ಕೇವಲ 43 ದಿನ ಜೊತೆಗಿದ್ದ ವೈದ್ಯ ದಂಪತಿಗೆ 22 ವರ್ಷದ ಬಳಿಕ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್‌

ಆ ವೈದ್ಯ ಜೋಡಿ ಮದುವೆಯಾಗಿ ಬರೋಬ್ಬರಿ 22 ವರ್ಷವಾಗಿತ್ತು. ಆದರೆ ಅವರು ಜೊತೆಗೆ ಇದ್ದಿದ್ದು ಮಾತ್ರ ಕೇವಲ 43 ದಿನ. ಇದರ ಜೊತೆಗೆ ಇಷ್ಟೊಂದು ವರ್ಷಗಳಲ್ಲಿ ಇಬ್ಬರ ಮಧ್ಯೆ ನಿರಂತರ ಕಾನೂನು ಸಮರ ನಡೆದು ಈಗ ಕಡೆಗೂ ತಮ್ಮ 50ರ ಹರೆಯದಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. 

Supreme Court grants divorce to a doctor couple who spent together only 43 days in 22 year marriage life akb

ನವದೆಹಲಿ: ಆ ವೈದ್ಯ ಜೋಡಿ ಮದುವೆಯಾಗಿ ಬರೋಬ್ಬರಿ 22 ವರ್ಷವಾಗಿತ್ತು. ಆದರೆ ಅವರು ಜೊತೆಗೆ ಇದ್ದಿದ್ದು ಮಾತ್ರ ಕೇವಲ 43 ದಿನ. ಇದರ ಜೊತೆಗೆ ಇಷ್ಟೊಂದು ವರ್ಷಗಳಲ್ಲಿ ಇಬ್ಬರ ಮಧ್ಯೆ ನಿರಂತರ ಕಾನೂನು ಸಮರ ನಡೆದು ಈಗ ಕಡೆಗೂ ತಮ್ಮ 50ರ ಹರೆಯದಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ಮತ್ತೆ ಸರಿಪಡಿಸಲಾಗದ ಸಂಬಂಧ ಎಂದು ಭಾವಿಸಿದ ಸುಪ್ರೀಂಕೋರ್ಟ್ ಕಡೆಗೂ ಈ ವೈದ್ಯ ಜೋಡಿಗೆ 22 ವರ್ಷಗಳ ನಂತರ ವಿಚ್ಛೇದನ ನೀಡಿ ದಾಂಪತ್ಯವನ್ನು ಕಾನೂನಾತ್ಮಕವಾಗಿ ಅಂತ್ಯಗೊಳಿಸಿದೆ. ಇವರಿಬ್ಬರ ವರ್ತನೆಗಳು ಅವರ ವೈವಾಹಿಕ ಜೀವನದ ಅನುಬಂಧವನ್ನು ಸರಿಪಡಿಸಲಾಗದಷ್ಟು ಹಾಳು ಮಾಡಿದೆ ಎಂಬ ವಿಚಾರ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ನಂತರ ಈ ವೈದ್ಯ ಜೋಡಿಗೆ ವಿಚ್ಚೇದನ ಮಂಜೂರು ಮಾಡಲಾಯ್ತು.

ಸುಪ್ರೀಂಕೋರ್ಟ್ ವಿಭಾಗೀಯ ಪೀಠದ  ನ್ಯಾಯಾಧೀಶರುಗಳಾದ ವಿಕ್ರಮ್ ನಾಥ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರು ಈ ವೈದ್ಯ ಜೋಡಿಯ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದರು. ಜೊತೆಗೆ ಇಬ್ಬರು ಸಮಾನವಾದ ಒಳ್ಳೆಯ ಸಂಪಾದನೆ ಇರುವ ವೈದ್ಯಕೀಯ ವೃತ್ತಿಪರರಾಗಿದ್ದರಿಂದ ಶಾಶ್ವತ ಜೀವನಾಂಶದ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಧೀಶರು ಬಂದರು. 

ಲವ್‌ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ

ಈ ಮದುವೆಯು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. ಇದರ ಜೊತೆಗೆ ದಂಪತಿಯ ಕುಟುಂಬದವರು ಸಹ ಪರಸ್ಪರ ಪೈಪೋಟಿ ಹಾಗೂ ದ್ವೇಷವನ್ನು ಹೊಂದಿದ್ದರಿಂದ ಈ ಸಂಬಂಧಕ್ಕೆ ಮತ್ತಷ್ಟು ಹುಳಿ ಹಿಂಡಿದಂತಾಗಿದೆ.  ದೋಷಾರೋಪಣೆಯ ನಂತರ ಮೇಲ್ಮನವಿದಾರರ ವಿರುದ್ಧ ಕಾಣೆಯಾದ ದೂರು ದಾಖಲಿಸಲು ಪ್ರತಿವಾದಿ ಪತ್ನಿ ಮುಂದಾಗಿದ್ದು, ಕೂಡ ದಂಪತಿಗಳ ನಡುವಿನ ಕಹಿ ಸಂಬಂಧವನ್ನು ಸೂಚಿಸುತ್ತದೆ ಎಂಬುದನ್ನು ನ್ಯಾಯಾಧೀಶರು ಗಮನಿಸಿದರು. 

ಈ ಪ್ರಕರಣದಲ್ಲಿ ಪತಿಯ ಮನವಿಯ ನಂತರ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್‌ 2019 ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಅಲಾಹಾಬಾದ್ ಹೈಕೋರ್ಟ್ ಹಿಂದೆ ಹೆಂಡತಿಯ ಮೇಲ್ಮನವಿಗೆ ಅನುಮತಿಸುವುದರ ಜೊತೆಗೆ ಮೀರತ್‌ನ ಕೌಟುಂಬಿಕ ನ್ಯಾಯಾಲಯವು 2006 ರಲ್ಲಿ ನೀಡಿದ ವಿಚ್ಛೇದನದ ತೀರ್ಪನ್ನು ರದ್ದುಗೊಳಿಸಿತ್ತು. ಈಗ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು  ಆಲಿಸಿದ ಸುಪ್ರೀಂಕೋರ್ಟ್ ಪೀಠವು ಈ ಪ್ರಕರಣದಲ್ಲಿ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸುವುದು ಸೂಕ್ತವೆಂದು ಭಾವಿಸಿತು.

ಡಿವೋರ್ಸ್ ಬಳಿಕ ಮಗನಿಗೆ ಸಹಪೋಷಕರಾಗುವ ಜವಾಬ್ದಾರಿ ಕಠಿಣವಾಗಿತ್ತು: ಸತ್ಯ ಬಹಿರಂಗಪಡಿಸಿದ ಮಲೈಕಾ!

ಈ ದಂಪತಿ ತಮ್ಮ ಮದುವೆಯ ನಂತರ ಕೇವಲ 23 ದಿವಸವಷ್ಟೇ ಜೊತೆಗೆ ಕಳೆದಿದ್ದರು. ಇದಾದ ನಂತರ 2005ರಲ್ಲಿ ನ್ಯಾಯಾಲಯದ ಸಂಧಾನ ಅವಧಿಯ ಸಮಯದಲ್ಲಿ 2005ರ ಜೂನ್ 15ರಿಂದ 2015ರ ಜೂನ್ 5ರವರೆಗೆ 20 ದಿನ ಜೊತೆಯಾಗಿ ಜೀವಿಸಿದ್ದರಿಂದ ಒಟ್ಟು ಕೇವಲ 43 ದಿನ ಮಾತ್ರ ಜೊತೆಯಾಗಿ ಕಳೆದಿದ್ದರು. ಪತ್ನಿ ಮದುವೆಯಾದ ಕೇವಲ ಒಂದು ತಿಂಗಳಲ್ಲಿಯೇ ಗಂಡನ ಮನೆಯನ್ನು ಬಿಟ್ಟು ಬಂದಿದ್ದರು. ಹೀಗಾಗಿ ಇವರಿಬ್ಬರು ದೂರಾಗಿ ಇದ್ದಿದ್ದು, ಬರೋಬ್ಬರಿ 22 ವರ್ಷಗಳು. ಇದರ ಜೊತೆಗೆ ಈ ಜೋಡಿ ಈಗ ತಮ್ಮ 50ರ ಆಸುಪಾಸಿನ ವಯಸ್ಸಿನಲ್ಲಿದ್ದು,  ಇಬ್ಬರು ತಮ್ಮದೇ ಆದ ಸ್ವತಂತ್ರ ಜೀವನವನ್ನು ಕಂಡುಕೊಂಡಿದ್ದಾರೆ. ಇದರ ಜೊತೆಗೆ ಇವರು 2002ರಿಂದಲೂ ಅನೇಕ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದ್ದಾರೆ. ಇಬ್ಬರು ಪರಸ್ಪರರ ವಿರುದ್ಧ ಒಟ್ಟು ಆರು ಕೇಸುಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಕ್ರಿಮಿನಲ್ ಚಾರ್ಜ್‌ಗಳು ಇವೆ.  ತನ್ನ ಪತಿ ಹಾಗೂ ಅವರ ಮನೆಯವರ ವಿರುದ್ಧ ಮಹಿಳೆ ಆರಂಭದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಇದರಿಂದ ಅವರ ಬಂಧನವಾಗಿತ್ತು. ಆದರೆ ನಂತರ ಪ್ರಕರಣ ಖುಲಾಸೆಗೊಂಡು ಅವರು ನಿರ್ದೋಷಿಗಳಾಗಿ ಬಿಡುಗಡೆಯಾಗಿದ್ದರು.
 

Latest Videos
Follow Us:
Download App:
  • android
  • ios