ಮೊಮ್ಮಗನ ಆರೈಕೆ ಮಾಡಲು ಆತನ ತಂದೆಯ ಪೋಷಕರು ಹೆಚ್ಚು ಸಶಕ್ತರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ಕೋವಿಡ್ -19ಗೆ ತನ್ನ ಇಬ್ಬರೂ ಹೆತ್ತವರನ್ನೂ ಕಳೆದುಕೊಂಡಿದ್ದ ಐದು ವರ್ಷದ ಬಾಲಕನ ಪಾಲನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ನವದೆಹಲಿ: ಮೊಮ್ಮಗನ ಆರೈಕೆ ಮಾಡಲು ಆತನ ತಂದೆಯ ಪೋಷಕರು ಹೆಚ್ಚು ಸಶಕ್ತರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ಕೋವಿಡ್ -19ಗೆ ತನ್ನ ಇಬ್ಬರೂ ಹೆತ್ತವರನ್ನೂ ಕಳೆದುಕೊಂಡಿದ್ದ ಐದು ವರ್ಷದ ಬಾಲಕನ ಪಾಲನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಮೊಮ್ಮಕ್ಕಳ ಹಿತಾಸಕ್ತಿಗಳನ್ನು ನೋಡಿಕೊಳ್ಳುವಲ್ಲಿ ಅಜ್ಜಅಜ್ಜಿಯರು ಹೆಚ್ಚು ಶಕ್ತಿಯುತವಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
ಅಪ್ಪ ಅಮ್ಮನನ್ನು ಕಳೆದುಕೊಂಡ ಮಗುವಿನ ಪಾಲನೆಯ ಹಕ್ಕನ್ನು ಮಗುವಿನ ತಾಯಿ ಕಡೆಯ ಸಂಬಂಧಿಗೆ ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶದಿಂದ ಬೇಸರಗೊಂಡ ಮಗುವಿನ ತಂದೆ ಕಡೆಯ ಪೋಷಕರಾದ 71 ವರ್ಷದ ಅಜ್ಜ ಸ್ವಾಮಿನಾಥನ್ ಕುಂಚು ಆಚಾರ್ಯ (Swaminathan Kunchu Acharya) ಅವರು ತಮ್ಮ 63 ವರ್ಷದ ಪತ್ನಿಯೊಂದಿಗೆ ಸೇರಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್. ಶಾ (MR Shah) ಮತ್ತು ಅನಿರುದ್ಧ ಬೋಸ್ (Aniruddha Bose) 71 ವರ್ಷ ಮತ್ತು 63 ವರ್ಷಗಳು ಏನೂ ದೊಡ್ಡ ವಿಷಯವಲ್ಲ, ತಂದೆಯ ಕಡೆಯ ಅಜ್ಜಿಯರು ಇದ್ದರೆ, ಮೊಮ್ಮಗನನ್ನು ನೋಡಿಕೊಳ್ಳಲು ಅವರಿಗೆ ಹೆಚ್ಚಿನ ಶಕ್ತಿ ಇರುತ್ತದೆ ಎಂದು ಹೇಳಿದರು.
Grand Welcome For Baby Girl: ಮೊಮ್ಮಗಳ ಆಗಮನಕ್ಕೆ ಹೆಲಿಕಾಪ್ಟರ್ ಬುಕ್ ಮಾಡಿದ ಅಜ್ಜ
ಮೇ 2ರಂದು ಮಗುವಿನ ತಂದೆಯ ಪೋಷಕರಿಗೆ ವಯಸ್ಸಾಗಿದೆ ಅವರಿಗೆ ತಮ್ಮ ಮೊಮ್ಮಗನನ್ನು ನೋಡಲಾಗದು ಎಂದು ಗಮನಿಸಿದ ಗುಜರಾತ್ ಹೈಕೋರ್ಟ್ ತಾಯಿಯ ಕಡೆಯ, ಸಂಬಂಧದಲ್ಲಿ ಚಿಕ್ಕಮ್ಮನೋ ದೊಡ್ಡಮ್ಮನೋ ಆಗುವ 46 ವರ್ಷ ವಯಸ್ಸಿನ ಮಹಿಳೆಗೆ ಮಗುವಿನ ಆರೈಕೆಯ ಅವಕಾಶ ನೀಡಿತ್ತು. ಪ್ರಾಯದಲ್ಲಿ ಮಗುವಿನ ಅಜ್ಜ ಅಜ್ಜಿಗಿಂತ ಕಡಿಮೆ ವಯಸ್ಸಿನವರಾಗಿದ್ದು, ಉದ್ಯೋಗಿಯೂ ಒಂಟಿಯೂ ಆಗಿರುವುದರಿಂದ ಮಗುವಿನ ಹಿತದೃಷ್ಠಿಯಿಂದ ಗುಜರಾತ್ ಹೈಕೋರ್ಟ್ ಈ ತೀರ್ಪು ನೀಡಿತ್ತು. ಈ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಅರ್ಜಿದಾರರು, ಅಹಮದಾಬಾದ್‌ನ (Ahmedabad) ನಿವಾಸಿಯಾಗಿದ್ದು ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದು, (Central government employee) ಆರಾಮದಾಯಕ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ ಮತ್ತು ಅವರ ಮಗ ಮತ್ತು ಸೊಸೆಯ ಮರಣದ ನಂತರ, ಮಗು ದಾಹೋದ್‌ನಲ್ಲಿ (Dahod) ವಾಸಿಸುವ ಮಗುವಿನ ಚಿಕ್ಕಮ್ಮನೊಂದಿಗೆ ಉಳಿದಿದೆ ಎಂದು ಪ್ರತಿಪಾದಿಸಿದರು. ಅರ್ಜಿದಾರರ ವಕೀಲ ಜಿಎನ್ ರೇ (GN Ray) ಅವರು ಮಗುವನ್ನು ಅಜ್ಜಅಜ್ಜಿಯರು ನೋಡಿಕೊಳ್ಳುತ್ತಿದ್ದರು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಮಾತ್ರ ಅವರು ಅವರಿಂದ ಬೇರ್ಪಟ್ಟರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
Karwar: ಮೊಮ್ಮಗನನ್ನು ನೋಡಲು ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ
ಅರ್ಜಿದಾರರು ತಮ್ಮ ಮಗ ಬೇರೆ ಜಾತಿಯ ಮಹಿಳೆಯೊಂದಿಗೆ ವಿವಾಹವಾಗಿದ್ದನ್ನು ಹಿಂದೆ ವಿರೋಧಿಸಿದ್ದರು. ಈ ಕಾರಣಕ್ಕೆ ಪ್ರಕರಣಕ್ಕೆ ಬೇರೆ ಇತಿಹಾಸವಿದೆ. ಅಹಮದಾಬಾದ್‌ನಲ್ಲಿ ಅರ್ಜಿದಾರರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಅರ್ಜಿದಾರರ ಮಗ ಮತ್ತು ಸೊಸೆಯನ್ನು ಸೊಸೆಯ ತಾಯಿಯ ಕುಟುಂಬ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ತಾಯಿಯ ಕುಟುಂಬವು ಅವಿಭಕ್ತ ಕುಟುಂಬವಾಗಿ ವಾಸಿಸುತ್ತಿದ್ದು, ಮಗುವಿಗೆ ಎಲ್ಲಾ ಕಾಳಜಿ ಮತ್ತು ಬೆಂಬಲ ಸಿಗುತ್ತದೆ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿದೆ ಎಂದು ರಹೀಮ್ ಹೇಳಿದ್ದಾರೆ. ಈ ಹಂತದಲ್ಲಿ ವಿಭಕ್ತ ಕುಟುಂಬದಲ್ಲಿ ಉಳಿಯುವುದಕ್ಕಿಂತ ದೊಡ್ಡ ಕುಟುಂಬದಲ್ಲಿ ಪಾಲನೆ ಮಗುವಿನ ಮೇಲೆ ಗಣನೀಯ ವ್ಯತ್ಯಾಸವನ್ನು ಹೊಂದಿರುತ್ತದೆ ಎಂದು ರಹೀಮ್ ಹೇಳಿದರು.
ನ್ಯಾಯಾಧೀಶರು, ತಾಯಿಯ ಚಿಕ್ಕಮ್ಮ ಅವಿವಾಹಿತರಾಗಿದ್ದು, ದಾಹೋದ್‌ನಲ್ಲಿ ನೆಲೆಸಿದ್ದಾರೆ. ಆದರೆ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಅಹಮದಾಬಾದ್‌ನಲ್ಲಿ ಶಿಕ್ಷಣ ಸೌಲಭ್ಯಗಳು ಉತ್ತಮವಾಗಿವೆ. ಹೀಗಾಗಿ ಮಗುವಿನ ಅಜ್ಜ ಅಜ್ಜಿಯರು ಮಗುವಿನ ಶಿಕ್ಷಣವನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಅಜ್ಜಿಯರು ತಮ್ಮ ಮೊಮ್ಮಗನ ಆಸಕ್ತಿಯನ್ನು ನೋಡಿಕೊಳ್ಳುವುದರಿಂದ ಏಕೆ ವಂಚಿತರಾಗಬೇಕು ಎಂದು ಕೋರ್ಟ್ ಪ್ರಶ್ನಿಸಿತ್ತು.
