ಕುಟುಂಬಕ್ಕೆ ಬಂದ ಹೊಸ ಅತಿಥಿಗೆ ಅದ್ದೂರಿ ಸ್ವಾಗತ ಸೊಸೆ ಹಾಗೂ ಮಗುವನ್ನು ಕರೆ ತರಲು ಹೆಲಿಕಾಪ್ಟರ್ ಬುಕ್ ಹೆಲಿಕಾಪ್ಟರ್ ಮೂಲಕ ಮೊಮ್ಮಗಳ ಮನೆಗೆ ಕರೆತಂದ ಅಜ್ಜ
ಪುಣೆ: ಮಹಾರಾಷ್ಟ್ರದ ಪುಣೆಯ ಕುಟುಂಬವೊಂದು ಆಗ ತಾನೇ ಜನಿಸಿದ ಹೆಣ್ಣು ಮಗುವಿಗೆ ಅದ್ದೂರಿ ಸ್ವಾಗತ ಕೋರಿದೆ. ಹೆಣ್ಣು ಮಗುವಿನ ಜನನದಿಂದ ಖುಷಿಗೊಂಡ ಕುಟುಂಬ ಹೆಲಿಕಾಪ್ಟರ್‌ನಲ್ಲಿ ಮಗುವನ್ನು ಮನೆಗೆ ಕರೆತರುವ ಮೂಲಕ ಕುಟುಂಬವನ್ನು ಸೇರಿದ ಹೊಸ ಅತಿಥಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ (Balewadi) ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ (Ajit Pandurang Balwadkar), ನಮ್ಮ ಕುಟುಂಬದ ಹೊಸ ಸದಸ್ಯರಾದ ಕ್ರುಶಿಕಾಗೆ (Krushika) ಭವ್ಯವಾದ ಸ್ವಾಗತವನ್ನು ನೀಡಲು ಬಯಸಿದೆವು. ಹಾಗಾಗಿ ಸಮೀಪದ ಶೆವಾಲ್ ವಾಡಿಯಲ್ಲಿರುವ (Shewal Wadi) ಮಗುವಿನ ಅಜ್ಜಿಯ ಮನೆಯಿಂದ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವ ಸಮಯ ಬಂದಾಗ ಅವರ ಆಗಮನಕ್ಕಾಗಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದೆವು ಎಂದು ಅವರು ಹೇಳಿದರು.
ತನ್ನ ಕುಟುಂಬದ ಹೊಸ ಸದಸ್ಯಳನ್ನು ಸ್ವಾಗತಿಸಲು ಇಡೀ ಕುಟುಂಬವು ಒಟ್ಟುಗೂಡಿದ ಸಂತೋಷದ ಸಂದರ್ಭದ ಫೋಟೋಗಳನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಕೂಡ ಕಾಣಿಸುತ್ತದೆ. ಅಲ್ಲದೇ ಪಟಾಕಿಯನ್ನು ಸಿಡಿಸುತ್ತಿರುವ ದೃಶ್ಯ ಕೂಡ ಫೋಟೊದಲ್ಲಿದೆ. ಬಾಲೇವಾಡಿಯ ಮೂಲತಃ ಕೃಷಿಕರಾಗಿರುವ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಅವರು ತಮ್ಮ ಹೊಸ ಮೊಮ್ಮಗಳು ಹಾಗೂ ಸೊಸೆಯನ್ನು ಅವರ ತವರು ಮನೆಯಿಂದ ತಮ್ಮ ಮನೆಗೆ ಕರೆತರಲು ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದ್ದಾರೆ ಎಂದು ಬರೆಯಲಾಗಿದೆ.
ಈ ಫೋಟೋಗಳು ಚಿತ್ರಗಳು ವೈರಲ್ ಆಗಿದ್ದು, ನೆಟಿಜನ್‌ಗಳು ಕುಟುಂಬದ ಈ ಕ್ರಮವನ್ನು ಅನ್ನು ಇಷ್ಟಪಟ್ಟಿದ್ದಾರೆ. ಹೆಣ್ಣು ಮಗುವಿನ ಜನನವನ್ನು ಅದ್ಭುತ ರೀತಿಯಲ್ಲಿ ಆಚರಿಸಿದ್ದಕ್ಕಾಗಿ ಟ್ವಿಟರ್ ಕುಟುಂಬವನ್ನು ಶ್ಲಾಘಿಸಿದೆ. ಆಡಂಬರವನ್ನು ಮೆಚ್ಚುವವರಲ್ಲ ಆದರೆ ನಾನು ಪ್ರೀತಿಸುವ ಹೆಣ್ಣು ಮಗುವಿಗಾಗಿ ಇದು. ಹಣಕ್ಕೆ ಬೆಲೆಯಿಲ್ಲದೆ ಇಂತಹ ಕಾರ್ಯವನ್ನು ಮಾಡುವುದನ್ನು ನಾವು ಸಂತೋಷ ಎಂದು ಕರೆಯುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯಗಳು ಮುಖ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅನಾಥ ಮಗುವೆಗೆ ತಾಯಿಯಾಗಲು ಬಯಿಸಿದ್ದ ಪಿಗ್ಗಿ, ನೋ ಎಂದ್ರಂತೆ ತಾಯಿ ಮಧು ಚೋಪ್ರಾ!
ಇದೇ ರೀತಿಯ ಘಟನೆಯಲ್ಲಿ, ಪುಣೆಯ (Pune) ಶೆಲ್ಗಾಂವ್ (Shelgaon) ಮೂಲದ ಕುಟುಂಬವೊಂದು ಇತ್ತೀಚೆಗೆ ನವಜಾತ ಹೆಣ್ಣು ಮಗುವಿಗೆ ಭವ್ಯವಾದ ಸ್ವಾಗತ ಕೋರಿತ್ತು. ರಾಜಲಕ್ಷ್ಮಿ ಎಂಬ ಹೆಸರಿನ ಮಗು ಜನವರಿ 22 ರಂದು ಭೋಸಾರಿಯಲ್ಲಿರುವ (Bhosari) ತನ್ನ ತಾಯಿಯ ಊರಿನಲ್ಲಿ ಜನಿಸಿತು ಮತ್ತು ಆ ಮಗುವನ್ನು ಖೇಡ್‌ನ (Khed) ಶೆಲ್ಗಾಂವ್‌ನಲ್ಲಿರುವ ಮನೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯಲಾಗಿತ್ತು. ಇದನ್ನು ವೃತ್ತಿಯಲ್ಲಿ ವಕೀಲರಾಗಿರುವ ಮಗುವಿನ ತಂದೆ ವಿಶಾಲ್ ಜರೇಕರ್ (Vishal Zarekar) ಖಚಿತಪಡಿಸಿದ್ದರು. ಕುಟುಂಬವು ಹೆಲಿಕಾಪ್ಟರ್‌ಗಾಗಿ 1 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ವರದಿಯಾಗಿದೆ.
Baby girl welcome ಮೊದಲ ಹೆಣ್ಣು ಮಗು ಜನನ, ಅದ್ಧೂರಿ ಸ್ವಾಗತಕ್ಕೆ ಹೆಲಿಕಾಪ್ಟರ್ ಕಳುಹಿಸಿದ ಕುಟುಂಬ!
ಬಹಳ ದಿನಗಳ ನಂತರ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಸಂತಸ ಅಪಾರವಾಗಿದೆ. ಹಾಗಾಗಿ, ನನ್ನ ಪತ್ನಿ ಮತ್ತು ನಾನು ಏಪ್ರಿಲ್ 2 ರಂದು ಹೆಲಿಕಾಪ್ಟರ್‌ನಲ್ಲಿ ರಾಜಲಕ್ಷ್ಮಿಯನ್ನು (Rajlaxmi) ಮನೆಗೆ ಕರೆತಂದಿದ್ದೇವೆ. ನಾವು ಆಶೀರ್ವಾದ ಪಡೆಯಲು ಜೆಜೂರಿಗೆ ಹೋಗಿದ್ದೆವು, ಆದರೆ ನಮಗೆ ಇಳಿಯಲು ಅನುಮತಿಯಿಲ್ಲದ ಕಾರಣ, ನಾವು ಆಕಾಶದಿಂದ ಪ್ರಾರ್ಥಿಸಿದ್ದೇವೆ ಎಂದು ಜರೇಕರ್ ಎಎನ್‌ಐಗೆ ತಿಳಿಸಿದ್ದರು.