈ ವಿಶಿಷ್ಟ ಮದುವೆಯಲ್ಲಿ, ಪೂಜಾ ಸ್ವತಃ ವಿಷ್ಣುವಿನ ಹೆಸರಿನಲ್ಲಿ ಸಿಂಧೂರದ ಬದಲಿಗೆ ಶ್ರೀಗಂಧವನ್ನು ಹಾಕಿದರು. ಭಗವಾನ್ ವಿಷ್ಣುವನ್ನು ಮದುವೆಯಾಗಲು ಕಾರಣವೇನು ಎಂದು ಕೇಳಿದಾಗ ಅವರು ಉತ್ತರಿಸಿದ್ದಾರೆ. ಪೂಜಾ ಅಪ್ಪ-ಅಮ್ಮನ ವೈವಾಹಿಕ ಜೀವನವನ್ನು (Married Life) ನೋಡಿ ಬೇಸತ್ತು ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದರಂತೆ. ಆದರೆ ಜನರ ಮೂದಲಿಕೆಗಳನ್ನು ಕೇಳಿ ಬೇಸರಗೊಂಡರು, ಆದ್ದರಿಂದ ಜನರು ತಮ್ಮ ಮದುವೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲು ದೇವಸ್ಥಾನದಲ್ಲಿ (Temple) ಕುಳಿತು ವಿಷ್ಣವನ್ನು ಮದುವೆಯಾದರು ಎಂದು ತಿಳಿಸಿದ್ದಾರೆ.
ಬಾಲ್ಯದಿಂದಲೂ ತಂದೆ-ತಾಯಿಯ ನಡುವೆ ಜಗಳಗಳು ನಡೆಯುತ್ತಿದ್ದ ಕಾರಣ ತಾನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದೆ ಎಂದು ಪೂಜಾ ಹೇಳಿದ್ದಾರೆ. ಯಾರನ್ನೋ ಮದುವೆಯಾಗಿ ತನ್ನ ಜೀವನ (Life)ವನ್ನು ಹಾಳು ಮಾಡಿಕೊಳ್ಳಲು ಪೂಜಾ ಬಯಸಲಿಲ್ಲ. ಡಿಸೆಂಬರ್ 8ರಂದು ಮದುವೆಯಾದ ನಂತರ, ಪೂಜಾ ತನ್ನ ಮನೆಯಲ್ಲಿ ವಾಸಿಸುತ್ತಾಳೆ ಮತ್ತು ಪ್ರತಿದಿನ ದೇವಾಲಯದಲ್ಲಿ ಕುಳಿತು ಭಗವಾನ್ ವಿಷ್ಣುವಿಗೆ ಆಹಾರ (Food)ವನ್ನು ತಯಾರಿಸುತ್ತಾಳೆ. ಸಮಾಜ ತನ್ನನ್ನು ಗೇಲಿ ಮಾಡುತ್ತದೆ, ಆದರೆ ವಿಷ್ಣುವನ್ನು ಪತಿಯಾಗಿ ಸ್ವೀಕರಿಸಿದ್ದೇನೆ ಎಂದು ಪೂಜಾ ಹೇಳಿದ್ದಾರೆ. ಸಮಾಜದ ಅನೇಕ ಜನರು ಪೂಜಾ ಅವರ ಸಂತೋಷವನ್ನು ಬೆಂಬಲಿಸಿದ್ದಾರೆ ಮತ್ತು ಮದುವೆಗೆ ಶುಭಾಷಯವನ್ನು ಕೋರಿದ್ದಾರೆ.