Asianet Suvarna News Asianet Suvarna News

ಅತ್ತೆಯನ್ನು ಮಗಳು ಅಮ್ಮನೆಂದಾಗ ಶಾಕ್ ಆಗಿತ್ತು! ಸಂಬಂಧ ನಿಭಾಯಿಸೋದು ಹೇಗೆ ಹೇಳ್ತಾರೆ ಸುಧಾಮೂರ್ತಿ!

ನಮ್ಮ ಕಣ್ಣ ಮುಂದೆಯೇ ಬೆಳೆದ ಮಕ್ಕಳಲ್ಲಿ ಒಂದು ಹಂತದಲ್ಲಿ ಬದಲಾವಣೆ ಕಂಡಾಗ ಖುಷಿ, ದಿಗ್ಭ್ರಮೆ, ನೋವು ಒಟ್ಟೊಟ್ಟಿಗೆ ಅನುಭವಕ್ಕೆ ಬರುತ್ತದೆ. ಇಂಥ ಸನ್ನಿವೇಶಗಳಲ್ಲಿ ಸಂಬಂಧಗಳನ್ನು ನಿಭಾಯಿಸೋ ಬಗೆ ಹೇಗೆ ಅಂತ ಇನ್‌ಫೋಸಿಸ್‌ ಫೌಂಡೇಶನ್ ಸುಧಾಮೂರ್ತಿ ಹೇಳ್ತಾರೆ.

Sudhamurthy talks about relationship
Author
First Published Jan 3, 2023, 4:04 PM IST

ಇನ್‌ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಇನ್ಫೋಸಿಸ್‌ನಂಥಾ ಹೆಮ್ಮೆಯ ಸಂಸ್ಥೆಯ ಹಿಂದಿರುವ ಪ್ರೇರಕ ಶಕ್ತಿ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಲಕ್ಷಾಂತರ ಜನರಿಗೆ ನೆರವಾದವರು. ಜನಪ್ರಿಯ ಲೇಖಕಿಯೂ ಹೌದು. ಮಕ್ಕಳಿಗೆ, ದೊಡ್ಡವರಿಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಬೆಸ್ಟ್ ಸೆಲ್ಲರ್ ಅನಿಸಿಕೊಂಡಿವೆ. ಸುಧಾಮೂರ್ತಿ ಅವರು ಸಂಬಂಧಗಳ ಬಗೆಗೂ ಬರೆದಿದ್ದಾರೆ, ಮಾತನಾಡುತ್ತಾರೆ. ಅದರಲ್ಲೂ ನಮ್ಮ ಕಣ್ಣ ಮುಂದೆಯೇ ಬೆಳೆದ ಮಕ್ಕಳಲ್ಲಿ ಅನೇಕ ಮಾರ್ಪಾಡು ಕಂಡಾಗ ಅವನ್ನು ಹೇಗೆ ಸ್ವೀಕರಿಸಬೇಕು, ಅವಕ್ಕೆ ಹೇಗೆ ಸ್ಪಂದಿಸಬೇಕು ಅನ್ನೋದರ ಬಗ್ಗೆ ತನ್ನ ಅನುಭವದ ಹಿನ್ನೆಲೆಯಲ್ಲೇ ಅವರಿಲ್ಲಿ ಮುಖ್ಯವಾದ ಮಾತುಗಳನ್ನ ಹೇಳಿದ್ದಾರೆ. ಅದು ನಮ್ಮೆಲ್ಲರಿಗೂ ಪ್ರಯೋಜನಕ್ಕೆ ಬರುವಂಥಾದ್ದು.

ನನ್ನಿಬ್ಬರು ಮಕ್ಕಳಲ್ಲಿ ದೊಡ್ಡವಳು ಮದುವೆಯಾಗಿ ಬೇರೆ ಮನೆಗೆ ಹೋದಳು. ನನಗಾಗ ನನ್ನ ದೇಹದ ಒಂದು ಭಾಗವೇ ಹೊರಟುಹೋದಂಥಾ ಅನುಭವ. ಮಗ ಮತ್ತು ಮಗಳಲ್ಲಿ ಇಬ್ಬರೂ ಭಿನ್ನರು. ಇಬ್ಬರನ್ನೂ ಬೇರೆ ಥರ ನೋಡಬೇಕು ಅನ್ನೋದು ನನಗೆ ಗೊತ್ತಿದ್ದದ್ದೇ. ಮಗಳು ಹದಿ ಹರೆಯಕ್ಕೆ ಬಂದಾಗ ಅವಳು ನನ್ನ ಮುಂದುವರಿಕೆಯ ಹಾಗೇ ನನಗೆ ಕಾಣುತ್ತಿದ್ದಳು. ಅವಳಲ್ಲೇ ನನ್ನನ್ನು ಹೊಸತಾಗಿ ಕಾಣುತ್ತಿದ್ದೆ. ಆದರೆ ಯಾವಾಗ ಅವಳು ಮನೆ ಬಿಟ್ಟು ಹೋದಳೋ ಆಗ ನನ್ನ ದೇಹದ ಭಾಗವೇ ನನ್ನಿಂದ ಕಳಚಿಕೊಂಡ ಹಾಗೆ ಭಾಸವಾಯಿತು. ಆಯ್ತು, ಮದುವೆ ಆದಳು, ಹಾಗಂತ ತಾಯಿ ಮಗಳ ಸಂಬಂಧದಲ್ಲೇನಾಗುತ್ತೆ ಅಂತಲೂ ಅನಿಸುತ್ತಿತ್ತು. ಆದರೆ ಅವಳು ಮದುವೆ ಆದಮೇಲೆ ನಮ್ಮ ಜೊತೆ ಇರಲು ಬಂದಾಗ ಅವಳಲ್ಲಾದ ಬದಲಾವಣೆ ಕಂಡು ಶಾಕ್ ಆದೆ. ಅವಳ ಆಯ್ಕೆಗಳು ಬದಲಾಗಿದ್ದವು, ಈ ಶಾಕ್ ನಮ್ಮಲ್ಲಿ ಹಲವು ಹೆತ್ತವರಿಗೆ ಆಗುತ್ತದೆ.

 

Inspiration Sudha Murthy: ಯಾರನ್ನೋ ಮೆಚ್ಚಿಸಲು ಬದಲಾಗಬೇಡಿ, ನೀವು ನೀವಾಗಿರಿ

ಮಗಳು ಅಮ್ಮಾ ಅಂದಳು, ನನ್ನನ್ನೇ ಕರೆದಳೇನೋ ಅಂತ ಸಂಭ್ರಮದಲ್ಲಿ ನೋಡಿದರೆ ಅವಳು ಅಮ್ಮ ಅಂದಿದ್ದು ನನ್ನನ್ನಲ್ಲ, ಅವಳ ಅತ್ತೆಯನ್ನು! ಅಷ್ಟೇ ಅಲ್ಲ, ಇಲ್ಲೇ ಹುಟ್ಟಿ ಬೆಳೆದ ಮಗಳಿಗೆ ಈಗ ಈ ಮನೆಯಲ್ಲಿ ಜಾಸ್ತಿ ಸಮಯ ನಿಲ್ಲೋದಕ್ಕೆ ಕಷ್ಟವಾಗ್ತಿತ್ತು. ವಾಪಾಸು ಅವಳ ಗಂಡನ ಮನೆಗೆ ಹೋಗಲು ಅವಳು ಹಾತೊರೆಯುತ್ತಿದ್ದದ್ದು ನನಗೆ ಕಾಣಿಸಿತು. ಇದನ್ನು ನೋಡಿದ ಮೇಲೆ ನನ್ನನ್ನು ನಾನು ಬ್ಯಾಲೆನ್ಸ್ ಮಾಡಬೇಕಿತ್ತು. ನಾನಾಗ ನಾನಾಗ ಡಿಟ್ಯಾಚ್‌ಮೆಂಟ್‌ ವಿತ್‌ ಅಟ್ಯಾಚ್‌ಮೆಂಟ್‌ ಪ್ರಯೋಗಗಳನ್ನು ಪ್ರಾಕ್ಟೀಸ್ ಮಾಡಲು ಶುರು ಮಾಡಿದೆ. ಮಗಳು ಮದುವೆಯಾಗಿ ಹೊರ ಹೋದ ಎರಡು ವರ್ಷಗಳಲ್ಲೇ ಮಗನೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರ ಹೋದ. ಮತ್ತೊಮ್ಮೆ ನನಗೆ ಅದೇ ನೋವು, ಆದರೆ ಹಿಂದಿನ ಅನುಭವವಿತ್ತಲ್ಲಾ, ಬೇಗ ಮನಸ್ಸು ತಹಬಂದಿಗೆ ಬಂತು. ನನ್ನನ್ನು ನಾನು ಬ್ಯುಸಿ ಆಗಿ ಇಟ್ಟುಕೊಳ್ಳಬೇಕಿತ್ತು. ಇಕೆಬಾನದಿಂದ ವೇದಾಂತದ ವರೆಗೆ ಬೇರೆ ಬೇರೆ ತರಗತಿಗೆ ಸೇರಿಕೊಂಡೆ. ಮಕ್ಕಳಿಲ್ಲದ ಮನೆಯಿಂದ ಹೇಗಾದರೂ ನನಗೆ ಹೊರ ಹೋಗಬೇಕಿತ್ತು. ನನ್ನ ಗಂಡ ಇಪ್ಪತ್ತನಾಲ್ಕು ಗಂಟೆ ಕೆಲಸದಲ್ಲೇ ಮುಳುಗಿರುವ ವರ್ಕೋಹಾಲಿಕ್. ಅವರಿಂದ ಸಮಾಧಾನ ನಿರೀಕ್ಷಿಸುವ ಹಾಗಿರಲಿಲ್ಲ. ಮಗ ವಿದೇಶದಲ್ಲಿ ಓದುತ್ತಿದ್ದರೂ ಅಮ್ಮಾ, ನಿನ್ನ ಕೈ ಅಡುಗೆ (Cooking) ಮಿಸ್ ಮಾಡುತ್ತಿದ್ದೇನೆ ಅನ್ನುತ್ತಿದ್ದ.

ಸ್ವಲ್ಪ ಸಮಯದಲ್ಲಿ ಮಗ ಓದು ಮುಗಿಸಿ ಬಂದರೂ ಅವರಿಗೂ ಆಮೇಲೆ ಮದುವೆ ಆಯ್ತು. ಆತ ಪತ್ನಿಯ ಜೊತೆ ಪ್ರತ್ಯೇಕವಾಗಿ ವಾಸಿಸತೊಡಗಿದ. ಈಗ ನಾನೇ ಅವನನ್ನು ಊಡಕ್ಕೆ ಕರೆದರೂ ನಮ್ಮಿಬ್ಬರದು ಬೇರೆ ಪ್ಲಾನ್ (Plans)ಇದೆ, ಪ್ಲೀಸ್ ಅರ್ಥಮಾಡಿಕೊ ಅನ್ನತೊಡಗಿದ.

ಸೇವಿಂಗ್ಸ್ ಮಾಡೋದು ಹೇಗೆ ? ಸುಧಾಮೂರ್ತಿ ಏನ್‌ ಹೇಳ್ತಾರೆ ತಿಳ್ಕೊಳ್ಳಿ

ಈಗ ನಾನು ಈ ವಯಸ್ಸಲ್ಲಿ ಮತ್ತೊಮ್ಮೆ ನನ್ನ ಹೊಸ ಪ್ರೊಫೈಲ್ (Profile) ರೆಡಿ ಮಾಡಿಕೊಂಡೆ. 'ಡಿಟ್ಯಾಚ್‌ಮೆಂಟ್ ವಿತ್ ಅಟ್ಯಾಚ್‌ಮೆಂಟ್ ಪ್ರಾಕ್ಟೀಸ್‌ (Practice)ನನಗೆ ಬದುಕನ್ನು ಸಹನೀಯವಾಗಿಸಿತು. ಇದು ಬಹಳ ಸರಳ. ನಮ್ಮ ಆಸಕ್ತಿಗಳಿಗೆ ನಾವು ರೀ ವಿಸಿಟ್ ಮಾಡೋದು. ಸಂಬಂಧಗಳನ್ನು ಸಂಕೀರ್ಣವಾಗಿ ಅರ್ಥ ಮಾಡಿಕೊಳ್ಳೋ ಬದಲು ಸಿಂಪಲ್‌ ಆಗಿ ತೆಗೆದುಕೊಳ್ಳೋದು. ಹೀಗೆ ಅರ್ಥ ಮಾಡಿಕೊಂಡು ನಮ್ಮ ಪಾಡಿಗೆ ನಾವು ಬದುಕುತ್ತಾ ಹೋದರೆ ನಮ್ಮ ಬದುಕೂ ಸಹನೀಯವಾಗುತ್ತೆ. ನಾವು ನಿರೀಕ್ಷಿಸೋದನ್ನು ಬಿಟ್ಟು, ಬಂದದ್ದನ್ನ ಸ್ವೀಕರಿಸೋಣ, ಗೌರವಿಸೋಣ, ಪ್ರೀತಿಸೋಣ, ಅಷ್ಟೇ.. ಆಗ ಬದುಕು ಹಿತವಾಗಿರುತ್ತದೆ.

 

Follow Us:
Download App:
  • android
  • ios